Mysore Dasara2024: ಮೈಸೂರು ದಸರಾ ದೀಪಾಲಂಕಾರದಲ್ಲಿ 1500 ಡ್ರೋನ್‌ ಬಳಸಿ ಆಗಸದಲ್ಲಿ ಅದ್ಭುತ ವಿನ್ಯಾಸ ನಿರ್ಮಾಣ; 4 ದಿನ ನೀವೂ ವೀಕ್ಷಿಸಬಹುದು
ಕನ್ನಡ ಸುದ್ದಿ  /  ಕರ್ನಾಟಕ  /  Mysore Dasara2024: ಮೈಸೂರು ದಸರಾ ದೀಪಾಲಂಕಾರದಲ್ಲಿ 1500 ಡ್ರೋನ್‌ ಬಳಸಿ ಆಗಸದಲ್ಲಿ ಅದ್ಭುತ ವಿನ್ಯಾಸ ನಿರ್ಮಾಣ; 4 ದಿನ ನೀವೂ ವೀಕ್ಷಿಸಬಹುದು

Mysore Dasara2024: ಮೈಸೂರು ದಸರಾ ದೀಪಾಲಂಕಾರದಲ್ಲಿ 1500 ಡ್ರೋನ್‌ ಬಳಸಿ ಆಗಸದಲ್ಲಿ ಅದ್ಭುತ ವಿನ್ಯಾಸ ನಿರ್ಮಾಣ; 4 ದಿನ ನೀವೂ ವೀಕ್ಷಿಸಬಹುದು

ವಿಶ್ವವಿಖ್ಯಾತ ಮೈಸೂರು ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ದಸರಾ ದೀಪಾಲಂಕಾರಕ್ಕೆ ಈ ಬಾರಿ ಡ್ರೋನ್ ಪ್ರದರ್ಶನ ಹೊಸ ಮೆರಗು ನೀಡಲಿದ್ದು, 1500 ಡ್ರೋನ್ ಗಳು ಆಗಸದಲ್ಲಿ ಹೊಸ ಚಿತ್ತಾರ ಮೂಡಿಸಲಿವೆ.

ಮೈಸೂರು ದಸರಾ ದೀಪಾಲಂಕಾರದ ಡ್ರೋನ್‌ ಪ್ರದರ್ಶನ ಈ ಬಾರಿಯ ವಿಶೇಷ ಆಕರ್ಷಣೆ
ಮೈಸೂರು ದಸರಾ ದೀಪಾಲಂಕಾರದ ಡ್ರೋನ್‌ ಪ್ರದರ್ಶನ ಈ ಬಾರಿಯ ವಿಶೇಷ ಆಕರ್ಷಣೆ

ಮೈಸೂರು: ಮೈಸೂರು ದಸರಾದಲ್ಲಿ ದೀಪಾಲಂಕಾರ ವಿಶೇಷ ಆಕರ್ಷಣೆ. ಬಗೆಬಗೆಯ ದೀಪಗಳು ಹಾಗೂ ಬೆಳಕಿನ ಸಂಯೋಜನೆ ಮೂಲಕ ಗಮನ ಸೆಳೆಯುವ ದೀಪಾಲಂಕಾರದಲ್ಲಿ ಈ ಬಾರಿ ಹೊಸ ಪ್ರಯೋಗ ಆಗಲಿದೆ. ಅದರಲ್ಲೂ ಅತ್ಯಾಧುನಿಕ ಡ್ರೋನ್‌ ಬಳಸಿ ಇಡೀ ದೀಪಾಲಂಕಾರವನ್ನು ಚಿತ್ರೀಕರಿಸುವ ಪ್ರಯತ್ನ ಆಗಲಿದೆ. ಇದಕ್ಕಾಗಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು( ಸೆಸ್ಕ್‌) ಬರೋಬ್ಬರಿ 1500 ಡ್ರೋನ್ ಗಳು ಆಗಸದಲ್ಲಿ ಹೊಸ ಚಿತ್ತಾರ ಮೂಡಿಸಲಿವೆ. ಇಡೀ ದೀಪಾಲಂಕಾರವನ್ನು ವಿಭಿನ್ನವಾಗಿ ಸೆರೆ ಹಿಡಿದು ಮೈಸೂರು ದಸರಾ ವಿಶೇಷವನ್ನು ಜಗತ್ತಿಗೆ ತೋರಿಸುವುದು ಇದರ ಉದ್ದೇಶ. ಇದಕ್ಕಾಗಿ 3.50 ಕೋಟಿ ರೂ. ಗಳನ್ನು ಸೆಸ್ಕ್‌ ವೆಚ್ಚ ಮಾಡಲು ಮುಂದಾಗಿದೆ.

ದಸರಾ ದೀಪಾಲಂಕಾರದೊಂದಿಗೆ ಇದೇ ಮೊದಲ ಬಾರಿಗೆ ಡ್ರೋನ್‌ ಪ್ರದರ್ಶನ ಏರ್ಪಡಿಸಲಾಗಿದೆ. ಎಲ್.ಇ.ಡಿ. ಬಲ್ಪ್‌ಗಳನ್ನು ಅಳವಡಿಸಿರುವ ಸುಮಾರು 1500 ಡ್ರೋನ್‌ಗಳನ್ನು ಬಳಕೆ ಮಾಡಿಕೊಂಡು ಆಕಾಶದಲ್ಲಿ ಅದ್ಭುತ ವಿನ್ಯಾಸಗಳನ್ನು ಮೂಡಿಸಲಾಗುವುದು.

ಅಕ್ಟೋಬರ್‌ 6, 7ರಂದು ಹಾಗೂ 11, 12ರಂದು ರಾತ್ರಿ 8 ಗಂಟೆಯಿಂದ 8.15ರವರೆಗೆ ಡ್ರೋನ್‌ ಪ್ರದರ್ಶನ ನಡೆಯಲಿದ್ದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಅ. 6 ಮತ್ತು 7ರಂದು ಡ್ರೋನ್‌ ಪ್ರದರ್ಶನ ವೀಕ್ಷಿಸಲು ಉಚಿತ ಪ್ರವೇಶವಿರಲಿದೆ.

ದಸರಾ ದೀಪಾಲಂಕಾರದ ಜತೆಗೆ ಈ ಬಾರಿ ಡ್ರೋನ್‌ ಪ್ರದರ್ಶನ ನಡೆಸಲಾಗುತ್ತಿದೆ. ವಾರಣಾಸಿ, ಹರಿದ್ವಾರಗಳಲ್ಲಿ ಡ್ರೋನ್‌ ಪ್ರದರ್ಶನ ನೀಡಿರುವ ಕಂಪನಿಯ ಮೂಲಕ ಈ ಪ್ರದರ್ಶನ ನಡೆಸುತ್ತಿದ್ದು, 10-15 ವಿನ್ಯಾಸಗಳನ್ನು ಪ್ರದರ್ಶನ ಮಾಡಲಾಗುವುದು. ಈ ಬಾರಿ ದಸರಾ ದೀಪಾಲಂಕಾರವನ್ನು ವಿಭಿನ್ನವಾಗಿ ನಡೆಸಲು ನಿಗಮದ ವತಿಯಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸುರಕ್ಷತೆಯ ಬಗ್ಗೆಯೂ ಹೆಚ್ಚಿನ ಗಮನ ವಹಿಸಲಾಗುತ್ತಿದೆ.

ದಸರಾ ದೀಪಾಲಂಕಾರ ಪ್ರಮುಖ ಆಕರ್ಷಣೆಯಾಗಿದ್ದು, 21 ದಿನದಗಳ ಕಾಲ ಮೈಸೂರು ನಗರವನ್ನು ಬೆಳಗಲಿದೆ. ಈ ಬಾರಿಯ ದೀಪಾಲಂಕಾರವನ್ನು ಅತ್ಯಂತ ಆಕರ್ಷಣೀಯಗೊಳಿಸಲು ಸೆಸ್ಕ್‌ ಅಧಿಕಾರಿಗಳ ತಂಡ ಸಾಕಷ್ಟು ಮುತುವರ್ಜಿ ವಹಿಸಿದೆ. ಒಟ್ಟು 130 ಕಿ.ಮೀ. ದೀಪಾಲಂಕಾರ ಮಾಡುತ್ತಿದ್ದು, 100 ವೃತ್ತಗಳನ್ನು ಅಲಂಕರಿಸುವುದರ ಜತೆದೆ 65 ಪ್ರತಿಕೃತಿಗಳನ್ನು ನಿರ್ಮಿಸಲಾಗುತ್ತಿದೆ.

ದಸರಾ ದೀಪಾಲಂಕಾರಕ್ಕಾಗಿ 6.50 ಕೋಟಿ ರೂ. ವೆಚ್ಚವಾಗುತ್ತಿದ್ದು, 2881 ಕಿ.ವ್ಯಾ. ಅಂದಾಜು ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಭಾರ ಹಾಗೂ 242012 ಯೂನಿಟ್‌ಗಳ ವಿದ್ಯುತ್‌ ಬಳಕೆ ಮಾಡಲಾಗುತ್ತಿದೆ ಎನ್ನುವುದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ವಿವರಣೆ.

ವಿದ್ಯುತ್‌ ರಥ ಸಂಚಾರ

ದಸರಾ 2024ರ ಸಂದರ್ಭದಲ್ಲಿ "ಪವರ್‌ ಮ್ಯಾನ್‌"ಗಳ ಕರ್ತವ್ಯಗಳು, ಗೃಹಜ್ಯೋತಿ, ಕೃಷಿ ಬಳಕೆಗೆ ಸೌರ ವಿದ್ಯುತ್ ಪಂಪ್ ಸೆಟ್ ಗಳು, ವಿದ್ಯುತ್ ಸುರಕ್ಷತೆ ಹಾಗೂ ನುಡಿದಂತೆ ನಡೆದ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ವಿದ್ಯುತ್ ರಥವನ್ನು ರೂಪಿಸಲಾಗುವುದು. ಈ ರಥ ಅ.3ರಂದು ಉದ್ಘಾಟನೆಗೊಳ್ಳಲಿದ್ದು, ದಸರಾ ನವರಾತ್ರಿಯ 10 ದಿನಗಳ ಕಾಲ ಮೈಸೂರಿನ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಪ್ರದರ್ಶಿಸಲಾಗುತ್ತದೆ.

Whats_app_banner