Private School Fees: ಖಾಸಗಿ ಶಾಲೆಗಳ ಶುಲ್ಕ ನಿಗದಿ ಅಧಿಕಾರ ರಾಜ್ಯಕ್ಕಿಲ್ಲ; ಶಿಕ್ಷಣ ಕಾಯ್ದೆಯ ಕೆಲ ಸೆಕ್ಷನ್ ಅಸಾಂವಿಧಾನಿಕ ಎಂದ ಕೋರ್ಟ್
Private School Fees: ಕರ್ನಾಟಕದಲ್ಲಿ ಖಾಸಗಿ ಶಾಲೆಗಳಲ್ಲಿ ಶುಲ್ಕ ನಿಗದಿ ಅಧಿಕಾರ ಆಯಾ ಶಾಲಾ ಆಡಳಿತಕ್ಕೆ ಬಿಟ್ಟದ್ದು. ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂತೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಮಹತ್ವದ ಆದೇಶ ನೀಡಿದೆ.
ಕರ್ನಾಟಕದಲ್ಲಿ ಖಾಸಗಿ ಶಾಲೆಗಳಲ್ಲಿ ಶುಲ್ಕ ನಿಗದಿ ಮಾಡುವ ಅಧಿಕಾರ ಆಯಾ ಶಾಲಾ ಆಡಳಿತಕ್ಕೆ ಬಿಟ್ಟದ್ದು. ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂತೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಮಹತ್ವದ ಆದೇಶ ನೀಡಿದೆ.
ಕರ್ನಾಟಕ ಖಾಸಗಿ ಶಾಲೆಗಳ ಸಮಿತಿ ಮತ್ತು ಇತರ ಶಾಲಾ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಈ ತೀರ್ಪು ನೀಡಿದ್ದಾರೆ. ಇದು ಏಕಸದಸ್ಯ ಪೀಠವಾಗಿದ್ದು, ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕೆಲವು ಸೆಕ್ಷನ್‌ಗಳು ಅಸಾಂವಿಧಾನಿಕ. ಅದರ ಪ್ರಕಾರ ಖಾಸಗಿ ಅನುದಾನ ರಹಿತ ಶಾಲೆಗಳ ಶುಲ್ಕ ನಿರ್ಧಾರ ಮತ್ತು ಅದನ್ನು ಉಲ್ಲಂಘಿಸಿದಾಗ ಶಿಕ್ಷೆ ವಿಧಿಸುವ ಅಧಿಕಾರದ ಅಂಶ ಅಸಾಂವಿಧಾನಿಕವಾಗಿದೆ ಎಂದು ಅಭಿಪ್ರಾಯಪಟ್ಟಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ಈ ಆದೇಶದ ಕಾರಣ ಈಗ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಗದಿ ವಿಚಾರದಲ್ಲಿ ಸ್ವತಂತ್ರವಾಗಿವೆ. ಸರ್ಕಾರದ ಹಿಡಿತದಿಂದ ಹೊರಬಂದಿವೆ. ಸರ್ಕಾರಕ್ಕೂ ಈಗ ಈ ವಿಚಾರವಾಗಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತವಿರುವುದಿಲ್ಲ. ಅಷ್ಟೆ ಅಲ್ಲ, ಮಕ್ಕಳ ಅಪರಾಧಗಳಿಂದ ರಕ್ಷಣೆ, ಸುರಕ್ಷತೆ ಕಾಪಾಡುವ ಮಾರ್ಗಸೂಚಿ ಉಲ್ಲಂಘನೆಗೆ ದಂಡನೆ ವಿಧಿಸುವ ಅಧಿಕಾರವೂ ಕಾನೂನು ಬಾಹಿರ ಎಂದು ಹೈಕೋರ್ಟಿನ ಏಕಸದಸ್ಯ ಪೀಠ ಹೇಳಿದೆ.
ಯಾವೆಲ್ಲ ಸೆಕ್ಷನ್‌ಗಳು ಅಸಾಂವಿಧಾನಿಕ?
ಕರ್ನಾಟಕ ಶಿಕ್ಷಣ ಕಾಯಿದೆ 1983ರ ಈ ಕೆಳಗಿನ ಸೆಕ್ಷನ್‌ಗಳನ್ನು ಅಸಾಂವಿಧಾನಿಕ ಎಂದು ಕೋರ್ಟ್ ಹೇಳಿದೆ.
- ಖಾಸಗಿ ಅನುದಾನರಹಿತ ಶಾಲೆಗಳು ಮತ್ತು ಅದರ ಉದ್ಯೋಗಿಗಳ ಮೇಲೆ ಕ್ರಮ ಕೈಗೊಳ್ಳಬಹುದಾದ ಸೆಕ್ಷನ್ 5ಎ
- ಅನುದಾನ ರಹಿತ ಶಾಲೆಗಳನ್ನು ನಿಯಂತ್ರಿಸುವ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ(ಡಿಇಆರ್‌ಎ)ಕ್ಕೆ ಅಧಿಕಾರ ಒದಗಿಸುವ ಸೆಕ್ಷನ್ 2(11)( ಎ)
- ಮೇಲಿನ ಸೆಕ್ಷನ್ ಜತೆಗೆ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಶುಲ್ಕ ಪಡೆಯುವುದನ್ನು ನಿಯಂತ್ರಿಸುವ ಸೆಕ್ಷನ್ 48 ಮತ್ತು ಇದನ್ನು ಉಲ್ಲಂಘಿಸುವ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ 10 ಲಕ್ಷ ರೂಪಾಯಿವರೆಗೂ ದಂಡ ವಿಧಿಸುವ ಅವಕಾಶದ ಸೆಕ್ಷನ್ 124ಎ
ಅವಿನಾಶ್ ಮೆಹ್ರೋತ್ರಾ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿದ ಹೈಕೋರ್ಟ್ ನ್ಯಾಯಪೀಠ, ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಸೆಕ್ಷನ್ 5 (ಎ) ಮತ್ತು ಸೆಕ್ಷನ್ 112 (ಎ)ಯ ಕ್ರಮಗಳು ಸಂವಿಧಾನದ ಅನುಚ್ಛೇದ 14 ಮತ್ತು 19 (1)(ಜಿ)ಗಳಿಗೆ ವ್ಯತಿರಿಕ್ತವಾಗಿದೆ ಎಂಬುದನ್ನು ಉಲ್ಲೇಖಿಸಿದೆ.
ಗಮನಾರ್ಹ ಸುದ್ದಿಗಳು
SDPI in Karnataka: ಕರ್ನಾಟಕದಲ್ಲಿ ಎಸ್‌ಡಿಪಿಐ ನಿಷೇಧಕ್ಕೆ ಚಿಂತನೆ ಎನ್ನುತ್ತಿವೆ ವರದಿಗಳು
SDPI in Karnataka: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)ದ ರಾಜಕೀಯ ಘಟಕವೇ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2020ರಲ್ಲಿ ನಡೆದ ಗಲಭೆಯಲ್ಲಿ ಎಸ್‌ಡಿಪಿಐ ಕೈವಾಡ ಇರುವುದು ದೃಢಪಟ್ಟ ಕಾರಣ ರಾಜ್ಯ ಬಿಜೆಪಿ ಸರ್ಕಾರ ಈ ಚಿಂತನೆ ನಡೆಸಿದೆ ಎಂದು ವರದಿ ಹೇಳಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ
Ediga-Billava Yatra: ಸಮುದಾಯದ ಹಿತಕ್ಕಾಗಿ ಈ ಪಾದಯಾತ್ರೆ; ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದ ಡಾ. ಪ್ರಣವಾನಂದ ಸ್ವಾಮೀಜಿ
Ediga-Billava Yatra: ಕಲಬುರ್ಗಿ ಕರದಾಳು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ. ಪ್ರಣವಾನಂದ ಸ್ವಾಮೀಜಿ ನೇತೃತ್ವದ ಮಂಗಳೂರಿನಿಂದ ಬೆಂಗಳೂರಿಗೆ ಈಡಿಗ - ಬಿಲ್ಲವ ಮಹಾಪಾದಯಾತ್ರೆ (Ediga-Billava Yatra) ಶುರುವಾಗಿದೆ. ಇದಕ್ಕೆ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಶುಕ್ರವಾರ ಚಾಲನೆ ಸಿಕ್ಕಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ