ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಮೈಸೂರು ಮುಜಾಫರ್‌ನಗರ ವಿಶೇಷ ರೈಲು ಮುಂದುವರಿಕೆ, ಯಲಹಂಕ ಬೇಸಿಗೆ ರೈಲು ಸಂಚಾರ ರದ್ದು

Indian Railways: ಮೈಸೂರು ಮುಜಾಫರ್‌ನಗರ ವಿಶೇಷ ರೈಲು ಮುಂದುವರಿಕೆ, ಯಲಹಂಕ ಬೇಸಿಗೆ ರೈಲು ಸಂಚಾರ ರದ್ದು

Train Updates ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ಕರ್ನಾಟಕದ ಕೆಲವು ರೈಲುಗಳ ಸಂಚಾರದ ಕುರಿತು ಮಾಹಿತಿ ಬಿಡುಗಡೆ ಮಾಡಿದೆ.

ರೈಲುಗಳ ಸಂಚಾರ ಮಾಹಿತಿ
ರೈಲುಗಳ ಸಂಚಾರ ಮಾಹಿತಿ

ಹುಬ್ಬಳ್ಳಿ: ಬೆಂಗಳೂರಿನಿಂದ ಜೋಲಾರ್‌ಪೇಟೈಗೆ ಸಂಚರಿಸುವ ಮೆಮು ರೈಲಿಗೆ ಹೂಡಿನಲ್ಲಿ ಒಂದು ನಿಮಿಷದ ನಿಲುಗಡೆ ನೀಡಲು ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವೂ ಕ್ರಮ ವಹಿಸಿದೆ. ಇದಲ್ಲದೇ ಮೈಸೂರು ಹಾಗೂ ಮುಜಾಫರ್‌ ನಗರದ ನಡುವೆ ಸಂಚರಿಸುತ್ತಿದ್ದ ವಿಶೇಷ ಬೇಸಿಗೆ ರೈಲುಗಳ ಸಂಚಾರವನ್ನು ಇನ್ನೂ ಕೆಲವು ಅವಧಿವರೆಗೂ ವಿಸ್ತರಣೆ ಮಾಡಲಾಗಿದೆ, ಇದರೊಟ್ಟಿಗೆ ಬೆಂಗಳೂರಿ ಯಲಹಂಕದಿಂದ ತಿರುನೆಲ್ವೇಲಿ ನಡುವೆ ಸಂಚರಿಸಬೇಕಾಗಿದ್ದ ಬೇಸಿಗೆ ವಿಶೇಷ ರೈಲಿನ ಎರಡು ಟ್ರಿಪ್‌ಗಳನ್ನು ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

I. ಹೂಡಿ ನಿಲ್ದಾಣ: ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಜೋಲಾರ್‌ಪೇಟ್ಟೈ ನಿಲ್ದಾಣಗಳ ನಡುವೆ ಸಂಚರಿಸುವ (16519/16520) ಮೆಮು ರೈಲುಗಳಿಗೆ ಹೂಡಿ ಹಾಲ್ಟ್ ನಿಲ್ದಾಣದಲ್ಲಿದ್ದ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಆರು ತಿಂಗಳವರೆಗೆ ಅಂದರೆ ಮೇ 31 ರಿಂದ ನವೆಂಬರ್ 30, 2024 ರವರೆಗೆ ಮುಂದುವರಿಸಲಾಗುತ್ತಿದೆ.

II. ಬೇಸಿಗೆ ವಿಶೇಷ ರೈಲುಗಳ ಸಂಚಾರ ಮುಂದುವರಿಕೆ

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತಡೆಯಲು ಮೈಸೂರು - ಮುಜಾಫರ್‌ಪುರ ನಿಲ್ದಾಣಗಳ ನಡುವೆ ಚಲಿಸುವ ಬೇಸಿಗೆ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಅಸ್ತಿತ್ವದಲ್ಲಿರುವ ಸಂಯೋಜನೆ, ನಿಲುಗಡೆ ಮತ್ತು ಸಮಯದೊಂದಿಗೆ ಹೆಚ್ಚುವರಿ ಎರಡು ಟ್ರಿಪ್ ಮುಂದುವರಿಸಲಾಗುವುದು.

1. ರೈಲು ಸಂಖ್ಯೆ 06221 ಮೈಸೂರು-ಮುಜಾಫರ್‌ಪುರ ಸಾಪ್ತಾಹಿಕ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಜೂನ್ 17 ಮತ್ತು 24, 2024 ರಂದು ಸಂಚರಿಸಲಿದೆ. ಈ ಮೊದಲು ಜೂನ್ 10, 2024 ರವರೆಗೆ ಸಂಚರಿಸಲಿದೆ ಎಂದು ಸೂಚಿಸಲಾಗಿತ್ತು.

2. ರೈಲು ಸಂಖ್ಯೆ 06222 ಮುಜಾಫರ್‌ಪುರ-ಮೈಸೂರು ಸಾಪ್ತಾಹಿಕ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಜೂನ್ 20 ಮತ್ತು 27, 2024 ರಂದು ಸಂಚರಿಸಲಿದೆ. ಈ ಮೊದಲು ಜೂನ್ 13, 2024 ರವರೆಗೆ ಸಂಚರಿಸಲಿದೆ ಎಂದು ಸೂಚಿಸಲಾಗಿತ್ತು.

III. ಬೇಸಿಗೆ ವಿಶೇಷ ರೈಲು 2 ಟ್ರಿಪ್ ಸಂಚಾರ ರದ್ದು

ತಿರುನೆಲ್ವೇಲಿ ಮತ್ತು ಯಲಹಂಕ ನಿಲ್ದಾಣಗಳ ನಡುವೆ ಚಲಿಸುತ್ತಿದ್ದ ಸಾಪ್ತಾಹಿಕ ಬೇಸಿಗೆ ವಿಶೇಷ ಎಕ್ಸ್ ಪ್ರೆಸ್ ರೈಲುಗಳ 2 ಟ್ರಿಪ್ ಸೇವೆಯನ್ನು ಕಳಪೆ ಆಕ್ಯುಪೆನ್ಸಿ ಇರುವುದರಿಂದ ರದ್ದುಪಡಿಸಲಾಗುತ್ತಿವೆ ಎಂದು ದಕ್ಷಿಣ ರೈಲ್ವೆ ವಲಯವು ಸೂಚಿಸಿದೆ.

1. ರೈಲು ಸಂಖ್ಯೆ 06045 ತಿರುನೆಲ್ವೇಲಿ-ಯಲಹಂಕ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಜೂನ್ 5 ಮತ್ತು 12, 2024 ರಂದು ರದ್ದುಪಡಿಸಲಾಗುತ್ತಿದೆ.

2. ರೈಲು ಸಂಖ್ಯೆ 06046 ಯಲಹಂಕ-ತಿರುನೆಲ್ವೇಲಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಜೂನ್ 6 ಮತ್ತು 13, 2024 ರಂದು ರದ್ದುಪಡಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024