ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಎರ್ಟಿಗಾ; ಭಾರತೀಯರ ಅಚ್ಚುಮೆಚ್ಚಿನ ಟಾಪ್‌ 10 ಕಾರುಗಳು ಇವು
ಕನ್ನಡ ಸುದ್ದಿ  /  ಜೀವನಶೈಲಿ  /  ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಎರ್ಟಿಗಾ; ಭಾರತೀಯರ ಅಚ್ಚುಮೆಚ್ಚಿನ ಟಾಪ್‌ 10 ಕಾರುಗಳು ಇವು

ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಎರ್ಟಿಗಾ; ಭಾರತೀಯರ ಅಚ್ಚುಮೆಚ್ಚಿನ ಟಾಪ್‌ 10 ಕಾರುಗಳು ಇವು

Maruti Suzuki Ertiga: ಭಾರತದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಕಾರಿಗೆ ಭಾರಿ ಬೇಡಿಕೆ ಇದೆ. ಅಕ್ಟೋಬರ್ ತಿಂಗಳಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಎರ್ಟಿಗಾ ಅಗ್ರಸ್ಥಾನದಲ್ಲಿದೆ. ಟಾಪ್ 10 ಪಟ್ಟಿಯಲ್ಲಿ ಯಾವೆಲ್ಲಾ ಕಾರುಗಳು ಇವೆ ಎಂಬುದನ್ನು ನೋಡೋಣ.

ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಮಾರುತಿ ಸುಜುಕಿ ಎರ್ಟಿಗಾ ಕಾರು
ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಮಾರುತಿ ಸುಜುಕಿ ಎರ್ಟಿಗಾ ಕಾರು

ಭಾರತದಲ್ಲಿ 7 ಸೀಟಿನ ಕಾರುಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಕಳೆದ ತಿಂಗಳು, ಅಂದರೆ 2024ರ ಅಕ್ಟೋಬರ್ ತಿಂಗಳಲ್ಲಿ, ಮಾರುತಿ ಸುಜುಕಿ ಎರ್ಟಿಗಾ ಕಾರು ದೊಡ್ಡ ಮಟ್ಟದಲ್ಲಿ ಮಾರಾಟವಾಗಿದೆ. ಈ ಒಂದು ತಿಂಗಳಲ್ಲಿ ದೇಶದ ಒಟ್ಟಾರೆ ಕಾರು ಮಾರಾಟದಲ್ಲಿ ಎರ್ಟಿಗಾ ಅಗ್ರಸ್ಥಾನದಲ್ಲಿದೆ. ಮಾರುತಿ ಸುಜುಕಿ ಎರ್ಟಿಗಾ ಒಟ್ಟು 18,785 ಯುನಿಟ್‌ಗಳ ಮಾರಾಟ ಕಂಡಿದೆ. ಸರಿಯಾಗಿ ಒಂದು ವರ್ಷದ ಹಿಂದೆ, ಅಂದರೆ 2023ರ ಅಕ್ಟೋಬರ್ ತಿಂಗಳಲ್ಲಿ ಮಾರುತಿ ಸುಜುಕಿ ಎರ್ಟಿಗಾ ಕಾರು ಒಟ್ಟು 14,209 ಯುನಿಟ್ ಮಾರಾಟವಾಗಿತ್ತು. ಈ ಪ್ರಮಾಣ ತಿಂಗಳು ಕಳೆದಂತೆ ಹೆಚ್ಚುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಎರ್ಟಿಗಾದ ಆರಂಭಿಕ ಬೆಲೆಯು ಟಾಪ್ ಮಾದರಿಯ ಎಕ್ಸ್ ಶೋರೂಂ ದರದಂತೆ 8.69 ಲಕ್ಷ ರೂಪಾಯಿಯಿಂದ 13.03 ಲಕ್ಷದವರೆಗೆ ಇದೆ. ಕಳೆದ ತಿಂಗಳಲ್ಲಿ ಹೆಚ್ಚು ಮಾರಾಟವಾದ 10 ಕಾರುಗಳ ಬಗ್ಗೆ ತಿಳಿಯೋಣ.

ಎರ್ಟಿಗಾ ಬಳಿಕ ಮಾರುತಿ ಸುಜುಕಿ ಸ್ವಿಫ್ಟ್ ಎರಡನೇ ಸ್ಥಾನದಲ್ಲಿದೆ. ಮಾರುತಿ ಸುಜುಕಿ ಸ್ವಿಫ್ಟ್ ಈ ಅವಧಿಯಲ್ಲಿ ಒಟ್ಟು 17,539 ಯುನಿಟ್ ಮಾರಾಟ ಕಂಡಿದೆ. ಮಾರಾಟದಲ್ಲಿ ಇದು ವರ್ಷದಿಂದ ವರ್ಷಕ್ಕೆ ಶೇಕಡಾ 15ರಷ್ಟು ಕಡಿಮೆಯಾಗಿದೆ. ಹ್ಯುಂಡೈ ಕ್ರೆಟಾ ಮಾರಾಟದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಹ್ಯುಂಡೈ ಕ್ರೆಟಾ ಒಟ್ಟು 17,497 ಯುನಿಟ್ ಗಳನ್ನು ಮಾರಾಟ ಮಾಡಿದೆ. ಇದು ಶೇಕಡಾ 34 ರಷ್ಟು ಬೆಳವಣಿಗೆಯಾಗಿದೆ. ಮಾರುತಿ ಸುಜುಕಿ ಬ್ರೆಝಾ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬ್ರೆಝಾ ಕಾರು ಈ ಅವಧಿಯಲ್ಲಿ ಒಟ್ಟು 16,565 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಮಾರುತಿ ಸುಜುಕಿ ಫ್ರಾಂಕ್ಸ್ ಈ ಅವಧಿಯಲ್ಲಿ ಒಟ್ಟು 16,419 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 45 ರಷ್ಟು ಬೆಳವಣಿಗೆ ಸಾಧಿಸಿದೆ.

ಟಾಟಾ ಪಂಚ್ ಏಳನೇ ಸ್ಥಾನ

ಮಾರುತಿ ಸುಜುಕಿ ಬ್ಯಾಲೆನೊ ಮಾರಾಟದ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇದು ಅಕ್ಟೋಬರ್ ತಿಂಗಳಲ್ಲಿ 16,082 ಯುನಿಟ್ ಮಾರಾಟವಾಗಿದೆ. ವರ್ಷದಿಂದ ವರ್ಷಕ್ಕೆ ಶೇಕಡಾ 3ರಷ್ಟು ಮಾರಾಟ ಕುಸಿದಿದೆ. ಈ ಮಾರಾಟದ ಪಟ್ಟಿಯಲ್ಲಿ ಟಾಟಾ ಪಂಚ್ ಏಳನೇ ಸ್ಥಾನದಲ್ಲಿದೆ. ಟಾಟಾ ಪಂಚ್ ಒಟ್ಟು 15,740 ಯುನಿಟ್ ಮಾರಾಟ ಮಾಡಿದೆ. ಇದರ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 3 ರಷ್ಟು ಬೆಳವಣಿಗೆಯಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ ಎಂಟನೇ ಸ್ಥಾನದಲ್ಲಿದ್ದು, ಒಟ್ಟು 15,670 ಯುನಿಟ್ ಮಾರಾಟವಾಗಿದೆ. ಈ ಮಾರಾಟ ಪಟ್ಟಿಯಲ್ಲಿ ಟಾಟಾ ನೆಕ್ಸಾನ್ ಒಂಬತ್ತನೇ ಸ್ಥಾನದಲ್ಲಿದೆ. ಟಾಟಾ ನೆಕ್ಸಾನ್ ಮಾರಾಟ ಪ್ರಮಾಣದಲ್ಲಿ ಶೇಕಡಾ 13ರಷ್ಟು ಕುಸಿದು 14,759 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಹತ್ತನೇ ಸ್ಥಾನದಲ್ಲಿದೆ. ಗ್ರ್ಯಾಂಡ್ ವಿಟಾರಾ 14,083 ಯುನಿಟ್ ಗಳನ್ನು ಮಾರಾಟ ಮಾಡಿದ್ದು, ಈ ಅವಧಿಯಲ್ಲಿ ಶೇಕಡಾ 30ರಷ್ಟು ಬೆಳವಣಿಗೆಯಾಗಿದೆ.

ಅಕ್ಟೋಬರ್ ತಿಂಗಳಲ್ಲಿ ಮಾರಾಟವಾದ ಟಾಪ್ 10 ಕಾರುಗಳು

ಮಾರುತಿ ಸುಜುಕಿ ಎರ್ಟಿಗಾ - 18,785 ಯುನಿಟ್

ಮಾರುತಿ ಸುಜುಕಿ ಸ್ವಿಫ್ಟ್ - 17,539

ಹ್ಯುಂಡೈ ಕ್ರೆಟಾ - 17,497

ಮಾರುತಿ ಸುಜುಕಿ ಬ್ರೆಝಾ - 16,565

ಮಾರುತಿ ಸುಜುಕಿ ಫ್ರಾಂಕ್ಸ್ - 16,419

ಮಾರುತಿ ಸುಜುಕಿ ಬ್ಯಾಲೆನೊ - 16,082

ಟಾಟಾ ಪಂಚ್ - 15,740

ಮಹೀಂದ್ರಾ ಸ್ಕಾರ್ಪಿಯೋ - 15,677

ಟಾಟಾ ನೆಕ್ಸಾನ್-14759

ಮಾರುತಿ ಸುಜುಕಿ ವಿಟಾರಾ-14083

Whats_app_banner