60 ವರ್ಷದ ಹಿರಿಯರಿಗೆ ಅತ್ಯುತ್ತಮ ಸ್ಕೂಟರ್‌ ಯಾವುದು? ಸೀನಿಯರ್‌ ಸಿಟಿಜನ್‌ಗಳ ಸ್ಮೂತ್‌ ಸವಾರಿ
ಕನ್ನಡ ಸುದ್ದಿ  /  ಜೀವನಶೈಲಿ  /  60 ವರ್ಷದ ಹಿರಿಯರಿಗೆ ಅತ್ಯುತ್ತಮ ಸ್ಕೂಟರ್‌ ಯಾವುದು? ಸೀನಿಯರ್‌ ಸಿಟಿಜನ್‌ಗಳ ಸ್ಮೂತ್‌ ಸವಾರಿ

60 ವರ್ಷದ ಹಿರಿಯರಿಗೆ ಅತ್ಯುತ್ತಮ ಸ್ಕೂಟರ್‌ ಯಾವುದು? ಸೀನಿಯರ್‌ ಸಿಟಿಜನ್‌ಗಳ ಸ್ಮೂತ್‌ ಸವಾರಿ

ಸೀನಿಯರ್‌ ಸಿಟಿಜನ್‌ಗಳು ಹೆಚ್ಚು ತೂಕ ಇಲ್ಲದ ಹಗುರ ಸ್ಕೂಟರ್‌ ಬಯಸಬಹುದು. ಹೆಚ್ಚು ಇತ್ತರ ಇರದ ಸ್ಕೂಟರ್‌ ಸ್ಕೂಟರ್‌ಗಳು ಹಿರಿಯರಿಗೆ ಸೂಕ್ತವಾಗಬಲ್ಲದು. ಹಿರಿಯ ಮೆನ್‌ ಅಥವಾ ವುಮೆನ್‌ಗೆ ಸೂಕ್ತವಾಗಲ್ಲ ಇಲ್ಲೊಂದಿಷ್ಟು ಸ್ಕೂಟರ್‌ಗಳ ವಿವರ ನೀಡಲಾಗಿದೆ.

ಹಿರಿಯ ನಾಗರಿಕರಿಗೆ ಸ್ಕೂಟರ್‌
ಹಿರಿಯ ನಾಗರಿಕರಿಗೆ ಸ್ಕೂಟರ್‌ (Photo by unsplash Alex Guillaume)

70-80 ವರ್ಷ ವಯಸ್ಸಿನ ಅಜ್ಜ ತೂಕದ ಬುಲೆಟ್‌ ಬೈಕ್‌ ಮೇಲೆ ಬುಡುಬುಡು ಎಂದು ಸವಾರಿ ಮಾಡುವ ದೃಶ್ಯಗಳು ಆಗಾಗ ನಮ್ಮ ಕಣ್ಣಿಗೆ ಬೀಳಬಹುದು. ಅಜ್ಜಿ ಬೈಕ್‌ ಓಡಿಸುತ್ತಿರುವ ದೃಶ್ಯವೂ ಅಪರೂಪಕ್ಕೆ ಕಣ್ಣಿಗೆ ಬೀಳಬಹುದು. ಗ್ರಾಮಗಳಲ್ಲಿ ಹಿರಿಯರು ಯುವಕರು ನಾಚುವಂತೆ ಬೈಕ್‌ಗಳನ್ನು, ಸ್ಕೂಟರ್‌ಗಳನ್ನು ಓಡಿಸುತ್ತಾರೆ. ನಗರಗಳಲ್ಲಿಯೂ ಹಿರಿಯ ನಾಗರಿಕರು ಬೈಕ್‌ ಸವಾರರ ಗುಂಪು ಕಟ್ಟಿಕೊಂಡು ದೂರ ಪ್ರಯಾಣ ಕೈಗೊಳ್ಳುವುದುಂಟು. ಇವೆಲ್ಲ ನಿಜ. ವಯಸ್ಸು ಅನ್ನೋದು ಸಂಖ್ಯೆ ಅಷ್ಟೇ. ಹೀಗಿದ್ದರೂ, ಎಲ್ಲರಿಗೂ ಇವು ಅಪ್ಲೈ ಆಗದು. ವಯಸ್ಸಾದಂತೆ ಸುಸ್ತು, ನಿಶ್ಯಕ್ತಿ ಕಾಡುವುದುಂಟು. ಹರೆಯದಲ್ಲಿ ನಾವು ಬೆಟ್ಟವನ್ನು ಓಡೋಡಿ ಹತ್ತುತ್ತಿದ್ದೇವು, ಈಗ ಒಂದು ಹತ್ತು ಹೆಜ್ಜೆ ಇಟ್ಟರೆ ಸುಸ್ತಾಗುತ್ತದೆ ಎಂದು ಸಾಕಷ್ಟು ಹಿರಿಯರು ಹೇಳುತ್ತಾರೆ.

ಹಿರಿಯ ನಾಗರಿಕರಿಗೆ ಯಾವ ಸ್ಕೂಟರ್‌ ಬೆಸ್ಟ್‌?

ಸೀನಿಯರ್‌ ಸಿಟಿಜನ್‌ಗಳು ತಮ್ಮ ಎತ್ತರ, ತೂಕ, ಶಕ್ತಿಗೆ ತಕ್ಕಂತೆ ಅತ್ಯುತ್ತಮ ಸ್ಕೂಟರ್‌ಗಳನ್ನು ಆಯ್ಕೆ ಮಾಡಬಹುದು. ಇಲ್ಲಿ ಐದು ಸ್ಕೂಟರ್‌ಗಳ ವಿವರ ನೀಡಲಾಗಿದೆ. ಇವಲ್ಲದೆ ನಿಮಗೆ ಬೇರೆ ಸ್ಕೂಟರ್‌ಗಳು ಅಚ್ಚುಮೆಚ್ಚು ಎಣಿಸಬಹುದು. ಇದಕ್ಕಾಗಿ ವಿವಿಧ ಶೋರೂಂಗಳಿಗೆ ಭೇಟಿ ನೀಡಿ ಅಲ್ಲಿರುವ ಸ್ಕೂಟರ್‌ಗಳನ್ನು ಟೆಸ್ಟ್‌ ರೈಡ್‌ ಮಾಡಿ ನಿರ್ಧಾರ ಮಾಡುವುದು ಸೂಕ್ತ. ಹೀಗಿದ್ದರೂ, ಸೀಟು ಎತ್ತರ, ತೂಕ, ಇತ್ಯಾದಿಗಳ ಆಧಾರದಲ್ಲಿ ಐದು ಸ್ಕೂಟರ್‌ಗಳನ್ನು ಇಲ್ಲಿ ಸೂಚಿಸಿದ್ದೇವೆ.

ಟಿವಿಎಸ್‌ ಜುಪೀಟರ್‌: ಇದು ಜನಪ್ರಿಯ ಸ್ಕೂಟರ್‌. ಮೈಲೇಜ್‌ ವಿಷಯದಲ್ಲೂ ಇದು ಉತ್ತಮವಾಗಿದೆ. ಇದು ಹಗುರ ಸ್ಕೂಟರ್.‌ ಸೀಟು ಎತ್ತರವೂ ಕಡಿಮೆ ಇದೆ.

ಸುಜುಕಿ ಬುರ್ಗಮೆನ್‌ ಸ್ಟ್ರೀಟ್‌: ಇದು ಹಿರಿಯರಿಗೆ ಸೂಕ್ತವಾಗಿದೆ. ಆರಾಮವಾಗಿ ನೆಲಕ್ಕೆ ಕಾಲಿಡಬಹುದು. 21.5 ಲೀಟರ್‌ ಸ್ಟೋರೇಜ್‌ ಸ್ಥಳಾವಕಾಶ, 2 ಲೀಟರ್‌ ಗ್ಲೋವ್‌ ಬಾಕ್ಸ್‌ ಇತ್ಯಾದಿಗಳು ಇವೆ. 125 ಸಿಸಿ ಎಂಜಿನ್‌ ಇದೆ. ಆಟೋಮ್ಯಾಟಿಕ್‌ ಸಿವಿಟಿ ಗಿಯರ್‌ ಬಾಕ್ಸ್‌ ಇದೆ. ಕಿಕ್‌ ಮತ್ತು ಎಲೆಕ್ಟ್ರಿಕ್‌ ಸ್ಟಾರ್ಟರ್‌ ಹೊಂದಿದೆ.

ಟಿವಿಎಸ್‌ ಸ್ಕೂಟಿ ಝೆಸ್ಟ್‌: ಇದು ಕೂಡ ಕಡಿಮೆ ಎತ್ತರದ ಸೀಟು ಹೊಂದಿದೆ. ಸೀಟಿನಡಿ 19 ಲೀಟರ್‌ ಸ್ಟೋರೇಜ್‌ ಹೊಂದಿದೆ. ಇದು ಸಿಂಗಲ್‌ ಸಿಲಿಂಡರ್‌ 4 ಸ್ಟ್ರೋಕ್‌ 110 ಸಿಸಿ ಎಂಜಿನ್‌ ಹೊಂದಿದೆ.

ಹೀರೋ ಮ್ಯಾಸ್ಟ್ರೋ ಎಡ್ಜ್‌ 110: ಹೀರೋ ಮೋಟೋಕಾರ್ಪ್‌ನ ಈ ಸ್ಕೂಟರ್‌ ಕೂಡ ಬೆಸ್ಟ್‌ .ಆದರೆ, 2022ರ ಬಳಿಕ ಇದರ ಉತ್ಪಾದನೆ ನಿಂತಿದೆ. ಸೆಕೆಂಡ್‌ ಹ್ಯಾಂಡ್‌ ಮಾರುಕಟ್ಟೆಯಲ್ಲಿ ಈಗಲೂ ಮ್ಯಾಸ್ಟ್ರೋ ದೊರಕುತ್ತದೆ.

ಹೋಂಡಾ ಡಿಯೋ: ಈ ಸ್ಕೂಟರ್‌ ತರುಣ ತರುಣಿಯರಿಗೆ ಮಾತ್ರವಲ್ಲದೆ ಹಿರಿಯರಿಗೂ ಸೂಕ್ತ. ಸ್ಟಾಂಡರ್ಡ್‌ ಮತ್ತು ಡಿಲಕ್ಸ್‌ ಆವೃತ್ತಿಗಳಲ್ಲಿ ದೊರಕುತ್ತದೆ. ಎಂಜಿನ್‌ ಸ್ಟಾರ್ಟ್‌ ಸ್ಟಾಪ್‌ ಸ್ವಿಚ್‌, ಸೈಡ್‌ಸ್ಟಾಂಡ್‌ ಎಂಜಿನ್‌ ಕಟ್‌ ಅಪ್‌, ಫ್ರಂಟ್‌ ಪಾಕೇಟ್‌ ಮತ್ತು ಅಂಡರ್‌ ಸೀಟ್‌ ಸ್ಟೋರೇಜ್‌ ಇತ್ಯಾದಿಗಳನ್ನು ಹೊಂದಿದೆ.

ಇದಲ್ಲದೆ ಆಕ್ಟಿವಾ 6 ಜಿ ಸೇರಿದಂತೆ ಇತರೆ ಸ್ಕೂಟರ್‌ಗಳನ್ನೂ ನೋಡಬಹುದು. ಇಲ್ಲೊಂದಿಷ್ಟು ಸ್ಕೂಟರ್‌ಗಳಿವೆ. ಇವುಗಳಲ್ಲಿಯೂ ನಿಮಗೆ ಯಾವುದಾದರೂ ಇಷ್ಟವಾಗಬಹುದು. 

Whats_app_banner