ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ 7 ಬೈಕ್‌, ಸ್ಕೂಟರ್‌ಗಳು; ಹಬ್ಬದ ಋತುವಿನಲ್ಲಿ ಯಾವ ದ್ವಿಚಕ್ರವಾಹನ ಖರೀದಿಸ್ತೀರಿ?-automobile news october 2024 upcoming bikes and scooter launches royal enfield suzuki hero two wheelers details pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ 7 ಬೈಕ್‌, ಸ್ಕೂಟರ್‌ಗಳು; ಹಬ್ಬದ ಋತುವಿನಲ್ಲಿ ಯಾವ ದ್ವಿಚಕ್ರವಾಹನ ಖರೀದಿಸ್ತೀರಿ?

ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ 7 ಬೈಕ್‌, ಸ್ಕೂಟರ್‌ಗಳು; ಹಬ್ಬದ ಋತುವಿನಲ್ಲಿ ಯಾವ ದ್ವಿಚಕ್ರವಾಹನ ಖರೀದಿಸ್ತೀರಿ?

ಅಕ್ಟೋಬರ್‌ ತಿಂಗಳೆಂದರೆ ಹಬ್ಬದ ಋತು. ದಸರಾ ಹಬ್ಬದ ಸಂಭ್ರಮದ ಜತೆಗೆ ತಿಂಗಳ ಕೊನೆಗೆ ದೀಪಾವಳಿ ಹಬ್ಬವೂ ಇದೆ. ಈ ತಿಂಗಳಲ್ಲಿ ಹಲವು ಬೈಕ್‌ಗಳು, ಸ್ಕೂಟರ್‌ಗಳು ಬಿಡುಗಡೆಯಾಗಲಿವೆ.

ಹೀರೋ ಡೆಸ್ಟಿನಿ ಸ್ಕೂಟರ್‌ ಮತ್ತು ಇತರೆ ಬೈಕ್‌ಗಳು ಅಕ್ಟೋಬರ್‌ನಲ್ಲಿ ಲಾಂಚ್‌ ಆಗಲಿವೆ.
ಹೀರೋ ಡೆಸ್ಟಿನಿ ಸ್ಕೂಟರ್‌ ಮತ್ತು ಇತರೆ ಬೈಕ್‌ಗಳು ಅಕ್ಟೋಬರ್‌ನಲ್ಲಿ ಲಾಂಚ್‌ ಆಗಲಿವೆ.

ಇದು ಹಬ್ಬದ ಋತು. ನವರಾತ್ರಿ, ದಸರಾ ಸಂಭ್ರಮ ಒಂದೆಡೆ. ತಿಂಗಳಾಂತ್ಯದಲ್ಲಿ ದೀಪಾವಳಿ, ಬಲಿಪಾಡ್ಯಮಿ, ಲಕ್ಷ್ಮಿಪೂಜೆ, ವಾಹನ ಪೂಜೆ ಎಂದೆಲ್ಲ ಇರುತ್ತದೆ. ಕೆಲವರು ದಸರಾ ಸಮಯದಲ್ಲಿ ಆಯುಧ ಪೂಜೆ ಮಾಡುತ್ತಾರೆ. ಕರ್ನಾಟಕದಲ್ಲಿ ಕೆಲವು ಕಡೆ ದೀಪಾವಳಿ ಹಬ್ಬದ ಸಮಯದಲ್ಲೂ ವಾಹನ ಪೂಜೆ ಮಾಡುತ್ತಾರೆ. ಇದೇ ಸಮಯದಲ್ಲಿ ಸಾಕಷ್ಟು ಜನರು ಹೊಸ ವಾಹನ ಖರೀದಿಸಲು ಆದ್ಯತೆ ನೀಡುತ್ತಾರೆ. ವಾಹನ ಕಂಪನಿಗಳು ಜನರ ಹಬ್ಬದ ಸೆಂಟಿಮೆಂಟ್‌ಗೆ ತಕ್ಕಂತೆ ಹೊಸ ಕಾರು, ಬೈಕ್‌, ಸ್ಕೂಟರ್‌ಗಳನ್ನು ಬಿಡುಗಡೆ ಮಾಡುತ್ತವೆ. ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ವಿವಿಧ ಸ್ಕೂಟರ್‌ ಮತ್ತು ಬೈಕ್‌ಗಳ ವಿವರ ಇಲ್ಲಿದೆ.

2024 ಹೀರೋ ಡೆಸ್ಟಿನಿ 125

ಸೆಪ್ಟೆಂಬರ್‌ ತಿಂಗಳಲ್ಲಿಯೇ 2024 ಹೀರೋ ಡೆಸ್ಟಿನಿ 125 ಬೈಕನ್ನು ಅನಾವರಣ ಮಾಡಲಾಗಿತ್ತು. ಇದರ ದರ ಮತ್ತು ಇತರೆ ವಿವರವನ್ನು ಕಂಪನಿಯು ಅಕ್ಟೋಬರ್‌ನಲ್ಲಿ ತಿಳಿಸುವ ಸೂಚನೆಯಿದೆ. ಈ ಪರಿಷ್ಕೃತ ಆವೃತ್ತಿಯ ಸೌಂದರ್ಯ ಸಾಕಷ್ಟು ಬದಲಾಗಿದೆ. ಇದು ಮೂರು ಆವೃತ್ತಿಗಳಲ್ಲಿ ದೊರಕಲಿದೆ. ವಿಎಕ್ಸ್‌, ಝಡ್‌ಎಕ್ಸ್‌, ಝಡ್‌ಎಕ್ಸ್‌ ಪ್ಲಸ್‌ ಆವೃತ್ತಿಗಳಲ್ಲಿ ಎಲ್‌ಇಡಿ ಲೈಟಿಂಗ್‌, ಎಲ್‌ಸಿಡಿ ಇನ್‌ಸ್ಟ್ರುಮೆಮಟ್‌ ಕನ್ಸೋಲ್‌ ಇತ್ಯಾದಿಗಳು ಇರಲಿವೆ.

ಪರಿಷ್ಕೃತಿ ಸುಜುಕಿ ಆಕ್ಸೆಸ್‌ 125

ಈ ಹಬ್ಬದ ತಿಂಗಳಲ್ಲಿ ಸುಜುಕಿಯ ಆಕ್ಸೆಸ್‌ 125 ಪರಿಷ್ಕೃತ ಆವೃತ್ತಿ ಬಿಡುಗಡೆಯಾಗಲಿದೆ. ಅಕ್ಟೋಬರ್‌ ಕೊನೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಹೆಚ್ಚಿನ ವಿವರವನ್ನು ಕಂಪನಿ ಇನ್ನೂ ನೀಡಿಲ್ಲ.

ಪರಿಷ್ಕೃತ ಕೆಟಿಎಂ 200 ಡ್ಯೂಕ್‌

ಅಕ್ಟೋಬರ್‌ ತಿಂಗಳಲ್ಲಿ ಕೆಟಿಎಂ ಕಂಪನಿಯು ಪರಿಷ್ಕೃತ ಕೆಟಿಎಂ ಡ್ಯೂಕ್‌ 200 ಬೈಕ್‌ ಲಾಂಚ್‌ ಮಾಡುವ ಸೂಚನೆಗಳಿವೆ. ಪರಿಷ್ಕೃತ ಆವೃತ್ತಿಯಲ್ಲಿ ಹೊಸ ಫೀಚರ್‌ಗಳು, ಹೊಸ ಬದಲಾವಣೆಗಳು ಏನಿರಲಿದೆ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಬಿಎಂಡಬ್ಲ್ಯು ಸಿಇ 02

ಬಿಎಂಡಬ್ಲ್ಯು ಕಂಪನಿಯು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್‌ ಬೈಕನ್ನು ಈ ತಿಂಗಳು ಬಿಡುಗಡೆ ಮಾಡುತ್ತಿದೆ. ಇದು ಒಂದು ಫುಲ್‌ ಚಾರ್ಜ್‌ಗೆ 90 ಕಿ.ಮೀ. ರೇಂಜ್‌ ನೀಡಲಿದೆ.

ಟ್ರಯಂಪ್‌ ಸ್ಕ್ರಂಬ್ಲರ್‌ 400 ಎಕ್ಸ್‌

ಈ ಪ್ರಿಮೀಯಂ ಬೈಕ್‌ ಕೂಡ ಈ ತಿಂಗಳು ಬಿಡುಗಡೆಯಾಗಲಿದೆ. ಮೆಕ್ಯಾನಿಲ್‌ ವಿಷಯದಲ್ಲಿ ಏನೂ ಬದಲಾವಣೆ ಇರುವುದಿಲ್ಲ. ಸಣ್ಣಪುಟ್ಟ ಅಪ್‌ಡೇಟ್‌ಗಳನ್ನು ನಿರೀಕ್ಷಿಸಬಹುದು.

ರಾಯಲ್‌ ಎನ್‌ಫೀಲ್ಡ್‌ ಇಂಟರ್‌ಸೆಪ್ಟರ್‌ ಬೀರ್‌ 650

ಈ ತಿಂಗಳು ರಾಯಲ್‌ ಎನ್‌ಫೀಲ್ಡ್‌ ಕಂಪನಿಯು ಇಂಟರ್‌ಸೆಪ್ಟರ್‌ ಬೀರ್‌ 650 ಬಿಡುಗಡೆ ಮಾಡುವ ಸೂಚನೆಯಿದೆ. ದಿನಾಂಕ ಮತ್ತು ಹೆಚ್ಚಿನ ವಿವರ ಸದ್ಯಕ್ಕೆ ಲಭ್ಯವಿಲ್ಲ.

ರಾಯಲ್‌ ಎನ್‌ಫೀಲ್ಡ್‌ ಗೋನ್‌ ಕ್ಲಾಸಿಕ್‌ 350

ರಾಯಲ್‌ ಎನ್‌ಫೀಲ್ಡ್‌ ಕಂಪನಿಯು ಹೊಸ ಕ್ಲಾಸಿಕ್‌ 350 ಬೈಕನ್ನೂ ಈ ತಿಂಗಳು ಬಿಡುಗಡೆಯಾಗಿದೆ. ಕ್ಲಾಸಿಕ್‌ ಬೈಕ್‌ಗೆ ಗೂನ್‌ ಕ್ಯಾರೆಕ್ಟರ್‌ ಸೇರ್ಪಡೆ ಮಾಡಿ ಲಾಂಚ್‌ ಮಾಡಿದೆ.

mysore-dasara_Entry_Point