Investment: ಈ ವರ್ಷ ಮ್ಯೂಚುಯಲ್ ಫಂಡ್ ಹೂಡಿಕೆದಾರರು ಹೂಡಿಕೆ ಮಾಡಬಹುದಾದ ಬೆಸ್ಟ್ ಫ್ಲೆಕ್ಸಿ ಕ್ಯಾಪ್ ಫಂಡ್‌ಗಳಿವು
ಫ್ಲೆಕ್ಸಿ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರಿಗೆ ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್ ಹಾಗೂ ಲಾರ್ಚ್ ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆ ಮಾಡಲು ನೆರವಾಗುತ್ತವೆ. ಕಳೆದ ಒಂದು ವರ್ಷದಲ್ಲಿ ಶೇ 35ಕ್ಕಿಂತ ಹೆಚ್ಚು ಆದಾಯ ನೀಡಿದ ಕಂಪನಿಗಳ ಮಾಹಿತಿ ಇಲ್ಲಿದೆ. ಈ ವರ್ಷ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡವವರು ಈ ಮಾಹಿತಿ ಗಮನಿಸಬಹುದು.
ಇತ್ತೀಚಿನ ದಿನಗಳಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸಾಮಾನ್ಯವಾಗಿದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಉಳಿತಾಯದ ಜೊತೆಗೆ ಗಳಿಕೆಯನ್ನೂ ಮಾಡಬಹುದಾಗಿದೆ.
ಮ್ಯೂಚವಲ್ ಫಂಡ್ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸುವ ಮೊದಲು ಹೂಡಿಕೆದಾರರು ಯೋಜನೆಯ ವರ್ಗ, ಫಂಡ್ ಹೌಸ್‌ನ ಖ್ಯಾತಿ ಮತ್ತು ಯೋಜನೆಯನ್ನು ನಿರ್ವಹಿಸುತ್ತಿರುವ ಫಂಡ್ ಮ್ಯಾನೇಜರ್‌ಗಳ ಹಿಂದಿನ ಕಾರ್ಯಕ್ಷಮತೆ ಇಂತಹ ಹಲವಾರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ.
ಆದಾಗ್ಯೂ, ಮ್ಯೂಚುವಲ್ ಫಂಡ್ ಯೋಜನೆ ಹೂಡಿಕೆಗೆ ಅರ್ಹವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಪ್ರಮುಖ ಅಂಶವೆಂದರೆ ಹಿಂದಿನ ಕಾರ್ಯಕ್ಷಮತೆ.
ಕೆಲವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ನಿರೀಕ್ಷಿಸಿದಷ್ಟು ಗಳಿಕೆ ಮಾಡಲು ಸಾಧ್ಯವಿಲ್ಲ ಎಂದು ಸಲಹೆಗಾರರು ಸೂಚಿಸುತ್ತಾರೆ. ಆದರೂ ಆ ಫಂಡ್‌ಗಳು ಹೆಚ್ಚು ಹೂಡಿಕೆದಾರರನ್ನು ಸೆಳೆಯುವಲ್ಲಿ ಹಾಗೂ ಸದ್ಯ ಅಸ್ತಿತ್ವದಲ್ಲಿ ಇರುವವರನ್ನು ಉಳಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತದೆ.
ಉದಾಹರಣೆಗೆ ಗೂಳಿನೆಗೆತನಿಂದ ಹೆಚಿನ ಲಾಭ ಪಡೆಯುವ ಹಾಗೂ ಹೆಚ್ಚಿನ ಲಾಭ ನೀಡುವ ಮ್ಯೂಚುವಲ್ ಫಂಡ್‌ಗಳು ಉತ್ತಮ ಹೂಡಿಕೆಯ ಆಯ್ಕೆಯಾಗಿದೆ.
ಕಳೆದ ಒಂದು ವರ್ಷದಲ್ಲಿ ಹೂಡಿಕೆಯ ಮೇಲೆ ಶೇ 30 ಕ್ಕಿಂತ ಹೆಚ್ಚು ಲಾಭ ನೀಡಿದ ಉನ್ನತ ಕಾರ್ಯಕ್ಷಮತೆಯ ಫ್ಲೆಕ್ಸಿ ಕ್ಯಾಪ್ ಮ್ಯೂಚುವಲ್ ಫಂಡ್ ಯೋಜನೆಗಳನ್ನು ಇಲ್ಲಿ ನಾವು ನೋಡೋಣ.
2024ರಲ್ಲಿ ನೀವು ಯಾವೆಲ್ಲಾ ಫ್ಲೆಕ್ಸಿ ಮ್ಯೂಚುವಲ್ ಫಂಡ್‌ಗಳನ್ನು ಖರೀದಿಸಬಹುದು
ಫ್ಲೆಕ್ಸಿ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರಿಗೆ ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳು ಸೇರಿದಂತೆ ಮಾರುಕಟ್ಟೆಯಲ್ಲಿನ ಎಲ್ಲಾ ಕಂಪನಿಗಳ ಮೇಲೆ ಹೂಡಿಕೆ ಮಾಡಬಹುದಾಗಿದೆ.
ಸೆಬಿಯ ಮ್ಯೂಚುಯಲ್ ಫಂಡ್‌ಗಳ ವರ್ಗೀಕರಣದ ಪ್ರಕಾರ, ಫ್ಲೆಕ್ಸಿ ಕ್ಯಾಪ್ ಫಂಡ್‌ಗಳು ಈಕ್ವಿಟಿ ಮತ್ತು ಇಕ್ವಿಟಿ-ಸಂಬಂಧಿತ ಸಾಧನಗಳಲ್ಲಿ ಕನಿಷ್ಠ 65 ಪ್ರತಿಶತದಷ್ಟು ಹೂಡಿಕೆ ಮಾಡಿದ ಯೋಜನೆಗಳನ್ನು ಉಲ್ಲೇಖಿಸುತ್ತವೆ.
ಅತ್ಯುತ್ತಮ ಕಾರ್ಯಕ್ಷಮತೆಯ ಫ್ಲೆಕ್ಸಿ ಕ್ಯಾಪ್ ಫಂಡ್‌ಗಳು
* ಜೆಎಂ ಫ್ಲೆಕ್ಸಿಕ್ಯಾಪ್ ಫಂಡ್: ಶೇ 42.06 ರಿಟರ್ನ್
* ಬ್ಯಾಂಕ್ ಆಫ್ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್: 40.64 ರಿಟರ್ನ್ಸ್
* ಪಾರಾಗ್ ಪರಿಖ್ ಫ್ಲೆಕ್ಸಿ ಕ್ಯಾಪ್ ಫಂಡ್: 37.60
* ಇನ್ವೆಸ್ಕೊ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್: 36.08
* ಮೋತಿಲಾಲ್ ಓಸ್ವಾಲ್ ಫ್ಲೆಕ್ಸಿ ಕ್ಯಾಪ್ ಫಂಡ್: 35.33
* ನಿಪ್ಪಾನ್ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್: 34.93
* ಡಿಎಸ್‌ಪಿ ಫ್ಲೆಕ್ಸಿ ಕಾಪ್ ಫಂಡ್: 34.36
* ಫ್ರಾಂಕ್ಲಿನ್ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್: 32.46
* ಎಚ್‌ಡಿಎಫ್‌ಸಿ ಫ್ಲೆಕ್ಸಿ ಕ್ಯಾಪ್ ಫಂಡ್: 32.09
* ಎಚ್‌ಎಸ್‌ಬಿಸಿ ಫ್ಲೆಕ್ಸಿ ಕ್ಯಾಪ್ ಫಂಡ್: 32.74
* ವೈಟ್‌ವೋಕ್ ಕ್ಯಾಪಿಟಲ್ ಫ್ಲೆಕ್ಸಿ ಕ್ಯಾಪ್ ಫಂಡ್: 32.64
* ಮಹೀಂದ್ರಾ ಮ್ಯಾನುಲೈಫ್ ಫ್ಲೆಕ್ಸಿ ಕ್ಯಾಪ್ ಫಂಡ್: 32.53
* ಎಡೆಲ್ವೀಸ್ ಫ್ಲೆಕ್ಸಿ ಕ್ಯಾಪ್ ಫಂಡ್: 30.82
ಈ ಮಾಹಿತಿಯ ಪ್ರಕಾರ 5 ಸ್ಕೀಮ್‌ಗಳು ಶೇ 35ಕ್ಕಿಂತ ಹೆಚ್ಚು ಲಾಭ ಮರಳಿ ಸಿಗುವಂತೆ ಮಾಡಿದೆ, ಅದು ಕೇವಲ ಒಂದು ವರ್ಷದಲ್ಲಿ. ಅವುಗಳೆಂದರೆ ಜೆಎಂ ಫ್ಲೆಕ್ಸಿಕ್ಯಾಪ್ ಫಂಡ್, ಬ್ಯಾಂಕ್ ಆಫ್ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್, ಪರಾಗ್ ಪಾರಿಖ್ ಫ್ಲೆಕ್ಸಿ ಕ್ಯಾಪ್ ಫಂಡ್, ಇನ್ವೆಸ್ಕೊ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್ ಮತ್ತು ಮೋತಿಲಾಲ್ ಓಸ್ವಾಲ್ ಫ್ಲೆಕ್ಸಿ ಕ್ಯಾಪ್ ಫಂಡ್.
ಕಳೆದ ಒಂದು ವರ್ಷದಲ್ಲಿ ಕೇವಲ 30 ಪ್ರತಿಶತದಷ್ಟು ಗಳಿಸಿದ ಏಕೈಕ ಯೋಜನೆ ಎಡೆಲ್ವೀಸ್ ಫ್ಲೆಕ್ಸಿ ಕ್ಯಾಪ್ ಫಂಡ್ ಆಗಿದ್ದು, 30.82 ಪ್ರತಿಶತದಷ್ಟು ಆದಾಯವನ್ನು ಹೊಂದಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಆದಾಯವನ್ನು ನೀಡಿದ್ದರೂ, ಭವಿಷ್ಯದ ಆದಾಯವನ್ನು ಈ ಯಾವುದೇ ಯೋಜನೆಗಳಿಂದ ಖಾತರಿಪಡಿಸಲಾಗುವುದಿಲ್ಲ ಎಂಬುದು ನಿಜ. ಏಕೆಂದರೆ ಅವು ಆರ್ಥಿಕತೆಯ ಸ್ಥಿತಿ, ಮಾರುಕಟ್ಟೆ ಸೂಚ್ಯಂಕದ ಒಟ್ಟಾರೆ ದಿಕ್ಕು ಮುಂತಾದ ಹಲವಾರು ಅಂಶಗಳ ಪರಸ್ಪರ ಕ್ರಿಯೆಯಿಂದ ನಿರ್ಧರಿಸಲ್ಪಡುತ್ತವೆ.