ನೀವು ನಾವೆಲ್ಲ ಯುಪಿಐ ಬಳಸೋದಕ್ಕೆ ಶುರುಮಾಡಿ ಏಳೆಂಟು ವರ್ಷ ಆಯ್ತಲ್ವ, ಜೇಬಲ್ಲಿ ಕ್ಯಾಶ್ ಇರಬೇಕು ಅನ್ಸುತ್ತಾ-business news personal finance upi vs cash which transaction method wins a look at digital or traditional payments uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ನಾವೆಲ್ಲ ಯುಪಿಐ ಬಳಸೋದಕ್ಕೆ ಶುರುಮಾಡಿ ಏಳೆಂಟು ವರ್ಷ ಆಯ್ತಲ್ವ, ಜೇಬಲ್ಲಿ ಕ್ಯಾಶ್ ಇರಬೇಕು ಅನ್ಸುತ್ತಾ

ನೀವು ನಾವೆಲ್ಲ ಯುಪಿಐ ಬಳಸೋದಕ್ಕೆ ಶುರುಮಾಡಿ ಏಳೆಂಟು ವರ್ಷ ಆಯ್ತಲ್ವ, ಜೇಬಲ್ಲಿ ಕ್ಯಾಶ್ ಇರಬೇಕು ಅನ್ಸುತ್ತಾ

ಪ್ರಸ್ತುತ ಡಿಜಿಟಲ್ ಜಗತ್ತಿನಲ್ಲಿ ವಹಿವಾಟಿಗಳಿಗೂ ವೇಗ ಸಿಕ್ಕಿದೆ. ಈಗ ಹಣ ಅಂದಾಗ ನಿಮ್ಮ ಕೈ ಜೇಬಿಗೆ ಹೋಗುತ್ತಾ, ಮೊಬೈಲ್‌ ಎತ್ಕೊಳ್ಳುತ್ತಾ, ಡಿಜಿಟಲಾ ಅಥವಾ ಹಿಂದಿನಂತೆ ಕ್ಯಾಶ್ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಕಿರು ಅವಲೋಕನದ ವಿವರ ಇಲ್ಲಿದೆ.

ಈಗ ಹಣ ಅಂದಾಗ ನಿಮ್ಮ ಕೈ ಮೊಬೈಲ್‌ ಎತ್ಕೊಳ್ಳುತ್ತಾ ಅಥವಾ ಜೇಬಿಗೆ ಹೋಗುತ್ತಾ, ದುಡ್ಡು ಎತ್ತಿಕೊಳ್ಳಲು (ಸಾಂಕೇತಿಕ ಚಿತ್ರ)
ಈಗ ಹಣ ಅಂದಾಗ ನಿಮ್ಮ ಕೈ ಮೊಬೈಲ್‌ ಎತ್ಕೊಳ್ಳುತ್ತಾ ಅಥವಾ ಜೇಬಿಗೆ ಹೋಗುತ್ತಾ, ದುಡ್ಡು ಎತ್ತಿಕೊಳ್ಳಲು (ಸಾಂಕೇತಿಕ ಚಿತ್ರ) (canva)

ಇದು ವೇಗದ ದುನಿಯಾ. ಇಲ್ಲಿ ನಾವು ಈಗ ವಹಿವಾಟು ನಡೆಸುವ ವಿಧಾನಕ್ಕೂ ವೇಗ ಬಂದಿದೆ. ಅದಿನ್ನೂ ಅಭಿವೃದ್ಧಿ ಹೊಂದುತ್ತಲೇ ಇದೆ ಕೂಡ. ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ನಂತಹ ಡಿಜಿಟಲ್ ಪಾವತಿ ವ್ಯವಸ್ಥೆ ಬಳಕೆಯ ಏರಿಕೆಯೊಂದಿಗೆ, ಅನೇಕ ಗ್ರಾಹಕರು ಇನ್ನೂ ನಗದು ಬಳಕೆ ಮತ್ತು ಡಿಜಿಟಲ್‌ಗೆ ಹೋಗುವ ನಡುವಿನ ಆಯ್ಕೆಯ ಬಗ್ಗೆ ಚಿಂತಿಸುತ್ತಿರುವುದನ್ನು ಗಮನಿಸಿರಬಹುದು. ಎರಡೂ ವಿಧಾನಗಳು ಅಂದರೆ ಯುಪಿಐ ಮತ್ತು ಕ್ಯಾಶ್ ಅದರದ್ದೇ ಆದ ವಿಶಿಷ್ಟ ಅನುಕೂಲ ಮತ್ತು ಅನನುಕೂಲಗಳನ್ನು ಹೊಂದಿದೆ. ನಿಮ್ಮ ಜೀವನಶೈಲಿ ಮತ್ತು ಆದ್ಯತೆಗಳಿಗೆ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡುವುದು ಅತ್ಯಗತ್ಯ. ನಗದು ವಹಿವಾಟು ಸಾಂಪ್ರದಾಯಿಕ ಮಾಧ್ಯಮವಾಗಿದ್ದರೂ, ನಮ್ಮ ದೈನಂದಿನ ಜೀ]ವನದಲ್ಲಿ ತಂತ್ರಜ್ಞಾನದ ಮೇಲೆ ಹೆಚ್ಚುತ್ತಿರುವ ಅವಲಂಬನೆಯೊಂದಿಗೆ ಯುಪಿಐ ಆಧುನಿಕ, ಅನುಕೂಲಕರ ಪರ್ಯಾಯವನ್ನು ಒದಗಿಸುತ್ತಿರುವುದನ್ನು ಗಮನಿಸಬಹುದು.

ನಾವು ಈ ಬದಲಾವಣೆಯ ಕಡೆಗೆ ಹೆಜ್ಜೆ ಹಾಕುವಾಗ ಪ್ರತಿ ಪಾವತಿ ವಿಧಾನದ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯ, ಇದು ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಗ್ರಾಹಕರಿಗೆ ನೆರವಾಗುತ್ತದೆ. ಅದಕ್ಕಾಗಿ ಇಲ್ಲಿ ಒದಗಿಸುತ್ತಿರುವ ಯುಪಿಐ ಮತ್ತು ನಗದು (ಕ್ಯಾಶ್‌) ವಹಿವಾಟಿನ ಈ ಹೋಲಿಕೆಯು ಅನುಕೂಲತೆ, ವೇಗ, ಭದ್ರತೆ ಮತ್ತು UPI ಮತ್ತು ನಗದು ಒಟ್ಟಾರೆ ಪ್ರಾಯೋಗಿಕತೆಯನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ವಿವಿಧ ಸಂದರ್ಭಗಳಲ್ಲಿ ನಿಮ್ಮ ಅಗತ್ಯಗಳಿಗೆ ಯಾವ ಆಯ್ಕೆಯು ಸರಿಹೊಂದಬಹುದು ಎಂಬುದನ್ನು ನಿರ್ಧರಿಸಲು ನಿಮಗೆ ಸಹಾಯ ಮಾಡುತ್ತದೆ.

ಯುಪಿಐ vs ಕ್ಯಾಶ್: ವಹಿವಾಟುಗಳಿಗೆ ಯಾವುದು ಉತ್ತಮ

ಡಿಜಿಟಲ್ ಯುಗದಲ್ಲಿ, ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ನಂತಹ ನಗದು ಮತ್ತು ಡಿಜಿಟಲ್ ಪಾವತಿ ವಿಧಾನಗಳ ನಡುವೆ ಆಯ್ಕೆ ಮಾಡುವುದು ಗ್ರಾಹಕರ ಮಟ್ಟಿಗೆ ನಿರ್ಣಾಯಕ ನಿರ್ಧಾರವಾಗಿದೆ. ನಿಮ್ಮ ಅಗತ್ಯಗಳಿಗೆ ಯಾವುದು ಸೂಕ್ತವೆಂದು ನಿರ್ಧರಿಸಲು ನಿಮಗೆ ಸಹಾಯ ಮಾಡುವ ಹೋಲಿಕೆ ಇಲ್ಲಿದೆ.

1) ಅನುಕೂಲ:

ಯುಪಿಐ- ನಿಮ್ಮ ಸ್ಮಾರ್ಟ್‌ಫೋನ್‌ ಕೈಯಲ್ಲಿದ್ದರೆ ಸಾಕು. ಬೆರಳ ತುದಿಯಲ್ಲೇ ಕೆಲಸ ಮುಗಿದುಬಿಡುತ್ತದೆ. ಯುಪಿಐ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ತ್ವರಿತ ಪಾವತಿಗಳನ್ನು ಅನುಮತಿಸುತ್ತದೆ.

ನಗದು ಅಥವಾ ಕ್ಯಾಶ್- ಭೌತಿಕವಾಗಿ ನಿರ್ವಹಿಸಬೇಕು. ವಿಶೇಷವಾಗಿ ದೊಡ್ಡ ವಹಿವಾಟುಗಳಿಗೆ ಇದು ಅನಾನುಕೂಲವಾಗಬಹುದು,

2) ವೇಗ:

ಯುಪಿಐ- ಇದರಲ್ಲಿ ವಹಿವಾಟುಗಳು ರಿಯಲ್‌ ಟೈಮ್‌ನಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ನಡೆದುಬಿಡುತ್ತದೆ. ಪಾವತಿ ಬಹಳ ವೇಗವಾಗಿ ಆಗುವುದು ಇದರ ವಿಶೇಷ.

ನಗದು ಅಥವಾ ಕ್ಯಾಶ್- ನೋಟುಗಳನ್ನು ಎಣಿಸಬೇಕು. ವಹಿವಾಟು ಹೆಚ್ಚಿರುವಾಗ ಈ ರೀತಿ ಎಣಿಸುತ್ತ ಕೂರುವುದು ಸಮಯ ನಷ್ಟವನ್ನು ಉಂಟುಮಾಡುತ್ತೆ. ದೂರದೂರಿಗೆ ಹೋಗಿಯೇ ಹಣ ಕೊಡಬೇಕು. ಇರುವಲ್ಲಿಂದ ನಗದು ಪಾವತಿಸಲಾಗದು,

3) ಸುರಕ್ಷೆ:

ಯುಪಿಐ- ಇಲ್ಲಿ ಎನ್‌ಕ್ರಿಪ್ಶನ್ ಅಥವಾ ಗೂಢಲಿಪಿ ಮತ್ತು 2 ಫ್ಯಾಕ್ಟರ್ ಅಥೆಂಟಿಕೇಶನ್‌ ಇದ್ದು, ಪಾವತಿ ವಹಿವಾಟನ್ನು ಸುರಕ್ಷಿತವಾಗಿಸುತ್ತದೆ. ಆದಾಗ್ಯೂ, ವಂಚನೆ ಬಗ್ಗೆ ಜಾಗೃತವಾಗಿರಬೇಕಾದ್ದು ಅವಶ್ಯ.

ನಗದು ಅಥವಾ ಕ್ಯಾಶ್- ನಗದು ಹಣ ಯಾರ ಬಳಿ ಇರುತ್ತದೋ ಅವರದಾಗುತ್ತದೆ. ಅದನ್ನು ಕಳವು ಮಾಡುವುದು ಸುಲಭ ಅಥವಾ ಅದು ಕಳೆದುಹೋಗುವುದು ಬೇಗ.

4) ವೆಚ್ಚ ದಾಖಲೀಕರಣ:

ಯುಪಿಐ- ನಿಮ್ಮ ಯುಪಿಐ ಅಪ್ಲಿಕೇಶನ್‌ನಲ್ಲಿ ವಹಿವಾಟುಗಳನ್ನು ಸ್ವಯಂಚಾಲಿತವಾಗಿ ದಾಖಲಿಸುತ್ತದೆ. ಖರ್ಚುಗಳನ್ನು ಟ್ರ್ಯಾಕ್ ಮಾಡಲು ಮತ್ತು ಬಜೆಟ್‌ಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.

ನಗದು ಅಥವಾ ಕ್ಯಾಶ್- ನೀವು ಕೈಯಲ್ಲೇ ಬರೆದು ವೆಚ್ಚದ ದಾಖಲೆಯನ್ನು ನಿರ್ವಹಿಸದ ಹೊರತು ಟ್ರ್ಯಾಕ್ ಮಾಡುವುದು ಕಷ್ಟ.

5) ಸ್ವೀಕೃತಿ ಪ್ರಮಾಣ:

ಯುಪಿಐ- ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚೆಚ್ಚು ಸ್ವೀಕರಿಸಲಾಗುತ್ತದೆ. ಆದರೆ ಕೆಲವು ಸಣ್ಣ ಮಾರಾಟಗಾರರು ಮೂಲಸೌಕರ್ಯವನ್ನು ಹೊಂದಿಲ್ಲದ ಕಾರಣ ನಗದು ವಹಿವಾಟು ನಡೆಸುತ್ತಿದ್ದಾರೆ.

ನಗದು ಅಥವಾ ಕ್ಯಾಶ್- ಇಂದಿಗೂ ಎಲ್ಲರೂ ಸ್ವೀಕರಿಸುವ ವಿಧಾನ. ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟಿದೆ. ಡಿಜಿಟಲ್ ಪಾವತಿ ವಿಧಾನಗಳು ಚಾಲ್ತಿಯಲ್ಲಿಲ್ಲದ ಪ್ರದೇಶಗಳಲ್ಲಿ ಇದು ಜನಪ್ರಿಯವಾಗಿ ಮುಂದುವರಿದಿದೆ.

6) ಶುಲ್ಕ:

ಯುಪಿಐ- ಸಾಮಾನ್ಯವಾಗಿ, ಬಳಕೆದಾರರಿಗೆ ಯಾವುದೇ ವಹಿವಾಟು ಶುಲ್ಕಗಳಿಲ್ಲ. ವ್ಯಾಪಾರೋದ್ಯಮಗಳು ಈ ಪ್ರಕ್ರಿಯೆಗಾಗಿ ಸಣ್ಣ ಶುಲ್ಕವನ್ನು ಪಾವತಿಸಬೇಕಾಗಬಹುದು.

ನಗದು ಅಥವಾ ಕ್ಯಾಶ್- ಬಳಕೆದಾರರಿಗೆ ನೇರ ಶುಲ್ಕವಿಲ್ಲ. ಆದರೆ ಹಣ ಸಾಗಣೆ ಮತ್ತು ನಿರ್ವಹಣೆಗೆ ವೆಚ್ಚವಿದ್ದು ಅದರ ಹೊರೆ ದೊಡ್ಡ ಹಣಕಾಸು ವಹಿವಾಟುದಾರರ ಮೇಲಿರುತ್ತದೆ.

7) ಡಿಜಿಟಲ್ ಕಂದಕ (ಡಿಜಿಟಲ್ ಡಿವೈಡ್)

ಯುಪಿಐ- ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ. ಇದು ಕೆಲವು ಪ್ರದೇಶದ ಜನರಿಗೆ ಲಭ್ಯವಿಲ್ಲದ ಕಾರಣ ಕಂದಕ ಏರ್ಪಟ್ಟಿದೆ.

ನಗದು ಅಥವಾ ಕ್ಯಾಶ್ - ಟೆಕ್ ಸೌಲಭ್ಯ ಇಲ್ಲದವರೂ ಸೇರಿ ಎಲ್ಲರೂ ಬಳಸಬಹುದು.

ಇಂದಿನ ಅರ್ಥ ವ್ಯವಸ್ಥೆಯಲ್ಲಿ ಯುಪಿಐ ಮತ್ತು ನಗದು ಎರಡೂ ತಮ್ಮ ಸ್ಥಾನವನ್ನು ಹೊಂದಿವೆ. ತಂತ್ರಜ್ಞಾನವು ಮುಂದುವರಿದಂತೆ ಮತ್ತು ನಮ್ಮ ಪಾವತಿ ವ್ಯವಸ್ಥೆಯನ್ನು ಮರುರೂಪಿಸುತ್ತಿರುವುದರಿಂದ, ಮಾಹಿತಿ ಮತ್ತು ಹೊಂದಿಕೊಂಡು ಮುಂದುವರಿಯುವುದು ಮುಖ್ಯವಾಗಿದೆ. ಆದಾಗ್ಯೂ, ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಮತ್ತು ನಿಮ್ಮ ವಹಿವಾಟಿನ ಅನುಭವವನ್ನು ಹೆಚ್ಚಿಸುವ ಸಮತೋಲನವನ್ನು ಕಾಪಾಡುವುದೂ ಮುಖ್ಯ.

mysore-dasara_Entry_Point