Term Insurance Tips: ಟರ್ಮ್ ಲೈಫ್‌ ಇನ್ಷೂರೆನ್ಸ್ ಖರೀದಿಸುವಿರಾ, ಅದಕ್ಕೂ ಮುನ್ನ ಈ 15 ವಿಷಯ ನೆನಪಿಟ್ಟುಕೊಳ್ಳಿ, ಇಲ್ಲಿದೆ ಚೆಕ್ ಲಿಸ್ಟ್
ಕನ್ನಡ ಸುದ್ದಿ  /  ಜೀವನಶೈಲಿ  /  Term Insurance Tips: ಟರ್ಮ್ ಲೈಫ್‌ ಇನ್ಷೂರೆನ್ಸ್ ಖರೀದಿಸುವಿರಾ, ಅದಕ್ಕೂ ಮುನ್ನ ಈ 15 ವಿಷಯ ನೆನಪಿಟ್ಟುಕೊಳ್ಳಿ, ಇಲ್ಲಿದೆ ಚೆಕ್ ಲಿಸ್ಟ್

Term Insurance Tips: ಟರ್ಮ್ ಲೈಫ್‌ ಇನ್ಷೂರೆನ್ಸ್ ಖರೀದಿಸುವಿರಾ, ಅದಕ್ಕೂ ಮುನ್ನ ಈ 15 ವಿಷಯ ನೆನಪಿಟ್ಟುಕೊಳ್ಳಿ, ಇಲ್ಲಿದೆ ಚೆಕ್ ಲಿಸ್ಟ್

Term life insurance guide: ಟರ್ಮ್ ಲೈಫ್‌ ಇನ್ಶೂರೆನ್ಸ್ ಎಂಬುದು ಸಂಪೂರ್ಣ ಜೀವ ವಿಮೆ. ವಿಮೆಯ ಮೆಚ್ಯುರಿಟಿ ಮುಗಿಯು ಮೊದಲು ಪಾಲಿಸಿದಾರ ಮರಣ ಹೊಂದಿದರೆ ವಿಮಾ ಕಂಪನಿಯು ಸಂಪೂರ್ಣ ವಿಮಾ ಮೊತ್ತ ನೀಡುತ್ತದೆ. ಟರ್ಮ್‌ ಲೈಫ್‌ ಇನ್ಷೂರೆನ್ಸ್‌ ಖರೀದಿಸಲು ಬಯಸುವವರಿಗೆ ವಿಶೇಷ ಚೆಕ್‌ಲಿಸ್ಟ್‌ ಇಲ್ಲಿ ನೀಡಲಾಗಿದೆ.

ಟರ್ಮ್ ಲೈಫ್‌ ಇನ್ಷೂರೆನ್ಸ್ ಖರೀದಿಸುವಿರಾ, ಅದಕ್ಕೂ ಮುನ್ನ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ
ಟರ್ಮ್ ಲೈಫ್‌ ಇನ್ಷೂರೆನ್ಸ್ ಖರೀದಿಸುವಿರಾ, ಅದಕ್ಕೂ ಮುನ್ನ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ (Photo by Scott Graham on Unsplash )

ಟರ್ಮ್ ಇನ್ಶೂರೆನ್ಸ್ (Term life insurance) ಎಂಬುದು ಸಂಪೂರ್ಣ ಜೀವ ವಿಮೆ. ವಿಮೆಯ ಮೆಚ್ಯುರಿಟಿ ಮುಗಿಯು ಮೊದಲು ಪಾಲಿಸಿದಾರ ಮರಣ ಹೊಂದಿದರೆ ವಿಮಾ ಕಂಪನಿಯು ಸಂಪೂರ್ಣ ವಿಮಾ ಮೊತ್ತ ನೀಡುತ್ತದೆ. ಎಲ್ಲಾದರೂ ಪಾಲಿಸಿಯಲ್ಲಿ ತಿಳಿಸಲಾದ ಅವಧಿಯ ನಂತರವೂ ವಿಮಾದಾರ ಬದುಕಿದರೆ ವಿಮಾ ಕಂಪನಿಯು ಯಾವುದೇ ಹಣ ಪಾವತಿ ಮಾಡುವುದಿಲ್ಲ. ಟರ್ಮ್‌ ವಿಮೆ ಖರೀದಿಸುವ ಸಂದರ್ಭದಲ್ಲಿ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹೆಚ್ಚು ಯೋಚಿಸಿ ಮಾಹಿತಿಯುಕ್ತ ನಿರ್ಧಾರ ಕೈಗೊಳ್ಳಬೇಕು. ಟರ್ಮ್‌ ಲೈಫ್‌ ಇನ್ಷೂರೆನ್ಸ್‌ ಖರೀದಿಸಲು ಬಯಸುವವರಿಗೆ ವಿಶೇಷ ಚೆಕ್‌ಲಿಸ್ಟ್‌ ಅಥವಾ ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖಾಂಶಗಳನ್ನು ಇಲ್ಲಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ನೀಡುತ್ತಿದೆ.

ಟರ್ಮ್‌ ಲೈಫ್‌ ಇನ್ಷೂರೆನ್ಸ್‌- ಗಮನಿಸಬೇಕಾದ ಪ್ರಮುಖ ಅಂಶಗಳು

  • ನಿಮ್ಮನ್ನು ಅವಲಂಬಿಸಿರುವವರು ಇದ್ದರೆ ತಕ್ಷಣ ಟರ್ಮ್‌ ವಿಮೆ ಖರೀದಿಸಿ
  • ಕವರೇಜ್‌ ಮೊತ್ತ ನಿರ್ಧರಿಸಿ
  • ಟರ್ಮ್‌ ವಿಮೆ ಪಾಲಿಸಿಯ ಅವಧಿ
  • ಆರ್ಥಿಕ ತೊಂದರೆಯಿಂದ ಮುಕ್ತರಾದರೆ ವಿಮೆ ನಿಲ್ಲಿಸಿ
  • ಅಗತ್ಯಗಳಿಗೆ ತಕ್ಕಂತೆ ರೈಡರ್‌ ಮತ್ತು ಆಡ್‌ ಆನ್‌ಗಳನ್ನು ಸೇರಿಸಿ.
  • ಸರಿಯಾದ ಪ್ರೀಮಿಯಂ ಪಾವತಿಯ ಆಯ್ಕೆಯನ್ನು ಆಯ್ದುಕೊಳ್ಳಿ
  • ಲಿಮಿಟೆಡ್‌ ಪೇ
  • ರಿಟರ್ನ್‌ ಆಫ್‌ ಪ್ರೀಮಿಯಂ
  • ನಿಯಮಿತ ಪಾವತಿ
  • ನಾಮಿಗೆ ಸೂಕ್ತ ಪಾವತಿ ಆಯ್ಕೆಯನ್ನು ಆಯ್ದುಕೊಳ್ಳಿ
  • ವಿವಾಹಿತ ಮಹಿಳೆಯರ ಆಸ್ತಿ (MWP) ಕಾಯಿದೆ ಆಯ್ಕೆ ಮಾಡಿ
  • ಪಾಲಿಸಿ ದಾಖಲೆಗಳ ಪರಿಶೀಲನೆ
  • ತೆರಿಗೆ ಪ್ರಯೋಜನ

ನಿಮ್ಮನ್ನು ಅವಲಂಬಿಸಿರುವವರು ಇದ್ದರೆ ತಕ್ಷಣ ಟರ್ಮ್‌ ವಿಮೆ ಖರೀದಿಸಿ

ಪ್ರೀತಿಪಾತ್ರರ ಜವಾಬ್ದಾರಿ ನಿಮಗಿದ್ದರೆ ಖಂಡಿತವಾಗಿಯೂ ಟರ್ಮ್‌ ವಿಮೆ ಖರೀದಿಸಬಹುದು. ಹಣಕಾಸಿನ ಅವಲಂಬಿತರು ಅಂದರೆ ತಮ್ಮ ಅಲ್ಪಾವಧಿಯ ಮತ್ತು ದೀರ್ಘಾವಧಿಯ ವೆಚ್ಚಗಳಿಗಾಗಿ ನಿಮ್ಮ ಆದಾಯವನ್ನು ಸಂಪೂರ್ಣವಾಗಿ ಅವಲಂಬಿಸಿರುವ ಕುಟುಂಬದ ಸದಸ್ಯರು. ಪತಿ ಪತ್ನಿ ಅಥವಾ ಮಕ್ಕಳು ಈ ರೀತಿ ಅವಲಂಬಿತರ ಲಿಸ್ಟ್‌ನಲ್ಲಿರಬಹುದು.

ಕವರೇಜ್‌ ಮೊತ್ತ ನಿರ್ಧರಿಸಿ

ನಿಮಗೇನಾದರೂ ಆದಾಗ ನಿಮ್ಮ ಪ್ರೀತಿಪಾತ್ರರಿಗೆ ಎಷ್ಟು ಮೊತ್ತ ಸಿಗಬೇಕು ಎಂದು ತಿಳಿದುಕೊಳ್ಳಿ. ಟರ್ಮ್‌ ವಿಮೆ ಖರೀದಿಸುವಾಗ ಕುಟುಂಬದ ಅವಶ್ಯಕತೆಯನ್ನು ಪೂರೈಸುವಷ್ಟು ಮೊತ್ತದ ವಿಮಾ ಕವರ್‌ ಅನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಒಂದು ಕೋಟಿ ರೂ. ಸೇರಿದಂತೆ ಹಲವು ಮೊತ್ತದ ಟರ್ಮ್‌ ವಿಮೆ ಲಭ್ಯವಿರುತ್ತದೆ.

ಟರ್ಮ್‌ ವಿಮೆ ಪಾಲಿಸಿಯ ಅವಧಿ

ಪಾಲಿಸಿದಾರನು ಯಾವ ವಯಸ್ಸಿನವರೆಗೆ ಟರ್ಮ್ ಪ್ಲಾನ್ ಅನ್ನು ಖರೀದಿಸಬೇಕು ಎಂದು ನಿರ್ಧರಿಸಬೇಕು ಎಂದು ವಿಮಾ ತಜ್ಞರು ಸಲಹೆ ನೀಡಿದ್ದಾರೆ. 65 ರವರೆಗೆ ಅಥವಾ ಹತ್ತು ವರ್ಷದ ಟರ್ಮ್‌ ಪಾಲಿಸಿ ವಿಸ್ತರಿಸಿದರೆ ಶೇಕಡ 30ರಷ್ಟು ಹೆಚ್ಚು ವೆಚ್ಚವಾಗಲಿದೆ. 15 ವರ್ಷ ವಿಸ್ತರಿಸಿದರೆ (80 ವರ್ಷದವರೆಗೆ) ಅಥವಾ 20 ವರ್ಷ (85 ವರ್ಷದವರೆಗೆ ) ವಿಸ್ತರಿಸಿದರೆ ಪ್ರೀಮಿಯಂಗಳಲ್ಲಿ ಶೇಕಡ 46-47 ಹೆಚ್ಚುವರಿ ವೆಚ್ಚವಾಗುತ್ತದೆ.

ಆರ್ಥಿಕ ತೊಂದರೆಯಿಂದ ಮುಕ್ತರಾದರೆ ವಿಮೆ ನಿಲ್ಲಿಸಿ

ನೀವು ಯಾವುದೇ ಅವಲಂಬಿತರನ್ನು ಹೊಂದಿಲ್ಲದೆ ಇದ್ದರೆ, ನಿಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಸಂಪತ್ತು ಸೃಷ್ಟಿ ಮಾಡಿಯಾಗಿದ್ದರೆ ಬಳಿಕ ನಿಮಗೆ ಇಂತಹ ಪಾಲಿಸಿ ಅಗತ್ಯವಿರುವುದಿಲ್ಲ.

ಅಗತ್ಯಗಳಿಗೆ ತಕ್ಕಂತೆ ರೈಡರ್‌ ಮತ್ತು ಆಡ್‌ ಆನ್‌ಗಳನ್ನು ಸೇರಿಸಿ

ಪಾಲಿಸಿಯು ಗಂಭೀರವಾದ ಅನಾರೋಗ್ಯ, ಆಕಸ್ಮಿಕ ಸಾವು, ಪ್ರೀಮಿಯಂ ರೈಡರ್‌ ಮನ್ನ ಅಥವಾ ಅಂಗವೈಕಲ್ಯ ಪ್ರಯೋಜನ ಇತ್ಯಾದಿ ಹೆಚ್ಚುವರಿ ರೈಡರ್‌ಗಳನ್ನು ನೀಡುತ್ತದೆಯೇ ಎಂದು ಪರಿಶೀಲಿಸಿರಿ.

ಸರಿಯಾದ ಪ್ರೀಮಿಯಂ ಪಾವತಿಯ ಆಯ್ಕೆಯನ್ನು ಆಯ್ದುಕೊಳ್ಳಿ

ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಯಾವ ಅವಧಿಯಲ್ಲಿ ಪಾವತಿಸುವಿರಿ ಎಂದು ಆಯ್ಕೆ ಮಾಡಿಕೊಳ್ಳಿ.

ಲಿಮಿಟೆಡ್‌ ಪೇ

ಒಂದು ನಿರ್ದಿಷ್ಟ ಅವಧಿಯವರೆಗೆ ಒಂದು ದರ ನಂತರ ಕಂತುಗಳ ದರ ಹೆಚ್ಚಬಹುದು.

ರಿಟರ್ನ್‌ ಆಫ್‌ ಪ್ರೀಮಿಯಂ

ವಿಮೆ ಮಾಡಿರುವವನು ಬದುಕಿ ಉಳಿದರೆ ರ್ಮ್ ಪ್ಲಾನ್‌ನಲ್ಲಿ ನೀವು ಮಾಡಿದ ಎಲ್ಲಾ ಪ್ರೀಮಿಯಂಗಳನ್ನು ಕಂಪನಿಯು ಮರುಪಾವತಿಸಬೇಕಾಗುತ್ತದೆ. ಆದರೆ, ಈ ವಿಮೆ ಎರಡು ಮೂರು ಪಟ್ಟು ದುಬಾರಿಯಾಗಿರುತ್ತದೆ.

ನಿಯಮಿತ ಪಾವತಿ

ಈ ಆಯ್ಕೆಯಲ್ಲಿ, ಸಂಪೂರ್ಣ ಪಾಲಿಸಿ ಅವಧಿಗೆ ಪಾಲಿಸಿಯಲ್ಲಿ ನಮೂದಿಸಿರುವಂತೆ ನೀವು ನಿಯತಕಾಲಿಕವಾಗಿ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಪ್ರೀಮಿಯಂಗಳನ್ನು ವಾರ್ಷಿಕ, ಅರ್ಧ-ವಾರ್ಷಿಕ ಅಥವಾ ಮಾಸಿಕವಾಗಿ ಪಾವತಿಸಲು ಆಯ್ಕೆ ಮಾಡಿಕೊಳ್ಳುವಂತಹ ಅವಕಾಶವಿರುತ್ತದೆ.

ಸರಿಯಾದ ಪಾವತಿ ಆಯ್ಕೆಯನ್ನು ಆಯ್ದುಕೊಳ್ಳಿ

ಎಲ್ಲಾದರೂ ಪಾಲಿಸಿದಾರನು ಮರಣ ಹೊಂದಿದರೆ ನಾಮಿನಿಯು ಹಣ ಪಡೆಯುತ್ತಾರೆ. ನಾಮಿನಿಗೆ ಯಾವ ರೀತಿ ಹಣ ನೀಡಬೇಕೆಂದು ಮಾಡುವ ಆಯ್ಕೆ ಇದಾಗಿದೆ. ಈ ಮುಂದಿನ ಆಯ್ಕೆಗಳು ಇರುತ್ತವೆ.

  1. ಲಂಪ್‌ಸಮ್‌: ಒಂದೇ ಬಾರಿಗೆ ನಾಮಿನಿಗೆ ಹಣ ಪಾವತಿಸಲಾಗುತ್ತದೆ. ನಾಮಿನಿಗೆ ಹಣಕಾಸು ನಿರ್ವಹಣೆ ತಿಳಿಯದೆ ಇದ್ದರೆ ಈ ರೀತಿ ಹಣ ಪಡೆಯುವುದು ಅಪಾಯಕಾರಿ. ಕೋಟಿ ಹಣ ಬಂದರೂ ನೀರಿನಂತೆ ಖರ್ಚು ಮಾಡಬಹುದು. ಆ ಹಣವನ್ನು ಕುಟುಂಬದ ಇತರರು, ಸಂಬಂಧಿಕರು ದುರುಪಯೋಗ ಮಾಡುವ ಸಾಧ್ಯತೆಯೂ ಇರುತ್ತದೆ.
  2. ಮಾಸಿಕ ಪಾವತಿ ಆಯ್ಕೆ: ನಾಮಿನಿಗೆ ಸಮಾನ ಮಾಸಿಕ ಕಂತುಗಳಲ್ಲಿ ವಿಮಾ ಮೊತ್ತ ಪಾವತಿಸಬೇಕು. ನೀವು ಮರಣ ಹೊಂದಿದ ಬಳಿಕ ನಿಮ್ಮ ಸಂಗಾತಿಗೆ ವೇತನದಂತೆ ತಿಂಗಳು ತಿಂಗಳು ಇಂತಿಷ್ಟು ಹಣ ಬರುತ್ತದೆ. 
  3. ಮಾಸಿಕ ಆದಾಯ ಪಾವತಿ ಆಯ್ಕೆಯೊಂದಿಗೆ ಒಟ್ಟು ಮೊತ್ತ(Lumpsum with monthly income payout option): ಇದು ಎರಡು ಆಯ್ಕೆಗಳ ಸಂಯೋಜನೆ. ಮೊದಲ ಬಾರಿಗೆ ನಾಮಿನಿಯು ಒಟ್ಟು ಮೊತ್ತದ ಶೇಕಡ 10 ಪಡೆಯುತ್ತಾರೆ. ಜತೆಗೆ, ಉಳಿದ ಮೊತ್ತವನ್ನು ಪ್ರತಿತಿಂಗಳು ಮಾಸಿಕ ಕಂತುಗಳಲ್ಲಿ ಪಡೆಯುತ್ತಾರೆ.

ವಿವಾಹಿತ ಮಹಿಳೆಯರ ಆಸ್ತಿ (MWP) ಕಾಯಿದೆ ಆಯ್ಕೆ ಮಾಡಿ

ಭಾರತದ ಕಾನೂನುಗಳ ಪ್ರಕಾರ ಇದನ್ನು ಮುಂದಿನಂತೆ ಅರ್ಥ ಮಾಡಿಕೊಳ್ಳಿ ನಿಮ್ಮ ಟರ್ಮ್ ಇನ್ಶೂರೆನ್ಸ್ ನಿಮ್ಮ ಎಸ್ಟೇಟ್‌ನ ಭಾಗವಾಗಿದೆ ಮತ್ತು ಕವರ್ ಮೊತ್ತವನ್ನು ಮೊದಲು ನಿಮ್ಮ ಸಾಲದಾತರಿಗೆ ಪಾವತಿಸಲಾಗುತ್ತದೆ. ಅಂದರೆ, ನೀವು ಪಾವತಿಸದೆ ಉಳಿಸಿರುವ ಸಾಲವನ್ನು ಮೊದಲು ತುಂಬಲಾಗುತ್ತದೆ. ನೀವು ಪುರುಷರಾಗಿದ್ದು, ನಿಮ್ಮ ಪತ್ನಿಯ ಹೆಸರಲ್ಲಿ ಮಾಡುವುದಿದ್ದರೆ ಈ ಆಯ್ಕೆಯನ್ನು ಮಾಡಿಕೊಂಡು ಟರ್ಮ್‌ ಇನ್ಷೂರೆನ್ಸ್‌ ಖರೀದಿಸಿರಿ.

ಪಾಲಿಸಿ ದಾಖಲೆಗಳ ಪರಿಶೀಲನೆ

ವಿಮಾ ಪಾಲಿಸಿ ದಾಖಲೆಗಳನ್ನು ಪರಿಶೀಲಿಸಿ. ಎಚ್ಚರಿಕೆಯಿಂದ ಓದಿ. ನಿಯಮ ಷರತ್ತುಗಳನ್ನು ಅರ್ಥ ಮಾಡಿಕೊಳ್ಳಿ. ಸಣ್ಣದಾಗಿ ಬರೆದಿರುವ ಅಂಶಗಳಲ್ಲಿ ದೊಡ್ಡ ವಿಷಯ ಅಡಗಿರಬಹುದು. ಎಚ್ಚರಿಕೆಯಿಂದ ಓದಿ. ಯಾವೆಲ್ಲ ಸಂದರ್ಭಗಳಲ್ಲಿ ಪಾಲಿಸಿ ಅನ್ವಯವಾಗುವುದಿಲ್ಲ ಎಂದು ತಿಳಿದುಕೊಳ್ಳಿ.

ತೆರಿಗೆ ಪ್ರಯೋಜನ

ಟರ್ಮ್‌ ಪಾಲಿಸಿ ಪಡೆದವರು ಆದಾಯ ತೆರಿಗೆಯ ಸೆಕ್ಷನ್ 80C ಮತ್ತು 80D ಅಡಿಯಲ್ಲಿ ತೆರಿಗೆ ಉಳಿತಾಯ ಮಾಡಬಹುದು.

ಅಂದಹಾಗೆ, ಪಾಲಿಸಿದಾರ ಮರಣ ಹೊಂದಿದ ಬಳಿಕ ನಾಮಿನಿಯು ಪಡೆಯುವ ಮೊತ್ತವು ತೆರಿಗೆ ಮುಕ್ತವಾಗಿದೆ. ಇದಕ್ಕೆ ಐಟಿ ಕಾಯಿದೆಯ ಸೆಕ್ಷನ್ 10(10ಡಿ) ಅಡಿಯಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಹೀಗಾಗಿ, ನಾಮಿನಿ ಪಡೆದ ಹಣದಲ್ಲಿ ಮತ್ತೆ ತೆರಿಗೆ ಪಾವತಿಸಬೇಕೆ ಎಂದು ಚಿಂತೆ ಮಾಡಬೇಕಾಗಿಲ್ಲ.

(ಮಾಹಿತಿ: ರೋಹಿತ್‌ ಗ್ಯಾನ್‌ಚಾಂದನಿ, ಕನ್ನಡಕ್ಕೆ: ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ)

Whats_app_banner