ಗೂಗಲ್‌ ಕಂಪನಿಯಲ್ಲಿ ಉದ್ಯೋಗ ಬೇಕೆ? ಆಲ್ಪಾಬೆಟ್‌ ಸಿಇಒ ಸುಂದರ್‌ ಪಿಚೈ ಹೇಳಿರುವ ಈ ಸ್ಕಿಲ್ಸ್‌ ನಿಮ್ಮಲ್ಲಿರುವುದೇ ಖಾತ್ರಿಪಡಿಸಿಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ಗೂಗಲ್‌ ಕಂಪನಿಯಲ್ಲಿ ಉದ್ಯೋಗ ಬೇಕೆ? ಆಲ್ಪಾಬೆಟ್‌ ಸಿಇಒ ಸುಂದರ್‌ ಪಿಚೈ ಹೇಳಿರುವ ಈ ಸ್ಕಿಲ್ಸ್‌ ನಿಮ್ಮಲ್ಲಿರುವುದೇ ಖಾತ್ರಿಪಡಿಸಿಕೊಳ್ಳಿ

ಗೂಗಲ್‌ ಕಂಪನಿಯಲ್ಲಿ ಉದ್ಯೋಗ ಬೇಕೆ? ಆಲ್ಪಾಬೆಟ್‌ ಸಿಇಒ ಸುಂದರ್‌ ಪಿಚೈ ಹೇಳಿರುವ ಈ ಸ್ಕಿಲ್ಸ್‌ ನಿಮ್ಮಲ್ಲಿರುವುದೇ ಖಾತ್ರಿಪಡಿಸಿಕೊಳ್ಳಿ

ಗೂಗಲ್‌ ಕಂಪನಿಯಲ್ಲಿ ಕೆಲಸ ಪಡೆಯಲು ಅಭ್ಯರ್ಥಿಗಳಲ್ಲಿ ಇರಬೇಕಾದ ಕೌಶಲಗಳೇನು? ಆಲ್ಪಾಬೆಟ್‌ ಸಿಇಒ ಸುಂದರ್‌ ಪಿಚ್ಚೈ ಈ ಕುರಿತು ಇತ್ತೀಚೆಗೆ ಮಾಹಿತಿ ನೀಡಿದ್ದಾರೆ. ಕಂಪ್ಯೂಟರ್‌ ವಿಜ್ಞಾನದ ಆಳವಾದ ತಿಳಿವಳಿಕೆ ಹೊಂದಿರುವ ಅತ್ಯುತ್ತಮ ಪ್ರೋಗ್ರಾಮರ್‌ಗಳಿಗೆ ಗೂಗಲ್‌ ಮಣೆ ಹಾಕುತ್ತದೆ.

ಗೂಗಲ್‌ ಕಂಪನಿಯಲ್ಲಿ ಉದ್ಯೋಗ ಪಡೆಯಲು ಬೇಕಾದ ಕೌಶಲಗಳು (REUTERS/Mike Blake/File Photo)
ಗೂಗಲ್‌ ಕಂಪನಿಯಲ್ಲಿ ಉದ್ಯೋಗ ಪಡೆಯಲು ಬೇಕಾದ ಕೌಶಲಗಳು (REUTERS/Mike Blake/File Photo) (REUTERS)

ಗೂಗಲ್‌ ಮಾಲೀಕತ್ವದ ಆಲ್ಪಾಬೆಟ್‌ ಕಂಪನಿಯ ಸಿಇಒ ಸುಂದರ್‌ ಪಿಚ್ಚೈ ಇತ್ತೀಚೆಗೆ ಗೂಗಲ್‌ ಕಂಪನಿಯು ಹೊಸ ನೇಮಕ ಹೇಗೆ ಮಾಡುತ್ತದೆ ಎನ್ನುವುದರ ಕುರಿತು ಒಂದಿಷ್ಟು ಸುಳಿವುಗಳನ್ನು ನೀಡಿದ್ದಾರೆ. ಗೂಗಲ್‌ನಲ್ಲಿ ಉದ್ಯೋಗ ಪಡೆಯಲು ಬಯಸುವರಿಗೆ ಇದು ದಾರಿದೀಪವಾಗಬಲ್ಲದು. ವಿಶೇಷವಾಗಿ ಇವರು ಎಂಜಿನಿಯರಿಂಗ್‌ ಹುದ್ದೆಗಳ ಹೊಸ ನೇಮಕಾತಿ ಕುರಿತು ಮಾಹಿತಿ ನೀಡಿದ್ದಾರೆ. ಡೇವಿಡ್‌ ರೂಬೆನ್‌ಸ್ಟೈನ್‌ ಶೋನಲ್ಲಿ ನೇರ ಮಾತುಕತೆಯಲ್ಲಿ "ನಾವು ಸೂಪರ್‌ಸ್ಟಾರ್‌ ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ಹುಡುಕಾಟದಲ್ಲಿದ್ದೇವೆ" ಎಂದರು. "ಕಂಪ್ಯೂಟರ್‌ ವಿಜ್ಞಾನದ ಆಳವಾದ ತಿಳಿವಳಿಕೆ ಜತೆಗೆ ಅತ್ಯುತ್ತಮ ಪ್ರೋಗ್ರಾಮರ್‌ಗಳಗೆ ಗೂಗಲ್‌ ಆದ್ಯತೆ ನೀಡುತ್ತದೆ" ಎಂದು ಸುಂದರ್‌ ಪಿಚ್ಚೈ ಹೇಳಿದ್ದಾರೆ.

ವಿದ್ಯಾರ್ಥಿಗಳು ಅಥವಾ ಇತರೆ ಅಭ್ಯರ್ಥಿಗಳು "ನಾನು ಗೂಗಲ್‌ನಲ್ಲಿ ಕೆಲಸ ಮಾಡಲು ಬಯಸುತ್ತೇನೆ" ಎಂದು ಹೇಳುತ್ತಾರೆ. ಗೂಗಲ್‌ನಲ್ಲಿ ಕೆಲಸ ದೊರಕಬೇಕಾದರೆ ಯಾವ ಕೌಶಲ ಇರಬೇಕು ಎಂದು ಅಮೆರಿಕದ ಉದ್ಯಮಿ ಡೇವಿಡ್‌ ರೂಬೆನ್‌ಸ್ಟೈನ್‌ ನೇರವಾಗಿ ಸುಂದರ್‌ ಪಿಚ್ಚೈ ಬಳಿ ಕೇಳಿದ್ದಾರೆ.

"ಕಂಪನಿಯು ಅತ್ಯಂತ ಸಂಕೀರ್ಣವಾದ ಆಂತರಿಕ ಸಂದರ್ಶನ ಪ್ರಕ್ರಿಯೆಗೆ ಹೆಸರುವಾಸಿಯಾಗಿದೆ. ಉನ್ನತ ಮಟ್ಟದ ಐಕ್ಯೂ, ಅತ್ಯಧಿಕ ಕೆಲಸದ ಸಂಭಾವ್ಯತೆಗೆ" ಗಮನ ನೀಡುವುದಾಗಿ ಪಿಚ್ಚೈ ಹೇಳಿದ್ದಾರೆ.

ಗೂಗಲ್‌ ಕಂಪನಿಯ ಎಂಟ್ರಿ ಲೆವೆಲ್‌ ಉದ್ಯೋಗಕ್ಕೆ ಪ್ರವೇಶ ಹೇಗೆ? ಎಂದು ರುಬೆನ್‌ಸ್ಟೈನ್‌ ಕೇಳಿದ್ದಾರೆ. ಅದಕ್ಕೆ ಸುಂದರ್‌ ಪಿಚ್ಚೈ "ಇದು ಕೇಸ್‌ ಟು ಕೇಸ್‌ ಆಧಾರದ ಮೇಲೆ ಅವಲಂಬಿತ" ಎಂದರು. "ನೀವು ಎಂಜಿನಿಯರಿಂಗ್‌ ವಿಭಾಗದ ಹುದ್ದೆಯ ಬಗ್ಗೆ ಹೇಳುತ್ತಿದ್ದರೆ, ನಾವು ಒಳ್ಳೆಯ ಪ್ರೋಗ್ರಾಮರ್‌ಗೆ ಗಮನ ನೀಡುತ್ತೇವೆ. ನಿಮಗೆ ತಿಳಿದಿರುವ ಜನರಿಗೆ ಕಲಿಸಲು, ಬೆಳೆಸಲು, ಹೊಸ ಸನ್ನಿವೇಶಗಳಿಗೆ ತಮ್ಮನ್ನು ತಾವು ಅನ್ವಯಿಸಿಕೊಳ್ಳಲು ರೆಡಿ ಇರುವವರಿಗೆ ಆದ್ಯತೆ ಇರುತ್ತದೆ. ಉತ್ತಮವಾಗಿ ಕಾರ್ಯನಿರ್ವಹಿಸಲು ಕ್ರಿಯಾತ್ಮಕವಾಗಿ ಸಿದ್ಧರಾಗಿರುವವರಿಗೆ ಆದ್ಯತೆ ನೀಡುತ್ತೇವೆ" ಎಂದರು. ಇದೇ ಸಮಯದಲ್ಲಿ ಹೊಂದಾಣಿಕೆಯ ಅಗತ್ಯವನ್ನೂ ಪಿಚ್ಚೈ ಹೇಳಿದ್ದಾರೆ. ಪ್ರತಿಭೆ ಮತ್ತು ನಿರಂತರ ಕಲಿಕೆಯ ಗುಣವು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಗೂಗಲ್‌ ಉದ್ಯೋಗಕ್ಕೆ ಬೇಡಿಕೆ ಏಕೆ?

ಯಾಕೆ ಉದ್ಯೋಗಿಗಳು ಗೂಗಲ್‌ ಕಂಪನಿಯಲ್ಲಿ ಕೆಲಸ ಮಾಡಲು ಇಷ್ಟಪಡುತ್ತಾರೆ? ಅಲ್ಲಿ ಅಂತಹ ವಿಶೇಷ ಏನಿದೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಅಲ್ಲಿ ಒಳ್ಳೆಯ ವೇತನ ಸಿಗುತ್ತದೆ. ಪೇ ಪರ್‌ ಫರ್ಪಾಮೆನ್ಸ್‌ ಕೂಡ ಅಲ್ಲಿದೆ. ಒಳ್ಳೆಯ ಸಾಧನೆ ತೋರಿದವರಿಗೆ ಹೆಚ್ಚು ಪ್ರಯೋಜನ ದೊರಕುತ್ತದೆ. ಕಂಪನಿಯ ವರ್ಕ್‌ ಲೈಫ್‌ ಬ್ಯಾಲೆನ್ಸ್‌ಗೆ ಹೆಚ್ಚಿನ ಒತ್ತು ನೀಡುತ್ತದೆ. ಫ್ಲೆಕ್ಸಿಬಲ್‌ ಅವರ್ಸ್‌ ಪರಿಕಲ್ಪನೆಯೂ ಇರುತ್ತದೆ. ವರ್ಷದಲ್ಲಿ ನಾಲ್ಕು ವಾರಗಳ ಕಾಲ "ಎಲ್ಲಿಂದ ಬೇಕಾದರೂ ಕೆಲಸ ಮಾಡಿ" ಆಯ್ಕೆ ನೀಡುತ್ತದೆ. ವರ್ಷಕ್ಕೆ 20-30 ದಿನ ವೇತನ ಇರುವ ರಜಾ ದಿನಗಳನ್ನೂ ನೀಡುತ್ತದೆ. ಪ್ರವಾಸ, ವಿಹಾರಕ್ಕೆ ಇದು ಉತ್ತಮ. ಕಲಿಕೆ, ನೆಟ್‌ವರ್ಕಿಂಗ್‌, ಪರ್ಕ್ಸ್‌ ಕೂಡ ಉತ್ತಮ. ಅಲ್ಲಿನ ಆಫೀಸ್‌ ವಾತಾವರಣ ಉದ್ಯೋಗಿಗಳಿಗೆ ಪ್ರಮುಖ ಆಕರ್ಷಣೆಯಾಗಿದೆ.

Whats_app_banner