ಕನ್ನಡ ಸುದ್ದಿ  /  ಜೀವನಶೈಲಿ  /  White Hair: ಯುವಜನತೆ, ಮಕ್ಕಳನ್ನೂ ಕಾಡುತ್ತಿದೆ ಅಕಾಲಿಕ ಬಿಳಿ ಕೂದಲು; ಬಹಳ ಬೇಗನೆ ತಲೆಗೂದಲು ಬೆಳ್ಳಗಾಗಲು ಕಾರಣವೇನು, ಇಲ್ಲಿದೆ ಮಾಹಿತಿ

White Hair: ಯುವಜನತೆ, ಮಕ್ಕಳನ್ನೂ ಕಾಡುತ್ತಿದೆ ಅಕಾಲಿಕ ಬಿಳಿ ಕೂದಲು; ಬಹಳ ಬೇಗನೆ ತಲೆಗೂದಲು ಬೆಳ್ಳಗಾಗಲು ಕಾರಣವೇನು, ಇಲ್ಲಿದೆ ಮಾಹಿತಿ

Premature grey hair: ಕೆಲವರಿಗೆ ವಯಸ್ಸು 20 ಆದ್ರೂ ಕೂದಲು ಬೆಳ್ಳಗಾಗಿರುತ್ತದೆ. 60ರ ನಂತರ ವಯೋಸಹಜವಾಗಿ ಬೆಳ್ಳಗಾಗುತ್ತಿದ್ದ ಕೂದಲು ಇಂದು ಅಕಾಲಿಕ ಬಿಳಿ ಬಣ್ಣಕ್ಕೆ ತಿರುಗುತ್ತಿರುವುದು ಕಳವಳಕಾರಿಯಾಗಿದೆ. ತಲೆಗೂದಲಿಗೆ ಉಂಟಾದ ಹಾನಿಯನ್ನು ನಿವಾರಿಸಲು ನಿಮ್ಮ ಜೀವನಶೈಲಿಯನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಬೇಕಾಗಿದೆ.

White Hair: ಯುವಜನತೆ, ಮಕ್ಕಳನ್ನೂ ಕಾಡುತ್ತಿದೆ ಅಕಾಲಿಕ ಬಿಳಿ ಕೂದಲು
White Hair: ಯುವಜನತೆ, ಮಕ್ಕಳನ್ನೂ ಕಾಡುತ್ತಿದೆ ಅಕಾಲಿಕ ಬಿಳಿ ಕೂದಲು

ವಯಸ್ಸಾದಂತೆ ತಲೆಗೂದಲು ಬಿಳಿಯಾಗುವುದು ಸಹಜ. ಹಿಂದೆಲ್ಲಾ ವರುಷ 50 ದಾಟಿದ್ರೂ ಕೂದಲು ಬಿಳಿಯಾಗುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಯುವಕ-ಯುವತಿಯರು ಮಾತ್ರವಲ್ಲದೆ ಸಣ್ಣ ಮಕ್ಕಳಲ್ಲೂ ಕೂಡ ತಲೆಗೂದಲು ಬಿಳಿಯಾಗುತ್ತಿರುವುದು ಕಳವಳಕಾರಿಯಾಗಿದೆ. ನಮ್ಮ ತಲೆಗೂದಲೆಲ್ಲಾ 60ರ ನಂತರ ಸ್ವಲ್ಪ ಸ್ವಲ್ಪವೇ ಬೆಳ್ಳಗಾಗುತ್ತಾ ಬಂತು ಅಂತಾ ಹಿರಿಯರು ಹೇಳಿರೋದನ್ನು ಬಹುಶಃ ನೀವು ಕೇಳಿರಬಹುದು. ನಾವೆಲ್ಲಾ ಸೋಪು, ಶ್ಯಾಂಪೂ ಅಂತಾ ಉಪಯೋಗಿಸುತ್ತಿರಲಿಲ್ಲ. ತಲೆಗೆ ಚೆನ್ನಾಗಿ ಎಣ್ಣೆ ಹಾಕಿ ಸೀಗೆಕಾಯಿಯಿಂದ ತಲೆಯನ್ನು ತೊಳೆಯುತ್ತಿದ್ದೆವು. ನೀವೆಲ್ಲಾ ಅದೇನೆನೋ ತಲೆಗಾಕ್ಕೊಂಡು ತಲೆಗೂದಲು ಉದುರುವುದಲ್ಲದೆ, ಕೂದಲಿನ ಬಣ್ಣ ಕೂಡ ಬಹಳ ಬೇಗನೆ ಬಿಳಿಯಾಗುತ್ತಿದೆ ಎಂದು ಹಿರಿಯರು (ವೃದ್ಧರು) ಹೇಳುತ್ತಾರೆ. ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಜೀವನಶೈಲಿಯ ಆಯ್ಕೆಗಳನ್ನು ಒಳಗೊಂಡಂತೆ ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ.

ಟ್ರೆಂಡಿಂಗ್​ ಸುದ್ದಿ

ಯಾವೆಲ್ಲಾ ಕಾರಣಗಳಿಗಾಗಿ ಕೂದಲು ಅಕಾಲಿಕವಾಗಿ ಬಿಳಿಯಾಗುತ್ತದೆ ಅನ್ನೋ ಏಳು ಅಂಶಗಳು ಇಲ್ಲಿವೆ

1. ಒತ್ತಡ ಮತ್ತು ಆತಂಕ: ದೀರ್ಘಕಾಲದ ಒತ್ತಡ ಮತ್ತು ಆತಂಕವು ಕೂದಲು ಅಕಾಲಿಕವಾಗಿ ಬಿಳಿಯಾಗಲು ಕಾರಣವಾಗಬಹುದು. ಅಧಿಕ ಒತ್ತಡದಿಂದಾಗಿ ಮೆಲನೊಸೈಟ್ಗಳನ್ನು (ವರ್ಣದ್ರವ್ಯವನ್ನು ಉತ್ಪಾದಿಸುವ ಕೋಶಗಳು) ಕ್ಷೀಣಿಸಬಹುದು. ಇದು ಕೂದಲಿನ ಬಣ್ಣವನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ.

2. ಪೌಷ್ಠಿಕಾಂಶದ ಕೊರತೆಗಳು: ಅಗತ್ಯ ಪೋಷಕಾಂಶಗಳ ಕೊರತೆಯಿರುವ ಆಹಾರದಿಂದಾಗಿ ಕೂದಲು ಬೇಗನೆ ಬಿಳಿಯಾಗಲು ಕಾರಣವಾಗುತ್ತದೆ. ದೇಹದಲ್ಲಿ ಬಿ 12, ಫೋಲಿಕ್ ಆಮ್ಲ, ಕಬ್ಬಿಣ, ತಾಮ್ರ ಮತ್ತು ಸತುವಿನಂತಹ ಖನಿಜಗಳಂತಹ ಜೀವಸತ್ವಗಳು ಕಡಿಮೆಯಿದ್ದರೆ ಅಕಾಲಿಕ ಬಿಳಿ ಬಣ್ಣಕ್ಕೆ ಕಾರಣವಾಗಬಹುದು. ಕೂದಲಿನ ವರ್ಣದ್ರವ್ಯವನ್ನು ಕಾಪಾಡಿಕೊಳ್ಳಲು ಈ ಪೋಷಕಾಂಶಗಳು ನಿರ್ಣಾಯಕವಾಗಿವೆ.

3. ಧೂಮಪಾನ: ಧೂಮಪಾನವು ಕೂಡ ಕೂದಲು ಅಕಾಲಿಕವಾಗಿ ಬಿಳಿಯಾಗಲು ಕಾರಣವಾಗಿದೆ. ತಂಬಾಕಿನ ಹೊಗೆಯಲ್ಲಿರುವ ಹಾನಿಕಾರಕ ರಾಸಾಯನಿಕಗಳು ಕೂದಲು ಕಿರುಚೀಲಗಳನ್ನು ಹಾನಿಗೊಳಿಸುತ್ತದೆ. ಮೆಲನಿನ್ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆ.

4. ಅತಿಯಾದ ಆಲ್ಕೋಹಾಲ್ ಸೇವನೆ: ಅತಿಯಾದ ಆಲ್ಕೋಹಾಲ್ ಸೇವನೆಯು ತಲೆಗೂದಲು ಬೇಗನೆ ಬಿಳಿ ಬಣ್ಣಕ್ಕೆ ತಿರುಗಲು ಕಾರಣವಾಗಬಹುದು. ಆಲ್ಕೋಹಾಲ್ ದೇಹದ ಪ್ರಮುಖ ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ. ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ. ಒಟ್ಟಾರೆ ಆರೋಗ್ಯವನ್ನು ದುರ್ಬಲಗೊಳಿಸುವುದರಿಂದ ಕೂದಲು ಅಕಾಲಿಕ ಬಿಳಿ ಬಣ್ಣಕ್ಕೆ ತಿರುಗಲು ಕಾರಣವಾಗಬಹುದು.

5. ನಿದ್ದೆಯ ಕೊರತೆ: ಅಸಮರ್ಪಕ ಅಥವಾ ಕಳಪೆ ಗುಣಮಟ್ಟದ ನಿದ್ದೆಯು ಬಿಳಿ ಬಣ್ಣದ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ನಿದ್ರಾಹೀನತೆಯು ಕೂದಲಿನ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ದೈಹಿಕ ಕಾರ್ಯಗಳನ್ನು ಅಡ್ಡಿಪಡಿಸುತ್ತದೆ. ಹೀಗಾಗಿ ಚೆನ್ನಾಗಿ ನಿದ್ರಿಸಲು ನಿಮ್ಮ ಕಾರ್ಯ ಚಟುವಟಿಕೆಯನ್ನು ಬದಲಾಯಿಸಿ.

6. ಮಾಲಿನ್ಯಕಾರಕ ಪರಿಸರ: ಪರಿಸರ ಮಾಲಿನ್ಯ ಹೆಚ್ಚಾಗಿರುವುದರಿಂದ ಇದು ಕೂದಲು ಅಕಾಲಿಕವಾಗಿ ಬಿಳಿ ಬಣ್ಣ ಉಂಟಾಗಲು ಕಾರಣವಾಗಬಹುದು. ಮಾಲಿನ್ಯ ಮತ್ತು ಕೂದಲಿನ ಉತ್ಪನ್ನ (ಶ್ಯಾಂಪೂ ಇತ್ಯಾದಿ) ಗಳಲ್ಲಿನ ರಾಸಾಯನಿಕಗಳು, ಅಕಾಲಿಕ ಬೂದು ಬಣ್ಣಕ್ಕೆ ಕಾರಣವಾಗಬಹುದು. ಯಾಕೆಂದರೆ ಇವು ಕೂದಲಿನ ಕಿರುಚೀಲಗಳನ್ನು ಹಾನಿಗೊಳಿಸಬಹುದು ಮತ್ತು ಮೆಲನಿನ್ ಉತ್ಪಾದನೆಗೆ ಅಡ್ಡಿಯಾಗಬಹುದು.

7. ದೈಹಿಕ ಚಟುವಟಿಕೆಯ ಕೊರತೆ: ಜಡ (ಸೋಮಾರಿತನ) ಜೀವನಶೈಲಿಯು ತಲೆಗೂದಲ ಅಕಾಲಿಕ ಬೂದು ಬಣ್ಣಕ್ಕೆ ಕಾರಣವಾಗಬಹುದು. ಸದಾ ಚೈತನ್ಯದಿಂದ ಇರಬೇಕು. ನಿಯಮಿತ ವ್ಯಾಯಾಮ ಮಾಡುವುದರಿಂದ ಉತ್ತಮ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಇದರಿಂದ ಅಗತ್ಯವಾದ ಪೋಷಕಾಂಶಗಳು ಕೂದಲಿನ ಕಿರುಚೀಲಗಳನ್ನು ತಲುಪುತ್ತದೆ.

ಒಟ್ಟಾರೆ ಇಂದಿನ ಜೀವನಶೈಲಿಯಿಂದಾಗಿ ಕೂದಲು ಅಕಾಲಿಕ ಬಿಳಿ ಬಣ್ಣಕ್ಕೆ ತಿರುಗಲು ಕಾರಣವಾಗಿದೆ ಎಂದರೆ ತಪ್ಪಲ್ಲ. ಅಲ್ಲದೆ, ಜೆನೆಟಿಕ್ಸ್ ಸಹ ಅಕಾಲಿಕ ಕೂದಲು ಬಿಳಿಯಾಗಲು ಪಾತ್ರ ವಹಿಸುತ್ತದೆ. ನೀವು ಅಕಾಲಿಕ ಬಿಳಿ ಬಣ್ಣದ ಬಗ್ಗೆ ಚಿಂತಿಸುತ್ತಿದ್ದರೆ ಅದಕ್ಕೆ ಸಲಹೆ ಮತ್ತು ಚಿಕಿತ್ಸಾ ಆಯ್ಕೆಗಳಿಗಾಗಿ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸುವುದು ಸೂಕ್ತ.