Condom Mistakes: ಈ ತಪ್ಪುಗಳನ್ನು ಮಾಡಿದರೆ ಕಾಂಡೋಮ್ ಉಪಯೋಗಿಸಿದರೂ ವೇಸ್ಟ್; ಅದೇನಂತ ತಿಳಿದು ಎಚ್ಚರ ವಹಿಸಿ!-condom mistakes avoid these mistakes while using condoms know correct way to use condoms health tips in kannada prs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Condom Mistakes: ಈ ತಪ್ಪುಗಳನ್ನು ಮಾಡಿದರೆ ಕಾಂಡೋಮ್ ಉಪಯೋಗಿಸಿದರೂ ವೇಸ್ಟ್; ಅದೇನಂತ ತಿಳಿದು ಎಚ್ಚರ ವಹಿಸಿ!

Condom Mistakes: ಈ ತಪ್ಪುಗಳನ್ನು ಮಾಡಿದರೆ ಕಾಂಡೋಮ್ ಉಪಯೋಗಿಸಿದರೂ ವೇಸ್ಟ್; ಅದೇನಂತ ತಿಳಿದು ಎಚ್ಚರ ವಹಿಸಿ!

Condom Mistakes: ಕಾಂಡೋಮ್ ಬಳಸುವಾಗ ಕೆಲವು ತಪ್ಪುಗಳಾಗುವ ಸಂಭವಗಳು ಹೆಚ್ಚಾಗುತ್ತಿವೆ. ಈ ತಪ್ಪು ತಪ್ಪಾಗಿ ಕಾಂಡೋಮ್ ಬಳಸಿದರೆ, ಕಾಂಡೋಮ್ ಬಳಸಿದರೂ ವ್ಯರ್ಥ. ಹಾಗಾಗಿ ಈ ಮುನ್ನೆಚ್ಚರಿಕೆಗಳನ್ನು ತಿಳಿಯುವುದು ಉತ್ತಮ.

ಈ ತಪ್ಪುಗಳನ್ನು ಮಾಡಿದರೆ ಕಾಂಡೋಮ್ ಉಪಯೋಗಿಸಿದರೂ ವೇಸ್ಟ್; ಅದೇನಂತ ತಿಳಿದು ಎಚ್ಚರ ವಹಿಸಿ
ಈ ತಪ್ಪುಗಳನ್ನು ಮಾಡಿದರೆ ಕಾಂಡೋಮ್ ಉಪಯೋಗಿಸಿದರೂ ವೇಸ್ಟ್; ಅದೇನಂತ ತಿಳಿದು ಎಚ್ಚರ ವಹಿಸಿ

Condom Mistakes: ಕಾಂಡೋಮ್ ಬಳಸಲು ಹಲವು ಕಾರಣಗಳು ನಮ್ಮ ಮುಂದಿವೆ. ಪ್ರಗ್ನೆನ್ಸಿಯನ್ನು ತಡೆಯಲು ಸುಲಭವಾದ ಜನನ ನಿಯಂತ್ರಣ ವಿಧಾನ ಮತ್ತು ಮಾರ್ಗ. ಸಂಭೋಗದ ವೇಳೆ ಲೈಂಗಿಕ ಸೋಂಕುಗಳು ಹರಡದಂತೆ ತಡೆಗಟ್ಟಲು ಸಹ ಕಾಂಡೋಮ್​​ಗಳನ್ನು ಮುಂಜಾಗ್ರತಾ ಕ್ರಮವಾಗಿ ಬಳಸುತ್ತಾರೆ. ಸಂಭೋಗದ ವೇಳೆ ಸುರಕ್ಷಿತತೆ ಖಾತರಿಪಡಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಕಾಂಡೋಮ್ ಬಳಕೆಯಲ್ಲಿ ತಪ್ಪುಗಳು ನಡೆದಿದ್ದೇ ಆದರೆ, ಅದನ್ನು ಉಪಯೋಗಿವಾದರೂ ಪ್ರಯೋಜನವೇ ಇಲ್ಲ ಎಂಬುದನ್ನು ಮರೆಯಬೇಡಿ. ನಾವು ತಿಳಿದುಕೊಳ್ಳಬೇಕಾದದ್ದು ಏನು? ಇಲ್ಲಿದೆ ವಿವರ.

ಕಾಂಡೋಮ್ ಬಳಕೆಯಲ್ಲಿ ತಪ್ಪಿಸಬೇಕಾದ ತಪ್ಪುಗಳು

1. ಎರಡು ಕಾಂಡೋಮ್‌ಗಳನ್ನು ಬಳಸುವುದು

ಎಷ್ಟೋ ಮಂದಿ ಲೈಂಗಿಕ ಕ್ರಿಯೆ ನಡೆಸುವ ವೇಳೆ ಎರಡೆರಡು ಕಾಂಡೋಮ್ ಬಳಸಿದರೆ ಉತ್ತಮ ಮಾರ್ಗ ಎಂದು ಕೆಲವರು ಭಾವಿಸುತ್ತಾರೆ/ಭಾವಿಸುತ್ತಿದ್ದಾರೆ. ಏಕೆಂದರೆ ಹೆಚ್ಚಿನ ಸುರಕ್ಷತೆಗೆ ಎರಡೆರಡು ಕಾಂಡೋಮ್ ಅಂದರೆ ಒಂದರ ಮೇಲೊಂದರಂತೆ ಬಳಸುತ್ತಾರೆ. ಆದರೆ ಅದು ದೊಡ್ಡ ಎರಡು ಕಾಂಡೋಮ್​ಗಳನ್ನು ಬಳಸುವುದು ದೊಡ್ಡ ತಪ್ಪು. ಸಂಭೋಗದ ನಡುವೆ ಘರ್ಷಣೆ ನಡುವೆ ಕಾಂಡೋಮ್ ಹರಿದು ಹೋಗುವ ಸಾಧ್ಯತೆ ಹೆಚ್ಚಿದೆ. ಇದು ಪ್ರೆಗ್ನೆನ್ಸಿ ಸೋಂಕಿನ ಅಪಾಯ ಹೆಚ್ಚಿಸುವ ಸಾಧ್ಯತೆಯೂ ಇದೆ.

2. ನಿಮಿರುವಿಕೆ ನಂತರವೇ ಬಳಸಿ

ನಿಮಿರುವಿಕೆಯ ನಂತರವೇ ಕಾಂಡೋಮ್ ಬಳಸಬೇಕು. ಅದಕ್ಕಿಂತ ಮೊದಲೇ ಕಾಂಡೋಮ್ ಹಾಕಿದರೆ ಸರಿಯಾಗಿ ಬಳಸಲು ಸಾಧ್ಯವೇ ಇಲ್ಲ. ಅದಿರಲಿ ಅದನ್ನು ಧರಿಸಲು ಕೂಡ ಆಗುವುದಿಲ್ಲ. ಈ ವಿಷಯದಲ್ಲಿ ಸಂಪೂರ್ಣ ಆತುರತೆ ತೋರಿದರೆ, ಅದು ಸಂಪೂರ್ಣ ನಷ್ಟಕ್ಕೆ ಕಾರಣವಾಗಲಿದೆ.

3. ಕಾಂಡೋಮ್ ಖಾಲಿ ಇರಬೇಕು

ಕಾಂಡೋಮ್​ ತುದಿಯನ್ನು ರಿಜರ್ವಾಯರ್ ಟಿಪ್ ಎನ್ನುತ್ತಾರೆ. ಕಾಂಡೋಮ್ ಧರಿಸಿದಾಗ ತುದಿಯಲ್ಲಿ ಕನಿಷ್ಠ ಅರ್ಧ ಇಂಚು ಅಂತರ ಇರಬೇಕು. ಅದಕ್ಕಾಗಿ ಎರಡು ಬೆರಳುಗಳ ನಡುವೆ ತುದಿಯನ್ನು ಹಿಡಿದು ಕಾಂಡೋಮ್ ಧರಿಸಬೇಕು. ಇಲ್ಲದಿದ್ದರೆ ಸಂಗ್ರಹಕ್ಕೆ ಸ್ಥಳಾವಕಾಶ ಇಲ್ಲದೆಯೇ ಕೊರತೆಯಿಂದ ಕಾಂಡೋಮ್ ಹರಿಯುವ ಸನ್ನಿವೇಶ ಎದುರಾಗುತ್ತದೆ.

4. ತಪ್ಪು ಲೂಬ್ರಿಕೇಶನ್ ಬಳಕೆ

ಲೈಂಗಿಕ ಕ್ರಿಯೆಯ ಸಮಯದಲ್ಲಿ ಘರ್ಷಣೆ ಮತ್ತು ನೋವು ಕಡಿಮೆ ಮಾಡಲು ಲೂಬ್ರಿಕೆಂಟ್​ಗಳನ್ನು ಬಳಸುತ್ತಾರೆ. ಆದರೆ ಇವುಗಳಿಂದ ಲೈಂಗಿಕ ಕ್ರಿಯೆಯನ್ನು ಕಡಿಮೆಗೊಳಿಸುವ ಸಾಧ್ಯತೆ ಇದೆ. ಆದಾಗ್ಯೂ, ಕಾಂಡೋಮ್ ಬಳಸುವಾಗ ಲೂಬ್ರಿಕೆಂಟ್​ನೊಂದಿಗೆ ಜಾಗರೂಕರಾಗಿರಿ. ಕಾಂಡೋಮ್​​ಗಳೊಂದಿಗೆ ತೈಲ ಆಧಾರಿತ ಲೂಬ್ರಿಕೆಂಟ್​​ಗಳ ಬಳಕೆ ತಪ್ಪು. ಯಾವಾಗಲೂ ನೀರು ಆಧಾರಿತ ಲೂಬ್ರಿಕೇಶನ್ ಬಳಸುವುದು ಉತ್ತಮ. ಇಲ್ಲದಿದ್ದರೆ ಕಾಂಡೋಮ್ ಹರಿದು ಹೋಗುವ ಅಪಾಯವಿದೆ.

5. ಪ್ಯಾಕೆಟ್ ತೆರೆಯುವಾಗ ಎಚ್ಚರ

ಕಾಂಡೋಮ್​​ಗಳನ್ನು ಸಾಮಾನ್ಯವಾಗಿ ಫಾಯಿಲ್ ಪ್ಯಾಕೇಜಿಂಗ್​​ನಲ್ಲಿ ಬರುತ್ತವೆ. ಇದು ಪ್ಯಾಕೆಟ್ ತೆರೆಯಲು ಸುಲಭವಾಗುತ್ತದೆ. ಆದರೆ ನೀವು ಅದನ್ನು ತೆರೆಯುವಾಗ ನಿಮಗಿಷ್ಟ ಬಂದಂತೆ ತೆರೆಯಬಾರದು. ಒಂದು ವೇಳೆ ಹಾಗೇ ಮಾಡುವಾಗ ನಿಮಗೆ ಕಾಣದಂತೆ ಚಿಕ್ಕದಾಗಿ ಹರಿದಿರುತ್ತದೆ. ಆಗ ವೀರ್ಯ ಸೋರುವ ಸಾಧ್ಯತೆಯೂ ಇದೆ. ಇಂತಹದ್ದನ್ನು ಬಳಕೆ ಮಾಡಿದರೂ ಪ್ರಯೋಜನೆ ಇಲ್ಲ. ಪ್ಯಾಕೆಟ್ ಮೇಲೆ ಉಲ್ಲೇಖಿಸಿರುವ ಮುನ್ನೆಚ್ಚರಿಕೆಗಳನ್ನು ಅನುಕರಿಸಬೇಕು. ಚೂಪಾದ ವಸ್ತುಗಳನ್ನು ಬಳಸದೆ ಎಚ್ಚರಿಕೆಯಿಂದ ಪ್ಯಾಕೆಟ್ ತೆರೆಯಿರಿ.

6. ಜೇಬಿನಲ್ಲಿಟ್ಟುಕೊಳ್ಳಬೇಡಿ

ಕಾಂಡೋಮ್ ಪ್ಯಾಕೆಟ್ ಅನ್ನು ನಿಮ್ಮ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಳ್ಳಬೇಡಿ. ಈ ಕಾರಣದಿಂದ ಜೇಬಿನಲ್ಲಿ ಕೈಯಾಡಿಸುವಾಗ, ಅದು ಇದು ವಸ್ತುಗಳನ್ನು ಇಟ್ಟಾಗ ಕಾಂಡೋಮ್​ ಹಾನಿಯಾಗುವ ಸಾಧ್ಯತೆಯಿದೆ.

mysore-dasara_Entry_Point