ಶಿವಾಜಿ ಮಿಲ್ಟ್ರಿ ಹೋಟೆಲ್, ಅಂಬುರ್ ಸ್ಟಾರ್ ಬಿರಿಯಾನಿ ಸೇರಿದಂತೆ ಬೆಂಗಳೂರಿನ 10 ಬೆಸ್ಟ್ ಬಿರಿಯಾನಿ ಹೋಟೆಲ್‌ಗಳಿವು, ಹೋಗಿ ಬನ್ನಿ
10 Best Hotels to Eat Biriyani in Bangalore: ಕೋರಮಂಗಲದಲ್ಲಿ ಮೊದಲು ಆರಂಭವಾದ ನಾಗಾರ್ಜುನ ಹೋಟೆಲ್, ಇಂದಿರಾ ನಗರ್, ರೆಸಿಡೆನ್ಸಿ ರೋಡ್, ಬನ್ನೇರುಘಟ್ಟದಲ್ಲಿ ನಾಗಾರ್ಜುನ ಹೋಟೆಲ್ ಬ್ರಾಂಚ್‌ಗಳಿವೆ. ಬೆಂಗಳೂರಿನ ಜೆಪಿ ನಗರದಲ್ಲಿರುವ ಪ್ಯಾರಡೈಸ್ ಕೂಡಾ ಬೆಂಗಳೂರಿನಲ್ಲಿ ಒಳ್ಳೆ ಬಿರಿಯಾನಿ ದೊರೆಯುವ ಸ್ಥಳ. ಇದೂ ಕೂಡಾ ವಿವಿಧ ಶಾಖೆಗಳನ್ನು ಹೊಂದಿದೆ.
10 Best Hotels to Eat Biriyani in Bangalore: ಬಿರಿಯಾನಿ ಎಂದರೆ ಭೋಜನಪ್ರಿಯರಿಗೆ ಬಾಯಲ್ಲಿ ನೀರೂರುತ್ತದೆ. ಮನೆಯಲ್ಲಾದರೂ ಸರಿ ಹೊರಗಡೆ ಆದರೂ ಸರಿ ವಾರಕ್ಕೆ ಒಮ್ಮೆಯಾದರೂ ಬಿರಿಯಾನಿ ಸವಿಯದಿದ್ದರೆ ಸಮಾಧಾನ ಎನಿಸುವುದಿಲ್ಲ. ಕೆಲವರು ಮನೆಯಲ್ಲಿ ಮಾಡುವುದಕ್ಕಿಂತ ಹೊರಗೆ ತಿನ್ನಲು ಇಷ್ಟಪಡುತ್ತಾರೆ. ನೀವು ಬೆಂಗಳೂರಿನವರಾದರೆ ನಿಮಗೆ ಒಳ್ಳೆ ಬಿರಿಯಾನಿ ರೆಸ್ಟೋರೆಂಟ್‌ಗಳು ಸಾಕಷ್ಟಿವೆ. ಬೆಂಗಳೂರಿನಲ್ಲಿ ಬಿರ್ಯಾನಿ ತಿನ್ನಲು 10 ಬೆಸ್ಟ್ ಜಾಗಗಳು ಇಲ್ಲಿವೆ ನೋಡಿ.
1. ಆನಂದ್ ದಮ್ ಬಿರಿಯಾನಿ
ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ರಾತ್ರಿ ಬಿರಿಯಾನಿ ತಿನ್ನುತ್ತೇವೆ. ಆದರೆ ಈ ಹೋಟೆಲ್‌ನಲ್ಲಿ ಬೆಳಗ್ಗೆ 4 ಗಂಟೆಗೆ ಜನರು ಬಿರಿಯಾನಿ ತಿನ್ನಲು ಗಂಟೆಗಟ್ಟಲೆ ಕ್ಯೂ ಕಟ್ಟಿ ನಿಂತಿರುತ್ತಾರೆ. ಬೆಂಗಳೂರಿನ ಫೇಮಸ್ ಬಿರಿಯಾನಿ ಹೌಸ್‌ಗಳಲ್ಲಿ ಆನಂದ್ ದಮ್ ಬಿರಿಯಾನ್ ಹೋಟೆಲ್ ಕೂಡಾ ಒಂದು. ಇಲ್ಲಿ ಸೌದೆ ಒಲೆಯಲ್ಲಿ ಬಿರಿಯಾನಿ ಮಾಡುವುದರಿಂದಲೇ ಇದರ ರುಚಿ ದುಪ್ಪಟ್ಟು ಎನ್ನಬಹುದು. ಬೆಂಗಳೂರಿನ ಹೊರವಲಯದ ಹೊಸಕೋಟೆಯಲ್ಲಿ ಆನಂದ್ ಬಿರಿಯಾನಿ ಹೋಟೆಲ್ ಇದೆ.
2. ಶಿವಾಜಿ ಮಿಲ್ಟ್ರಿ ಹೋಟೆಲ್, ಶಿವಾಜಿ ನಗರ
ಮಿಲ್ಟ್ರಿ ಹೋಟೆಲ್ ಬಡ, ಮಧ್ಯಮ ವರ್ಗದ ಜನರು ಇಷ್ಟಪಟ್ಟು ಹೋಗುವ ಸ್ಥಳ. ಬೆಂಗಳೂರು ಜಯನಗರದ 8ನೇ ಬ್ಲಾಕ್‌ನಲ್ಲಿರುವ ಶಿವಾಜಿ ಮಿಲ್ಟ್ರಿ ಹೋಟೆಲ್ ಇಡೀ ಬೆಂಗಳೂರಿನಲ್ಲಿ ಬಹಳ ಫೇಮಸ್. ಬೆಂಗಳೂರಿನ ಟಾಪ್ ಬಿರಿಯಾನಿ ಹೋಟೆಲ್‌ಗಳಲ್ಲಿ ಇದೂ ಒಂದು. ಘಮಘಮಿಸುವ ಮಸಾಲೆ, ಮುಟ್ಟಿದರೆ ಮೃದುವಾಗಿರುವ ಚಿಕನ್/ಮಟನ್ ಬಿರ್ಯಾನಿ ತಿನ್ನುವ ಆಸೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
3. ಅಂಬುರ್ ಸ್ಟಾರ್ ಬಿರಿಯಾನಿ
ಬೆಂಗಳೂರಿನ ಭುವನಪ್ಪ ಲೇ ಔಟ್‌ನಲ್ಲಿರುವ ಅಂಬುರ್ ಸ್ಟಾರ್ ಬಿರಿಯಾನಿ ಬೆಂಗಳೂರಿನ ಬೆಸ್ಟ್ ರೆಸ್ಟೋರೆಂಟ್‌ಗಳಲ್ಲಿ ಒಂದು. ಮನೆಗೆ ಗೆಸ್ಟ್ ಬಂದು ನೀವು ಮನೆಯಲಿ ಬಿರಿಯಾನಿ ತಯಾರಿಸಲು ಸಾಧ್ಯವಾಗದಿದ್ದಲ್ಲಿ ಒಮ್ಮೆ ಈ ಹೋಟೆಲ್‌ಗೆ ಭೇಟಿ ಕೊಡಿ. ನೀವು ಮತ್ತೊಮ್ಮೆ ಈ ಹೋಟೆಲ್‌ಗೆ ಹೋಗುವುದನ್ನು ತಪ್ಪಿಸುವುದಿಲ್ಲ.
4. ಮೇಘನಾ ಫುಡ್ಸ್
ಜಯನಗರದಲ್ಲಿರುವ ಮೇಘನಾ ಫುಡ್ಸ್ ಕೂಡಾ ಸಿಲಿಕಾನ್ ಸಿಟಿಯ ಬೆಸ್ಟ್ ಬಿರಿಯಾನಿ ಸ್ಥಳಗಳಲ್ಲಿ ಒಂದು. 2006ರಿಂದಲೂ ಈ ಹೋಟೆಲ್ ಬಹಳ ಫೇಮಸ್. ಇಂದಿರಾ ನಗರ, ಕೋರಮಂಗಲ, ರೆಸಿಡೆನ್ಸ್ ರೋಡ್‌ನಲ್ಲಿ ಕೂಡಾ ಮೇಘನಾ ಫುಡ್ಸ್ ಶಾಖೆಗಳಿವೆ. ನಿಮಗೆ ಹತ್ತಿರವಾದ ಬ್ರಾಂಚ್‌ಗಳಿಗೆ ಹೋಗಿ ಬಿರ್ಯಾನಿ ಸವಿಯಬಹುದು. ಈ ಹೋಟೆಲ್‌ನಲ್ಲಿ ಡೈನಿಂಗ್ ಸೆಟ್ಟಿಂಗ್ ಕೂಡಾ ನಿಮ್ಮ ಗಮನ ಸೆಳೆಯುತ್ತದೆ.
5. ಪ್ಯಾರಡೈಸ್
ಬೆಂಗಳೂರಿನ ಜೆಪಿ ನಗರದಲ್ಲಿರುವ ಪ್ಯಾರಡೈಸ್ ಕೂಡಾ ಬೆಂಗಳೂರಿನಲ್ಲಿ ಒಳ್ಳೆ ಬಿರಿಯಾನಿ ದೊರೆಯುವ ಸ್ಥಳ. ಇದೂ ಕೂಡಾ ಜೆಪಿ ನಗರ, ಮಾರತಹಳ್ಳಿ, ಹೆಚ್‌ಎಸ್‌ಆರ್ ಲೇ ಔಟ್, ವೈಟ್‌ಫೀಲ್ಡ್‌ನಲ್ಲಿ ಶಾಖೆಯನ್ನು ಹೊಂದಿದೆ. ಈ ಹೋಟೆಲ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ಅದೇ ಫ್ಲೇವರ್‌ಗೆ ಇಲ್ಲಿನ ಬಿರಿಯಾನಿ ಹೆಸರುವಾಸಿಯಾಗಿದೆ.
6. ಶರೀಫ್ ಭಾಯ್
ಆರ್‌ಆರ್ ನಗರದಲಿ ಮುಖ್ಯ ಬ್ರಾಂಚ್ ಇದೆ. ವಿಭಿನ್ನ ರುಚಿಯಿಂದಲೇ ಶರೀಫ್ ಭಾಯ್ ಬಿರಿಯಾನಿ ಬೆಂಗಳೂರಿನಲ್ಲಿ ವಿವಿಧ ಶಾಖೆಗಳನ್ನು ಹೊಂದಿದೆ. ಕೋರಮಂಗಲ, ಜೆಪಿ ನಗರ, ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಫ್ರೇಜರ್ ಟೌನ್‌ನಲ್ಲಿ ಇದರ ಶಾಖೆಗಳಿವೆ. ನೀವು ವಿಸಿಟ್ ಮಾಡಬಹುದಾದ ಬೆಂಗಳೂರಿನ ಬೆಸ್ಟ್ ರೆಸ್ಟೋರೆಂಟ್‌ಗಳಲ್ಲಿ ಇದೂ ಒಂದು. ಬಿರ್ಯಾನಿ ಇಷ್ಟಪಡುವವರಿಗೆ ಹೇಳಿ ಮಾಡಿಸಿದಂಥ ಜಾಗ.
7. ಎಂಪೈರ್ ರೆಸ್ಟೋರೆಂಟ್
ಜಯನಗರದಲ್ಲಿರುವ ಎಂಪೈರ್ ರೆಸ್ಟೋರೆಂಟ್‌ಗೆ ಕೂಡಾ ಅನೇಕರು ತಮ್ಮ ಕುಟುಂಬದೊಂದಿಗೆ ಬಿರಿಯಾನಿ ಸೇವಿಸಲು ಹೋಗಿ ಬರುತ್ತಾರೆ. ಮೆಜೆಸ್ಟಿಕ್, ಫ್ರೇಜರ್ ಟೌನ್, ಇಂದಿರಾ ನಗರದಲ್ಲಿ ಬ್ರಾಂಚ್‌ಗಳಿವೆ. ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಪ್ರಾನ್, ಎಗ್ ಡಿಶ್‌ಗಳನ್ನು ನೀವು ಟೇಸ್ಟ್ ಮಾಡಬೇಕೆಂದರೆ ತಪ್ಪದೆ ಈ ರೆಸ್ಟೋರೆಂಟ್‌ಗೆ ಭೇಟಿ ಕೊಡಿ.
8. ನಾಗಾರ್ಜುನ ಹೋಟೆಲ್
ಕೋರಮಂಗಲದಲ್ಲಿ ಮೊದಲು ಆರಂಭವಾದ ನಾಗಾರ್ಜುನ ಹೋಟೆಲ್, ಇಂದಿರಾ ನಗರ್, ರೆಸಿಡೆನ್ಸಿ ರೋಡ್, ಬನ್ನೇರುಘಟ್ಟ, ಮಾರತಹಳ್ಳಿಯಲ್ಲಿ ನಾಗಾರ್ಜುನ ಹೋಟೆಲ್ ಬ್ರಾಂಚ್‌ಗಳಿವೆ. ಆಕರ್ಷಕ ಮತ್ತು ಆರೊಮ್ಯಾಟಿಕ್ ಬಿರಿಯಾನಿಗೆ ಈ ಹೋಟೆಲ್ ಹೆಸರುವಾಸಿಯಾಗಿದೆ.
9. ಎಸ್‌ಜಿಎಸ್ ನಾನ್ ವೆಜ್ ಗುಂಡು ಪಲಾವ್
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಇದು ಪುಟ್ಟ ಹೋಟೆಲ್ ಆದರೂ ಇವರು ತಯಾರಿಸುವ ಹೋಟೆಲ್ ಇಡೀ ಬೆಂಗಳೂರಿಗೇ ಫೇಮಸ್. ಈ ಹೋಟೆಲ್ ಬೆಂಗಳೂರಿನ ಸೌರಾಷ್ಟ್ರಪೇಟೆಯಲ್ಲಿದೆ. ಅದ್ದೂರಿ ರೆಸ್ಟೋರೆಂಟ್ ಆಗಬೇಕಿಲ್ಲ. ಒಳ್ಳೆ ಬಿರಿಯಾನಿ ದೊರೆತರೆ ಸಾಕು ಎನ್ನುವವರು ಈ ಎಸ್‌ಜಿಎಸ್ ನಾನ್‌ವೆಜ್ ಗುಂಡು ಪಲಾವ್ ಹೋಟೆಲ್‌ಗೆ ಹೋಗಿ ಬನ್ನಿ.
10. ಲಜೀಜ್
ಕೋರಮಂಗಲದ ಹೃದಯಭಾಗದಲ್ಲಿ ಲಜೀಜ್ ಹೋಟೆಲ್ ಇದೆ. ಬಾಯಲ್ಲಿ ನೀರೂರಿಸುವ ಬಿರಿಯಾನಿ ಮೇಲೆ ನಿಮಗೆ ಲವ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಹೈದರಾಬಾದಿ ಸೇರಿದಂತೆ ವಿವಿಧ ವೆರೈಟಿ ಬಿರಿಯಾನಿ ಈ ಹೋಟೆಲ್‌ನಲ್ಲಿ ಲಭ್ಯವಿದೆ. ಕುಟುಂಬದೊಂದಿಗೆ ಒಮ್ಮೆ ಭೇಟಿ ಕೊಡಿ.
ವಿಭಾಗ