Rajma Pulao: ರಾಜ್ಮಾ ಪಲಾವ್ ಮಾಡುವುದು ಹೇಗೆ, ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಮಧ್ಯಾಹ್ನದ ಟಪ್ಪರ್‌ ಡಬ್ಬಿಗೆ ವಾಹ್‌ ಎನಿಸುವ ರುಚಿಕರ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  Rajma Pulao: ರಾಜ್ಮಾ ಪಲಾವ್ ಮಾಡುವುದು ಹೇಗೆ, ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಮಧ್ಯಾಹ್ನದ ಟಪ್ಪರ್‌ ಡಬ್ಬಿಗೆ ವಾಹ್‌ ಎನಿಸುವ ರುಚಿಕರ ರೆಸಿಪಿ

Rajma Pulao: ರಾಜ್ಮಾ ಪಲಾವ್ ಮಾಡುವುದು ಹೇಗೆ, ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಮಧ್ಯಾಹ್ನದ ಟಪ್ಪರ್‌ ಡಬ್ಬಿಗೆ ವಾಹ್‌ ಎನಿಸುವ ರುಚಿಕರ ರೆಸಿಪಿ

Rajma Pulao Recipe in Kannada: ರಾಜ್ಮಾ ಪಲಾವ್‌ ಎಂದರೆ ಸಾಕು ಕೆಲವರ ಬಾಯಲ್ಲಿ ನೀರೂರಬಹುದು. ಒಮ್ಮೆ ತಿಂದರೆ ಮತ್ತೊಮ್ಮೆ ತಿನ್ನಬೇಕೆನಿಸುವ ರುಚಿಕರ ಪಲಾವ್‌ ಇದು. ಬೆಳಗ್ಗಿನ ತಿಂಡಿಗೆ, ರಾತ್ರಿಯ ಡಿನ್ನರ್‌ಗೆ, ಮಧ್ಯಾಹ್ನದ ಲಂಚ್‌ ಬಾಕ್ಸ್‌ಗೆ, ಮಕ್ಕಳ ಟಪ್ಪರ್‌ ಬಾಕ್ಸ್‌ಗೆ ಸೂಕ್ತವಾದ ರಾಜ್ಮಾ ಪಲಾವ್‌ ಹೇಗೆ ಮಾಡುವುದೆಂದು ತಿಳಿಯೋಣ.

Rajma Pulao: ರಾಜ್ಮಾ ಪಲಾವ್ ಮಾಡುವುದು ಹೇಗೆ
Rajma Pulao: ರಾಜ್ಮಾ ಪಲಾವ್ ಮಾಡುವುದು ಹೇಗೆ (slurrp)

ಪ್ರತಿದಿನ ಊಟಕ್ಕೆ ಅನ್ನ ಸಾಂಬಾರ್‌ ತಿಂದು ಸಾಕಾಗಿರಬಹುದು. ಟಿಫಿನ್‌ ಬಾಕ್ಸ್‌ನಲ್ಲೂ ಅದೇ ಚಿತ್ರಾನ್ನ, ಮೊಸರನ್ನ ಸಾಕಾಗಿರಬಹುದು. ಪಲಾವ್‌ ಎಂದರೆ ಕೇವಲ ಸಾಮಾನ್ಯ ಪಲಾವ್‌ ತಿಂದು ಸುಸ್ತಾಗಿರಬಹುದು. ರುಚಿಕರ ಪಲಾವ್‌ ಬಯಸುವವರು ಒಮ್ಮೆ ರಾಜ್ಮಾ ಪಲಾವ್‌ ಮಾಡಲು ಪ್ರಯತ್ನಿಸಬಹುದು. ಟಿಫಿನ್‌ ಬಾಕ್ಸ್‌ಗೂ ಇದು ಸೂಕ್ತವಾದ ತಿಂಡಿ. ರಾಜ್ಮಾವನ್ನು ಮಸಾಲ ಕರಿಗೆ ಹೆಚ್ಚಾಗಿ ನೀವು ಬಳಸಿರಬಹುದು. ಇದನ್ನು ಪಲಾವ್‌ಗೆ ಬಳಸಿ ನೋಡಿ. ರಾಜ್ಮಾ ಪಲಾವ್‌ ಮಾಡುವುದು ಹೇಗೆ ಎಂದು ತಿಳಿಯೋಣ.

ರಾಜ್ಮಾ ಪಲಾವ್‌ ಮಾಡಲು ಬೇಕಾಗುವ ಪದಾರ್ಥಗಳು

  1. ಅರ್ಧ ಕಪ್ ರಾಜ್ಮಾ ಬೀಜಗಳು
  2. 1 ಕಪ್ ಬಾಸ್ಮತಿ ಅಕ್ಕಿ
  3. 2 ಚಮಚ ತುಪ್ಪ
  4. ದಾಲ್ಚಿನ್ನಿ ಒಂದು ಇಂಚಿನ ತುಂಡು
  5. 2 ಲವಂಗ
  6. 2 ಏಲಕ್ಕಿ
  7. ½ ಟೇಬಲ್‌ ಚಮಚ ಜೀರಿಗೆ ಬೀಜಗಳು
  8. ½ ಟೇಬಲ್‌ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
  9. 1 ಚಮಚ ಗರಂ ಮಸಾಲಾ
  10. 1 ಈರುಳ್ಳಿ
  11. 1 ಟೊಮೆಟೊ
  12. 3 ಹಸಿ ಮೆಣಸಿನಕಾಯಿ
  13. ಪುದೀನ ಒಂದು ಕಟ್ಟು
  14. 1 ಚಮಚ ಮೆಣಸಿನಪುಡಿ
  15. ಮೆಂಥೆ ಅರ್ಧ ಚಮಚ
  16. ಒಂದು ಚಮಚ ನಿಂಬೆ ರಸ
  17. ರುಚಿಗೆ ತಕ್ಕಷ್ಟು ಉಪ್ಪು

ರಾಜ್ಮಾ ಪಲಾವ್‌ ಮಾಡುವ ವಿಧಾನ

  1. ಮೊದಲಿಗೆ ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ರೆಡಿಯಾಗಿಟ್ಟುಕೊಳ್ಳಿ. ಈಗ ರಾಜ್ಮಾ ಪಲಾವ್‌ ಮಾಡಲು ಆರಂಭಿಸೋಣ. ನೆನಪಿಡಿ, ರಾಜ್ಮಾವನ್ನು ರಾತ್ರಿ ನೆನೆಸಿಡಲು ಮರೆಯಬೇಡಿ. ಬೆಳಗ್ಗೆ ನೀರಲ್ಲಿ ಕುದಿಸಿ. ರಾಜ್ಮಾಕ್ಕೆ ಎರಡು ಕಪ್‌ ನೀರು ಸೇರಿಸಿ, ಕುಕ್ಕರ್‌ನಲ್ಲಿ ನಾಲ್ಕು ವಿಸಿಲ್‌ ಕೂಗೋ ತನಕ ಬೇಯಿಸಿ. ಬಳಿಕ ಕುಕ್ಕರ್‌ನಿಂದ ರಾಜ್ಮಾವನ್ನು ತೆಗೆದು ಪಕ್ಕಕ್ಕಿಡಿ.
  2. ಈಗ ಅದೇ ಕುಕ್ಕರ್‌ಗೆ ತುಪ್ಪ ಹಾಕಿ ಬಿಸಿ ಮಾಡಿ, ಅದಕ್ಕೆ ಏಲಕ್ಕಿ, ಲವಂಗ, ದಾಲ್ಚಿನ್ನಿ ಮತ್ತು ಜೀರಿಗೆ ಹಾಕಿ ಫ್ರೈ ಮಾಡಿ. ಹಸಿ ಮೆನಸಿಣಕಾಯಿ ತುಂಡುಗಳನ್ನು ಹಾಕಿ. ಕತ್ತರಿಸಿದ ಈರುಳ್ಳಿಗಳನ್ನು ಹಾಕಿ. ಚೆನ್ನಾಗಿ ಮಿಶ್ರ ಮಾಡಿ.
  3. ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಒಂದು ನಿಮಿಷ ಫ್ರೈ ಮಾಡಿ. ಅಂದರೆ, ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಿ.
  4. ಇದಾದ ಬಳಿಕ ಕತ್ತರಿಸಿದ ಟೊಮೆಟೊ, ಮೆಣಸಿನ ಪುಡಿ, ಮೆಂತೆ, ಗರಂ ಮಸಾಲಾ ಸೇರಿಸಿ. ಟೊಮೆಟೊ ಪೀಸ್‌ಗಳು ಮೃದುವಾಗಲಿ. ಬಳಿಕ ಬೇಯಿಸಿದ ರಾಜ್ಮಾ ಮತ್ತು ಪುದೀನ ಎಲೆ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ.
  5. ಇದಾದ ಬಳಿಕ ಒಂದೂವರೆ ಕಪ್‌ನಷ್ಟು ನೀರು ಹಾಕು. ಅಕ್ಕಿ ಸೇರಿಸಿ. ಸ್ವಲ್ಪ ನಿಂಬೆ ರಸ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಕುಕ್ಕರ್‌ ಮುಚ್ಚಿ. ಎರಡು ವಿಸಿಲ್‌ ಹಾಕಿದ ಬಳಿಕ ಕುಕ್ಕರ್‌ ಆಫ್‌ ಮಾಡಿ. ಸ್ವಲ್ಪ ಹೊತ್ತಲ್ಲಿ ಕುಕ್ಕರ್‌ ಮುಚ್ಚಳ ತೆರೆದು ನೋಡಿ. ವಾಹ್‌, ರುಚಿಕರ ಪಲಾವ್‌ ಸಿದ್ಧವಾಗಿದೆ. ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೂ ತಿನ್ನಬಹುದು. ಮಧ್ಯಾಹ್ನದ ಟಿಫಿನ್‌ ಬಾಕ್ಸ್‌ಗೂ ಹಾಕಬಹುದು.

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ವೆಜ್‌ ರೆಸಿಪಿ, ನಾನ್‌ ವೆಜ್‌ ರೆಸಿಪಿ ಮತ್ತು ಆಹಾರಕ್ಕೆ ಸಂಬಂಧಪಟ್ಟ ಸುದ್ದಿ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

Whats_app_banner