ಈ ರೀತಿ ಮೀನು ಫ್ರೈ ಮಾಡಿ; ರುಚಿ ಅದ್ಭುತ, ತಿಂದವರೂ ವ್ಹಾವ್ ಅನ್ನುತ್ತಾರೆ- ಇಲ್ಲಿದೆ ಗ್ರೀನ್ ಮಸಾಲೆ ಫಿಶ್ ಫ್ರೈ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಈ ರೀತಿ ಮೀನು ಫ್ರೈ ಮಾಡಿ; ರುಚಿ ಅದ್ಭುತ, ತಿಂದವರೂ ವ್ಹಾವ್ ಅನ್ನುತ್ತಾರೆ- ಇಲ್ಲಿದೆ ಗ್ರೀನ್ ಮಸಾಲೆ ಫಿಶ್ ಫ್ರೈ ರೆಸಿಪಿ

ಈ ರೀತಿ ಮೀನು ಫ್ರೈ ಮಾಡಿ; ರುಚಿ ಅದ್ಭುತ, ತಿಂದವರೂ ವ್ಹಾವ್ ಅನ್ನುತ್ತಾರೆ- ಇಲ್ಲಿದೆ ಗ್ರೀನ್ ಮಸಾಲೆ ಫಿಶ್ ಫ್ರೈ ರೆಸಿಪಿ

ಮೀನು ಫ್ರೈ ಹೆಸರು ಕೇಳಿದರೆ ಸಾಕು ನಾನ್ ವೆಜ್ ಪ್ರಿಯರ ಬಾಯಲ್ಲಿ ನೀರೂತ್ತದೆ. ಈ ವೀಕೆಂಡ್‍ನಲ್ಲಿ ಏನಾದರೂ ರೆಸಿಪಿ ಟ್ರೈ ಮಾಡಬೇಕು ಅಂತಿದ್ದರೆ ಈ ಗ್ರೀನ್ ಮಸಾಲೆ ಫಿಶ್ ಫ್ರೈ ಪಾಕವಿಧಾನವನ್ನು ಪ್ರಯತ್ನಿಸಬಹುದು. ಅನ್ನದ ಜತೆ ತಿನ್ನಲೂ ತುಂಬಾ ರುಚಿಕರವಾಗಿರುತ್ತದೆ. ಈ ರೆಸಿಪಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಈ ರೀತಿ ಮೀನು ಫ್ರೈ ಮಾಡಿ; ರುಚಿ ಅದ್ಭುತ, ತಿಂದವರೂ ವ್ಹಾವ್ ಅನ್ನುತ್ತಾರೆ- ಇಲ್ಲಿದೆ ಗ್ರೀನ್ ಮಸಾಲೆ ಫಿಶ್ ಫ್ರೈ ರೆಸಿಪಿ
ಈ ರೀತಿ ಮೀನು ಫ್ರೈ ಮಾಡಿ; ರುಚಿ ಅದ್ಭುತ, ತಿಂದವರೂ ವ್ಹಾವ್ ಅನ್ನುತ್ತಾರೆ- ಇಲ್ಲಿದೆ ಗ್ರೀನ್ ಮಸಾಲೆ ಫಿಶ್ ಫ್ರೈ ರೆಸಿಪಿ

ಮೀನು ಫ್ರೈ ಹೆಸರು ಹೇಳಿದರೆ ಸಾಕು ಹಲವರ ಬಾಯಲ್ಲಿ ನೀರೂರುತ್ತದೆ. ರವಾ ಫ್ರೈ, ತವಾ ಫ್ರೈ ಸವಿಯಲು ಎಷ್ಟು ರುಚಿಯಾಗಿರುತ್ತದೋ ಅಷ್ಟೇ ಗ್ರೀನ್ ಮಸಾಲೆ ಫಿಶ್ ಫ್ರೈ ರುಚಿಯಾಗಿರುತ್ತದೆ. ಹೇಗೂ ವೀಕೆಂಡ್ ಬಂದಿದೆ. ನಾನ್ ವೆಜ್ ತಿನ್ನಲು ಬಯಸುವವರು ಈ ಗ್ರೀನ್ ಮಸಾಲೆಯ ಮೀನು ಫ್ರೈ ರೆಸಿಪಿಯನ್ನು ತಯಾರಿಸಬಹುದು. ಬಹಳ ರುಚಿಕರವಾಗಿರುವ ಈ ಮೀನು ಫ್ರೈ ಮಾಡುವುದು ತುಂಬಾ ಸುಲಭ. ಮಧ್ಯಮ ಗಾತ್ರದ ಮೀನನ್ನು ತೆಗೆದುಕೊಂಡು ಈ ಹಸಿರು ಮಸಾಲೆಯೊಂದಿಗೆ ಫ್ರೈ ಮಾಡಿದರೆ ರುಚಿಕರವಾಗಿರುತ್ತದೆ. ಬೇಕಿದ್ದರೆ ಬಾಂಗುಡೆ ಮೀನು, ಪಾಂಫ್ರೆಟ್ ನಿಮಗಿಷ್ಟವಾದ ಯಾವುದೇ ಮೀನನ್ನು ಪ್ರಯತ್ನಿಸಬಹುದು. ಖಂಡಿತಾ ನಿಮಗೆ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ. ಈ ಗ್ರೀನ್ ಮಸಾಲೆ ಮೀನು ಫ್ರೈ ರೆಸಿಪಿ ಮಾಡುವ ವಿಧಾನ ಇಲ್ಲಿದೆ.

ಗ್ರೀನ್ ಮಸಾಲೆ ಮೀನು ಫ್ರೈ ರೆಸಿಪಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ಮಧ್ಯಮ ಗಾತ್ರದ ಮೀನು- ಎರಡು, ಪುದೀನಾ ಎಲೆಗಳು- ಅರ್ಧ ಕಪ್, ಕೊತ್ತಂಬರಿ ಪುಡಿ- ಅರ್ಧ ಕಪ್, ಶುಂಠಿ- ಸಣ್ಣ ತುಂಡು, ಬೆಳ್ಳುಳ್ಳಿ ಎಸಳು- ಏಳು, ಅರಿಶಿನ- ಅರ್ಧ ಟೀ ಚಮಚ, ಜೀರಿಗೆ- ಅರ್ಧ ಟೀ ಚಮಚ, ಲವಂಗ- ನಾಲ್ಕು, ಉಪ್ಪು- ರುಚಿಗೆ ತಕ್ಕಷ್ಟು, ನಿಂಬೆ ರಸ- ಒಂದು ಟೀ ಚಮಚ, ಮೆಣಸಿನಕಾಯಿ- ಏಳು, ಅಡುಗೆ ಎಣ್ಣೆ- 4 ಟೀ ಚಮಚ.

ಮಾಡುವ ವಿಧಾನ: ಮೊದಲಿಗೆ ಹಸಿರು ಮಸಾಲೆಯನ್ನು ತಯಾರಿಸಬೇಕು. ಇದಕ್ಕಾಗಿ ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದೀನಾ, ಶುಂಠಿ, ಬೆಳ್ಳುಳ್ಳಿ ಎಸಳು, ಲವಂಗ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಮಿಕ್ಸಿಂಗ್ ಜಾರ್‌ನಲ್ಲಿ ರುಬ್ಬಿಕೊಳ್ಳಬೇಕು. ಇದಕ್ಕೆ ನಿಂಬೆರಸ, ಜೀರಿಗೆ ಮತ್ತು ಅರಿಶಿನ ಪುಡಿ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಬೇಕಾದಷ್ಟು ನೀರು ಸೇರಿಸಬಹುದು, ಆದರೆ ತುಂಬಾ ತೆಳ್ಳಗೆ ಆಗಬಾರದು. ಪೇಸ್ಟ್ ಸ್ವಲ್ಪ ದಪ್ಪವಾಗಿರಬೇಕು. ಇದನ್ನು ನುಣ್ಣಗೆ ರುಬ್ಬಿದರೆ ಹಸಿರು ಮಸಾಲೆ ಪೇಸ್ಟ್ ಸಿದ್ಧ.

ಇನ್ನೊಂದೆಡೆ ಎರಡು ಬಾಂಗುಡೆ ಮೀನುಗಳನ್ನು ತೆಗೆದುಕೊಂಡು ಸ್ವಚ್ಛಗೊಳಿಸಿ. ಮೀನಿನ ಎರಡೂ ಬದಿಗೆ ಚಾಕುವಿನಿಂದ ಮೂರು ಮಾರ್ಕ್ ಮಾಡಿ. ಇದಕ್ಕೆ ಹಸಿರು ಮಸಾಲೆ ಪೇಸ್ಟ್ ಅನ್ನು ಹಚ್ಚಿ. ಅರ್ಧ ಗಂಟೆ ಅದನ್ನು ಮ್ಯಾರಿನೇಟ್ ಮಾಡಿ. ಅರ್ಧ ಗಂಟೆಯ ಬಳಿಕ ಸ್ಟೌವ್ ಮೇಲೆ ತವಾ ಇಟ್ಟು ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ, ಮೀನುಗಳನ್ನು ತವಾಗೆ ಹಾಕಿ ಅದನ್ನು ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಎರಡೂ ಬದಿಯಲ್ಲಿ ಚೆನ್ನಾಗಿ ಬೇಯುವವರೆಗೆ ಮೀನುಗಳನ್ನು ಈ ರೀತಿ ಫ್ರೈ ಮಾಡಿ. ಕನಿಷ್ಠ 20 ನಿಮಿಷ ಎಣ್ಣೆಯಲ್ಲಿ ಕರಿದರೆ ಮೀನು ಚೆನ್ನಾಗಿ ಫ್ರೈ ಆಗುತ್ತದೆ. ನಂತರ ಒಲೆ ಆಫ್ ಮಾಡಿ. ಕರಿದ ಮೀನನ್ನು ಸರ್ವಿಂಗ್ ಪ್ಲೇಟ್‍ಗೆ ವರ್ಗಾಯಿಸಿದರೆ ಟೇಸ್ಟಿ ಗ್ರೀನ್ ಮಸಾಲೆ ಫಿಶ್ ಫ್ರೈ ರೆಡಿ.

ಈ ಗ್ರೀನ್ ಮಸಾಲಾ ಫಿಶ್ ಫ್ರೈ ರೆಸಿಪಿ ಮಾಡುವುದು ಎಷ್ಟು ಸುಲಭ ಎಂಬುದು ಗೊತ್ತಾಯಿತಲ್ವಾ? ಇನ್ಯಾಕೆ ತಡ, ನೀವು ಮನೆಯಲ್ಲೇ ಇದನ್ನು ತಯಾರಿಸಿ ನೋಡಿ. ತಿನ್ನಲೂ ರುಚಿ, ಆರೋಗ್ಯಕ್ಕೂ ಉತ್ತಮ. ಹೆಸರೇ ಹೇಳುವಂತೆ ಗ್ರೀನ್ ಫಿಶ್ ಮಸಾಲೆ ಫ್ರೈ ಹಸಿರು ಬಣ್ಣ ಕಾಣಲು ಹಸಿರು ಮೆಣಸಿನಕಾಯಿ, ಪುದೀನಾ ಮತ್ತು ಕೊತ್ತಂಬರಿಯನ್ನು ಬಳಸಲಾಗುತ್ತದೆ. ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಸಿರು ಮಸಾಲೆಯೊಂದಿಗೆ ಚಿಕನ್ ಫ್ರೈ ಕೂಡ ಮಾಡಬಹುದು. ಹಾಗೆಯೇ ಸೀಗಡಿ ಫ್ರೈ ಕೂಡ ಮಾಡಬಹುದು, ತುಂಬಾ ರುಚಿಕರವಾಗಿರುತ್ತವೆ. ನೀವು ಈ ರೆಸಿಪಿ ಪ್ರಯತ್ನಿಸಿ, ಮನೆಗೆ ಅತಿಥಿ ಬಂದರೆ ಅವರಿಗೂ ಬಡಿಸಿ. ಖಂಡಿತ ಎಲ್ಲರಿಗೂ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.

 

Whats_app_banner