Friendship Day: ಇನ್‌ಸ್ಟಾಗ್ರಾಮ್‌ನಲ್ಲಿ ಫ್ರೆಂಡ್‌ಶಿಪ್‌ ಡೇ ಸ್ಟೇಟಸ್‌ ಹಾಕಿಕೊಳ್ಳಲು ಇಲ್ಲಿದೆ ಐಡಿಯಾ; ಸ್ನೇಹಿತರಿಗೆ ಹೀಗೆ ವಿಶ್‌ ಮಾಡಿ-friendship day 2024 instagram captions with songs and quotes for your post with friends friendship day wishes ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Friendship Day: ಇನ್‌ಸ್ಟಾಗ್ರಾಮ್‌ನಲ್ಲಿ ಫ್ರೆಂಡ್‌ಶಿಪ್‌ ಡೇ ಸ್ಟೇಟಸ್‌ ಹಾಕಿಕೊಳ್ಳಲು ಇಲ್ಲಿದೆ ಐಡಿಯಾ; ಸ್ನೇಹಿತರಿಗೆ ಹೀಗೆ ವಿಶ್‌ ಮಾಡಿ

Friendship Day: ಇನ್‌ಸ್ಟಾಗ್ರಾಮ್‌ನಲ್ಲಿ ಫ್ರೆಂಡ್‌ಶಿಪ್‌ ಡೇ ಸ್ಟೇಟಸ್‌ ಹಾಕಿಕೊಳ್ಳಲು ಇಲ್ಲಿದೆ ಐಡಿಯಾ; ಸ್ನೇಹಿತರಿಗೆ ಹೀಗೆ ವಿಶ್‌ ಮಾಡಿ

Friendship Day Wishes For Instagram: ಸ್ನೇಹ-ಸ್ನೇಹಿತರನ್ನೇ ಬದುಕು ಎಂದುಕೊಂಡವರಿಗೆ ಫ್ರೆಂಡ್‌ಶಿಪ್‌ ಡೇ ಖಂಡಿತ ವಿಶೇಷ. ಇಂದು (ಆಗಸ್ಟ್‌ 4) ಭಾರತದಲ್ಲಿ ಫ್ರೆಂಡ್‌ಶಿಪ್‌ ಡೇ ಆಚರಣೆ ಇದ್ದು ಇನ್‌ಸ್ಟಾಗ್ರಾಂನಲ್ಲಿ ನಿಮ್ಮ ಫ್ರೆಂಡ್‌ಗೆ ವಿಶೇಷವಾಗಿ ವಿಶ್‌ ಮಾಡಬೇಕು ಅಂತಿದ್ರೆ ಈ ಕೋಟ್ಸ್‌ಗಳನ್ನು ಒಮ್ಮೆ ಗಮನಿಸಿ.

ಇನ್‌ಸ್ಟಾಗ್ರಾಮ್‌ನಲ್ಲಿ ಫ್ರೆಂಡ್‌ಶಿಪ್‌ ಡೇ ಸ್ಟೇಟಸ್‌ ಹಾಕಿಕೊಳ್ಳಲು ಇಲ್ಲಿದೆ ಐಡಿಯಾ; ಸ್ನೇಹಿತರಿಗೆ ಹೀಗೆ ವಿಶ್‌ ಮಾಡಿ
ಇನ್‌ಸ್ಟಾಗ್ರಾಮ್‌ನಲ್ಲಿ ಫ್ರೆಂಡ್‌ಶಿಪ್‌ ಡೇ ಸ್ಟೇಟಸ್‌ ಹಾಕಿಕೊಳ್ಳಲು ಇಲ್ಲಿದೆ ಐಡಿಯಾ; ಸ್ನೇಹಿತರಿಗೆ ಹೀಗೆ ವಿಶ್‌ ಮಾಡಿ

ಸ್ನೇಹ ಜಗತ್ತಿನ ಅತಿ ಸುಂದರ ಸಂಬಂಧಗಳಲ್ಲಿ ಒಂದು. ಕೃಷ್ಣ-ಕುಚೇಲರಿಂದ ಕರ್ಣ-ದುರ್ಯೋದನನವರೆಗೆ ಪುರಾಣ ಕಾಲದಿಂದ ಇಂದಿನವರೆಗೆ ಜಾತಿ, ಅಂತಸ್ತು, ಮೇಲು-ಕೀಳು ಎಂಬ ಭೇದ ಭಾವವಿಲ್ಲದೇ ಜೀವಂತವಾಗಿರುವ ಸಂಬಂಧ ಎಂದರೆ ಸ್ನೇಹ. ಇಂತಹ ಸುಂದರ ಸಂಬಂಧವನ್ನು ಆಚರಿಸಲು ಒಂದು ದಿನವಿದೆ. ಅದುವೇ ಸ್ನೇಹಿತರ ದಿನಾಚರಣೆ.

ಸ್ನೇಹ ಸಂಬಂಧವನ್ನು ಸಂಭ್ರಮಿಸುವ ಸಲುವಾಗಿ ಪ್ರತಿವರ್ಷ ಆಗಸ್ಟ್‌ ತಿಂಗಳ ಮೊದಲ ಭಾನುವಾರ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್‌ 4 ಅಂದರೆ ಇಂದು ಸ್ನೇಹಿತರ ದಿನಾಚರಣೆ ಇದೆ. ಈ ದಿನವನ್ನು ನಮ್ಮ ಆತ್ಮೀಯ ಸ್ನೇಹಿತರಿಗೆ ವಿಶೇಷವಾಗಿ ವಿಶ್‌ ಮಾಡುವ ಮೂಲಕ ಈ ದಿನವನ್ನು ಸಂಭ್ರಮಿಸುತ್ತೇವೆ. ಈ ವರ್ಷದ ಫ್ರೆಂಡ್‌ಶಿಪ್‌ ಡೇಯಂದು ಇನ್‌ಸ್ಟಾಗ್ರಾಂನಲ್ಲಿ ನೀವು ಫ್ರೆಂಡ್ಸ್‌ಗೆ ವಿಶೇಷವಾಗಿ ವಿಶ್‌ ಮಾಡಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಕೋಟ್ಸ್‌ಗಳು ನಿಮಗಾಗಿ.

ಫ್ರೆಂಡ್‌ಶಿಪ್‌ ಡೇಗೆ ವಿಶ್‌ ಮಾಡಲು ಕೋಟ್ಸ್‌ಗಳು

* ಪರಿಸ್ಥಿತಿ ಯಾವುದೇ ಇರಲಿ, ಸ್ನೇಹಿತರು ಎಂದೆಂದಿಗೂ ಶಾಶ್ವತ

* ಥಿಕ್‌ or ಥಿನ್‌, ಫ್ರೆಂಡ್‌ಶಿಪ್‌ ವಿನ್‌

* ಜೀವನದ ಗುರಿಯಷ್ಟೇ ಸ್ನೇಹದ ಗುರಿಯೂ ಮುಖ್ಯ

* ಗೆಳೆತನಕ್ಕಿಂತ ಉತ್ತಮವಾದ ಪ್ರೇಮಕಥೆಯಿಲ್ಲ

* ನಮ್ಮೆಲ್ಲಾ ಏರಿಳಿತಗಳಲ್ಲಿ ಜೊತೆ ಇರುವವರೇ ಸ್ನೇಹಿತರು

* ನಗುವಿನಲ್ಲೂ ನೋವಿನಲ್ಲೂ ಜೊತೆ ಇರುವವರು ಸ್ನೇಹಿತರು

* ಸ್ನೇಹ ಎಂಬುದು ಎಂದಿಗೂ ಬತ್ತದ ಒರತೆ

* ಸ್ನೇಹ ಎಂಬುದು ಎಂದಿಗೂ ಖಾಲಿಯಾಗದ ಖಜಾನೆ

* ಸ್ನೇಹಿತರಿಬ್ಬರು ಜೊತೆ ಇದ್ದರೆ ಅದುವೇ ಸ್ವರ್ಗ

* ಸ್ನೇಹ ಎಂಬುದು ಸಂತೋಷದ ಕೀಲಿಕೈ

* ಸ್ನೇಹ ಎಂಬುದು ಜೀವನದುದ್ದಕ್ಕೂ ಬಿಡಿಸಲಾಗದ ನಂಟು

* ಎಲ್ಲಿ ಸ್ನೇಹಿವಿದೆಯೋ ಅಲ್ಲಿ ಪ್ರೀತಿಯೂ ಇರುತ್ತದೆ

* ಸಾವಿರಾರು ಜನರಿರುವ ಈ ಪ್ರಪಂಚದಲ್ಲಿ ನನ್ನ ಸ್ನೇಹಿತ/ಸ್ನೇಹಿತೆಯೇ ನನಗೆ ವಿಶೇಷ

* ಸ್ನೇಹ ಎಂಬುದು ಹೃದಯಕ್ಕೆ ತಲುಪುವ ಸಂಗೀತದಂತೆ

* ನಾವು ರಕ್ತಸಂಬಂಧಿಕರಲ್ಲ, ಆದರೆ ಅದನ್ನೂ ಮೀರಿದ ಸಂಬಂಧ ನಮ್ಮದು

* ನಾವು ಒಟ್ಟಾದರೆ ಪ್ರಪಂಚವನ್ನೇ ಗೆಲ್ಲಬಹುದು

* ನನ್ನುಸಿರು ನಿಲ್ಲುವವರೆಗೂ ನೀ ನನ್ನ ಸ್ನೇಹಿತ/ ಸ್ನೇಹಿತ, ಹ್ಯಾಪಿ ಫ್ರೆಂಡ್‌ಶಿಪ್‌ ಡೇ

* ನಿಜವಾದ ಸ್ನೇಹಿತರು ಎರಡು ದೇಹ ಒಂದು ಮನಸ್ಸಿನಂತೆ

* ಚಾಕೊಲೇಟ್‌ ಬಿಟ್ರೆ ನೀನೆ ನನಗಿಷ್ಟ ಮೈ ಡಿಯರ್‌ ಫ್ರೆಂಡ್‌

* ಸ್ನೇಹ ಎಂಬುದು ಎಂದೆಂದಿಗೂ ಆಕಸ್ಮಿಕ, ಅದು ಹೃದಯ ಬೆಸೆವ ಸಂಬಂಧ

* ನಿಜವಾದ ಸ್ನೇಹಿತರು ಜೊತೆ ಇದ್ರೆ ಲೈಫ್‌ ಈಸ್‌ ಬ್ಯೂಟಿಫುಲ್‌

ಈ ಬಾರಿ ಫ್ರೆಂಡ್‌ಶಿಪ್‌ಗೆ ಡೇಯಂದು ನಿಮ್ಮ ಜೀವನದಲ್ಲಿ ವಿಶೇಷ ಎನ್ನಿಸುವ ಸ್ನೇಹಿತರಿಗೆ ಈ ರೀತಿ ವಿಶ್‌ ಮಾಡಿ, ಅವರನ್ನು ಖುಷಿ ಪಡಿಸಿ. ನಿಮ್ಮ ಜೀವನದಲ್ಲಿ ಅವರು ಎಷ್ಟು ಮುಖ್ಯ ಎಂಬುದನ್ನು ಅವರಿಗೆ ಫ್ರೆಂಡ್‌ಶಿಪ್‌ ಡೇ ಸಂದೇಶದ ಮೂಲಕ ತಿಳಿಸಿ.