ಚಳಿಗಾಲದಲ್ಲಿ ನಾಲಿಗೆ ಚಪಲವನ್ನೂ ತಣಿಸಿ, ದೇಹತೂಕ ಇಳಿಯಲು ಸಹಾಯ ಮಾಡುವ 3 ಪಕೋಡಾಗಳಿವು; ರೆಸಿಪಿ ಹೀಗಿದೆ
ಚಳಿಗಾಲದಲ್ಲಿ ಬಾಯಿಗೆ ರುಚಿ ಎನ್ನಿಸುವ ಬಿಸಿ ಬಿಸಿ, ಖಾರ ಖಾರದ ತಿನಿಸುಗಳನ್ನು ತಿನ್ನಬೇಕು ಎಂದು ಅನ್ನಿಸುವುದು ಸಹಜ. ಆದರೆ ಎಣ್ಣೆಯಲ್ಲಿ ಕರಿದ ಪದಾರ್ಥ ತಿಂದರೆ ತೂಕ ಹೆಚ್ಚುತ್ತೆ ಅನ್ನೋ ಭಯ ಕಾಡುತ್ತೆ. ಆದ್ರೆ ಇಲ್ಲಿರುವ ಪಕೋಡಾ ರೆಸಿಪಿ ಖಂಡಿತ ನಿಮಗೆ ತೂಕ ಕಡಿಮೆ ಮಾಡುವ ಜೊತೆ ನಾಲಿಗೆ ಚಪಲವನ್ನೂ ತಣಿಸುತ್ತದೆ.
ಚಳಿಗಾಲದಲ್ಲಿ ಚಿಲ್ ಎನ್ನಿಸುವ ವಾತಾವರಣದಲ್ಲಿ ಬಿಸಿ ಬಿಸಿ ಪಕೋಡ ತಿಂದಿದ್ರೆ, ಆಹಾ ಸ್ವರ್ಗ ಅನ್ನಿಸದೇ ಇರುವುದಿಲ್ಲ. ಆಹ್ಲಾದಕರ ವಾತಾವರಣದಲ್ಲಿ ಪಕೋಡ ತಯಾರಿಸುವುದು ಬಹಳ ಹಿಂದಿನಿಂದಲೂ ರೂಢಿಯಲ್ಲಿರುವ ಪದ್ಧತಿ. ಇದರಿಂದ ನಾಲಿಗೆ ಚಪಲವೇನೋ ತಣಿಯುತ್ತದೆ. ಆದರೆ ದೇಹ ತೂಕ ಕೇಳಬೇಕಲ್ಲ. ಆದರೆ ಈ ಚಳಿಗಾಲದಲ್ಲಿ ದೇಹ ತೂಕ ಹೆಚ್ಚುವ ಚಿಂತೆ ಇಲ್ಲದೆ ತಿನ್ನಬಹುದಾದ ಪಕೋಡಾ ತಯಾರಿಸಬಹುದು. ಇದು ನಿಜಕ್ಕೂ ನಿಮ್ಮಲ್ಲಿ ಆಶ್ಚರ್ಯ ಹುಟ್ಟಿಸುವುದರಲ್ಲಿ ಎರಡು ಮಾತಿಲ್ಲ. ಹಾಗಾದರೆ ಈ ಸ್ಪೆಷಲ್ ಪಕೋಡ ರೆಸಿಪಿ ಇಲ್ಲಿದೆ.
ಪಾನ್ ಗ್ರಿಲ್ಡ್ ಮಿಕ್ಸ್ಡ್ ವೆಜ್ ಪಕೋಡಾ
ತರಕಾರಿ ಇಷ್ಟವಿಲ್ಲ ಅಂದ್ರು ನಿಮಗೆ ಈ ಪಕೋಡಾ ಇಷ್ಟ ಆಗೋದು ಪಕ್ಕಾ.
ತಯಾರಿಸುವ ವಿಧಾನ: ಒಂದು ಬೌಲ್‌ನಲ್ಲಿ 1 ಚಮಚ ಕಾರ್ನ್‌ಫ್ಲೋರ್, 1 ಮೊಟ್ಟೆ, ಚಿಟಿಕೆ ಉಪ್ಪು, ಖಾರದಪುಡಿ, ಕಾಳುಮೆಣಸು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಚೆನ್ನಾಗಿ ಕತ್ತರಿಸಿದ ತರಕಾರಿ ಹಾಗೂ ಜೋಳ ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ನಂತರ ಇದನ್ನು ಪ್ಯಾನ್ ಮೇಲೆ ಹರಡಿ. ಅದರ ಮೇಲೆ ಒಂಡೆರಡು ಹನಿ ಆಲಿವ್ ಎಣ್ಣೆ ಹಾಕಿ. ನಂತರ ಎರಡೂ ಕಡೆ ಚೆನ್ನಾಗಿ ಬೇಯಿಸಿ. ನಂತರ ಯೋಗರ್ಟ್ ಜೊತೆ ಇದನ್ನು ತಿನ್ನಲು ಕೊಡಿ.
ಕಾಟೇಜ್ ಚೀಸ್ ಪಕೋಡಾ
ತಯಾರಿಸುವ ವಿಧಾನ: ಕಾಟೇಜ್ ಚೀಸ್ ಅನ್ನು ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ. ಇದಕ್ಕೆ ನೀರು, ಉಪ್ಪು, ಕಾಳುಮೆಣಸು, ಒಂದು ಚಮಚ ಕಾರ್ನ್‌ಫ್ಲೋರ್, ಬೆಳ್ಳುಳ್ಳಿ ಪುಡಿ, ಪೆಪ್ಪರಿಕಾ ಹಾಗೂ ನಿಮ್ಮಿಷ್ಟದ ಗಿಡಮೂಲಿಕೆಗಳನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ರವೆಯಲ್ಲಿ ಚೀಸ್ ಕಾಟೇಜ್ ಅನ್ನು ಹೊರಳಿಸಿ. ಇದನ್ನು ಬೇಕಿಂಗ್ ಶೀಟ್ ಮೇಲೆ ಇರಿಸಿ ಬೇಯಿಸಿ. ಇದು ಗರಿಗರಿಯಾಗಿ ತಿನ್ನಲು ಚೆನ್ನಾಗಿರುತ್ತದೆ.
ಪಾಲಕ್ ಕೇಲ್ ಫ್ರಿಟ್ಟರ್ಸ್
ಪಾಲಕ್ ಹಾಗೂ ಕೇಲ್ ಅನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಿ. ಇದನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ಆಲಿವ್ ಎಣ್ಣೆ ಹಾಗೂ ಬೆಳ್ಳುಳ್ಳಿ ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಹೆಚ್ಚಿ. ನಂತರ ಇನ್ನು ಓವೆನ್‌ನಲ್ಲಿ ಬೇಯಿಸಿ. ಈ ನಿಮ್ಮ ಮುಂದೆ ರುಚಿಯಾದ ಪಕೋಡಾ ರೆಡಿ.
ಇದನ್ನೂ ಓದಿ
ಚೆಟ್ಟಿನಾಡ್ ಮಟನ್ ಕರಿ ರೆಸಿಪಿ; ಒಮ್ಮೆ ತಿಂದ್ರೆ, ನಾಲಗೆ ಏನು ಅದೃಷ್ಟ ಮಾಡಿತ್ತೋ ಅಂತ ಉದ್ಘರಿಸೋದು ಗ್ಯಾರಂಟಿ
Chettinad Mutton Curry: ಮಟನ್‌ನಲ್ಲಿ ನೀವು ಎಷ್ಟು ಐಟಮ್ ತಯಾರಿಸ್ತೀರ? ಅಡುಗೆ ಮನೆಯಲ್ಲಿ ಎಲ್ಲಾ ಸಾಮಗ್ರಿಗಳು ಇರುವಾಗ ಪ್ರತಿ ವಾರವೂ ಏಕೆ ಒಂದೇ ರೆಸಿಪಿ ಮಾಡ್ತೀರಾ? ಇಂದು ಅಥವಾ ಮುಂದೆ ಎಂದಾದ್ರೂ ಮಟನ್ ಖರೀದಿಸಿದರೆ ಚೆಟ್ಟಿನಾಡ್ ಮಟನ್ ಕರಿ ಟ್ರೈ ಮಾಡಿ. ಸಾಮಗ್ರಿಗಳು ಹೆಚ್ಚಿಗೆ ಬೇಕಿದ್ರೂ ರುಚಿಗೆ ಮಾತ್ರ ಸರಿ ಸಮ ಬೇರೆ ಇಲ್ಲ. ಚೆಟ್ಟಿನಾಡ್ ಮಟನ್ ಕರಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೀಗಿದೆ.