Bra Less Sleep: ರಾತ್ರಿ ಮಲಗುವಾಗ ಬ್ರಾ ಧರಿಸುವುದು ಒಳ್ಳೆಯದೋ ಕೆಟ್ಟದ್ದೋ; ಬ್ರಾ ಧರಿಸುವ ಕುರಿತ ಸತ್ಯ–ಮಿಥ್ಯಗಳಿವು-health news women health what happened when you wear bra at night myths and facts about wearing bra at night rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Bra Less Sleep: ರಾತ್ರಿ ಮಲಗುವಾಗ ಬ್ರಾ ಧರಿಸುವುದು ಒಳ್ಳೆಯದೋ ಕೆಟ್ಟದ್ದೋ; ಬ್ರಾ ಧರಿಸುವ ಕುರಿತ ಸತ್ಯ–ಮಿಥ್ಯಗಳಿವು

Bra Less Sleep: ರಾತ್ರಿ ಮಲಗುವಾಗ ಬ್ರಾ ಧರಿಸುವುದು ಒಳ್ಳೆಯದೋ ಕೆಟ್ಟದ್ದೋ; ಬ್ರಾ ಧರಿಸುವ ಕುರಿತ ಸತ್ಯ–ಮಿಥ್ಯಗಳಿವು

Myths and Facts about Wearing Bra: ರಾತ್ರಿ ಮಲಗುವಾಗ ಒಳಉಡುಪುಗಳನ್ನು ಧರಿಸುವುದು ಒಳಿತೊ ಕೆಡುಕೊ ಎನ್ನುವ ಗೊಂದಲ ಹಲವರಲ್ಲಿದೆ. ಬ್ರಾ ಹಾಕಿಕೊಂಡು ಮಲಗುವುದು ಒಳ್ಳೆಯದೋ ಕೆಟ್ಟದ್ದೋ ಎನ್ನುವ ಅನುಮಾನ ಹೆಣ್ಣುಮಕ್ಕಳಿಗೆ ಇರಬಹುದು. ಬ್ರಾ ಧರಿಸಿ ಮಲಗುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮಗಳಾಗುತ್ತವೆ ನೋಡಿ.

ರಾತ್ರಿ ಮಲಗುವಾಗ ಬ್ರಾ ಧರಿಸುವುದರ ಪರಿಣಾಮ
ರಾತ್ರಿ ಮಲಗುವಾಗ ಬ್ರಾ ಧರಿಸುವುದರ ಪರಿಣಾಮ

ಹಲವು ಹೆಣ್ಣುಮಕ್ಕಳು ರಾತ್ರಿ ಮಲಗುವಾಗಲೂ ಬ್ರಾ ಧರಿಸಿ ಮಲಗುತ್ತಾರೆ. ಕೆಲವರಿಗೆ ಬ್ರಾ ತೆಗೆಯದೇ ನಿದ್ದೆ ಬರುವುದಿಲ್ಲ. ಬ್ರಾ ಧರಿಸಿ ಮಲಗುವ ಬಗ್ಗೆ ಹಲವರಲ್ಲಿ ಜಿಜ್ಞಾಸೆ ಇದೆ. ಕೆಲವರು ಬ್ರಾ ಹಾಕಿಕೊಂಡು ಮಲಗುವುದು ಹಾನಿಕರ ಎಂದು ಹೇಳಿದರೆ, ಇನ್ನು ಕೆಲವರು ಬ್ರಾ ಧರಿಸದೇ ಇದ್ದರೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಹಾಗಾದರೆ ಬ್ರಾ ಧರಿಸಿ ಮಲಗಿದರೆ ಏನಾಗುತ್ತದೆ, ಇದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮಗಳು ಆಗುತ್ತವೆ ನೋಡಿ.

ಬ್ರಾ ಧರಿಸಿ ಮಲಗುವುದರಿಂದಾಗುವ ಪರಿಣಾಮ

ಉಸಿರಾಟದ ಮೇಲೆ ಪರಿಣಾಮ: ಸ್ತನಗಳಿಗೆ ಬೆಂಬಲವನ್ನು ನೀಡಲು ಬ್ರಾಗಳನ್ನು ವಿನ್ಯಾಸಗೊಳಿಸಲಾಗಿದೆ. ಕುಳಿತುಕೊಳ್ಳುವಾಗ ಮತ್ತು ನಿಂತಿರುವಾಗ ಬ್ರಾ ಸರಿಯಾದ ಬೆಂಬಲವನ್ನು ನೀಡುತ್ತದೆ. ಆದರೆ ಮಲಗಿರುವಾಗ, ಬ್ರಾದ ಕೆಳಗಿನ ಭಾಗದಲ್ಲಿರುವ ಬ್ಯಾಂಡ್ ಎದೆಯ ಭಾಗಕ್ಕೆ ಒತ್ತುತ್ತದೆ. ಮಲಗುವಾಗ ಬ್ರಾ ಬಿಗಿಯಾಗಿ, ಅಸಹನೆ ಉಂಟಾಗುತ್ತದೆ. ಪಕ್ಕೆಲುಬುಗಳ ಚಲನೆಗೂ ಸ್ವಲ್ಪ ಕಷ್ಟವಾಗುತ್ತದೆ ಮತ್ತು ಉಸಿರಾಟಕ್ಕೂ ಕಷ್ಟಕರವಾಗಬಹುದು. ಬೆಳಗ್ಗೆ ಎದ್ದಾಗ ನೋವು ಬಂದರೆ ಅದು ಬಿಗಿಯಾದ ಬ್ರಾ ಹಾಕಿಕೊಂಡು ಮಲಗಿದ್ದೇ ಕಾರಣ ಆಗಿರಬಹುದು. ಹಾಗಾಗಿ ರಾತ್ರಿ ಮಲಗುವಾಗ ತಪ್ಪಿಯೂ ಬಿಗಿಯಾದ ಬ್ರಾ ಧರಿಸಿ ಮಲಗಬಾರದು.

ರಕ್ತ ಪೂರೈಕೆಗೆ ತೊಂದರೆ: ಬಿಗಿಯಾದ ಬ್ರಾ ಧರಿಸಿ ಮಲಗುವುದರಿಂದ ಸ್ತನ ಅಂಗಾಂಶಕ್ಕೆ ರಕ್ತ ಪೂರೈಕೆ ಕಡಿಮೆಯಾಗಬಹುದು. ಕನಿಷ್ಠ ರಾತ್ರಿಯಾದರೂ ಸಡಿಲವಾದ ಬಟ್ಟೆಯಲ್ಲಿ ಮಲಗುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ಸ್ತನ ಆರೋಗ್ಯವೂ ಸುಧಾರಿಸುತ್ತದೆ.

ದದ್ದುಗಳು, ಸೋಂಕುಗಳು: ನಾವು ವಾಸಿಸುವ ವಾತಾವರಣದಲ್ಲಿ ಎಲ್ಲ ಹೊತ್ತಿನಲ್ಲೂ ಸ್ವಲ್ಪ ಬೆವರುವುದು ಸಾಮಾನ್ಯವಾಗಿದೆ. ಸ್ತನದ ಕೆಳಭಾಗದಲ್ಲಿ ಬೆವರುವುದು ಸಹಜ ಹಾಗೂ ಆ ಜಾಗದಲ್ಲಿ ಬೆವರು ನಿಲ್ಲುತ್ತದೆ. ಬೇಸಿಗೆ ಮತ್ತು ಆರ್ದ್ರ ಮಳೆಗಾಲದ ದಿನಗಳಲ್ಲಿ ಈ ಸಮಸ್ಯೆಯ ಪ್ರಭಾವ ಹೆಚ್ಚು. ದೀರ್ಘಕಾಲದವರೆಗೆ ಬೆವರುವುದು ಚರ್ಮದ ದದ್ದುಗಳಿಗೆ ಕಾರಣವಾಗಬಹುದು. ಬ್ರಾ ಬೆವರು ಹೀರಿಕೊಳ್ಳುತ್ತದೆ ಮತ್ತು ತೇವವಾಗುತ್ತದೆ. ಇದರಿಂದಾಗಿ ಫಂಗಲ್ ಸೋಂಕಿಗೆ ಕಾರಣವಾಗಬಹುದು. ಎದೆಯ ಮೇಲಿನ ಚರ್ಮವೂ ಕೆಂಪಾಗುತ್ತದೆ. ದದ್ದುಗಳು ಮತ್ತು ತುರಿಕೆಯಂತಹ ಸಮಸ್ಯೆಗಳು ಎದರುರಾಗಬಹುದು. ಹಾಗಾಗಿ ರಾತ್ರಿ ವೇಳೆ ಬ್ರಾ ಧರಿಸದಿದ್ದರೆ ಚರ್ಮಕ್ಕೆ ಯಾವುದೇ ತೊಂದರೆಯಿಲ್ಲದೆ ಗಾಳಿ ಸಿಗುತ್ತದೆ.

ಸ್ತನದ ಗಾತ್ರ ದೊಡ್ಡದಿದ್ದರೆ: ಸ್ತನದ ಗಾತ್ರ ದೊಡ್ಡದಾಗಿದ್ದರೆ ಬ್ರಾ ಧರಿಸದಿದ್ದರೆ ತೊಂದರೆಯಾಗುತ್ತದೆ, ಇದರಿಂದ ಕಂಪರ್ಟ್ ಎನ್ನಿಸುವುದಿಲ್ಲ. ಅಂತಹವರು ಸಾಮಾನ್ಯ ಕಾಟನ್, ನಾನ್ ಪ್ಯಾಡೆಡ್‌ ಬ್ರಾ ಧರಿಸಬಹುದು. ಸ್ಟ್ರ್ಯಾಪ್‌ಲೆಸ್‌ ಬ್ರಾ ರಾತ್ರಿ ಮಲಗುವಾಗ ಹೆಚ್ಚು ಬಿಗಿಯಾಗಿರುವುದಿಲ್ಲ. ಇದು ನಿಮಗೆ ಕಂಫರ್ಟ್ ಎನ್ನಿಸಬಹುದು.

ಬ್ರಾ ಧರಿಸುವ ಕುರಿತ ಮಿಥ್ಯಗಳು

ಬ್ರಾ ಧರಿಸದಿದ್ದರೆ ಸ್ತನದ ಆಕಾರ ಬದಲಾಗುತ್ತದೆ: ಬ್ರಾ ಹಾಕದಿದ್ದರೆ ಸ್ತನದ ಆಕಾರವೇ ಬದಲಾಗುತ್ತದೆ ಎನ್ನುವುದು ಸತ್ಯವಲ್ಲ. ಸ್ತನದ ಗಾತ್ರಕ್ಕೂ ಬ್ರಾ ಧರಿಸುವುದಕ್ಕೂ ಯಾವುದೇ ಸಂಬಂಧವಿಲ್ಲ. ವ್ಯಾಯಾಮಗಳು ಮತ್ತು ಯೋಗ ಮಾಡುವ ಮೂಲಕ ಸ್ತನದ ಗಾತ್ರವನ್ನು ಹಿಗ್ಗಿಸುವುದು, ಕುಗ್ಗಿಸುವುದು ಮಾಡಿಕೊಳ್ಳಬಹುದು.

ಬ್ರಾ ಸ್ತನದ ಗಾತ್ರವನ್ನು ಕುಗ್ಗಿಸುತ್ತದೆ: ಒಂದು ನಿರ್ದಿಷ್ಟ ವಯಸ್ಸಿಗೆ ಬಂದ ನಂತರ ಸ್ತನದ ಗಾತ್ರಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಹಾಗಾಗಿ ಬ್ರಾ ಹಾಕಿಕೊಂಡು ಮಲಗುವುದು ಗಾತ್ರದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಮಿಥ್ಯವಾಗಿದೆ.

ಬ್ರಾ ಧರಿಸಿ ಮಲಗುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮಗಳಿಗಿಂತ ಅಡ್ಡ ಪರಿಣಾಮವೇ ಹೆಚ್ಚು. ಆದರೂ ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರಿಂದ ಅಭಿಪ್ರಾಯ ಪಡೆಯುವುದು ಉತ್ತಮ.

mysore-dasara_Entry_Point