Bed Sheet Cleaning : ಆಗಾಗ ಬೆಡ್‌ಶೀಟ್ ಸ್ವಚ್ಛ ಮಾಡಿಲ್ಲ ಅಂದ್ರೆ ತಪ್ಪಿದ್ದಲ್ಲ ಅಪಾಯ
ನಮ್ಮ ಕಣ್ಣಿಗೆ ಕಾಣದಂತೆ ಕೋಟಿಗಟ್ಟಲೆ ಕ್ರಿಮಿ, ಕೀಟಗಳು ನಮ್ಮ ಸುತ್ತಲೂ ಜೀವಿಸುತ್ತಿರುತ್ತವೆ. ಹಾಗಾಗಿ ನಾವು ವಾಸಿಸುವ ಸ್ಥಳವನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕು. ಅದರಲ್ಲೂ ನಾವು ಮಲಗುವ, ಹೊದೆಯುವ ಬೆಡ್‌ಶೀಟ್, ಬ್ಲಾಂಕೆಟ್‌ಗಳ ವಿಚಾರದಲ್ಲಿ ಎಂದಿಗೂ ನಿರ್ಲಕ್ಷ್ಯ ಮಾಡಬಾರದು.
ಹಲವರಿಗೆ ಬೆಡ್‌ಶೀಟ್ ಕ್ಲೀನ್ ಮಾಡುವ ಅಭ್ಯಾಸ ಕಡಿಮೆ ಇರುತ್ತದೆ. ಯಾವಾಗಲೋ ಮನಸ್ಸಿಗೆ ತೋಚಿದಾಗ ಬೆಡ್‌ಶೀಟ್, ಬ್ಲಾಂಕೆಟ್ ವಾಷ್ ಮಾಡುತ್ತಾರೆ. ಆದರೆ ಈ ಅಭ್ಯಾಸ ಖಂಡಿತ ಒಳ್ಳೆಯದಲ್ಲ. ಇದರಿಂದ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ.
ನಮ್ಮ ಮನೆಯ ಒಳಗಡೆ, ಬೆಡ್‌ಶೀಟ್ ಮೇಲೆ ಸಾಕಷ್ಟು ಕ್ರೀಮಿಕೀಟಗಳು ಇರುತ್ತವೆ. ಇವು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ ಇವು ಶ್ವಾಸಕೋಶ ಇನ್‌ಫೆಕ್ಷನ್ ಅನ್ನು ಉಂಟು ಮಾಡುತ್ತದೆ ಎನ್ನುತ್ತಾರೆ ತಜ್ಞರು. ಇದರಿಂದ ದಮ್ಮ, ನಿರಂತರ ನೆಗಡಿ, ಕಣ್ಣಿನ ಅಲರ್ಜಿಯಂತಹ ಹಲವು ಸಮಸ್ಯೆಗಳು ಕಾಣಿಸುತ್ತವೆ.
ಬೆಡ್‌ಶೀಟ್‌ಗಳನ್ನು ಆಗಾಗ ಬದಲಿಸದಿದ್ರೆ ಏನಾಗುತ್ತೆ?
ಬೆಡ್‌ಶೀಟ್‌ಗಳನ್ನು ನಿಯಮಿತವಾಗಿ ಬದಲಿಸದೇ ಇದ್ರೆ ಅಲರ್ಜಿ, ಇನ್ಫೆಕ್ಷನ್ ಮಾತ್ರವಲ್ಲ ಇನ್ನೂ ಹಲವು ಸಮಸ್ಯೆಗಳು ಕಾಡುತ್ತವೆ.
ಮನೆಯ ಒಳಗಡೆ ಸೂರ್ಯಕಾಂತಿ ಹರಡುವಂತೆ ಇರಬೇಕು. ಸೂರ್ಯನ ಶಾಖ ಒಳಗೆ ಬೀಳದೇ ಇದ್ದರೆ, ತೇವದ ವಾತಾವರಣ ಉಂಟಾಗುತ್ತದೆ. ಇದರಿಂದ ಸೂಕ್ಷ್ಮಜೀವಿಗಳಿಗೆ ನೆಲೆಸಲು ಸುಲಭವಾಗುತ್ತದೆ. ಸೂಕ್ಷ್ಮ ಜೀವಿಗಳು ನಿಮ್ಮ ಹಾಸಿಗೆ, ಬೆಡ್‌ಶೀಟ್, ದಿಂಬಿನಲ್ಲಿ ಅಡಗಿಕೊಂಡಿರುತ್ತವೆ.
ತೇವಾಂಶ ಕಾರಣದಿಂದ ಬೆಡ್‌ಶೀಟ್‌ಗಳು ದುರ್ವಾಸನೆ ಬರುವ ಸಾಧ್ಯತೆಯೂ ಹೆಚ್ಚಿದೆ. ಈ ರೀತಿಯ ಮನೆಯಲ್ಲಿ ವಾಸಿಸುವ ವ್ಯಕ್ತಿಗಳು ಆಸ್ತಮಾ ಮುಂತಾದ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ ಮನೆಯಲ್ಲಿ ತೇವಾಂಶ ಅಧಿಕವಾಗಿದ್ದರೆ ಆಸ್ತಮಾ ಬರುವ ಅವಕಾಶ ಹೆಚ್ಚಿರುತ್ತದೆ. ಅಂತಹ ಮನೆಗಳಲ್ಲಿ ವಾಸಿಸುವವರಿಗೆ ಖಿನ್ನತೆ, ಆಸ್ತಮಾ, ಉಸಿರಾಟದ ಕಾಯಿಲೆಗಳು ಬರುವ ಅಪಾಯವಿದೆ ಎಂದು ವೈದ್ಯರು ಹೇಳುತ್ತಾರೆ.
ಗಾಳಿ ಬೆಳಕು ಸರಿಯಾಗಿ ಬೀಳದ ಮನೆಯಲ್ಲಿಗಳಲ್ಲಿನ ಬೆಡ್‌ಶೀಟ್‌ಗಳು ಹಾಗೂ ಬೆಡ್‌ಗಳು ಸೂಕ್ಷ್ಮಜೀವಿಗಳ ಆಸಾವಸ್ಥಾನವಾಗಿರುತ್ತದೆ. ಇವುಗಳಿಂದ ಉಸಿರಿನ ಉರಿಯೂತ ಉಂಟಾಗಬಹುದು. ಆಗಾಗ್ಗೆ ಉಸಿರಾಟದ ತೊಂದರೆ, ಮೂಗು ಕಟ್ಟುವುದು, ದಮ್ಮ, ಗಂಟಲಿನ ಕಿರಿಕಿರಿ ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಆದ್ದರಿಂದ ಹಾಸಿಗೆಗಳನ್ನು ಯಾವಾಗಲೂ ಸ್ವಚ್ಛಗೊಳಿಸಬೇಕು.
ಎಷ್ಟು ದಿನಕ್ಕೊಮ್ಮೆ ಬೆಡ್‌ಶೀಟ್ ಕ್ಲೀನ್ ಮಾಡಬೇಕು
ಕನಿಷ್ಠ ವಾರಕ್ಕೆ ಒಂದು ಬಾರಿಯಾದರೂ ನಿಮ್ಮ ಬೆಡ್‌ಶೀಟ್, ದಿಂಬಿನ ಕವರ್‌ಗಳನ್ನು ಸ್ವಚ್ಛ ಮಾಡಬೇಕು. ಮಲಗುವ ಮೊದಲು ನಿಮ್ಮ ಪಾದಗಳನ್ನು ತೊಳೆದು ಒರೆಸಿ ನಂತರ ಮಗಲಬೇಕು.
ಹಾಸಿಗೆಯ ಮೇಲೆ ಕುಳಿತು ಊಟ ಎಂದಿಗೂ ಮಾಡಬಾರದು. ನೀವು ಮಲಗುವ ಮಂಚದ ಬಳಿ ಆಹಾರವನ್ನು ತರುವುದು ಒಳ್ಳೆಯ ಅಭ್ಯಾಸವಲ್ಲ. ಹಾಸಿಗೆಯ ಮೇಲೆ ಆಹಾರ ಸೇವನೆಯಿಂದ ಕ್ರಿಮಿಗಳು ಬೆಳವಣಿಗೆಯಾಗುತ್ತವೆ.
ಉಸಿರಾಟ ಸಮಸ್ಯೆ ಬಂದ್ರೆ ಹೀಗೆ ಮಾಡಿ
ಉಸಿರಾಟದ ಸಮಸ್ಯೆ ನಿವಾರಣೆಗೆ ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಮಲಗುವಾಗ ಒಳ್ಳೆಯ ಭಂಗಿಯಲ್ಲಿ ಮಲಗಬೇಕು. ಏಕೆಂದರೆ ಉತ್ತಮ ನಿದ್ದೆ ಕೂಡ ನಿಮ್ಮ ಉಸಿರಾಟವನ್ನು ಪ್ರಭಾವಿಸುತ್ತದೆ. ಆರೋಗ್ಯಕರ ತೂಕವನ್ನು ನಿರ್ವಹಿಸಬೇಕು. ಏಕೆಂದರೆ ಇದು ಕೂಡ ನಿಮ್ಮ ಉಸಿರಾಟದ ಮೇಲೆ ಪ್ರಭಾವ ಬೀರುತ್ತದೆ. ಆರೋಗ್ಯಕರ ಆಹಾರ, ವ್ಯಾಯಾಮದ ಕ್ರಮವನ್ನು ಖಂಡಿತವಾಗಿ ನೋಡಿಕೊಳ್ಳಬೇಕು. ಪ್ರಾಣಾಯಾಮ ಮಾಡಿ.
ಇದನ್ನೂ ಓದಿ
Cold Drinks: ಒಂದು ತಿಂಗಳು ಕೋಲ್ಡ್ ಡ್ರಿಂಕ್ಸ್ ಕುಡಿಯದೇ ಇದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ತಿಳಿದ್ರೆ ಅಚ್ಚರಿ ಪಡ್ತಿರಾ
ಕೆಲವರಿಗೆ ಕೂಲ್ ಡ್ರಿಂಕ್ಸ್ ಕುಡಿಯೋದು ಅಂದ್ರೆ ಅದೇನೋ ಒಂಥರಾ ಖುಷಿ. ಇದರಿಂದ ಆರೋಗ್ಯ ಹಾಳಾಗುತ್ತೆ ಅನ್ನುವ ಅರಿವಿದ್ದರೂ ಕೂಡ ದೇಹವನ್ನು ಚಿಲ್ ಆಗಿರುವ ಕೂಲ್ ಡ್ರಿಂಕ್ಸ್ ಕುಡಿತಾನೇ ಇರ್ತಾರೆ. ಇನ್ನು ಕೆಲವರಿಗೆ ಒಂದು ಕೆಟ್ಟ ಅಭ್ಯಾಸವಿದೆ. ಅದೇನೆಂದರೆ ಊಟದ ಜೊತೆ ಅಂದರೆ ಊಟ ಮಾಡುವಾಗ ಕೂಲ್ ಡ್ರಿಂಕ್ಸ್ ಕುಡಿಯುವುದು. ನಿಮ್ಮಲ್ಲೂ ಇಂತಹ ಅಭ್ಯಾಸವಿದ್ದರೆ ಈ ಕ್ಷಣಕ್ಕೆ ಅದನ್ನು ನಿಲ್ಲಿಸುವುದು ಉತ್ತಮ.