ಮೂಲಂಗಿ ದೇಹಕ್ಕೆ ಒಳ್ಳೆಯದು ನಿಜ, ಆದ್ರೆ ಈ ಪದಾರ್ಥಗಳ ಜೊತೆ ತಿಂದ್ರೆ ಆರೋಗ್ಯ ಕೆಡೋದು ಖಂಡಿತ, ತಿಳಿದಿರಲಿ
ಮೂಲಂಗಿ ಆರೋಗ್ಯಕ್ಕೆ ಬಹಳ ಉತ್ತಮ, ಇದನ್ನು ನಿರಂತರವಾಗಿ ಸೇವಿಸುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆದರೆ ಈ ವಸ್ತುಗಳ ಜೊತೆ ಮೂಲಂಗಿಯನ್ನು ತಪ್ಪಿಯೂ ತಿನ್ನಬಾರದು. ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮೂಲಂಗಿಯ ಜೊತೆ ತಿನ್ನಲೇಬಾರದಂತಹ 5 ವಸ್ತುಗಳು ಯಾವುವು ನೋಡಿ.
ಮೂಲಂಗಿ ಒಂಥರಾ ವಾಸನೆ ಇರುವ ಕಾರಣಕ್ಕೆ ಇದು ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೆ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ವಿಟಮಿನ್, ಪೊಟ್ಯಾಶಿಯಂ, ನಾರಿನಾಂಶ ಸಮೃದ್ಧವಾಗಿದೆ. ಇದು ಕರುಳಿನ ವಿಷವನ್ನು ನಿರ್ವಿಶಗೊಳಿಸುವ ಗುಣವನ್ನೂ ಹೊಂದಿದೆ. ಮೂಲಂಗಿಯಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣಾಂಶ, ನಾರಿನಾಂಶ ಮತ್ತು ವಿಟಮಿನ್ ಎ, ಬಿ ಮತ್ತು ಸಿ ಹೇರಳವಾಗಿ ಇರುತ್ತದೆ. ಇದು ರೋಗನಿರೋಧಕಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ.
ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಮೂಲಂಗಿಯನ್ನು ಕೆಲವು ಪದಾರ್ಥಗಳ ಜೊತೆ ಸೇವಿಸುವುದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮಗಳನ್ನು ಉಂಟಾಗಬಹುದು, ಇದರಿಂದ ಪ್ರಯೋಜನಕ್ಕಿಂತ ನಷ್ಟವೇ ಜಾಸ್ತಿ. ಹಾಗಾಗಿ ಈ 5 ವಸ್ತುಗಳ ಜೊತೆ ತಪ್ಪಿಯೂ ಮೂಲಂಗಿಯನ್ನು ತಿನ್ನಬೇಡಿ.
ಮೂಲಂಗಿ ಜೊತೆ ತಿನ್ನಬಾರದಂತಹ 5 ಆಹಾರಗಳು
ಹಾಲು: ಮೂಲಂಗಿ ಅಥವಾ ಮೂಲಂಗಿಯಿಂದ ಮಾಡಿದ ಯಾವುದೇ ಪದಾರ್ಥಗಳನ್ನ ತಿನ್ನುವ ಮೊದಲು ಹಾಗೂ ತಿಂದ ನಂತರ ಹಾಲು ಕುಡಿಯಬಾರದು. ಇದರಿಂದ ಚರ್ಮದ ಸಮಸ್ಯೆಗಳು, ಅಲರ್ಜಿ ಉಂಟಾಗಬಹುದು. ಇದರಿಂದ ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ.
ಕಿತ್ತಳೆ: ಮೂಲಂಗಿ ಜೊತೆ ಕಿತ್ತಳೆ ಹಣ್ಣು ತಿನ್ನುವುದನ್ನು ಕೂಡ ತಪ್ಪಿಸಬೇಕು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು.
ಹಾಗಲಕಾಯಿ: ಹಾಗಲಕಾಯಿಗೂ ಮೂಲಂಗಿಗೂ ಆಗಿ ಬರೋದಿಲ್ಲ. ಹಾಗಾಗಿ ಯಾವತ್ತು ಹಾಗಲಕಾಯಿ ಮೂಲಂಗಿ ಒಟ್ಟಿಗೆ ತಿನ್ನಬಾರದು. ಇದರಿಂದ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಈ ಸಮಸ್ಯೆ ರಾತ್ರಿ ಹೊತ್ತು ಹೆಚ್ಚಾಗುತ್ತದೆ.
ಚೀಸ್: ಮೂಲಂಗಿ ಹಾಗೂ ಚೀಸ್ ಒಟ್ಟಿಗೆ ತಿನ್ನುವುದು ಕೂಡ ಒಳ್ಳೆಯದಲ್ಲ. ಇದು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಚರ್ಮದ ಕಾಯಿಲೆಗಳನ್ನು ಹೆಚ್ಚಿಸುತ್ತದೆ.
ಚಹಾ: ಮೂಲಂಗಿ ಸೇವಿಸಿದ ಸಮಯದಲ್ಲಿ ಚಹಾ ಕುಡಿಯವುದು ಬಹಳ ಅಪಾಯಕಾರಿ. ಈ ಎರಡರ ಸಂಯೋಜನೆಯು ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳನ್ನು ಉಂಟಾಗಬಹುದು.ಇದರ ಹಿಂದಿರುವ ಕಾರಣವೆಂದರೆ ಮೂಲಂಗಿ ತಣ್ಣನೆಯ ಗುಣವನ್ನು ಹೊಂದಿದ್ದರೆ ಚಹಾವು ಬಿಸಿಯ ಸ್ವಭಾವವನ್ನು ಹೊಂದಿದೆ. ಇವೆರಡೂ ಪರಸ್ಪರ ವಿರುದ್ಧವಾಗಿರುವ ಸ್ವಭಾವದಿಂದಾಗಿ, ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು.
ನೋಡಿದ್ರಲ್ಲ, ನೀವು ಮೂಲಂಗಿ ಇಷ್ಟಪಟ್ಟು ತಿನ್ನೋರ್ ಆದ್ರೆ ಇದನ್ನ ತಿಂದಾಗ ಈ ಪದಾರ್ಥಗಳನ್ನು ಸೇವಿಸಬೇಡಿ, ಇದರಿಂದ ಆರೋಗ್ಯಕ್ಕೆ ಒಳ್ಳೆದಾಗುವ ಬದಲು ಆರೋಗ್ಯ ಕೆಡುತ್ತೆ. ಆಯುರ್ವೇದವು ಕೆಲವೊಂದು ಆಹಾರ ಪದಾರ್ಥಗಳ ಸಂಯೋಜನೆಯನ್ನು ಎಂದಿಗೂ ಒಪ್ಪುವುದಿಲ್ಲ. ಅವುಗಳಲ್ಲಿ ಇದೂ ಒಂದು.
ವಿಭಾಗ