ಎಷ್ಟು ಟ್ರೈ ಮಾಡಿದ್ರೂ ಉಪ್ಪಿಟ್ಟಿನ ಹದ ಹಿಡಿಯಲು ಆಗ್ತಾ ಇಲ್ವ? ಹಾಗಾದ್ರೆ ಇದೇ ವಿಧಾನದಲ್ಲಿ ಮಾಡಿ ನೋಡಿ, ತುಂಬಾ ಟೇಸ್ಟಿಯಾಗಿರುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ಎಷ್ಟು ಟ್ರೈ ಮಾಡಿದ್ರೂ ಉಪ್ಪಿಟ್ಟಿನ ಹದ ಹಿಡಿಯಲು ಆಗ್ತಾ ಇಲ್ವ? ಹಾಗಾದ್ರೆ ಇದೇ ವಿಧಾನದಲ್ಲಿ ಮಾಡಿ ನೋಡಿ, ತುಂಬಾ ಟೇಸ್ಟಿಯಾಗಿರುತ್ತೆ

ಎಷ್ಟು ಟ್ರೈ ಮಾಡಿದ್ರೂ ಉಪ್ಪಿಟ್ಟಿನ ಹದ ಹಿಡಿಯಲು ಆಗ್ತಾ ಇಲ್ವ? ಹಾಗಾದ್ರೆ ಇದೇ ವಿಧಾನದಲ್ಲಿ ಮಾಡಿ ನೋಡಿ, ತುಂಬಾ ಟೇಸ್ಟಿಯಾಗಿರುತ್ತೆ

ರುಚಿಕರವಾದ ಉಪ್ಪಿಟ್ಟನ್ನು ನೀವು ಮನೆಯಲ್ಲೇ ಮಾಡಲು ಪ್ರಯತ್ನಿಸಿದರೂ ಅದು ಸಾಧ್ಯ ಆಗ್ತಾ ಇಲ್ವ? ಹೋಟೆಲ್‌ನಲ್ಲಿ ತಿಂದ ಟೇಸ್ಟೇ ಬೇಕು ಅನಿಸ್ತಿದ್ಯಾ? ಹಾಗಾದ್ರೆ ಇದೇ ವಿಧಾನವನ್ನು ಅನುಸರಿಸಿ ಉಪ್ಪಿಟ್ಟು ರೆಡಿ ಮಾಡಿ. ಬಹಳ ಟೇಸ್ಟಿಯಾಗಿರುತ್ತದೆ

ಟೇಸ್ಟಿಯಾದ ಉಪ್ಪಿಟ್ಟು ಮಾಡುವ ಸರಳ ವಿಧಾನ
ಟೇಸ್ಟಿಯಾದ ಉಪ್ಪಿಟ್ಟು ಮಾಡುವ ಸರಳ ವಿಧಾನ

ಮನೆ ಮನೆಗಳಲ್ಲೂ ಉಪ್ಪಿಟ್ಟು ಮಾಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಎಂದರೆ ಇದನ್ನು ಸರಳವಾಗಿ ಮತ್ತು ಬೇಗನೆ ಮಾಡಿ ಮುಗಿಸಬಹುದು ಎಂದು. ಆದರೆ ಎಷ್ಟೋ ಜನರಿಗೆ ಈ ಉಪ್ಪಿಟ್ಟು ಗಟ್ಟಿಯಾಗುತ್ತದೆ ಎಂದು ತಿನ್ನಲು ಇಷ್ಟವೇ ಆಗುವುದಿಲ್ಲ. ಇನ್ನು ಹಲವರಿಗೆ ಒಂದೇ ರುಚಿ ತಿಂದು ತಿಂದು ಉಪ್ಪಿಟ್ಟು ಬೇಡ ಎಂದೆನಿಸಲು ಆರಂಭವಾಗುತ್ತದೆ. ಆದರೆ ಉಪ್ಪಿಟ್ಟಿಗೆ ಬೇರೆ ರೀತಿಯ ಪದಾರ್ಥಗಳನ್ನು ಆ್ಯಡ್ ಮಾಡಿ, ಇನ್ನಷ್ಟು ರುಚಿಯಾಗಿಸಿದರೆ ಎಲ್ಲರೂ ತಿನ್ನುತ್ತಾರೆ. ಉಪ್ಪಿಟ್ಟಿಗೆ ಬೇಕಾದ ಸಾಮಗ್ರಿಗಳನ್ನು ನಾವಿಲ್ಲಿ‌‌ ನೀಡಿದ್ದೇವೆ ಗಮನಿಸಿ

ಉಪ್ಪಿಟ್ಟು ರವಾ

ನೀರು

ಸಣ್ಣದಾಗಿ ಹೆಚ್ಚಿದ ಈರುಳ್ಳಿ

ಹಸಿಮೆಣಸು

ಸಣ್ಣದಾಗಿ ಹೆಚ್ಚಿದ ಶುಂಠಿ

ಕೊತ್ತಂಬರಿ ಸೊಪ್ಪು

8 ರಿಂದ 10 ಕರಿಬೇವಿನ ಎಲೆಗಳು

1 ಟೀಸ್ಪೂನ್ ಜೀರಿಗೆ

1 ಟೀಸ್ಪೂನ್ ಸಾಸಿವೆ

ರುಚಿಗೆ ತಕ್ಕಷ್ಟು ಉಪ್ಪು

ಕಡಲೆ ಬೀಜ

ಒಗ್ಗರಣೆಗೆ ಇಂಗು, ಉದ್ದಿನ ಬೇಳೆ, ಕಡಲೆ ಬೇಳೆ

ಉಪ್ಪಿಟ್ಟು ಮಾಡುವ ವಿಧಾನ
ನೀವು ರವೆಯನ್ನು ಸರಿಯಾಗಿ ಹುರಿದುಕೊಳ್ಳುವುದು ತುಂಬಾ ಮುಖ್ಯ. ಸರಿಯಾಗಿ ಹುರಿದುಕೊಂಡಿಲ್ಲ ಎಂದಾದರೆ ಉಪ್ಪಿಟ್ಟು ಉದುರಾಗುವುದಿಲ್ಲ. ಉಪ್ಪಿಟ್ಟು ಅಂಟಂಟಾದಾಗ ಕೆಲವರಿಗೆ ಇಷ್ಟ ಆಗುವುದಿಲ್ಲ. ಮೊದಲು ನೀವು ಉಪ್ಪಿಟ್ಟಿನ ರವೆ ಆಯ್ಕೆ ಮಾಡಿಕೊಳ್ಳುವಾಗಲೂ ಜಾಗರೂಕರಾಗಿರಬೇಕು. ಪ್ಯಾಕೆಟ್‌ ಮೇಲೆ ಉಪ್ಮಾ ರವಾ ಅಂತ ಬರೆದಿದ್ದರೆ ಮಾತ್ರ ಅದನ್ನು ತೆಗೆದುಕೊಂಡು ಬನ್ನಿ. ಇಲ್ಲವಾದರೆ ಉಪ್ಪಿಟ್ಟು ಸರಿಯಾಗಿ ಆಗುವುದಿಲ್ಲ.

ರವೆ ಸರಿಯಾಗಿ ಹುರಿದಿರಬೇಕು

ಮಧ್ಯಮ ಉರಿಯಲ್ಲಿ ಉಪ್ಪಿಟ್ಟಿನ ರವಾ ಹುರಿದುಕೊಳ್ಳಬೇಕು. ನಂತರ ಅದರಿಂದ ಪರಿಮಳ ಹೊಮ್ಮುತ್ತದೆ. ಇನ್ನು ಸ್ವಲ್ಪ ಬಣ್ಣ ಬದಲಾಗುತ್ತದೆ. ಈ ರೀತಿ ಆದ ನಂತರ ಅದನ್ನು ಪಕ್ಕಕ್ಕೆ ತೆಗೆದಿಡಿ. ಇನ್ನು ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ ಒಗ್ಗರಣೆಗೆ ಇಂಗು, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಹಸಿ ಮೆಣಸು ಸೇರಿಸಿ. ತರಕಾರಿ ಹಾಕುತ್ತೀರಾ ಎಂದಾದರೆ ಇದೇ ಸಮಯದಲ್ಲಿ ಹಾಕಿ. ನಂತರ ಹುರಿದಿಟ್ಟುಕೊಂಡ ರವಾ ತೆಗೆದುಕೊಂಡು ಇದಕ್ಕೆ ಮಿಕ್ಸ್ ಮಾಡುತ್ತಾ ಬನ್ನಿ. ಇನ್ನೊಂದು ಕಡೆ ನೀರನ್ನು ಬಿಸಿಗಿಟ್ಟುಕೊಳ್ಳಿ. ಆ ಬಿಸಿಯಾದ ನೀರನ್ನು ಅಷ್ಟಷ್ಟಾಗಿ ಹಾಕುತ್ತಾ ಬನ್ನಿ. ಉಪ್ಪಿಟ್ಟಿನ ಹದ ಕಂಡ ತಕ್ಷಣ ನೀರು ಹಾಕುವುದು ನಿಲ್ಲಿಸಿ. ಉಪ್ಪು, ಸಕ್ಕರೆ ಮಿಕ್ಸ್‌ ಮಾಡಿ ಸ್ವಲ್ಲ ಸಮಯ ತಿರುವುತ್ತಾ ಕಾಯಿಸಿ.

ಇಷ್ಟವಾದರೆ ಮೇಲಿನಿಂದ ತೆಂಗಿನ ತುರಿ ಉದುರಿಸಿಕೊಳ್ಳಬಹುದು. ಇಲ್ಲವಾದರೆ ಗೋಡಂಬಿಯಿಂದಲೂ ಅಲಂಕರಿಸಿ ನೀಡಬಹುದು.

Whats_app_banner