ರಾತ್ರಿ ಊಟಕ್ಕೆ ರೈಸ್ ಜೊತೆ ಬೆಂಡೆಹುಳಿ ಮಾಡಿ; ಸಾರು, ರಸಂ ಏನೂ ಬೇಡ ಇದೇ ಬೇಕು ಎಂದು ಕೇಳಿ ಬಡಿಸಿಕೊಳ್ತಾರೆ
ಬೆಂಡೆಹುಳಿ ರೆಸಿಪಿ: ದಿನಾ ಒಂದೇ ರೀತಿ ಸಾರು, ರಸಂ ತಿಂದು ಬೋರಾಗಿದೆ ಅಮ್ಮ, ಬೇರೆ ಏನಾದರೂ ಮಾಡು ಎಂದು ಕೇಳಿದರೆ ನಿಮ್ಮ ಮಕ್ಕಳಿಗೆ ರಾತ್ರಿ ಊಟಕ್ಕೆ ಅನ್ನದ ಜೊತೆ ಈ ರೀತಿ ಬೆಂಡೆಹುಳಿ ಮಾಡಿ ಹಪ್ಪಳ ಕರಿದು ಕೊಡಿ. ಸಂತೋಷದಿಂದ ಉಣ್ಣುತ್ತಾರೆ.
ನೀವು ರಾತ್ರಿ ಊಟಕ್ಕೆ ಏನು ಮಾಡಬೇಕು ಎಂದು ಆಲೋಚನೆ ಮಾಡುತ್ತಿದ್ದರೆ, ಅಥವಾ ದಿನವೂ ಒಂದೇ ರೀತಿ ಬಳಸಿದ ತರಕಾರಿಯನ್ನೇ ಬಳಸಿ ಬಳಸಿ ಏನಾದರು ಹೊಸತು ಬೇಕು ಎಂದು ಆಲೋಚಿಸುತ್ತಿದ್ದರೆ ಈ ರೀತಿ ಬೆಂಡೆಕಾಯಿಹುಳಿ ಮಾಡಿಕೊಂಡು ತಿನ್ನಿ. ಇದನ್ನು ಮಾಡುವಾಗ ಮೊದಲಿಗೆ ಬೆಂಡೆಕಾಯಿಯನ್ನು ಯಾವ ರೀತಿ ಕಟ್ ಮಾಡಬೇಕು? ಯಾವ ರೀತಿ ತೊಳೆಯಬೇಕು? ಮತ್ತು ಯಾವ ವಿಧಾನ ಅನುಸರಿಸಿ ಮಾಡಬೇಕು ಎಂಬುದನ್ನು ನೀವು ತಿಳಿದುಕೊಂಡು ಮಾಡುವುದು ಮುಖ್ಯ. ಇಲ್ಲವಾದರೆ ನಿಮಗೆ ಇದು ಇಷ್ಟವಾಗದೇ ಇರಬಹುದು. ಕಾರಣ ಇದರಲ್ಲಿನ ಲೋಳೆಗುಣ. ಕೆಲವರಿಗೆ ಇದು ಇಷ್ಟವಾಗುವುದಿಲ್ಲ.
ಮೊದಲು ಸರಿಯಾದ ವಿಧಾನವನ್ನು ತಿಳಿಯಿರಿ:
ಬೆಂಡೆಕಾಯಿಯನ್ನು ಚಿಕ್ಕದಾಗಿ ಕಟ್ ಮಾಡಬಾರದು
ಬೆಂಡೆಕಾಯಿ ಹೆಚ್ಚಿದ ನಂತರ ನೀರಿನಲ್ಲಿ ಹಾಕಬಾರದು
ಬೆಂಡೆಕಾಯಿಯನ್ನು ಸರಿಯಾಗಿ ಹುರಿದುಕೊಳ್ಳದೆ ಬಳಸಬಾರದು
ಬೆಂಡೆಕಾಯಿಗೆ ಹುಳಿ ಅಂಶ ಹೆಚ್ಚು ಬೇಕು
ಈ ಸಂಗತಿಗಳನ್ನು ಮೊದಲು ಗಮನದಲ್ಲಿಟ್ಟುಕೊಂಡು ನಂತರ ಅಡುಗೆ ಮಾಡಿ. ಈ ಮೇಲೆ ಹೇಳಿದಂತೆ ನಿಗಾವಹಿಸಿದರೆ ಖಂಡಿತ ರುಚಿಕರವಾದ ಬೆಂಡೆಹುಳಿ ಮಾಡಬಹುದು. ಹಲವರು ಇದು ಲೋಳೆಯಾಗಿರುತ್ತದೆ ಎಂದೇ ಹೆಚ್ಚಾಗಿ ಉಪಯೋಗ ಮಾಡುವುದಿಲ್ಲ. ಆದರೆ ಇದರಲ್ಲಿ ಸಾಕಷ್ಟು ಉತ್ತಮ ಅಂಶಗಳಿದೆ. ದೇಹಕ್ಕೆ ಇದು ತಂಪು ನೀಡುತ್ತದೆ.
ಬೆಂಡೆಹುಳಿ ಮಾಡಲು ಬೇಕಾಗುವ ಸಾಮಗ್ರಿಗಳು
ಎಣ್ಣೆ, ಸಾಸಿವೆ, ಜೀರಿಗೆ, ಒಣ ಮೆಣಸು, ಚಕ್ಕೆ, ಲವಂಗ, ಕೊಬ್ಬರಿ ತುರಿ, ಬೆಂಡೆಕಾಯಿ, ಉಪ್ಪು, ಕರಿಬೇವು
ಮಧ್ಯಮ ಉರಿಯಲ್ಲಿ ಇದರ ಬಣ್ಣ ಬದಲಾಗುವವರೆಗೆ ಹುರಿಯಿರಿ. ಇದು ಸುಮಾರು 5-6 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಹುರಿದ ನಂತ, ಸ್ವಲ್ಪ ಕಂದು ಬಣ್ಣಕ್ಕೆ ಬಂದಿರುವುದನ್ನು ಖಾತರಿಪಡಿಸಿಕೊಂಡು ಅದನ್ನು ಬೇರೆ ಕಡೆ ತೆಗೆದಿಟ್ಟುಕೊಳ್ಳಿ. ಈಗ ಒಂದು ಮಸಾಲಾ ರೆಡಿ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಮೊದಲು ಹೊಂದಿಸಿಟ್ಟುಕೊಳ್ಳಿ ನಂತರ ಒಂದು ಪಾತ್ರೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಒಣ ಮೆಣಸು, ಚಕ್ಕೆ, ಲವಂಗ ಸ್ವಲ್ಪವೇ ಇಂಗು ಹಾಗೂ ಮೆಂತೆ ಇವೆಲ್ಲವನ್ನೂ ನೀವು ಹುರಿದುಕೊಳ್ಳಬೇಕು.
ಅದಾದ ನಂತರದಲ್ಲಿ ಹುರಿದಿಟ್ಟುಕೊಂಡ ಬೆಂಡೆಯನ್ನು ಒಂದು ಪಾತ್ರೆಗೆ ಹಾಕಿ. ರುಬ್ಬಲು ತಯಾರಿಸಿಕೊಂಡ ಎಲ್ಲ ಸಾಮಗ್ರಿಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಕಾಯಿತುರಿ ಸೇರಿಸಿಕೊಂಡು ರುಬ್ಬಿ. ಈ ರುಬ್ಬಿದ ಮಿಶ್ರಣವನ್ನು ಬೆಂಡೆಕಾಯಿ ಜೊತೆ ಮಿಕ್ಸ್ ಮಾಡಿ ಸರಿಯಾಗಿ ಕುದಿಸಿ. ಕುದಿಸುವಾಗ ಹುಣಸೆ ಹಣ್ಣು ಹಾಕಲು ಮರೆಯಬೇಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೇಕಿದ್ದರೆ ಚೂರು ಬೆಲ್ಲ ಸೇರಿಸಿಕೊಳ್ಳಿ. ಇಷ್ಟು ಮಾಡಿ ಬಿಸಿ ಬಿಸಿ ಅನ್ನದ ಜೊತೆ ಸವಿಯಿರಿ.