Roasted Brinjal chutney Recipe: ಸುಟ್ಟ ಬದನೆಕಾಯಿಯ ಚಟ್ನಿ ರೆಸಿಪಿ ಟ್ರೈ ಮಾಡಿ.. ಸರಳ ಮತ್ತು ಟೇಸ್ಟೀ ಪಾಕ ವಿಧಾನ ಇಲ್ಲಿದೆ..
ಕನ್ನಡ ಸುದ್ದಿ  /  ಜೀವನಶೈಲಿ  /  Roasted Brinjal Chutney Recipe: ಸುಟ್ಟ ಬದನೆಕಾಯಿಯ ಚಟ್ನಿ ರೆಸಿಪಿ ಟ್ರೈ ಮಾಡಿ.. ಸರಳ ಮತ್ತು ಟೇಸ್ಟೀ ಪಾಕ ವಿಧಾನ ಇಲ್ಲಿದೆ..

Roasted Brinjal chutney Recipe: ಸುಟ್ಟ ಬದನೆಕಾಯಿಯ ಚಟ್ನಿ ರೆಸಿಪಿ ಟ್ರೈ ಮಾಡಿ.. ಸರಳ ಮತ್ತು ಟೇಸ್ಟೀ ಪಾಕ ವಿಧಾನ ಇಲ್ಲಿದೆ..

ಬದನೆಕಾಯಿ, ಟೊಮೆಟೊ, ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಇದ್ದರೆ ಈ ಚಟ್ನಿಯನ್ನು ಮಾಡಿಬಿಡಬಹುದು. ಹಾಗಾದರೆ, ಇದನ್ನು ಮಾಡುವ ಬಗೆ ಹೇಗೆ? ಇಲ್ಲಿದೆ ನೋಡಿ ರೆಸಿಪಿ..

ಸುಟ್ಟ ಬದನೆಕಾಯಿಯ ಚಟ್ನಿ ರೆಸಿಪಿ ಟ್ರೈ ಮಾಡಿ.. ಸರಳ ಮತ್ತು ಟೇಸ್ಟೀ ಪಾಕ ವಿಧಾನ ಇಲ್ಲಿದೆ..
ಸುಟ್ಟ ಬದನೆಕಾಯಿಯ ಚಟ್ನಿ ರೆಸಿಪಿ ಟ್ರೈ ಮಾಡಿ.. ಸರಳ ಮತ್ತು ಟೇಸ್ಟೀ ಪಾಕ ವಿಧಾನ ಇಲ್ಲಿದೆ..

Brinjal chutney Recipe: ಮುಖ್ಯ ಖಾದ್ಯದ ಜತೆಗೆ ಅಡುಗೆ ರುಚಿಸಲು ಕೆಲ ಸೈಡ್‌ ಡಿಶ್‌ಗಳನ್ನು ಮಾಡಬೇಕಾಗುತ್ತದೆ. ಕೆಲವೊಮ್ಮೆ ಮಾಡಿದ್ದೇ ಮಾಡಿ ಬೇಸರ ಅನಿಸಿರಲೂಬಹುದು. ಹಾಗಾದರೆ, ಇವತ್ತಿನ ರೆಸಿಪಿ ಮಾಡುವುದೂ ಈಸಿ. ಟೇಸ್ಟ್‌ ವಿಚಾರದಲ್ಲಿಯೂ ಇದು ಹೊಸದು. ಬದನೆಕಾಯಿ, ಟೊಮೆಟೊ ಮತ್ತು ಮೆಣಸಿನಕಾಯಿ ಇದ್ದರೆ ಈ ಚಟ್ನಿಯನ್ನು ಮಾಡಿಬಿಡಬಹುದು. ಹಾಗಾದರೆ, ಇದನ್ನು ಮಾಡುವ ಬಗೆ ಹೇಗೆ? ಇಲ್ಲಿದೆ ನೋಡಿ ರೆಸಿಪಿ..

ಸುಟ್ಟ ಬದನೆಕಾಯಿ ಚಟ್ನಿಗೆ ಬೇಕಾಗುವ ಸಾಮಗ್ರಿಗಳು..

ದೊಡ್ಡದಾದ ಒಂದು ಬದನೆಕಾಯಿ

ನಾಲ್ಕು ಹಸಿ ಮೆಣಸಿನಕಾಯಿ

ಐದಾರು ಎಸಳು ಬೆಳ್ಳುಳ್ಳಿ

2 ಈರುಳ್ಳಿ

ಅರ್ಧ ಟೀ ಚಮಚ ಅರಿಶಿನ ಪುಡಿ

ಅರ್ಧ ಟೀ ಚಮಚ ಧನಿಯಾ ಪುಡಿ

ಅರ್ಧ ಟೀ ಚಮಚ ಖಾರದ ಪುಡಿ

ಕೊತ್ತಂಬರಿ ಪೌಡರ್.‌

ಮಾಡುವ ವಿಧಾನ

ಮೊದಲಿಗೆ ದೊಡ್ಡದಾದ ಬದನೆಕಾಯಿಯ ಹೊಟ್ಟೆಯನ್ನು ಸೀಳಿಕೊಳ್ಳಿ

ಹಾಗೆ ಸೀಳಿದ ಬದನೆಕಾಯಿಯಲ್ಲಿ ಬೆಳ್ಳುಳ್ಳಿ ಮತ್ತು ಇಡಿಯಾದ ಹಸಿಮೆಣಸಿನಕಾಯಿ ತುಂಬಿ

ಬಳಿಕ ರೆಡಿಯಾದ ಬದನೆಕಾಯಿ ಟೊಮೆಟೊವನ್ನು ನೇರವಾಗಿ ಗ್ಯಾಸ್‌ ಮೇಲೆ ಇಟ್ಟು ಬೆಂಕಿಗೆ ಬೇಯಿಸಿಕೊಳ್ಳಿ

ಬದನೆಕಾಯಿ ಹಣ್ಣು ಹಣ್ಣು ಆಗುತ್ತಿದ್ದಂತೆ, ಕೆಳಗಿಳಿಸಿ ಬದನೆಕಾಯಿ ಮತ್ತು ಟೊಮೆಟೊ ಮೇಲಿನ ಸಿಪ್ಪೆಯನ್ನು ಬಿಡಿಸಿಕೊಳ್ಳಿ.

ಒಂದು ಗ್ಲಾಸ್‌ ಸಹಾಯದಿಂದ ಒತ್ತಿ ಬದನೆ ಮತ್ತು ಟೊಮೆಟೊವನ್ನು ಪೇಸ್ಟ್‌ ಮಾಡಿಕೊಳ್ಳಿ

ಇತ್ತ ಪ್ಯಾನ್‌ ಮೇಲೆ ಬಾಣಲೆ ಇಟ್ಟು, ಎರಡು ಸ್ಪೂನ್‌ ಎಣ್ಣೆ ಹಾಕಿ

ಎಣ್ಣೆ ಕಾದ ಬಳಿಕ ಜೀರಿಗೆ, ಮೆಂತ್ಯೆ ಕಾಳು ಹಾಕಿ. ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಬೇಯಿಸಿ.

ಈ ಮಿಶ್ರಣಕ್ಕೆ ಧನಿಯಾ ಪೌಡರ್, ಕೆಂಪು ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬಾಡಿಸಿ.

ಹೀಗೆ ಸಿದ್ಧವಾದ ಮಿಶ್ರಣಕ್ಕೆ ಪೇಸ್ಟ್‌ ರೀತಿಯಲ್ಲಿ ರೆಡಿ ಮಾಡಿದ ಬದನೆಕಾಯಿ ಮಿಶ್ರಣವನ್ನು ಸೇರಿಸಿ ಬಾಡಿಸಿ.

Whats_app_banner