ಸ್ನೇಹವೆಂದರೆ ನಂಬಿಕೆ, ಸ್ನೇಹಿತರೆಂದರೆ ಧೈರ್ಯ, ಸ್ನೇಹವೇ ಬದುಕಿಗೆ ಆತ್ಮಸೈರ್ಯ; ನಿಶ್ಮಿತಾ ಕುಲಾಲ್‌ ಬರಹ-international friendship day 2024 opinion on friendship a note about friends and life who are real friends ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ನೇಹವೆಂದರೆ ನಂಬಿಕೆ, ಸ್ನೇಹಿತರೆಂದರೆ ಧೈರ್ಯ, ಸ್ನೇಹವೇ ಬದುಕಿಗೆ ಆತ್ಮಸೈರ್ಯ; ನಿಶ್ಮಿತಾ ಕುಲಾಲ್‌ ಬರಹ

ಸ್ನೇಹವೆಂದರೆ ನಂಬಿಕೆ, ಸ್ನೇಹಿತರೆಂದರೆ ಧೈರ್ಯ, ಸ್ನೇಹವೇ ಬದುಕಿಗೆ ಆತ್ಮಸೈರ್ಯ; ನಿಶ್ಮಿತಾ ಕುಲಾಲ್‌ ಬರಹ

ಈ ಸ್ನೇಹ ದೇವರು ನೀಡಿದ ನನಗೆ ದೊಡ್ಡ ವರ. ನನ್ನ ಸ್ನೇಹದಲ್ಲಿ ಕಾಳಜಿ, ಪ್ರೀತಿ, ರಕ್ಷಣೆ, ನಂಬಿಕೆ, ಶುದ್ಧ ಎಲ್ಲವೂ ಇದೆ. ನಮ್ಮದು ಎರಡು ಜೀವ ಒಂದೇ ಭಾವ. ನನಗೆ ಸ್ನೇಹವೇ ಬದುಕು, ಸ್ನೇಹಿತರೇ ಧೈರ್ಯ. ನಮ್ಮ ಸ್ನೇಹಕ್ಕೊಂದು ಸಲಾಂ (ಬರಹ: ನಿಶ್ಮಿತಾ ಕುಲಾಲ್‌)

ಸ್ನೇಹವೆಂದರೆ ನಂಬಿಕೆ, ಸ್ನೇಹಿತರೆಂದರೆ ಧೈರ್ಯ, ಸ್ನೇಹವೇ ಬದುಕಿನ ಆತ್ಮಸೈರ್ಯ; ನಿಶ್ಮಿತಾ ಕುಲಾಲ್‌ ಬರಹ
ಸ್ನೇಹವೆಂದರೆ ನಂಬಿಕೆ, ಸ್ನೇಹಿತರೆಂದರೆ ಧೈರ್ಯ, ಸ್ನೇಹವೇ ಬದುಕಿನ ಆತ್ಮಸೈರ್ಯ; ನಿಶ್ಮಿತಾ ಕುಲಾಲ್‌ ಬರಹ

ಸ್ನೇಹ ಎಂಬುದು ಗಟ್ಟಿಯಾದ ಸಂಬಂಧ. ಒಂದು ಸಲ ಮನಸ್ಸಿನಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ನಂಬಿಕೆ, ವಿಶ್ವಾಸ ಎನ್ನುವುದು ಬಂದರೆ ಅವರು ನಮ್ಮ ಆತ್ಮೀಯ ಸ್ನೇಹಿತರಾಗುತ್ತಾರೆ. ಬೇರೆಲ್ಲೂ ಸಿಗದ ಎಷ್ಟೋ ಪಾಠಗಳನ್ನು ನಾವು ಸ್ನೇಹಿತರಿಂದ ಕಲಿಯುತ್ತೇವೆ. ನಿಜವಾದ ಸ್ನೇಹಿತರು ನಮ್ಮ ಆಸ್ತಿಯಾಗುತ್ತಾರೆ. ಏಕೆಂದರೆ ಅವರು ನಮ್ಮ ನೋವು, ನಲಿವು ವಿಷಯಗಳನ್ನು ಹಂಚಿಕೊಂಡು ನಮ್ಮ ಸಂತೋಷದ ಭಾಗವಾಗುತ್ತಾರೆ.

ನನ್ನ ಜೀವನದಲ್ಲಿ ಅತಿ ದೊಡ್ಡ ಶಕ್ತಿ ನನ್ನ ಮೂರು ಮಂದಿ ಗೆಳತಿಯರು. ಒಬ್ಬ ಗೆಳತಿಯ ಬಗ್ಗೆ ಹೇಳುತ್ತೇನೆ. ಈ ನನ್ನ ಗೆಳತಿಗೆ ಧೈರ್ಯ ತುಂಬಾನೇ ಜಾಸ್ತಿ. ಯಾವುದೇ ಕೆಲಸ ನನ್ನ ಕೈಯಲ್ಲಿ ಆಗದೇ ಇದ್ದಾಗ ಅದರ ಬಗ್ಗೆ ಗಮನಹರಿಸಿ ಕೆಲವು ಸಲಹೆಗಳನ್ನು ನೀಡಿ ಪೂರ್ತಿ ಮಾಡುತ್ತಾಳೆ. ನಮ್ಮ ಹಿರಿಯ ಸಹೋದ್ಯೋಗಿಗಳು ಯಾವುದೇ ಒಂದು ಕೆಲಸ ನೀಡಿದಾಗ ನಾವಿಬ್ಬರು ಸೇರಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ನಮ್ಮ ಸ್ನೇಹದಲ್ಲಿ ಕೋಪ, ಬೇಸರ ಎನ್ನುವುದು ಸುಳಿಯಲೇ ಇಲ್ಲ. ನನ್ನ ವೈಯಕ್ತಿಕ ಜೀವನದ ಕೆಲವು ವಿಷಯಗಳನ್ನು ನನ್ನ ಗೆಳತಿಯ ಬಳಿ ಹೇಳಿದಾಗ ಧೈರ್ಯ ತುಂಬಿ, ಸಲಹೆಗಳನ್ನು ಎಂತಹ ಸಂದರ್ಭಗಳನ್ನೂ ಎದುರಿಸುವ ಶಕ್ತಿ ನೀಡಿದ್ದಾರೆ. ಅಡುಗೆಯ ವಿಚಾರದಲ್ಲಿ ಕೂಡ ನಾವು ಚರ್ಚೆ ಮಾಡಿಯೇ ರುಚಿಯಾದ ಖಾದ್ಯಗಳನ್ನು ತಯಾರಿಸುತ್ತಿದ್ದೆವು. 

ಆರೋಗ್ಯದಲ್ಲಿ ಏರುಪೇರಾದಾಗ ಜೀವನವೇ ಮುಗಿದು ಹೋಯಿತು ಎನ್ನುವ ಸಂದರ್ಭದಲ್ಲಿ ನನಗೆ ಧೈರ್ಯ ಹೇಳಿ ಸಮಾಧಾನದ ಮಾತುಗಳನ್ನು ಆಡಿ ಭರವಸೆಯ ತುಂಬಿದವರು ನನ್ನ ಗೆಳತಿಯರು. ನನಗೆ ಗೊತ್ತಿಲ್ಲದ ಮನೆ ಮದ್ದುಗಳ ಸಲಹೆಗಳನ್ನು ನೀಡಿ ಆರೋಗ್ಯ ಕಾಪಾಡಿದ್ದಾರೆ. ಕೆಲವೊಂದು ಸಲ ನಾನು ನನ್ನ ಸ್ನೇಹಿತೆಯನ್ನು ಆಯುರ್ವೇದಿಕ್ ಡಾಕ್ಟರ್‌ ಎಂದು ಕರೆದಿದ್ದಿದೆ. ಹಬ್ಬ ಹರಿದಿನಗಳಲ್ಲಿ ಒಟ್ಟಾಗಿ ಬಟ್ಟೆ ಖರೀದಿ ಮಾಡುತ್ತೇವೆ, ದೇವಸ್ಥಾನಗಳಿಗೆ ಭೇಟಿ ನೀಡುತ್ತೇವೆ. ಒಂದು ದಿನದಲ್ಲಿ ನಡೆಯುವ ಪ್ರತಿಯೊಂದು ಕೆಲಸದ ಬಗ್ಗೆಯೂ ಕೂಡ ನಾವು ಮಾಹಿತಿಗಳನ್ನು ರವಾನೆ ಮಾಡಿಕೊಳ್ಳುತ್ತಿರುತ್ತೇವೆ. ಸಮಯ ಸಿಕ್ಕಾಗ ಫೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತೇವೆ. ನಾನು ನನ್ನ ತಾಯಿಯ ಬಳಿ ಹೇಳದೇ ಇರುವ ಎಷ್ಟೋ ವಿಷಯಗಳನ್ನು ನನ್ನ ಗೆಳತಿಯ ಬಳಿ ಹಂಚಿಕೊಂಡಿದ್ದೇನೆ. ಯಾವುದೇ ಒಂದು ವಿಷಯವನ್ನು ನನ್ನ ಗೆಳತಿಗೆ ಮೊದಲು ತಿಳಿಸಿದರೆ ನನಗೊಂದು ಮನಸ್ಸಿಗೆ ಏನೋ ಒಂದು ಸಮಾಧಾನ.

ನನ್ನ ಕೈಯಲ್ಲಿ ಕೆಲವೊಂದು ಕೆಲಸಗಳು ಆಗದೇ ಇದ್ದಾಗ ನಾನು ಬೇಸರದಲ್ಲಿ ಕುಳಿತಾಗ ನನ್ನ ಗೆಳತಿ ಅದೇ ಕೆಲಸವನ್ನು ಮುಂದುವರಿಸಲು ಪ್ರೇರೇಪಿಸುತ್ತಾಳೆ. ಆ ಒಂದು ಸಮಾಧಾನದ ಮಾತಿನಿಂದ ಆ ಕೆಲಸವು ಪೂರ್ಣಗೊಂಡ ಎಷ್ಟು ಘಟನೆಗಳು ನನ್ನ ಜೀವನದಲ್ಲಿ ನಡೆದಿದೆ. ಇತರರನ್ನು ಬೇಗ ನಂಬುವ ಸ್ವಭಾವ ನನ್ನದು. ಯಾರು ಏನು ಕೆಲಸ ಕೊಟ್ಟರು ಅದನ್ನು ಮಾಡುತಿದ್ದೆ. ಮತ್ತೆ ನನಗೆ ಅವರಿಂದಲೇ ಬೇಸರದ ಘಟನೆಗಳು ಆಗ್ತಾ ಇತ್ತು. ಆಗ ನನ್ನ ಸ್ನೇಹಿತೆ ಇತರರನ್ನು ಹೇಗೆ ನಂಬುವುದು ಎಂಬುದನ್ನು ಮನವರಿಕೆ ಮಾಡಿ ಕೊಟ್ಟಿದ್ದಳು. ಹಾಗೆಯೇ ನನ್ನ ವಯಕ್ತಿಕ ಜೀವನದಲ್ಲಿ ನಡೆದ ಕೆಲವು ಕಹಿ ಘಟನೆಗಳಿಂದ ಹೊರಬರಲು ಆಗದೆ ಇದ್ದಾಗ ಆ ಸಂದರ್ಭದಲ್ಲಿ ನನಗೆ ತುಂಬಾ ಧೈರ್ಯದ ಮಾತುಗಳನ್ನು ಹೇಳಿ ನನ್ನ ಜೀವನದ ದಿಕ್ಕನ್ನೇ ಬದಲಿಸಿದ ಕೀರ್ತಿ ನನ್ನ ಗೆಳತಿಯದ್ದು.

ನನ್ನ ಸ್ನೇಹದಿಂದ ನಾನು ಜೀವನದಲ್ಲಿ ಕೆಲ ವಿಷಯಗಳನ್ನು ಅರಿತುಕೊಂಡಿದ್ದೇನೆ. ನನ್ನನ್ನು ನಾನು ಎಲ್ಲಾ ವಿಷಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಈ ಸ್ನೇಹ ದೇವರು ನೀಡಿದ ನನಗೆ ದೊಡ್ಡ ವರ. ನನ್ನ ಸ್ನೇಹದಲ್ಲಿ ಕಾಳಜಿ, ಪ್ರೀತಿ, ರಕ್ಷಣೆ, ನಂಬಿಕೆ, ಶುದ್ಧ ಮನಸ್ಸುಗಳ ನಡುವಿನ ನಂಬಿಕೆ, ಎರಡು ಜೀವ ಒಂದೇ ಭಾವನೆ. ನಮ್ಮಿಬ್ಬರ ಸ್ನೇಹದಲ್ಲಿ ಕೆಲವು ವಿಷಯದಲ್ಲಿ ಒಂದೇ ರೀತಿಯ ಅಭಿಪ್ರಾಯಗಳು ಇರುತ್ತದೆ .ಇನ್ನೊಂದು ಜನ್ಮದಲ್ಲೂ ನೀನೇ ಗೆಳತಿಯಾಗಿ ಸಿಗು ಮೈ ಡಿಯರ್‌ ಫ್ರೆಂಡ್‌

ಬರಹ: ನಿಶ್ಮಿತಾ ಕುಲಾಲ್‌