ಕನ್ನಡ ಸುದ್ದಿ  /  ಜೀವನಶೈಲಿ  /  Yoga For Hair Fall: ಕೂದಲು ಉದುರುವ ಸಮಸ್ಯೆಗೆ ಯೋಗಾಸನವೇ ಮದ್ದು; ಹೊಸ ಕೂದಲು ಬೆಳೆಯಲು ನೆರವಾಗುವ ಆಸನಗಳಿವು; ನೀವೂ ಪ್ರಯತ್ನಿಸಿ

Yoga For Hair Fall: ಕೂದಲು ಉದುರುವ ಸಮಸ್ಯೆಗೆ ಯೋಗಾಸನವೇ ಮದ್ದು; ಹೊಸ ಕೂದಲು ಬೆಳೆಯಲು ನೆರವಾಗುವ ಆಸನಗಳಿವು; ನೀವೂ ಪ್ರಯತ್ನಿಸಿ

Yoga For Hair Fall: ಇತ್ತೀಚೆಗೆ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತಿದೆ. ಕಲುಷಿತ ನೀರು, ವಾತಾವರಣ ಹಾಗೂ ರಾಸಾಯನಿಕ ಅಂಶಗಳುಳ್ಳ ಉತ್ಪನ್ನಗಳು ಇದಕ್ಕೆ ಕಾರಣವಿರಬಹುದು. ಆದರೆ ಕೆಲವು ಸುಲಭ ಯೋಗಾಸನಗಳ ನಿರಂತರ ಅಭ್ಯಾಸವು ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲ, ಹೊಸ ಕೂದಲ ಬೆಳವಣಿಗೆಗೂ ಇದು ಸಹಕಾರಿ.

ಕೂದಲು ಉದುರುವುದನ್ನು ತಡೆಯಲು ನೆರವಾಗುವ ಆಸನಗಳು
ಕೂದಲು ಉದುರುವುದನ್ನು ತಡೆಯಲು ನೆರವಾಗುವ ಆಸನಗಳು

ಯೋಗ ಮಾಡುವುದರಿಂದ ದೇಹ ಹಾಗೂ ಮನಸ್ಸಿಗೆ ಹಲವು ರೀತಿಯ ಪ್ರಯೋಜನಗಳಿವೆ ಎಂಬುದನ್ನು ನಾವು ತಿಳಿದ್ದಿದ್ದೇವೆ. ಯೋಗವು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ನಿವಾರಣೆಗೆ ಸಹಕಾರಿ. ಅದಾಗ್ಯೂ ನಿರಂತರ ಒತ್ತಡ, ಅಸಮರ್ಪಕ ಆಹಾರಕ್ರಮ, ಜೀವನಶೈಲಿ ಸೇರಿದಂತೆ ಅನುವಂಶೀಯ ಸಮಸ್ಯೆಗಳಿಂದ ಕೂದಲ ಉದುರುವ ಸಮಸ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಇತ್ತೀಚೆಗೆ ಪ್ರತಿಯೊಬ್ಬರನ್ನೂ ಕಾಡುತ್ತಿರುವ ಸಮಸ್ಯೆಗಳಲ್ಲಿ ಇದೂ ಒಂದು. ಕೂದಲು ಉದುರಲು ಹಲವು ಅಂಶಗಳು ಕಾರಣವಾಗಬಹುದು. ಆದರೆ ಯೋಗಾಸನದ ಮೂಲಕ ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲ, ಹೊಸ ಕೂದಲ ಬೆಳವಣಿಗೆಯೂ ಸಾಧ್ಯ.

ಟ್ರೆಂಡಿಂಗ್​ ಸುದ್ದಿ

ಕೂದಲು ಉದುರುವುದನ್ನು ತಡೆಯುವ ಹಾಗೂ ಕೂದಲ ಬೆಳವಣಿಗೆಯನ್ನು ಉತ್ತೇಜಿಸಲು ನೆರವಾಗುವ ಕೆಲವು ಯೋಗ ಆಸನಗಳು ಇಲ್ಲಿವೆ. ಇವು ಕೂದಲು ಉದುರುವುದನ್ನು ತ್ವರಿತವಾಗಿ ಶಮನ ಮಾಡುತ್ತವೆ.

ಬಾಲಯಂ ಮುದ್ರಾ

ಎರಡು ಕೈ ಉಗುರುಗಳನ್ನು ಪರಸ್ಪರ ಉಜ್ಜುವ ಪ್ರಕ್ರಿಯೆಯನ್ನು ಬಲಯಂ ಮುದ್ರೆ ಎಂದು ಕರೆಯಲಾಗುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡಲು ಇದು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ದಿನದಲ್ಲಿ 10 ರಿಂದ 15 ನಿಮಿಷಗಳ ಕಾಲ ಇದನ್ನು ಮಾಡಬಹುದು.

ತಲೆ ಕೆಳಗಾಗಿ ನಿಲ್ಲುವುದು (ಶೀರ್ಷಾಸನ)

ತಲೆ ಕೆಳಗೆ ಮಾಡಿ, ಕಾಲು ಮೇಲೆ ಮಾಡಿ ತಲೆಯ ಮೇಲೆ ನಿಲ್ಲುವಂತಹ ಯೋಗಾಸನವು ಕೂದಲಿಗೆ ಆಮ್ಲಜನಕವನ್ನು ಒದಗಿಸುತ್ತದೆ ಮತ್ತು ಕೂದಲಿಗೆ ಶಕ್ತಿ ಒದಗಿಸುತ್ತದೆ. ಶೀರ್ಷಾಸನ ಎಂದು ಆ ಆಸನವನ್ನು ಕರೆಯಲಾಗುತ್ತದೆ.

ನಾಯಿಯಂತೆ ದೇಹವನ್ನು ಮುಂದಕ್ಕೆ ಬಗ್ಗಿಸುವುದು

ಈ ಆಸನವು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ಆತಂಕ ಹಾಗೂ ಒತ್ತಡವನ್ನು ನಿವಾರಿಸುತ್ತದೆ. ಅಲ್ಲದೆ ಜೀರ್ಣಕ್ರಿಯೆ ಹೆಚ್ಚಲು ಇದು ಸಹಕಾರಿ. ಉತ್ತಮ ಜೀರ್ಣಾಂಗ ವ್ಯವಸ್ಥೆಯ ಕೂದಲಿಗೆ ಹೆಚ್ಚಿನ ಪೋಷಕಾಂಶಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

ವಜ್ರಾಸನ

ವಜ್ರಾಸನವು ಕಾಲುಗಳನ್ನು ಹಿಂದೆ ಚಾಚಿ ಕಾಲಿನ ಮೇಲೆ ನಿತಂಬವನ್ನು ಉರಿ ಕುಳಿತುಕೊಳ್ಳುವ ಆಸನ. ಈ ಆಸನವು ಒತ್ತಡವನ್ನು ಕಡಿಮೆ ಮಾಡುತ್ತದೆ. ಒತ್ತಡವು ಕೂದಲು ಉದುರಲು ಒಂದು ಪ್ರಮುಖ ಕಾರಣವಾಗಿದೆ.

ಬಾಲಾಸನ

ಇದು ಕಾಲನ್ನು ಹಿಂದಕ್ಕೆ ಮಡಚಿ, ನಿತಂಬದ ಮೇಲೆ ಕುಳಿತು ದೇಹವನ್ನು ಮುಂದಕ್ಕೆ ಬಾಗಿಸಿ, ಹಣೆಯನ್ನು ನೆಲಕ್ಕೆ ತಾಗಿಸುವಂತಹ ಆಸನವಾಗಿದೆ. ಈ ಆಸನವು ಇಡೀ ದೇಹಕ್ಕೆ ವಿಶ್ರಾಂತಿ ಒದಗಿಸುತ್ತದೆ. ಈ ಆಸನದಿಂದ ಹಣೆಗೆ ಮಸಾಜ್‌ ಮಾಡಿದ ಅನುಭವ ಸಿಗುತ್ತದೆ. ಒಂದು ಒಟ್ಟಾರೆ ದೇಹಕ್ಕೆ ವಿಶ್ರಾಂತಿ ಸಿಗುವಂತೆ ಮಾಡಿ ಕೂದಲು ಉದುರುವುದನ್ನು ತಡೆಯಲು ನೆರವಾಗುತ್ತದೆ.

ಕೂದಲ ಉದುರಲು ಹಲವು ಆರೋಗ್ಯ ಸಮಸ್ಯೆಗಳು ಕಾರಣವಾಗಬಹುದು. ಆ ಕಾರಣಕ್ಕೆ ನಮ್ಮ ಒಟ್ಟಾರೆ ದೈಹಿಕ ಆರೋಗ್ಯ ಸಮಸ್ಯೆಗಳ ಪರಿಹಾರದತ್ತ ಹೆಚ್ಚು ಗಮನ ಕೊಡಬೇಕು. ಆ ಕಾರಣಕ್ಕೆ ದೇಹ ಹಾಗೂ ಮನಸ್ಸು ಎರಡನ್ನೂ ಭಾದಿಸುವ ಸಮಸ್ಯೆಗಳ ನಿವಾರಣೆಗೆ ಯೋಗವು ಉತ್ತಮ ಮಾರ್ಗವಾಗಿದೆ.

ಇದನ್ನೂ ಓದಿ

Wellness: ಫಿಟ್ನೆಸ್ ಮತ್ತು ಆರೋಗ್ಯಕ್ಕಾಗಿ ಯೋಗ ಮಾಡಿ, ಯೋಗಾಸನ ಕಲಿಕೆಗೆ ನೆರವಾಗುವ 5 ಆ್ಯಪ್‌ಗಳ ವಿವರ ಇಲ್ಲಿದೆ

ಯೋಗವನ್ನು ಗುರುಮುಖೇನ ಕಲಿಯಬೇಕು. ಆದರೆ, ಈಗಿನ ಆಧುನಿಕ ಜಗತ್ತಿನಲ್ಲಿ ಕೆಲವೊಂದು ಸರಳ ಯೋಗಗಳನ್ನು ಆ್ಯಪ್‌ಗಳ ಮೂಲಕವೂ ಕಲಿಯಬಹುದು. ಆ್ಯಪ್‌ ಮಾತ್ರವಲ್ಲದೆ ಯೂಟ್ಯೂಬ್‌ ವಿಡಿಯೋ ನೋಡಿಯೂ ಕಲಿಯಬಹುದು. ಈಗಿನ ಒತ್ತಡ, ಜಂಜಾಟದ ಬದುಕಿನಲ್ಲಿ ರಿಲಾಕ್ಸ್‌ ಆಗಲು, ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ, ಯೋಗ, ವರ್ಕೌಟ್‌ ಮಾಡುತ್ತಿರಬೇಕು. ಬ್ಯುಸಿ ಶೆಡ್ಯೂಲ್‌ನಿಂದಾಗಿ ಯೋಗ ಕ್ಲಾಸ್‌ಗೆ ಹೋಗಲಾಗುತ್ತಿಲ್ಲ ಎನ್ನುವವರು ಮೊಬೈಲ್‌ ಆ್ಯಪ್‌ ಮೂಲಕ ಯೋಗ ಕಲಿಯಲು ನೆರವಾಗುವಂತಹ ಆ್ಯಪ್‌ಗಳನ್ನು ಪ್ರಯತ್ನಿಸಬಹುದು. ಮೊದಲಿಗೆ ಸರಳ ಯೋಗ ಕಲಿತುಕೊಳ್ಳಿ. ಕಠಿಣ ಯೋಗವನ್ನು ಆ್ಯಪ್‌ ಮೂಲಕ ಕಲಿಯುವುದು ಸೂಕ್ತವಲ್ಲ. ಪರಿಣಿತರ ಮಾರ್ಗದರ್ಶನದಲ್ಲಿ ಕಲಿಯಬೇಕು. ಆಂಡ್ರಾಯ್ಡ್‌ ಮತ್ತು ಐಒಎಸ್‌ ಆ್ಯಪ್‌ ಸ್ಟೋರ್‌/ ಪ್ಲೇ ಸ್ಟೋರ್‌ಗಳಲ್ಲಿ ಲಭ್ಯವಿರುವ ಐದು ಪ್ರಮುಖ ಯೋಗ ಆ್ಯಪ್‌ಗಳನ್ನು ಪರಿಚಯ ಮಾಡಿಕೊಳ್ಳೋಣ.

ವಿಭಾಗ