ಕನ್ನಡ ಸುದ್ದಿ  /  Lifestyle  /  Wellness Best Yoga Apps For Fitness Health Download Yoga Apps Smartphone Android Apple Iphone Pcp

Wellness: ಫಿಟ್ನೆಸ್ ಮತ್ತು ಆರೋಗ್ಯಕ್ಕಾಗಿ ಯೋಗ ಮಾಡಿ, ಯೋಗಾಸನ ಕಲಿಕೆಗೆ ನೆರವಾಗುವ 5 ಆ್ಯಪ್‌ಗಳ ವಿವರ ಇಲ್ಲಿದೆ

Best Yoga apps: ಕೆಲವು ಸರಳ ಯೋಗಾಸನಗಳನ್ನು ಕಲಿಯಲು ಸ್ಮಾರ್ಟ್‌ಫೋನ್‌ ನೆರವು ಪಡೆಯಬಹುದು. ಅತ್ಯುತ್ತಮ ಆರೋಗ್ಯ ಮತ್ತು ಫಿಟ್ನೆಸ್‌ ಬಯಸುವವರು ಗಮನಿಸಬಹುದಾದ ಐದು ಅತ್ಯುತ್ತಮ ಆ್ಯಪ್‌ಗಳ ಪರಿಚಯವನ್ನು ಇಲ್ಲಿ ನೀಡಲಾಗಿದೆ.

Wellness: ಫಿಟ್ನೆಸ್ ಮತ್ತು ಆರೋಗ್ಯಕ್ಕಾಗಿ ಯೋಗ ಮಾಡಿ, ಯೋಗ ಕಲಿಕೆಗೆ ನೆರವಾಗುವ 5 ಆ್ಯಪ್‌ಗಳ ವಿವರ ಇಲ್ಲಿದೆ
Wellness: ಫಿಟ್ನೆಸ್ ಮತ್ತು ಆರೋಗ್ಯಕ್ಕಾಗಿ ಯೋಗ ಮಾಡಿ, ಯೋಗ ಕಲಿಕೆಗೆ ನೆರವಾಗುವ 5 ಆ್ಯಪ್‌ಗಳ ವಿವರ ಇಲ್ಲಿದೆ (Pixabay)

ಯೋಗವನ್ನು ಗುರುಮುಖೇನ ಕಲಿಯಬೇಕು. ಆದರೆ, ಈಗಿನ ಆಧುನಿಕ ಜಗತ್ತಿನಲ್ಲಿ ಕೆಲವೊಂದು ಸರಳ ಯೋಗಗಳನ್ನು ಆ್ಯಪ್‌ಗಳ ಮೂಲಕವೂ ಕಲಿಯಬಹುದು. ಆ್ಯಪ್‌ ಮಾತ್ರವಲ್ಲದೆ ಯೂಟ್ಯೂಬ್‌ ವಿಡಿಯೋ ನೋಡಿಯೂ ಕಲಿಯಬಹುದು. ಈಗಿನ ಒತ್ತಡ, ಜಂಜಾಟದ ಬದುಕಿನಲ್ಲಿ ರಿಲಾಕ್ಸ್‌ ಆಗಲು, ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ, ಯೋಗ, ವರ್ಕೌಟ್‌ ಮಾಡುತ್ತಿರಬೇಕು. ಬ್ಯುಸಿ ಶೆಡ್ಯೂಲ್‌ನಿಂದಾಗಿ ಯೋಗ ಕ್ಲಾಸ್‌ಗೆ ಹೋಗಲಾಗುತ್ತಿಲ್ಲ ಎನ್ನುವವರು ಮೊಬೈಲ್‌ ಆ್ಯಪ್‌ ಮೂಲಕ ಯೋಗ ಕಲಿಯಲು ನೆರವಾಗುವಂತಹ ಆ್ಯಪ್‌ಗಳನ್ನು ಪ್ರಯತ್ನಿಸಬಹುದು. ಮೊದಲಿಗೆ ಸರಳ ಯೋಗ ಕಲಿತುಕೊಳ್ಳಿ. ಕಠಿಣ ಯೋಗವನ್ನು ಆ್ಯಪ್‌ ಮೂಲಕ ಕಲಿಯುವುದು ಸೂಕ್ತವಲ್ಲ. ಪರಿಣಿತರ ಮಾರ್ಗದರ್ಶನದಲ್ಲಿ ಕಲಿಯಬೇಕು. ಆಂಡ್ರಾಯ್ಡ್‌ ಮತ್ತು ಐಒಎಸ್‌ ಆ್ಯಪ್‌ ಸ್ಟೋರ್‌/ ಪ್ಲೇ ಸ್ಟೋರ್‌ಗಳಲ್ಲಿ ಲಭ್ಯವಿರುವ ಐದು ಪ್ರಮುಖ ಯೋಗ ಆ್ಯಪ್‌ಗಳನ್ನು ಪರಿಚಯ ಮಾಡಿಕೊಳ್ಳೋಣ.

ಯೋಗಿಫಿ (YogiFi)

ಇದು ವೈಯಕ್ತಿಕ ಯೋಗ ಗ್ಯಾಡ್ಜೆಟ್‌ಗಳನ್ನು ಹೊಂದಿದೆ. ಇದರಲ್ಲಿ ಥೆರಪಿ ಸೆಸನ್‌ಗಳೂ ಇವೆ. ಪ್ರತಿಯೊಬ್ಬರ ಫಿಟ್‌ನೆಸ್‌ ಮತ್ತು ಮಾನಸಿಕ ಆರೋಗ್ಯದ ಪ್ರಯಾಣದ ಕುರಿತು ಇದು ನಿಗಾ ವಹಿಸುತ್ತದೆ. ಪ್ರತಿನಿತ್ಯ ನಮ್ಮ ಬೆಳವಣಿಗೆಯ ಪ್ರಗತಿಯನ್ನು ಪಡೆಯಬಹುದು. ಯೋಗಿಎಫ್‌ಐ ಎನ್ನುವುದು ಪೇಟೆಂಟೆಡ್‌ ತಂತ್ರಜ್ಞಾನ ಹೊಂದಿದ್ದು, ನಿಮ್ಮ ಯೋಗ ಭಂಗಿಯನ್ನು ಸ್ವಯಂಚಾಲಿತವಾಗಿ ಗಮನಿಸುತ್ತದೆ. ತಪ್ಪಾದ ಭಂಗಿಯನ್ನು ತಿದ್ದಿಕೊಳ್ಳಬಹುದು. ರಿಯಲ್‌ ಟೈಮ್‌ ಫೀಡ್‌ಬ್ಯಾಕ್‌ ನೀಡುವುದರಿಂದ ಸಮರ್ಪಕವಾಗಿ ಯೋಗ ಮಾಡಲು ಇದು ಪೂರಕ. ಇದನ್ನು ಥರ್ಡ್‌ಪಾರ್ಟಿ ಸ್ಮಾರ್ಟ್‌ ಕೈಗಡಿಯಾರಗಳು ಮತ್ತು ಸ್ಮಾರ್ಟ್‌ ಅಸಿಸ್ಟೆಂಟ್‌ ಸಾಧನಗಳಿಗೆ ಕನೆಕ್ಟ್‌ ಮಾಡಿ ಬಳಸಬಹುದು.

ಆಸನ ರೆಬೆಲ್‌: ಗೆಟ್‌ ಇನ್‌ ಶೇಪ್‌ (Asana Rebel: Get in Shape)

ಫಿಟ್‌ ಆಗಿರಲು ಬಯಸುವವರು, ತೂಕ ಇಳಿಸಿಕೊಳ್ಳಲು ಬಯಸುವವರು, ಆರೋಗ್ಯಕರ ಜೀವನಶೈಲಿ ಆರಂಭಿಸಲು ಬಯಸುವವರಿಗೆ ಸೂಕ್ತವಾದ ಯೋಗ ಮತ್ತು ಫಿಟ್ನೆಸ್‌ ಆ್ಯಪ್‌ ಇದಾಗಿದೆ. ನಿಮ್ಮ ದೇಹ ತೂಕ ಕಳೆದುಕೊಳ್ಳಲು, ಕ್ಯಾಲೋರಿ ಬರ್ನ್‌ ಮಾಡಲು, ಫಿಟ್ಟಾಗಿರಲು, ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಉತ್ತಮಪಡಿಸಿಲು ಪೂರಕವಾದ ಹಲವು ಮಾಹಿತಿಗಳು ಮತ್ತು ಸೂತ್ರಗಳು ಇದರಲ್ಲಿವೆ. ಇಂಗ್ಲಿಷ್, ಫ್ರೆಂಚ್, ಜರ್ಮನ್, ಇಟಾಲಿಯನ್, ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಈ ಆ್ಯಪ್‌ ಲಭ್ಯವಿದೆ.

ಪಾಕೆಟ್‌ ಯೋಗ (Pocket Yoga)

ಮನೆಯಲ್ಲಿ ನಿಮಗೆ ಸಮಯ ಸಿಕ್ಕಾಗ ವ್ಯಾಯಾಮ, ಯೋಗ ಮಾಡಲು ಈ ಪಾಕೆಟ್‌ ಯೋಗ ಆ್ಯಪ್‌ ಸಹಕಾರಿ. ಯೋಗ ಮ್ಯಾಟ್‌ ರೆಡಿಯಾಗಿಟ್ಟುಕೊಂಡು ಈ ಮೊಬೈಲ್‌ ಆ್ಯಪ್‌ ತೆರೆದರೆ ಅದು ನಿಮಗೆ ಮಾರ್ಗದರ್ಶನ ನೀಡುತ್ತದೆ. ವಿವಿಧ ಅವಧಿಗಳ ಸೆಷನ್‌ಗಳು ಲಭ್ಯ ಇವೆ. ಪ್ರತಿಯೊಂದು ಯೋಗ ಯಾವ ರೀತಿ ಮಾಡಬೇಕು, ಅದರ ಪ್ರಯೋಜನಗಳ ವಿವರವೂ ಇದರಲ್ಲಿದೆ.

ಯೋಗ ವೇಕ್‌ಅಪ್‌ (Yoga Wake Up)

ಅತ್ಯುತ್ತಮ ಮನಶಾಂತಿಗೆ ಪೂರಕವಾಗಿ ಧ್ಯಾನ ನಡೆಸಲು ಈ ಆ್ಯಪ್‌ ನೆರವಾಗುತ್ತದೆ. ಈ ಆ್ಯಪ್‌ ಅನ್ನು ಅಲಾರಂ ಕ್ಲಾಕ್‌ ಆಗಿಯೂ ಇಟ್ಟುಕೊಳ್ಳಬಹುದು. ನಿಮ್ಮ ಸುಂದರ ದಿನದ ಆರಂಭಕ್ಕೆ ಸೂಕ್ತವಾಗುವಂತೆ ಈ ಆ್ಯಪ್‌ ನಿಮ್ಮನ್ನು ಎಚ್ಚರಪಡಿಸುತ್ತದೆ. ವಿವಿಧ ದೇಹ ರಚನೆಗೆ ತಕ್ಕಂತೆ ಯೋಗಗಳನ್ನೂ ಈ ಆ್ಯಪ್‌ ಸೂಚಿಸುತ್ತದೆ.

ದಿ ಅಂಡರ್‌ಬೆಲ್ಲಿ (The Underbelly)

ಯೋಗ ಗುರು ಜಾಸ್ಮೈನ್‌ ಸ್ಟಾನ್ಲಿ ಅವರು ಆರಂಭಿಸಿದ ಈ ಆ್ಯಪ್‌ ಕೂಡ ಜನಪ್ರಿಯ ಯೋಗ ಆ್ಯಪ್‌ಗಳಲ್ಲಿ ಒಂದಾಗಿದೆ. ಉಸಿರಾಟದ ವ್ಯಾಯಾಮ, ಡೈನಾಮಿಕ್‌ ಸ್ಟ್ರೆಚ್‌ಗಳು ಸೇರಿದಂತೆ ವಿವಿಧ ಆಯ್ಕೆಗಳನ್ನು ಇದರಲ್ಲಿ ಪಡೆಯಬಹುದು.

ವಿಭಾಗ