ಕನ್ನಡ ಸುದ್ದಿ  /  ಜೀವನಶೈಲಿ  /  ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ಲಡಾಖ್ ಪ್ರವಾಸ; ದಿನಾಂಕ, ಟಿಕೆಟ್ ದರ ಮಾಹಿತಿ ತಿಳಿಯಿರಿ

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ಲಡಾಖ್ ಪ್ರವಾಸ; ದಿನಾಂಕ, ಟಿಕೆಟ್ ದರ ಮಾಹಿತಿ ತಿಳಿಯಿರಿ

ಪ್ರವಾಸಿಗರ ಸ್ವರ್ಗ ಅಂತಲೇ ಕರೆಯುವ ಲಡಾಖ್‌ಗೆ ನೀವೇನಾದರೂ ಪ್ರವಾಸ ಕೈಗೊಳ್ಳುವ ಪ್ಲಾನ್ ಮಾಡಿಕೊಂಡಿದ್ದರೆ ನಿಮಗಾಗಿ ಐಆರ್‌ಸಿಟಿಸಿಯ ಟೂರ್ ಪ್ಯಾಕೇಜ್‌ಗಳಿವೆ. ಬೆಂಗಳೂರು-ಲಡಾಖ್ ಟೂರ್ ಪ್ಯಾಕೇಜ್ ವಿವರ ತಿಳಿಯಿರಿ.

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ಲಡಾಖ್ ಪ್ರವಾಸ; ದಿನಾಂಕ, ಟಿಕೆಟ್ ದರ ಮಾಹಿತಿ ತಿಳಿಯಿರಿ
ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ಲಡಾಖ್ ಪ್ರವಾಸ; ದಿನಾಂಕ, ಟಿಕೆಟ್ ದರ ಮಾಹಿತಿ ತಿಳಿಯಿರಿ

ಭೂಮಿಯ ಮೇಲಿನ ಸ್ವರ್ಗ ಅಂತಲೇ ಕರೆಯಲಾಗುವ ಲಡಾಖ್ ಅನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು ಎಂಬ ಕನಸು ಪ್ರತಿಯೊಬ್ಬರಿಗೂ ಇರುತ್ತೆ. ಲ್ಯಾಂಡ್ ಆಫ್ ದಿ ಪಾಸ್‌ಗಳೆಂದು ಕರೆಯಲ್ಪಡುವ ಲಡಾಖ್ ಯಾವಾಗಲೂ ಪ್ರಯಾಣದ ಉತ್ಸಾಹವನ್ನು ಹೆಚ್ಚಿಸುತ್ತದೆ. ಐಆರ್‌ಸಿಟಿಸಿ (IRCTC) ಬೆಂಗಳೂರು ಲಡಾಖ್ ಟೂರ್ ಪ್ಯಾಕೇಜ್ (Bengaluru Ladakh Tour Package) ನಿಮಗೆ ಉಪಯೋಗವಾಗಬಹುದು. ಈ ಪ್ಯಾಕೇಜ್‌ನಲ್ಲಿ 6 ರಾತ್ರಿಗಳು ಮತ್ತು 7 ದಿನಗಳ ಪ್ರವಾಸದಲ್ಲಿ ಶಾಮ್ ವ್ಯಾಲಿ, ಲೇಹ್, ನುಬ್ರಾ, ತುರ್ತುಕ್ ಹಾಗೂ ಪಾಂಗಾಂಗ್‌ನಂತಹ ಅತ್ಯಂತ ಪ್ರವಾಸಿ ತಾಣಗಳನ್ನು ಒಳಗೊಂಡಿದೆ.

ಬೆಂಗಳೂರು ಲಖಾಡ್ ಟೂರ್ ಪ್ಯಾಕೇಜ್ ವಿವರ

ಪ್ಯಾಕೇಜ್ ಹೆಸರು: ಮ್ಯಾಗ್ನಿಫಿಸಿಯೆಂಟ್ ಲಡಾಕ್ ಎಕ್ಸ್ ಬೆಂಗಳೂರು

ಟ್ರೆಂಡಿಂಗ್​ ಸುದ್ದಿ

ವೀಕ್ಷಣೆಯ ತಾಣಗಳು: ಲೇಹ್, ಶ್ಯಾಮ್ ವ್ಯಾಲಿ, ನುಬ್ರಾ, ತುರ್ತುಕ್ ಮತ್ತು ಪ್ಯಾಂಗಾಂಗ್

ಪ್ರಯಾಣ ಮೋಡ್: ವಿಮಾನ

ವಿಮಾನ ನಿಲ್ದಾಣ, ಹೊರಡುವ ಸಮಯ: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ, ಬೆಳಗ್ಗೆ 7 ಗಂಟೆ

ಆರ್ವತನ,ಪ್ರವಾಸ ದಿನಾಂಕ: 06N/7D - 05.08.2024 & 26.08.224

ಇದನ್ನೂ ಓದಿ:

ಬೆಂಗಳೂರು ಲಖಾಡ್ ಟೂರ್ ಪ್ಯಾಕೇಜ್‌ನ ವಿಮಾನ ವಿವರ

ದಿನಾಂಕ: 05.08.2024

ವಿಮಾನ ವಿವರ: 6E-6433

ಎಲ್ಲಿಂದ ಎಲ್ಲಿಗೆ: ಬೆಂಗಳೂರಿನಿಂದ ದೆಹಲಿ

ಹೊರಡುವ,ತಲುಪು ಸಮಯ: 7 ಗಂಟೆ - 9.45 ಗಂಟೆ

ವಾಪಸ್ ಬರುವ ವಿವರ

ದಿನಾಂಕ - 11.08.2024

ವಿಮಾನ ವಿವರ - 6E-2403

ಎಲ್ಲಿಂದ ಎಲ್ಲಿಗೆ - ಲೇಹ್‌ನಿಂದ ದೆಹಲಿ

ನಿರ್ಗಮ ಆಗಮನ - ಮಧ್ಯಾಹ್ನ 1.30 ಗಂಟೆ - ಮಧ್ಯಾಹ್ನ 3 ಗಂಟೆ

ಬೆಂಗಳೂರು ಲಖಾಡ್ ಟೂರ್ ಪ್ಯಾಕೇಜ್‌ನ ವಿಮಾನ ವಿವರ

ದಿನಾಂಕ: 26.08.2024

ವಿಮಾನ ವಿವರ: 6E-2101

ಎಲ್ಲಿಂದ ಎಲ್ಲಿಗೆ: ದೆಹಲಿಯಿಂದ ಲೇಹ್

ಹೊರಡುವ, ತಲುಪುವ ಸಮಯ: 12.10 ಗಂಟೆ- 1.20 ಗಂಟೆ

ವಾಪಸ್ ಬರುವ ವಿವರ

ದಿನಾಂಕ: 01.09.2024

ವಿಮಾನ ವಿವರ: 6E-6622

ಎಲ್ಲಿಂದ ಎಲ್ಲಿಗೆ: ದೆಹಲಿಯಿಂದ ಬೆಂಗಳೂರು

ನಿರ್ಗಮ ಆಗಮನ: ಸಂಜೆ 6 ಗಂಟೆ - ರಾತ್ರಿ 8.4 ಗಂಟೆ

ಈ ಪ್ರವಾಸದಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಡಾಖ್‌ಗೆ ಪ್ರಯಾಣಿಸಲು ಎಂಬಿಬಿಎಸ್ ವೈದ್ಯರು ಅಥವಾ ಆರ್‌ಎಂಪಿ (ನೋಂದಾಯಿತ ವೈದ್ಯಕೀಯ ವೈದ್ಯರು) ಪ್ರಮಾಣೀಕರಿಸಿದ ಪ್ರಯಾಣಕ್ಕೆ ಯೋಗ್ಯ ಪ್ರಮಾಣಪತ್ರದ ಅಗತ್ಯವಿದೆ. ಶಿಶು ಶುಲ್ಕಗಳು (ಏರ್ ಟಿಕೆಟ್‌ಗೆ ಮಾತ್ರ) 02 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅನ್ವಯಿಸುತ್ತದೆ.

ಬೆಂಗಳೂರು-ಲೇಹ್-ಲಡಾಖ್ ಟೂರ್ ಪ್ಯಾಕೇಜ್‌ನಲ್ಲಿ ಒಬ್ಬರಿಗೆ ಎಷ್ಟಾಗುತ್ತೆ?

6 ರಾತ್ರಿ ಮತ್ತು 7 ದಿನಗಳ ಬೆಂಗಳೂರು-ಲೇಹ್-ಲಡಾಖ್ ಟೂರ್ ಪ್ಯಾಕೇಜ್ ದರವನ್ನು ನೋಡುವುದಾದರೆ ಒಬ್ಬರಿಗೆ 62,950 ರೂಪಾಯಿ, ಇಬ್ಬರಿಗೆ ತಲಾ 58,200 ರೂಪಾಯಿ ಹಾಗೂ ಮೂವರಿಗೆ 57,700 ರೂಪಾಯಿ ವೆಚ್ಚವಾಗಲಿದೆ. 5 ರಿಂದ 11 ವರ್ಷದೊಳಗಿನ ಬೆಡ್ ಸಹಿತ ಮಕ್ಕಳಿಗೆ 56,450 ರೂಪಾಯಿ, 2 ರಿಂದ 11 ವರ್ಷದೊಳಗಿನ ಬೆಡ್ ಸಹಿತ ಮಕ್ಕಳಿಗೆ 51,850 ರೂಪಾಯಿ ವೆಚ್ಚವಾಗಲಿದೆ. ಮೊದಲ ದಿನಿಂದ ವಾಪಸ್ ಬರುವವರಿಗೆ ಬೆಂಗಳೂರಿನಿಂದ ಲಡಾಖ್‌ ಟೂರ್ ಪ್ರವಾಸದ ಸಂಪೂರ್ಣ ಮಾಹಿತಿಯನ್ನು ಐಆರ್‌ಸಿಟಿಸಿ ಅಧಿಕೃತ ವೆಬ್‌ಸೈಟ್‌ irctctourism.com ಗೆ ಭೇಟಿ ನೀಡಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)