Special Train: ಹುಬ್ಬಳ್ಳಿಯಿಂದ ಶಬರಿಮಲೆಗೆ 2 ವಿಶೇಷ ರೈಲುಗಳ ಸಂಚಾರ; ಕರ್ನಾಟಕದ ಯಾವೆಲ್ಲಾ ನಗರಗಳಿಂದ ಶಬರಿಮಲೆಗೆ ರೈಲು ಸಂಪರ್ಕವಿದೆ ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Special Train: ಹುಬ್ಬಳ್ಳಿಯಿಂದ ಶಬರಿಮಲೆಗೆ 2 ವಿಶೇಷ ರೈಲುಗಳ ಸಂಚಾರ; ಕರ್ನಾಟಕದ ಯಾವೆಲ್ಲಾ ನಗರಗಳಿಂದ ಶಬರಿಮಲೆಗೆ ರೈಲು ಸಂಪರ್ಕವಿದೆ ಗಮನಿಸಿ

Special Train: ಹುಬ್ಬಳ್ಳಿಯಿಂದ ಶಬರಿಮಲೆಗೆ 2 ವಿಶೇಷ ರೈಲುಗಳ ಸಂಚಾರ; ಕರ್ನಾಟಕದ ಯಾವೆಲ್ಲಾ ನಗರಗಳಿಂದ ಶಬರಿಮಲೆಗೆ ರೈಲು ಸಂಪರ್ಕವಿದೆ ಗಮನಿಸಿ

ನವೆಂಬರ್‌, ಡಿಸೆಂಬರ್‌ ತಿಂಗಳು ಬಂತೆಂದರೆ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಹೋಗುವವರ ಸಂಖ್ಯೆ ಹೆಚ್ಚುತ್ತದೆ. ಈ ಬಾರಿ ಶಬರಿಮಲೆ ಯಾತ್ರಿಗಳಿಗಾಗಿ ಹುಬ್ಬಳ್ಳಿಯಿಂದ 2 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಇದರ ವಿವಿರ ಹೀಗಿದೆ.

ಸಾಂಕೇತಿಕ ಚಿತ್ರಗಳು
ಸಾಂಕೇತಿಕ ಚಿತ್ರಗಳು

ನವೆಂಬರ್‌ ತಿಂಗಳು ಆರಂಭವಾಯಿತು ಎಂದರೆ ʼಸ್ವಾಮಿಯೇ ಶರಣಂ ಅಯ್ಯಪ್ಪʼ ಎನ್ನುತ್ತಾ ಕಪ್ಪುಬಟ್ಟೆ, ವಿಭೂತಿ ಧರಿಸಿ ಅಯ್ಯಪ್ಪ ಸ್ವಾಮಿಯನ್ನು ಭಜಿಸುವ ಮಾಲಾಧಾರಿಗಳನ್ನು ಕಾಣಬಹುದಾಗಿದೆ. ಪ್ರತಿವರ್ಷ ನವೆಂಬರ್‌ ತಿಂಗಳನಿಂದ ಮಕರ ಸಂಕ್ರಾತಿವರೆಗೆ ಅಯ್ಯಪ್ಪನ ದರ್ಶನ ಮಾಡಲು ಬಯಸುವ ಭಕ್ತರು ಮಾಲೆ ಧರಿಸಿ ನೇಮ ನಿಷ್ಠ ಪಾಲನೆ ಮಾಡಿ ನಂತರ ಅಯ್ಯಪ್ಪನ ದರ್ಶನ ಪಡೆದು ಬರುತ್ತಾರೆ. ಈ ಬಾರಿ ಅಯ್ಯಪ್ಪ ದರ್ಶನಕ್ಕೆ ತೆರಳುವ ಭಕ್ತಾದಿಗಳಿಗೆ ನೆರವಾಗುವ ಉದ್ದೇಶದಿಂದ ಹುಬ್ಬಳ್ಳಿಯಿಂದ ಎರಡು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿದ ಭಾರತೀಯ ಅಯ್ಯಪ್ಪ ಸೇವಾ ಸಂಘ (ಬಿಎಎಸ್‌ಎಸ್‌) ಪ್ರಧಾನ ಕಾರ್ಯದರ್ಶಿ ಶಿವಪ್ಪ ಬಾರ್ಕಿ ʼಕಳೆದ ವರ್ಷ ಪದ್ಮಶ್ರೀ ಪುರಸ್ಕತ ಸಾಲು ಮರದ ತಿಮ್ಮಕ್ಕ ಹಾಗೂ ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಳ್ಳೂರು ಉಮೇಶ್‌ ಅವರು ಬೆಳಗಾವಿ ಮತ್ತು ವಿಜಯಪುರದಿಂದ ಕೊಟ್ಟಾಯಂ ರೈಲು ನಿಲ್ದಾಣಕ್ಕೆ ರೈಲು ಸೇವೆ ಆರಂಭಿಸುವಂತೆ ರೈಲ್ವೇ ಸಚಿವ ಪ್ರಹ್ಲಾದ ಜೋಶಿ ಹಾಗೂ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದರು. ನಮ್ಮ ಮನವಿಗೆ ಪ್ರತಿಕ್ರಿಯೆಯಾಗಿ ಅವರು ಕೊಟ್ಟಾಯಂ ನಿಲ್ದಾಣಕ್ಕೆ ರೈಲು ಸೇವೆಗಳನ್ನು ಒದಗಿಸಿದ್ದಾರೆʼ ಎಂದು ಅವರು ಹೇಳಿದ್ದಾರೆ.

ʼಡಿಸೆಂಬರ್‌ 2ರಿಂದ 2024 ಜನವರಿ 20ರವರೆಗೆ ರೈಲು ಸಂಖ್ಯೆ 07305 ಪ್ರತಿ ಶನಿವಾರ ಬೆಳಿಗ್ಗೆ 10.30ಕ್ಕೆ ಹುಬ್ಬಳ್ಳಿಯಿಂದ ಕೊಟ್ಟಾಯಂಗೆ ತೆರಳುತ್ತದೆʼ ಎಂದು ಟೈಮ್ಸ್‌ ಆಫ್‌ ಇಂಡಿಯಾಗೆ ಅವರು ಹೇಳಿದ್ದಾರೆ. ರೈಲು ಸಂಖ್ಯೆ 07306 ಕೊಟ್ಟಾಯಂನಿಂದ ಹುಬ್ಬಳ್ಳಿಗೆ ಪ್ರತಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ಹೊರಡಲಿದೆ. ಇನ್ನು ರೈಲು ಸಂಖ್ಯೆ 07307 ಹುಬ್ಬಳ್ಳಿಯಿಂದ ಕೊಟ್ಟಾಯಂಗೆ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಇರಲಿದ್ದು, ಇದು ಡಿಸೆಂಬರ್‌ 5 ರಿಂದ 2024ರ ಜನವರಿ 16ರವರೆಗೆ ತಿರುಗಾಟ ನಡೆಸಲಿದೆ. ರೈಲು ಸಂಖ್ಯೆ 07308 ಬುಧವಾರದಂದು ಬೆಳಿಗ್ಗೆ 11 ಗಂಟೆಗೆ ಕೊಟ್ಟಾಯಂನಿಂ ಹುಬ್ಬಳ್ಳಿಗೆ ಚಲಿಸುತ್ತದೆ. ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಬೆಂಗಳೂರಿನಿಂದ ರೈಲು: ಶಬರಿಮಲೆಗೆ ನೇರ ರೈಲು ಸಂಪರ್ಕ ಇಲ್ಲದ ಕಾರಣ ಸಮೀಪದ ಸ್ಥಳಗಳಿಗೆ ರೈಲಿನ ಮೂಲಕ ತಲುಪಬಹುದು. ಅಲ್ಲಿಂದ ಬೇರೆ ವ್ಯವಸ್ಥೆ ಮಾಡಿಕೊಂಡು ಶಬರಿಮಲೆ ತಲುಪಬಹುದು. ಬೆಂಗಳೂರಿನಿಂದ ಕನ್ಯಾಕುಮಾರಿ ಏಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16526), ಕೋಚುವೆಲ್ಲಿ ಎಸಿಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 22677), ಕೋಚುವೆಲ್ಲಿ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 12777), ಕೋಚುವೆಲ್ಲಿ ಜನರಲ್‌ ರಿಸರ್ವೇಶನ್‌ (ರೈಲು ಸಂಖ್ಯೆ 12257) ರೈಲುಗಳ ಕೇರಳಕ್ಕೆ ಸಂಚಾರ ಮಾಡಲಿದ್ದು, ಶಬರಿಮಲೆಗೆ ತೆರಳುವವರು ಈ ರೈಲುನಲ್ಲಿ ಸಂಚರಿಸಬಹುದು.

ಮಂಗಳೂರಿನಿಂದ ಶಬರಿಮಲೆಗೆ ರೈಲು: ಮಂಗಳೂರಿನಿಂದ ಶಬರಿಮಲೆಗೆ ಹಲವು ಟ್ರೈನ್‌ಗಳಿವೆ. ಇವು ಕೂಡ ನೇರವಾಗಿ ಶಬರಿಮಲೆ ತಲುಪುದಿಲ್ಲ. ಸಮೀಪದ ಊರುಗಳಿಗೆ ತೆರಳಿ ಅಲ್ಲಿಂದ ಬೇರೆ ವ್ಯವಸ್ಥೆಯ ಮಾಡಿಕೊಂಡು ಶಬರಿಮಲೆಗೆ ತೆರಳಬೇಕು. ಬಿಕೆಎನ್‌ ಕೆಸಿವಿಎಲ್‌ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16311), ಬಿವಿಸಿ ಕೆಸಿವಿಎಲ್‌ ಎಕ್ಸ್‌ಪ್ರೆಸ್‌ (19260), ಡಿಡಿಎನ್‌ ಕೆವಿಸಿಎಲ್‌ ಸೂಪರ್‌ ಎಕ್ಸ್‌ಪ್ರೆಸ್‌ (22660), ಕೆಸಿವಿಎಲ್‌ ಗರೀಬ್‌ ರಥ್‌ (12201), ಎಲ್‌ಟಿಟಿ ಕೆಸಿವಿಎಲ್ ಎಕ್ಸ್‌ಪ್ರೆಸ್‌ (22113), ಮಲಬಾರ್‌ ಎಕ್ಸ್‌ಪ್ರೆಸ್‌ (16630), ನಾಗರಾಕೊಯಿಲ್‌ ಎಕ್ಸ್‌ಪ್ರೆಸ್‌ (16335), ಪರಶುರಾಮ ಎಕ್ಸ್‌ಪ್ರೆಸ್‌ (16649), ತಿರುವೆಂಡ್ರಂ ಎಕ್ಸ್‌ಪ್ರೆಸ್‌ (16348), ವಿಆರ್‌ಎಲ್‌ ಟಿವಿಎಸ್‌ ಎಕ್ಸ್‌ಪ್ರೆಸ್‌ (16333) ಈ ರೈಲುಗಳು ಶಬರಿಮಲೆ ತಲುಪುತ್ತವೆ.

ಮೈಸೂರಿನಿಂದ ಶಬರಿಮಲೆಗೆ ಕೊಚುವೇಲಿ ಎಕ್ಸ್‌ಪ್ರೆಸ್‌ನಲ್ಲಿ ತೆರಳಬಹುದು. ಇದು ಮೈಸೂರು ಜಂಕ್ಷನ್‌ನಿಂದ ತಿರುವೆಂಡ್ರನ ಕೋಚುವೆಲ್ಲಿ ತಲುಪುತ್ತದೆ.

ಕಲಬುರಗಿಯಿಂದ ವಾರಕೊಮ್ಮೆ ಕೇರಳದ ತಿರುವಲ್ಲಗೆ ರೈಲು ಸಂಚಾರ ಇರಲಿದೆ. ಇದು ನೇರ ಸಂಪರ್ಕವಲ್ಲದ ಕಾರಣ ತಿರುವಲ್ಲ ರೈಲು ನಿಲ್ದಾಣದಿಂದ ಬೇರೆ ವಾಹನದ ಮೂಲಕ ಶಬರಿಮಲೆ ತಲುಪಬಹುದು.

Whats_app_banner