ಸಿಹಿ ಸೌತೆ vs ಕಹಿ ಸೌತೆ: ಇದೇನ್ರೀ ಇಂಥ ಸೌತೆಕಾಯಿ ತಂದಿದ್ದೀರಿ ಅಂತ ಬೈಸಿಕೊಳ್ಳಬಾರದು ಅಂತಿದ್ರೆ ಈ ವಿಷ್ಯ ತಿಳ್ಕೊಂಡಿರಿ-kitchen tips bitter cucumber vs sweet cucumber how to identify and select better cucumber in market jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸಿಹಿ ಸೌತೆ Vs ಕಹಿ ಸೌತೆ: ಇದೇನ್ರೀ ಇಂಥ ಸೌತೆಕಾಯಿ ತಂದಿದ್ದೀರಿ ಅಂತ ಬೈಸಿಕೊಳ್ಳಬಾರದು ಅಂತಿದ್ರೆ ಈ ವಿಷ್ಯ ತಿಳ್ಕೊಂಡಿರಿ

ಸಿಹಿ ಸೌತೆ vs ಕಹಿ ಸೌತೆ: ಇದೇನ್ರೀ ಇಂಥ ಸೌತೆಕಾಯಿ ತಂದಿದ್ದೀರಿ ಅಂತ ಬೈಸಿಕೊಳ್ಳಬಾರದು ಅಂತಿದ್ರೆ ಈ ವಿಷ್ಯ ತಿಳ್ಕೊಂಡಿರಿ

Kitchen Tips: ಮಾರುಕಟ್ಟೆಯಲ್ಲಿ ಸೌತೆಕಾಯಿಯನ್ನು ಆಯ್ಕೆ ಮಾಡುವುದು ಎಲ್ಲರಿಂದ ಆಗುವುದಿಲ್ಲ. ಕೆಲವು ಸೌತೆ ರುಚಿಯಲ್ಲಿ ಕಹಿಯಾಗುತ್ತದೆ. ಆದರೆ ನಾವು ಕೊಟ್ಟ ಈ ಸಲಹೆಗಳನ್ನು ಪ್ರಯತ್ನಿಸುವ ಮೂಲಕ, ಸೌತೆಕಾಯಿ ಕಹಿಯೋ ಅಥವಾ ಸಿಹಿಯೋ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದು.

ಇದೇನ್ರೀ ಇಂಥ ಸೌತೆಕಾಯಿ ತಂತಿದ್ದೀರಿ ಅಂತ ಬೈಸಿಕೊಳ್ಳಬಾರದು ಅಂತಿದ್ರೆ ಈ ವಿಷ್ಯ ತಿಳ್ಕೊಂಡಿರಿ
ಇದೇನ್ರೀ ಇಂಥ ಸೌತೆಕಾಯಿ ತಂತಿದ್ದೀರಿ ಅಂತ ಬೈಸಿಕೊಳ್ಳಬಾರದು ಅಂತಿದ್ರೆ ಈ ವಿಷ್ಯ ತಿಳ್ಕೊಂಡಿರಿ (Pixabay)

ಜನರು ಕಾಲಕ್ಕೆ ತಕ್ಕಂತೆ ಆಹಾರ ಸೇವನೆ ಇಷ್ಟಪಡುತ್ತಾರೆ. ಬೇಸಿಗೆ ಕಾಲದಲ್ಲಿ ದೇಹವನ್ನು ಹೈಡ್ರೇಟೆಡ್‌ ಆಗಿ ಇರಿಸಿಕೊಳ್ಳಲು ಹೆಚ್ಚು ನೀರಿನ ಅಂಶವಿರುವ ತರಕಾರಿಗಳಿಗೆ ಹೆಚ್ಚು ಬೇಡಿಕೆ. ನಿತ್ಯ ಆಹಾರದಲ್ಲಿ ಹೆಚ್ಚು ನೀರಿನಾಂಶವಿರುವ ಹಣ್ಣು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿದರೆ, ದೇಹದಲ್ಲಿನ ಶಾಖವನ್ನು ಕಾಪಾಡಿಕೊಳ್ಳುವುದು ಮಾತ್ರವಲ್ಲದೆ ಅದು ಆರೋಗ್ಯಕ್ಕೂ ಪ್ರಯೋಜನಕಾರಿ. ಬೇಸಿಗೆಯ ಪ್ರಮುಖ ತರಕಾರಿಗಳಲ್ಲಿ ಸೌತೆಕಾಯಿಗೆ ಅಗ್ರಸ್ಥಾನ. ಇದರಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ಗಳು ಹೇರಳವಾಗಿವೆ. ಹೀಗಾಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸೂರ್ಯನ ಬೆಳಕು ಮತ್ತು ಶಾಖದ ಪರಿಣಾಮವನ್ನು ಕಡಿಮೆ ಮಾಡುವ ಮೂಲಕ ದೇಹವನ್ನು ಹೈಡ್ರೇಟ್ ಆಗಿಡಲು ಸೌತೆಕಾಯಿ ಸಹಾಯ ಮಾಡುತ್ತದೆ. ಸಲಾಡ್‌ ಸೇರಿದಂತೆ ಹಲವು ಬಗೆಯ ಅಡುಗೆಗೆ ಸೌತೆಕಾಯಿ ಬೇಕು.

ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದರೂ, ಸೌತೆಕಾಯಿ ಖರೀದಿಸುವುದು ಒಂದು ರೀತಿಯ ಸವಾಲು. ಏಕೆಂದರೆ ಸೌತೆಕಾಯಿ ಖರೀದಿಸಲು ಹಣ ಖರ್ಚು ಮಾಡುವುದು ದೊಡ್ಡ ಸಮಸ್ಯೆಯಲ್ಲ. ಆದರೆ, ಸಿಹಿ ರುಚಿಯ ಸೌತೆಯನ್ನು ಆಯ್ಕೆ ಮಾಡುವುದು ಎಲ್ಲರಿಂದ ಸಾಧ್ಯವಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ನೀವು ಮಾರುಕಟ್ಟೆಯಿಂದ ಖರೀದಿಸಿ ತಂಡ ಸೌತೆಕಾಯಿ ರುಚಿಯಲ್ಲಿ ಕಹಿಯಿರುವುದು ನಿಮಗೆ ಅನುಭವವಾಗಿರಬಹುದು. ಅಲ್ಲದೆ ಮನೆಗೆ ತಂದೆ ಒಂದೆರಡು ದಿನಗಳೊಳಗೆ ಕತ್ತರಿಸಿದಾಗ ಅದು ಒಳಗಿನಿಂದ ಕೊಳೆತಿರಬಹುದು. ಆದರೆ, ಇನ್ನು ಮುಂದೆ ನಿಮಗೆ ಇಂಥಾ ಸಮಸ್ಯೆ ಆಗಲ್ಲ ಬಿಡಿ. ಈ ಸರಳ ಟಿಪ್ಸ್‌ ಅನುಸರಿಸಿದರೆ, ಸೌತೆಕಾಯಿ ಆಯ್ಕೆ ಮಾಡುವುದು ನಿಮಗೆ ಸುಲಭವಾಗುತ್ತದೆ.

ಮುಂದಿನ ಬಾರಿ ಈ ಸಮಸ್ಯೆ ಆಗದಿರಲು ಈ ಸರಳ ಅಡುಗೆ ಸಲಹೆಗಳನ್ನು ಅನುಸರಿಸಿ ನೋಡಿ. ಆ ಮೂಲಕ, ನೀವು ಮಾರುಕಟ್ಟೆಯಲ್ಲಿ ಸೌತೆಕಾಯಿಯನ್ನು ನೋಡಿದ ತಕ್ಷಣ ಅದು ಕಹಿಯೋ ಅಥವಾ ಸಿಹಿಯೋ ಎಂಬುದು ಸುಲಭವಾಗಿ ಪತ್ತೆ ಮಾಡುತ್ತೀರಿ. ಅದಕ್ಕೆ ಸಣ್ಣ ತಂತ್ರವಿದೆ. ಅದನ್ನು ಅನುಸರಿಸಿ ನೋಡಿ.

ಸಿಹಿ ಸೌತೆಕಾಯಿ ಖರೀದಿಸಲು ಈ ಸಲಹೆಗಳನ್ನು ಅನುಸರಿಸಿ

ಸೌತೆಕಾಯಿ ಸಿಪ್ಪೆಯ ಬಣ್ಣ

ಸೌತೆಕಾಯಿ ರುಚಿ ಸಿಹಿಯಾಗಿರಬೇಕು. ಹೀಗಾಗಿ ಕಹಿ ಸೌತೆಕಾಯಿ ಯಾವುದು ಎಂಬುದನ್ನು ಗುರುತಿಸಲು, ಅದರ ಸಿಪ್ಪೆಯನ್ನು ಎಚ್ಚರಿಕೆಯಿಂದ ನೋಡಿ. ಸೌತೆಕಾಯಿ ಸಿಪ್ಪೆಯ ಬಣ್ಣವು ಗಾಢವಾಗಿದ್ದು, ಮಧ್ಯಭಾಗದಲ್ಲಿ ಅಲ್ಲಲ್ಲಿ ಸ್ವಲ್ಪ ಹಳದಿ ಬಣ್ಣವಾಗಿದ್ದರೆ, ಅದು ನಾಟಿ ಸೌತೆಕಾಯಿ. ಇಂಥಾ ನಾಟಿ ಅಥವಾ ದೇಸಿ ಸೌತೆಕಾಯಿ ಕಹಿ ಇರುವುದಿಲ್ಲ.

ಸೌತೆಕಾಯಿ ಗಾತ್ರ

ಸೌತೆಕಾಯಿಯನ್ನು ಖರೀದಿಸುವಾಗ, ಅದು ತುಂಬಾ ದೊಡ್ಡದೂ ಇರಬಾರದು ಅಥವಾ ಗಾತ್ರದಲ್ಲಿ ತುಂಬಾ ಚಿಕ್ಕದೂ ಇರಬಾರದು. ಯಾವಾಗಲೂ ಮಧ್ಯಮ ಗಾತ್ರದ ಸೌತೆಕಾಯಿಯನ್ನು ಆರಿಸಿ. ದೊಡ್ಡ ಗಾತ್ರದ ಮತ್ತು ದಪ್ಪ ಸೌತೆಕಾಯಿ ಹೆಚ್ಚು ಬಲಿತಿದ್ದು, ಹೆಚ್ಚು ಬೀಜಗಳನ್ನು ಹೊಂದಿರುತ್ತವೆ. ಹೀಗಾಗಿ ಇದರಲ್ಲಿ ಕಹಿ ಅಂಶ ಹೆಚ್ಚು. ಸಣ್ಣ ಗಾತ್ರದ ಎಳೆಯ ಸೌತೆಕಾಯಿಗಳು ಉತ್ತಮ.‌

ಸೌತೆಕಾಯಿ ಒತ್ತುವ ಮೂಲಕ ಪರಿಶೀಲಿಸಿ

ಸೌತೆಕಾಯಿಯನ್ನು ಖರೀದಿಸುವಾಗ, ಖಂಡಿತವಾಗಿಯೂ ಅದನ್ನು ಒತ್ತಿ ನೋಡಲು ಪ್ರಯತ್ನಿಸಿ. ಸೌತೆಕಾಯಿ ತುಂಬಾ ಮೃದುವಾಗಿ ಕಾಣುತ್ತಿದ್ದರೆ, ಅದು ಹೆಚ್ಚು ಬೀಜವಿದ್ದು, ಒಳಗೆ ಕೊಳೆಯಬಹುದು. ಗುಣಮಟ್ಟದ ಮತ್ತು ತಾಜಾ ಸೌತೆಕಾಯಿ ಗಟ್ಟಿಯಾಗಿದ್ದು, ಒತ್ತಲು ಕಷ್ಟವಾಗುತ್ತದೆ.

mysore-dasara_Entry_Point