Lunch Box: ಲಂಚ್ ಬಾಕ್ಸ್‌ನಲ್ಲಿರುವ ಆಹಾರ ಬಹಳ ಹೊತ್ತಿನವರೆಗೆ ಬಿಸಿಯಾಗಿ ತಾಜಾವಾಗಿರಬೇಕು ಅಂದ್ರೆ ಈ ಸರಳ ಟಿಪ್ಸ್ ಅನುಸರಿಸಿ ನೋಡಿ
ಶಾಲಾ–ಕಾಲೇಜು, ಕಚೇರಿ, ಕೆಲಸಕ್ಕೆ ಹೋಗುವವರು ಮಧ್ಯಾಹ್ನದ ಊಟಕ್ಕೆ ಮನೆಯಿಂದಲೇ ಲಂಚ್ ಬಾಕ್ಸ್ ತೆಗೆದುಕೊಂಡು ಹೋಗುವುದು ರೂಢಿ. ಆದರೆ ಹಾಟ್ ಬಾಕ್ಸ್ ಆಗಿದ್ದರೂ ಕೂಡ ಕೆಲವೊಮ್ಮೆ ಲಂಚ್ ಬಾಕ್ಸ್‌ನಲ್ಲಿರುವ ಆಹಾರ ಸಪ್ಪೆಯಾಗಿ ರುಚಿ ಕಳೆದುಕೊಂಡಿರುತ್ತದೆ. ಲಂಚ್ ಬಾಕ್ಸ್‌ನಲ್ಲಿ ಆಹಾರ ಬಹಳ ಹೊತ್ತಿನವರೆಗೆ ಬಿಸಿಯಾಗಿ, ತಾಜಾವಾಗಿ ಇರಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ.
ಶಾಲೆ, ಕಾಲೇಜು, ಕೆಲಸ ಅಂತೆಲ್ಲಾ ಮನೆಯಿಂದ ಹೊರಗಡೆ ಹೋಗುವವರು ಪ್ರತಿನಿತ್ಯ ಲಂಚ್ ಬಾಕ್ಸ್ ತೆಗೆದುಕೊಂಡು ಹೋಗುತ್ತಾರೆ. ತಾವು ಹೋಗುವ ಸ್ಥಳಲದಲ್ಲಿ ಊಟದ ವ್ಯವಸ್ಥೆ ಇದ್ದರೂ ಮನೆಯೂಟ ಆರೋಗ್ಯಕ್ಕೆ ಉತ್ತಮ ಎಂಬ ಕಾರಣಕ್ಕೆ ಡಬ್ಬಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಊಟ ಡಬ್ಬಿಯಲ್ಲಿ ಇಟ್ಟಿರುವ ಆಹಾರ ಸ್ಪಲ್ಪ ಹೊತ್ತಿಗೆ ತಣ್ಣಗಾಗುತ್ತದೆ. ಅಲ್ಲದೇ ಸಪ್ಪೆಯಾಗಿ ರುಚಿ ಕಳೆದುಕೊಳ್ಳುತ್ತದೆ. ಇದರಿಂದ ಹಲವರು ಊಟದ ಡಬ್ಬಿಯನ್ನು ಅರ್ಧಂಬರ್ಧ ತಿಂದು ಮರಳಿ ತರುತ್ತಾರೆ. ಆದರೆ ಈ ಕೆಲವು ಟಿಪ್ಸ್‌ಗಳನ್ನು ಫಾಲೋ ಮಾಡಿದ್ರೆ ಊಟದ ಡಬ್ಬಿಯಲ್ಲಿರುವ ಆಹಾರ ಬಹಳ ಹೊತ್ತಿನವರೆಗೆ ಬಿಸಿಯಾಗಿ, ತಾಜಾವಾಗಿರುತ್ತದೆ.
ಇನ್ಸುಲೇಟೆಡ್ ಕಂಟೈನರ್
ಶಾಲೆ ಅಥವಾ ಕಚೇರಿಗೆ ಬಾಕ್ಸ್ ತೆಗೆದುಕೊಂಡು ಹೋಗುವವರಿಗೆ ಇನ್ಸುಲೇಟೆಡ್ ಕಂಟೈನರ್ ಅಂದರೆ ಒಳಗಿನಿಂದ ಸಿಲ್ವರ್ ಕೋಟ್ ಇರುವ ಹಾಟ್ ಬಾಕ್ಸ್ ರೀತಿಯ ಊಟದ ಡಬ್ಬಿಯನ್ನು ಆಯ್ಕೆ ಮಾಡಿ. ಇದು ಮಧ್ಯಾಹ್ನದವರೆಗೆ ಊಟ ಬಿಸಿಯಾಗಿರುವಂತೆ ನೋಡಿಕೊಳ್ಳುತ್ತದೆ ಮತ್ತು ಆಹಾರವನ್ನು ತಾಜಾವಾಗಿಸಿರುತ್ತದೆ.
ಅಲ್ಯೂಮಿನಿಯಂ ಫಾಯಿಲ್
ಊಟದ ಡಬ್ಬಿಯಲ್ಲಿ ಆಹಾರ ಹೆಚ್ಚು ಬಿಸಿಯಾಗಿರಲು ಅಲ್ಯೂಮಿನಿಯಂ ಫಾಯಿಲ್ ಬಳಸಬಹುದು. ರೋಟಿ, ಪರಾಠ ಅಥವಾ ಪೂರಿಯನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿ ಲಂಚ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಬೇಕು. ಇದರಿಂದ ಇದು ಹೆಚ್ಚು ಕಾಲ ಬಿಸಿಯಾಗಿ ಮತ್ತು ತಾಜಾವಾಗಿರತ್ತದೆ.
ಥರ್ಮಲ್ ಬ್ಯಾಗ್
ಊಟದ ಡಬ್ಬಿಯನ್ನು ಥರ್ಮಲ್ ಬ್ಯಾಗ್‌ಮಲ್ಲಿ ಇರಿಸುವುದರಿಂದ ಕೂಡ ಇದು ಹೆಚ್ಚು ಕಾಲ ಬಿಸಿಯಾಗಿರುತ್ತದೆ ಹಾಗೂ ಡಬ್ಬಿಯಲ್ಲಿನ ಆಹಾರವು ತಾಜಾವಾಗಿರುತ್ತದೆ. ಥರ್ಮಲ್ ಬ್ಯಾಗ್‌ಗಳನ್ನು ಥರ್ಮೋಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಈ ಬ್ಯಾಗ್‌ನೊಳಗೆ ಊಟದ ಡಬ್ಬಿಯನ್ನು ಇರಿಸಿದಾಗ ಆಹಾರದ ಶಾಖ ಹಾಗೆ ಉಳಿಯುತ್ತದೆ. ಇದು ಆಹಾರವನ್ನು ಹೆಚ್ಚು ಕಾಲ ಬಿಸಿಯಾಗಿರಿಸುತ್ತದೆ. ಈ ಚೀಲಗಳ ಬೆಲೆಯೂ ಹೆಚ್ಚಿಲ್ಲ.
ಥರ್ಮಲ್ ಲಂಚ್ ಚಾಕ್ಸ್
ನೀವು ನಿರಂತರವಾಗಿ ಲಂಚ್ ಬಾಕ್ಸ್ ತೆಗೆದುಕೊಂಡು ಹೋಗುವವರಾದರೆ ಥರ್ಮಲ್ ಲಂಚ್ ಬಾಕ್ಸ್ ಅನ್ನು ಖರೀದಿಸುವುದು ಉತ್ತಮ ಆಯ್ಕೆಯಾಗಿದೆ. ಇದರಲ್ಲಿನ ಆಹಾರವು ದೀರ್ಘಕಾಲದವರೆಗೆ ಬಿಸಿಯಾಗಿರುತ್ತದೆ. ಅಲ್ಲದೆ, ನೀವು ತಿನ್ನುವ ಹತ್ತು ನಿಮಿಷಗಳ ಮೊದಲು ನೀವು ಅದನ್ನು ಪ್ಲಗ್ ಮಾಡಿದರೆ ಸಾಕು. ಇದರಲ್ಲಿರುವ ಆಹಾರ ಈಗಷ್ಟೇ ಮಾಡಿದ್ದೇನೋ ಎನ್ನುವಷ್ಟು ಬಿಸಿಯಾಗಿರುತ್ತದೆ.
ಬಿಸಿನೀರಿನ ಬಾಟಲ್
ಒಂದೆರೆಡು ಗಂಟೆಯಲ್ಲಿ ಲಂಚ್ ಬಾಕ್ಸ್ ಖಾಲಿ ಮಾಡ್ತೀವಿ ಅಂತ ಅನಿಸಿದರೆ ಈ ವಿಧಾನ ಸೂಪರ್ ವರ್ಕೌಟ್ ಆಗುತ್ತೆ. ಒಂದು ಬಾಟಲಿಗೆ ಬಿಸಿನೀರು ತುಂಬಿ ಲಂಚ್ ಬಾಕ್ಸ್ ಬ್ಯಾಗ್ ಗೆ ಹಾಕಿ. ಈ ಶಾಖವು ಆಹಾರವನ್ನು ಬಿಸಿಯಾಗಿ ಮತ್ತು ಒಂದು ಗಂಟೆಯವರೆಗೆ ತಾಜಾವಾಗಿರಿಸುತ್ತದೆ.
ಈ ಕೆಲವು ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಲಂಚ್ ಬಾಕ್ಸ್ ಅನ್ನು ಬಿಸಿಯಾಗಿ, ತಾಜಾವಾಗಿರುತ್ತವೆ ನೋಡಿಕೊಳ್ಳಬಹುದು. ಹೀಗೆ ಮಾಡಿ ಲಂಚ್ ಬಾಕ್ಸ್ ನೀಡುವುದರಿಂದ ಮಕ್ಕಳು ಅಥವಾ ಮನೆಯವರು ಲಂಚ್ ಬಾಕ್ಸ್ ಅರ್ಧ ತಿಂದು ವಾಪಾಸ್ ತರುವುದಿಲ್ಲ.
ವಿಭಾಗ