ಬೆಂಡೆಕಾಯಿ ಪ್ರಿಯರೇ ಗಮನಿಸಿ, ನೀವು ಹೀಗೆ ಮಾಡಿದ್ರೆ ಬೆಂಡೆಕಾಯಿ ಬಹುಕಾಲ ತಾಜಾ ಆಗಿಯೇ ಇರುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಂಡೆಕಾಯಿ ಪ್ರಿಯರೇ ಗಮನಿಸಿ, ನೀವು ಹೀಗೆ ಮಾಡಿದ್ರೆ ಬೆಂಡೆಕಾಯಿ ಬಹುಕಾಲ ತಾಜಾ ಆಗಿಯೇ ಇರುತ್ತೆ

ಬೆಂಡೆಕಾಯಿ ಪ್ರಿಯರೇ ಗಮನಿಸಿ, ನೀವು ಹೀಗೆ ಮಾಡಿದ್ರೆ ಬೆಂಡೆಕಾಯಿ ಬಹುಕಾಲ ತಾಜಾ ಆಗಿಯೇ ಇರುತ್ತೆ

ಬೆಂಡೆಕಾಯಿಯನ್ನು ಎರಡು ದಿನ ಫ್ರೀಜ್‌ನಲ್ಲಿಟ್ಟರೆ ಜಿಗುಟಾಗಿ ತಾಜಾತನ ಕಳೆದುಕೊಳ್ಳುತ್ತದೆ. ಹೊರಗೆ ಇಟ್ಟರೆ ಒಣಗಲು ಪ್ರಾರಂಭವಾಗುತ್ತದೆ. ಹಾಗಾದರೆ ಬೆಂಡೆಕಾಯಿಯನ್ನು ಬಹುಕಾಲ ತಾಜಾ ಆಗಿಡಲು ಏನು ಮಾಡಬೇಕು ಈ ಪ್ರಶ್ನೆ ಹಲವರಲ್ಲಿದೆ. ನಿಮ್ಮ ಪ್ರೀತಿಯ ಬೆಂಡೆಕಾಯಿಯನ್ನು ಒಂದು ವಾರ ತಾಜಾವಾಗಿಡಬೇಕು ಎಂದು ನೀವು ಬಯಸಿದರೆ ಇಲ್ಲಿ ಹೇಳಿರುವ ಟಿಪ್ಸ್‌ ಪಾಲಿಸಿ.

ಬೆಂಡೆಕಾಯಿ ಪ್ರಿಯರೇ ಗಮನಿಸಿ, ನೀವು ಹೀಗೆ ಮಾಡಿದ್ರೆ ಬೆಂಡೆಕಾಯಿ ಬಹುಕಾಲ ತಾಜಾ ಆಗಿಯೇ ಇರುತ್ತೆ
ಬೆಂಡೆಕಾಯಿ ಪ್ರಿಯರೇ ಗಮನಿಸಿ, ನೀವು ಹೀಗೆ ಮಾಡಿದ್ರೆ ಬೆಂಡೆಕಾಯಿ ಬಹುಕಾಲ ತಾಜಾ ಆಗಿಯೇ ಇರುತ್ತೆ

ಯಾವುದೇ ಅಡುಗೆ ತಯಾರಿಸುವುದಿದ್ದರೂ ತರಕಾರಿಗಳು ಬೇಕೇ ಬೇಕು. ತರಕಾರಿಗಳಿಲ್ಲದ ಅಡುಗೆ ಬಹಳ ಸಪ್ಪೆ ಎನಿಸುತ್ತದೆ. ಪ್ರತಿಯೊಬ್ಬರಿಗೂ ಅವರಿಷ್ಟದ ತರಕಾರಿಗಳಿರುತ್ತವೆ. ಆದರೆ ಕೆಲವರು ಕೆಲವು ತರಕಾರಿಗಳನ್ನು ಕಂಡರೆ ಮೂಗುಮುರಿದರೆ, ಉಳಿದವರು ಬಹಳ ಪ್ರೀತಿಯಿಂದ ಸವಿಯುತ್ತಾರೆ. ಅಡುಗೆಗೆ ವೈವಿಧ್ಯ ತರುವುದೇ ತರಕಾರಿಗಳು. ಲೇಡಿಸ್‌ ಫಿಂಗರ್‌ ಅಥವಾ ಓಕ್ರಾ ಎಂದೂ ಕರೆಯುವ ಬೆಂಡೆಕಾಯಿಯಿಂದ ಅನೇಕ ಬಗೆಯ ಅಡುಗೆಗಳನ್ನು ತಯಾರಿಸಲಾಗುತ್ತದೆ. ಬೆಂಡೆಕಾಯಿ ಪಲ್ಯ, ಗೊಜ್ಜು, ಮೊಸರು ಬಜ್ಜಿ, ಡ್ರೈ ಬಿಂಢಿ ಮುಂತಾದವುಗಳು ಬಹಳ ರುಚಿಯಾದ ಅಡುಗೆಗಳಾಗಿವೆ. ಬೆಂಡೆಕಾಯಿ ನಿಮ್ಮಿಷ್ಟದ ತರಕಾರಿಯಾಗಿದೆಯಾ? ಅದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಅಂಗಡಿಯಿಂದ ಮನೆಗೆ ಕೊಂಡು ತಂದಿದ್ದೀರಾ? ಈಗ ಸಮಸ್ಯೆ ಬರುವುದು ಇಲ್ಲಿಯೇ. ಕೆಲವರಿಗೆ ಅದನ್ನು ತಾಜಾವಾಗಿರುವಂತೆ ಶೇಖರಿಸಿಡುವುದು ಹೇಗೆ ಎನ್ನುವುದು ದೊಡ್ಡ ಚಿಂತೆಯಾಗಿರುತ್ತದೆ. ಸಾಮಾನ್ಯವಾಗಿ ಬೆಂಡೆಕಾಯಿ ಬಹಳ ಬೇಗ ತನ್ನ ತಾಜಾತನವನ್ನು ಕಳೆದುಕೊಳ್ಳುತ್ತದೆ. ಫ್ರಿಜ್‌ನಲ್ಲಿಟ್ಟರೆ ಜಿಗುಟಾಗುತ್ತದೆ, ಹೊರಗಡೆ ಹಾಗೆ ಇಟ್ಟರೆ ಒಣಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಪ್ರೀತಿಯ ತರಕಾರಿಯನ್ನು ವಾರದವರೆಗೆ ತಾಜಾವಾಗಿಡಲು ಬಯಸಿದರೆ ಇಲ್ಲಿ ಹೇಳಿರುವ ಸಲಹೆಗಳು ನಿಮ್ಮ ಉಪಯೋಗಕ್ಕೆ ಬರಬಹುದು.

ಬೆಂಡೆಕಾಯಿ ಬಹು ಕಾಲ ತಾಜಾ ಆಗಿರಲು ಸಲಹೆಗಳು

ಬೆಂಡೆಕಾಯಿಯನ್ನು ಈ ರೀತಿಯಾಗಿ ಸಂಗ್ರಹಿಸಿ: ಬೆಂಡೆಕಾಯಿಯನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಮೊದಲು ನೀವು ಮಾಡಬೇಕಾದ ಕೆಲಸ ಅದರ ಮೇಲೆ ತೇವಾಂಶವಿರದಂತೆ ನೋಡಿಕೊಳ್ಳುವುದು. ನೀವು ಮಾರುಕಟ್ಟೆಯಿಂದ ಬೆಂಡೆಕಾಯಿಯನ್ನು ಖರೀದಿಸಿ ತಂದ ತಕ್ಷಣ ಅದನ್ನು ಒಂದು ಒಣ ಬಟ್ಟೆಯ ಮೇಲೆ ಅಥವಾ ಪೇಪರ್‌ ಮೇಲೆ ಹರಡಿ. ನೀರಿನ ಅಂಶವಿದ್ದರೆ ಅದು ಬಹಳ ಬೇಗನೆ ಹಾಳಾಗುತ್ತದೆ. ನಂತರ ಅದನ್ನು ತೆಳುವಾದ ಹತ್ತಿಯ ಬಟ್ಟೆಯಲ್ಲಿ ಸುತ್ತಿ. ನಂತರ ಅದನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿ. ಹೀಗೆ ಮಾಡಿದರೆ ಬೆಂಡೆಕಾಯಿ ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ.

ಬೆಂಡೆಕಾಯಿಯನ್ನು ಫ್ರಿಜ್‌ನಲ್ಲಿ ಈ ರೀತಿಯಾಗಿಡಿ: ಬೆಂಡೆಕಾಯಿಯನ್ನು ಮಾರುಕಟ್ಟೆಯಿಂದ ತಂದ ನಂತರ ಅದನ್ನು ಬಟ್ಟೆಯಿಂದ ಒರೆಸಿ. ನಂತರ ಅದನ್ನು ಪಾಲಿಥೀನ್‌ ಅಥವಾ ತರಕಾರಿಗಳನ್ನು ಇಡುವ ಕವರ್‌ನಲ್ಲಿ ತುಂಬಿ, ಫ್ರಿಜ್‌ನಲ್ಲಿ ಇಡಿ. ಕವರ್‌ ತಾಜಾವಾಗಿರಲು ಅದರಲ್ಲಿ ರಂದ್ರಗಳನ್ನು ಮಾಡಿ. ಬೆಂಡೆಕಾಯಿಯನ್ನು ನೀವು ಬಾಕ್ಸ್‌ ನಲ್ಲಿ ಹಾಕಿ ಇಡುತ್ತೀರಿ ಎಂದಾದರೆ, ಮೊದಲಿಗೆ ಬಾಕ್ಸ್‌ ಕೆಳಭಾಗದಲ್ಲಿ ಪೇಪರ್‌ ಅಥವಾ ಟಿಶ್ಯೂ ಪೇಪರ್‌ ಹರಡಿ. ನಂತರ ಸರಿಯಾಗಿ ಬೆಂಡೆಕಾಯಿಯನ್ನು ಬಾಕ್ಸ್‌ನಲ್ಲಿಡಿ.

ಯಾವ ಬೆಂಡೆಕಾಯಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಬಹುದು?: ಬೆಂಡೆಕಾಯಿಯಲ್ಲಿ ಪುಸಾ ಎ–4 ಅನ್ನು ಅತ್ಯುತ್ತಮ ಬೆಂಡೆಕಾಯಿ ಎಂದು ಪರಿಗಣಿಸಲಾಗಿದೆ. ಇದು ಮಧ್ಯಮ ಗಾತ್ರದಲ್ಲಿದ್ದು, ಕಡು ಹಸಿರು ಬಣ್ಣದಿಂದ ಕೂಡಿರುತ್ತದೆ. ಈ ರೀತಿಯ ಬೆಂಡೆಕಾಯಿಗಳು ಕಡಿಮೆ ಗ್ಲುಟನ್‌ ಹೊಂದಿರುತ್ತವೆ. ಹಾಗಾಗಿ ಅವು ಉತ್ತಮ ರುಚಿ ಹೊಂದಿದ್ದು, ಅನೇಕ ದಿನಗಳವರೆಗೆ ತಾಜಾತನವನ್ನು ಕಾಪಾಡಿಕೊಳ್ಳಬಲ್ಲದ್ದಾಗಿದೆ.

ಹೆಚ್ಚಿನ ತೇವಾಂಶವಿರುವ ಯಾವುದೇ ತರಕಾರಿ ಅಥವಾ ಹಣ್ಣುಗಳೊಂದಿಗೆ ಬೆಂಡೆಕಾಯಿಯನ್ನು ಇಡಬೇಡಿ. ಹಾಗೆ ಮಾಡುವುದರಿಂದ ಬೆಂಡೆಕಾಯಿಯ ಜೊತೆಗೆ ಉಳಿದ ತರಕಾರಿ, ಹಣ್ಣುಗಳೂ ಬಹಳ ಬೇಗ ಹಾಳಾಗಬಹುದು.

ಬೆಂಡೆಕಾಯಿಯ ಆರೋಗ್ಯ ಪ್ರಯೋಜನಗಳು

1) ಕಡಿಮೆ ಕ್ಯಾಲೋರಿ ಹೊಂದಿರುವ ಬೆಂಡೆಕಾಯಿ ತೂಕ ಇಳಿಕೆಗೆ ಉತ್ತಮವಾಗಿದೆ.

2) ಇದು ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಮಾಡುವುದರಿಂದ ಹೃದಯದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.

3) ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಊಟದ ನಂತರ ಸಕ್ಕರೆ ಮಟ್ಟ ಏರಿಕೆಯಾಗುವುದನ್ನು ತಡೆಯುತ್ತದೆ. ಹಾಗಾಗಿ ಮಧುಮೇಹಿಗಳೂ ಇದನ್ನು ಸೇವಿಸಬಹುದು.

4) ನಾರಿನಾಂಶ ಅಧಿಕವಾಗಿರುವ ಬೆಂಡೆಕಾಯಿಯು ಜೀರ್ಣಕ್ರಿಯೆಗೆ ಉತ್ತೇಜನ ನೀಡುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

5) ಬೆಂಡೆಕಾಯಿಯಲ್ಲಿರುವ ವಿಟಮಿನ್‌ ಸಿ ಅಂಶವು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.

6) ಇದರಲ್ಲಿರುವ ಕಬ್ಬಿಣಾಂಶವು ರಕ್ತಹೀನತೆಯನ್ನು ತಡೆಯುತ್ತದೆ.

7) ಬೆಂಡೆಕಾಯಿಯಲ್ಲಿರುವ ಬೀಟಾ ಕ್ಯಾರೋಟಿನ್‌ ಮತ್ತು ವಿಟಮಿನ್‌ ಎ ಅಂಶವು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ.

Whats_app_banner