Karnataka Monsoon Trekking: ಮಳೆಗಾಲದಲ್ಲಿ ಟ್ರೆಕ್ಕಿಂಗ್ ಮಾಡಲು ಕರ್ನಾಟಕದ ಈ 7 ತಾಣಗಳು ಹೇಳಿ ಮಾಡಿಸಿದಂತಿವೆ; ಒಮ್ಮೆ ಭೇಟಿ ಕೊಟ್ಟು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Karnataka Monsoon Trekking: ಮಳೆಗಾಲದಲ್ಲಿ ಟ್ರೆಕ್ಕಿಂಗ್ ಮಾಡಲು ಕರ್ನಾಟಕದ ಈ 7 ತಾಣಗಳು ಹೇಳಿ ಮಾಡಿಸಿದಂತಿವೆ; ಒಮ್ಮೆ ಭೇಟಿ ಕೊಟ್ಟು ನೋಡಿ

Karnataka Monsoon Trekking: ಮಳೆಗಾಲದಲ್ಲಿ ಟ್ರೆಕ್ಕಿಂಗ್ ಮಾಡಲು ಕರ್ನಾಟಕದ ಈ 7 ತಾಣಗಳು ಹೇಳಿ ಮಾಡಿಸಿದಂತಿವೆ; ಒಮ್ಮೆ ಭೇಟಿ ಕೊಟ್ಟು ನೋಡಿ

ಮುಂಗಾರಿನಲ್ಲಿ ಟ್ರೆಕ್ಕಿಂಗ್ ಮಾಡಲು ಕರ್ನಾಟಕದಲ್ಲಿರುವ 7 ಅತ್ಯುತ್ತಮ ತಾಣಗಳ ಮಾಹಿತಿ ಇಲ್ಲಿದೆ.

ಕುದುರೆಮುಖ ಮತ್ತು ಕೊಡಚಾದ್ರಿ ಮಳೆಗಾಲದಲ್ಲಿ ಟ್ರೆಕ್ಕಿಂಗ್ ಮಾಡಲು ಅತ್ಯುತ್ತಮ ತಾಣಗಳಾಗಿವೆ.
ಕುದುರೆಮುಖ ಮತ್ತು ಕೊಡಚಾದ್ರಿ ಮಳೆಗಾಲದಲ್ಲಿ ಟ್ರೆಕ್ಕಿಂಗ್ ಮಾಡಲು ಅತ್ಯುತ್ತಮ ತಾಣಗಳಾಗಿವೆ.

ಬೆಂಗಳೂರು: ಮುಂಗಾರು (Monsoon) ಸೀಜನ್. ನೀವೇನಾದರೂ ಇಂತಹ ಸಂದರ್ಭದಲ್ಲಿ ಟ್ರೆಕ್ಕಿಂಗ್ ಹೋಗಲು ಪ್ಲಾನ್ ಮಾಡಿಕೊಂಡಿದ್ದರೆ ಕರ್ನಾಟಕದಲ್ಲೇ ಅತ್ಯುತ್ತಮ ತಾಣಗಳಿವೆ (Karnataka Monsoon Trekking). ಮಳೆಗಾಲದಲ್ಲಿ ಪ್ರಕೃತಿಯ ಸೊಬಗನ್ನು ಸವಿಯಲು ಉತ್ಸಾಹಿ ಟ್ರೆಕ್ಕಿಂಗ್ (Trekking) ಮಾಡುವವರಿಗಾಗಿ ಪ್ರಮುಖ ಟ್ರೆಕ್ಕಿಂಗ್ ಸ್ಥಗಳನ್ನು ಇಲ್ಲಿ ನೀಡಲಾಗಿದೆ.

ಕುದುರೆಮುಖ: ಕಾಡಿನಲ್ಲಿ ಅಲೆಮಾರಿಯಾಗಿ ಅಲೆಯವುದನ್ನು ಚಾರಣಿಗರು ಸಖತ್ ಎಂಜಾಯ್ ಮಾಡ್ತಾರೆ. ಇದಕ್ಕೆ ಉತ್ತಮ ತಾಣಗಳಲ್ಲಿ ಕುದುರೆಮುಖ ಕೂಡ ಒಂದು. ಇಲ್ಲಿ ಶಿಖರವನ್ನು ಮುಟ್ಟುತ್ತಿದ್ದಂತೆ ನಿಮ್ಮನ್ನು ಹಚ್ಚ ಹಸಿರಿನ ಪ್ರಕೃತಿ ಸ್ವಾತಿಸಿದರೆ ಮೋಡಗಳು ನಿಮ್ಮನ್ನು ಹಾದು ಹೋಗುತ್ತವೆ. ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ 15 ಕಿಲೋ ಮೀಟರ್ ದೂರದಲ್ಲಿರುವ ಮುಲ್ಲೊಡಿ ಗ್ರಾಮದಿಂದ ಇಲ್ಲಿ ಸುಲಭವಾಗಿ ತಲುಪಬಹುದು.

ಬಾವಿಕೊಂಡ ಮತ್ತು ಕಿಲ್ಚಿಕಿಯಾ ಶಿಖರ: ಮಾನ್ಸೂನ್ ಟ್ರೆಕ್ಕಿಂಗ್‌ಗೆ ಅತ್ಯುತ್ತಮ ತಾಣಗಳಲ್ಲಿ ಒಂದಾದ ಬಾಲಿಕೊಂಡ ಕಿಲ್ಚಿಕಿಯಾದಲ್ಲಿ ಸುಂದರವಾದ ಪರ್ವತ ಶ್ರೇಣಿಗಳನ್ನು ಕಾಣಬಹುದು. ಮೋಡಗಳು ಇಲ್ಲಿ ನಿಮ್ಮನ್ನು ತಾಗಿ ಹೋಗುವ ಸನ್ನಿವೇಶಗಳ ಸಖತ್ ಖುಷಿ ನೀಡುತ್ತವೆ. ಮಳೆಗಾಲದಲ್ಲಿ ಸೌಂದರ್ಯವನ್ನು ಸವಿಯಲು ಇದು ಉತ್ತಮ ಸ್ಥಳಲಾಗಿದ್ದು, ಈ ಟ್ರೆಕ್ಕಿಂಗ್ ಕೂಡ ಮುಲ್ಲೋಡಿ ಗ್ರಾಮದಿಂದ ಆರಂಭವಾಗುತ್ತದೆ.

ಕೊಡಚಾದ್ರಿ: ದಟ್ಟವಾದ ಕಾಡುಗಳಿಂದ ಹಿಡಿದ ಎತ್ತರವಾದ ಜಲಪಾತಗಳ ವರೆಗೆ ಟ್ರೆಕ್ಕಿಂಗ್‌ನಲ್ಲಿ ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಖುಷಿಯನ್ನು ನೀಡುವ ತಾಣ ಕೊಡಚಾದ್ರಿ. ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಸಸ್ಯ ಹಾಗೂ ಪ್ರಾಣಿಗಳ ತಾಣ ಅಂತವೂ ಕೊಡಚಾದ್ರಿಯನ್ನು ಕರೆಯುತ್ತಾರೆ. ಈ ಸ್ಥಳವು ಮೂಕಾಂಬಿಕಾ ರಾಷ್ಟ್ರೀಯ ಉದ್ಯಾನವನದಲ್ಲಿ ಬರುತ್ತದೆ. ಇದೊಂದು ಪಾರಂಪರಿಕ ತಾಣವಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಬರುತ್ತದೆ.

ತಡಿಯಂಡಮೋಲ್ ಕೂರ್ಗ್ ಟ್ರೆಕ್: ತಡಿಯಂಡಮೋಲ್‌ಅನ್ನು ಕೂರ್ಗ್‌ನ ಅತ್ಯುನ್ನತ ಶಿಖರವೆಂದು ಕರೆಯಲಾಗುತ್ತಿದೆ. ಇಲ್ಲಿನ ಕಾಫಿ ತೋಟಗಳಿಂದ ಆವೃತವಾಗಿದ್ದು, ಮುಂಗಾರು ವೇಳೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಇಲ್ಲಿನ ಬಿಳಿ ಹೂಗಳಿಂದ ಆವೃತ್ತವಾಗುವ ಪರಿಸರ ಕಣ್ಣಿಗೆ ಮುದ ನೀಡುತ್ತದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ಈ ತಡಿಯಂಡಮೋಲ್‌ನಲ್ಲಿದೆ.

ಗಾಳಿಬೀಡು ಪೀಕ್ ಕೂರ್ಗ್ ಟ್ರೆಕ್: ಕೊಡಗಿನ ಕೂರ್ಗ್ ಜೀವನಶೈಲಿಯ ನಿಜವಾದ ಆನಂದವನ್ನು ಸವಿಯಬೇಕಾದರೆ ಗಾಳಿಬೀಡು ಪೀಕ್ ನಿಮಗಾಗಿ ಕಾಯುತ್ತಿದೆ. ಪಶ್ಚಿಮ ಘಟ್ಟದ ಮಧ್ಯೆ ಹಚ್ಚ ಹಸಿರಿನಿಂದ ಆವೃತವಾಗಿರುವ ಇಲ್ಲಿನ ಸೌಂದರ್ಯ, ಸಣ್ಣ ತೊರೆಗಳು ಹಾಗೂ ಕಣಿವೆಗಳನ್ನು ಕಣ್ತುಂಬಿಕೊಳ್ಳಬಹುದು.

ಕೊಟ್ಟೆ ಬೆಟ್ಟ ಕೂರ್ಗ್ ಟ್ರೆಕ್: ಕೂರ್ಗ್‌ನ 3ನೇ ಅತಿ ಎತ್ತರದ ಶಿಖರ ಕೊಟ್ಟ ಬೆಟ್ಟಗಳು. ಟ್ರೆಕ್ಕಿಂಗ್ ಮೂಲಕ ಈ ಬೆಟ್ಟಗಳು ಪಶ್ಚಿಮ ಘಟ್ಟಗಳ ಅದ್ಭುತ ಸೌಂದರ್ಯವನ್ನು ಸವಿಯಬಹುದು. ಕಾಫಿ ಎಸ್ಟೇಟ್‌ಗಳ ಮೂಲಕ ಹಾದು ಹೋಗುವ ಏಕೈಕ ಮಾರ್ಗವನ್ನು ಕೊಟ್ಟೆ ಬೆಟ್ಟ ಹೊಂದಿದೆ.

ನಿಶಾನಿ ಮೊಟ್ಟೆ ವೈಲ್ಡ್‌ಲೈಫ್‌ ಸರ್ಕ್ಯೂಟ್‌ ಟ್ರೆಕ್: ಚಾರಣಕ್ಕೆ ಬೆಸ್ಟ್‌ ಸ್ಥಳಗಳಲ್ಲಿ ನಿಶಾನಿ ಮೊಟ್ಟೆ ವೈಲ್ಡ್‌ಲೈಫ್‌ ಸರ್ಕ್ಯೂಟ್‌ ಕೂಡ ಒಂದು. ಇದು ಕಾವೇರಿ ವನ್ಯಜೀವಿ ಅಭಯಾರಣ್ಯದ ಒಂದು ಭಾಗವಾಗಿದ್ದು, ಅನೇಕ ವನ್ಯ ಜೀವಿಗಳು, ಸಾವಿರಾರು ಸಸ್ಯ ಪ್ರಭೇಗಳಿಗೆ ಇದು ನೆಲೆಯಾಗಿದೆ. ಭಾಗಮಂಡಲದ ತಲಕಾವೇರಿ ಬಳಿ ಬರುತ್ತದೆ.

Whats_app_banner