ತಿರುಪತಿ ಲಡ್ಡು ಮಾತ್ರವಲ್ಲ, ವಡಾ ಪ್ರಸಾದ ಕೂಡ ಫೇಮಸ್ಸು, ಈ ರೆಸಿಪಿ ಗೊತ್ತಿದ್ರೆ ಮನೆಯಲ್ಲೂ ತಿರುಪತಿ ಸ್ಟೈಲ್ ವಡಾ ಮಾಡಬಹುದು
ಹೀಗೆ ತಿರುಪತಿಯಲ್ಲಿ ಲಡ್ಡು ಪ್ರಸಾದದ ಜೊತೆ ವಡಾ ಪ್ರಸಾದವೂ ಇದೆಯಾದ್ರೂ ಇನ್ನೂ ಅಷ್ಟಾಗಿ ಪ್ರಸಿದ್ಧಿಗೆ ಬಂದಿಲ್ಲ. ಇಂತಹ ಹತ್ತಾರು ಕುತೂಹಲಕರ ವಿಷಯಗಳನ್ನು ಇನ್ನಷ್ಟು ತಿಳಿಯಲು ನಿರಂತರವಾಗಿ ಎಚ್‌ಟಿ ಕನ್ನಡ ಜಾಲತಾಣಕ್ಕೆಭೇಟಿನೀಡಿ.
ತಿರುಪತಿ ಪ್ರಸಾದವನ್ನು ಮನೆಯಲ್ಲೇ ನೀವು ಮಾಡಬಹುದು. ಇದನ್ನು ಮಾಡಲು ಉದ್ದಿನ ಕಾಳು ಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಉದ್ದಿನ ಬೇಳೆಯನ್ನು ಬಳಸಿ ವಡಾ ಮಾಡುತ್ತಾರೆ. ಆದರೆ ಈ ತಿರುಪತಿ ಉದ್ದಿನ ವಡಾವನ್ನು ಉದ್ದಿನ ಕಾಳು ಬಳಸಿ ಮಾಡಲಾಗುತ್ತದೆ. ಉದ್ದಿನ ಕಾಳು ಹಾಗೂ ಕಾಳುಮೆಣಸು ಮತ್ತು ಜೀರಿಗೆಯನ್ನು ಬಳಸಿ ಇದನ್ನು ಮಾಡಲಾಗುತ್ತದೆ.
ಉದ್ದಿನ ವಡಾ ತಯಾರಿಸುವ ವಿಧಾನವನ್ನು ನಾವಿಲ್ಲಿ ವಿವರಿಸಿದ್ಧೇವೆ. ಇದು ಒಂದು ಸರಳ ಮತ್ತು ರುಚಿಯಾದ ತಿನಿಸು. ಉದ್ದಿನ ವಡಾ ತಯಾರಿಸಲು ಬೇಕಾದ ಪದಾರ್ಥಗಳು ಮತ್ತು ವಿಧಾನ ಇಲ್ಲಿದೆ.
ಉದ್ದಿನ ವಡಾ ತಯಾರಿಸಲು ಬೇಕಾದ ಪದಾರ್ಥಗಳು:
- ಉದ್ದಿನ ಕಾಳು
- ಕಾಳುಮೆಣಸು
- ಜೀರಿಗೆ
- ಉಪ್ಪು
- ಎಣ್ಣೆ
ಉದ್ದಿನ ವಡಾ ತಯಾರಿಸುವ ವಿಧಾನ:
1. ಉದ್ದಿನ ಕಾಳನ್ನು ಏಳರಿಂದ ಎಂಟು ತಾಸು ನೆನೆಸಿಟ್ಟುಕೊಳ್ಳಿ.
2. ಕಾಳುಮೆಣಸು, ಜೀರಿಗೆ ಮತ್ತು ಉಪ್ಪನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ.
3. ನೆನೆಸಿದ ಉದ್ದಿನ ಕಾಳನ್ನು ತೊಳೆದು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ಬೀಸಿ.
4. ಪುಡಿ ಮಾಡಿದ ಮಿಶ್ರಣಕ್ಕೆ ಈ ಕಾಳಿನ ಮಿಶ್ರಣವನ್ನು ಸೇರಿಸಿಕೊಳ್ಳಿ.
ಇದನ್ನು ಮಾಡುವುದು ಅಷ್ಟು ಸುಲಭವಲ್ಲ ಯಾಕೆಂದರೆ ಸ್ವಲ್ಪ ಗಟ್ಟಿಯಾಗಿರುತ್ತದೆ. ನಂತರ ಆ ರುಬ್ಬಿದ ಮಿಶ್ರಣಕ್ಕೆ ಕಾಳು ಮೆಣಸಿನ ಪುಡಿ ಜೀರಿಗೆ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕೈಯಲ್ಲಿ ಮಿಶ್ರಣ ಮಾಡಬೇಕು. ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಒಂದು 10 ನಿಮಿಷಗಳ ಕಾಲ ನೀವು ಅದನ್ನು ಪದೇಪದೇ ಮಿಕ್ಸ್ ಮಾಡಬೇಕು. ಅದಾದ ನಂತರದಲ್ಲಿ ಒಂದು ಒದ್ದೆಯಾದ ಬಟ್ಟೆಯನ್ನು ತೆಗೆದುಕೊಳ್ಳಿ. ವಡೆ ಆಕಾರದಲ್ಲಿ ಒಂದು ಉಂಡೆಯನ್ನು ಇಟ್ಟು ತಟ್ಟಿಕೊಳ್ಳಿ. ಇದು ಕೂಡ ಗಟ್ಟಿಯಾಗಿಯೇ ಇರುತ್ತದೆ. ಯಾಕೆ ಇದು ಮೃದುವಾಗಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಆದರೆ ತಿರುಪತಿ ವಡಾವನ್ನು ಮಾಡುವ ವಿಧಾನವೇ ಹಾಗೆ.
ಬಾಳೆ ಎಲೆ ಬಳಸಬೇಡಿ
ಬಾಳೆ ಎಲೆಯಲ್ಲಿ ತಟ್ಟಿಕೊಳ್ಳಬಹುದು ಎಂದು ನೀವು ಯೋಚನೆ ಮಾಡುತ್ತಿದ್ದರೆ ಅದು ಸಾಧ್ಯವಿಲ್ಲ. ಯಾಕೆಂದರೆ ಇದು ಅಷ್ಟು ಗಟ್ಟಿಯಾಗಿರುವುದರಿಂದ ಬಾಳೆ ಎಲೆ ಹರಿದು ಹೋಗುತ್ತದೆ. ಹಾಗಾಗಿ ಬಟ್ಟೆಯ ಮೇಲೆ ನೀವು ಇದನ್ನು ತಟ್ಟಿಕೊಳ್ಳಿ. ಇನ್ನು ಕೈಗೆ ಚೆನ್ನಾಗಿ ಎಣ್ಣೆಯನ್ನು ಸವರಿಕೊಂಡು ಸ್ವಲ್ಪ ದಪ್ಪವಾಗಿ ಇರುವಾಗಲೇ ಇದನ್ನು ಬಿಸಿಯಾದ ಎಣ್ಣೆಯಲ್ಲಿ ಹಾಕಿ. ಇದು ಬೇಗ ಕರಿಯುವುದಿಲ್ಲ. ಇದು ಕರಿಯಲು ಐದರಿಂದ ಆರು ನಿಮಿಷಗಳು ಬೇಕು. ಹಾಗಾಗಿ ಗಡಿಬಿಡಿಯಿಂದ ಇದನ್ನು ತೆಗೆಯಬೇಡಿ ಕಪ್ಪು ಹಾಗೂ ಬಿಳುಪಿನ ಬಣ್ಣದಲ್ಲಿರುವ ಹಿಟ್ಟು ಕಂದು ಬಣ್ಣಕ್ಕೆ ಬಂದರೆ ವಡಾ ರೆಡಿ ಆಗಿದೆ ಎಂದು ಅರ್ಥ. ಹೀಗಾದರೆ ಮಾತ್ರ ಇನ್ನಷ್ಟು ರುಚಿಯಾಗಿರುತ್ತದೆ.