Teachers Day: ಪಾಠ, ಪ್ರವಚನಕ್ಕೆ ಮಾತ್ರ ಗುರುವಲ್ಲ, ಶಿಕ್ಷಕ ವಿದ್ಯಾರ್ಥಿಗಳ ಬಾಳಿನ ದಾರಿ ದೀಪ-teachers are not only guide for lessons and discourses teachers are the light of life for students smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Teachers Day: ಪಾಠ, ಪ್ರವಚನಕ್ಕೆ ಮಾತ್ರ ಗುರುವಲ್ಲ, ಶಿಕ್ಷಕ ವಿದ್ಯಾರ್ಥಿಗಳ ಬಾಳಿನ ದಾರಿ ದೀಪ

Teachers Day: ಪಾಠ, ಪ್ರವಚನಕ್ಕೆ ಮಾತ್ರ ಗುರುವಲ್ಲ, ಶಿಕ್ಷಕ ವಿದ್ಯಾರ್ಥಿಗಳ ಬಾಳಿನ ದಾರಿ ದೀಪ

"ಗುರುವಿನ ಗುಲಾಮನಾಗುವ ತನಕ‌ ದೊರೆಯದಣ್ಣ ಮುಕುತಿ" ಎಂಬ ಮಾತು ಬಹು ಹಿಂದಿನಿಂದಲೂ ಪ್ರಚಲಿತದಲ್ಲಿದೆ. ಜೀವನಕ್ಕೆ ದಾರಿ ದೀಪವಾದ ಎಲ್ಲ ಶಿಕ್ಷಕರಿಗೂ, ಬದುಕಿಗೆ ಗುರಿ ತೋರಿದ ಎಲ್ಲ ಗುರುಗಳಿಗೂ ಶುಭಾಶಯ ತಿಳಿಸಲು ಇದು ಒಂದು ಉತ್ತಮ ದಿನ ನಿಮ್ಮ ಶಿಕ್ಷಕರಿಗೆ ನೀವು ಪತ್ರದ ಮೂಲಕ ಒಂದು ನಮನ ತಿಳಿಸಿ.

ಶಿಕ್ಷಕರ ದಿನಾಚರಣೆ ಶುಭಾಶಯಗಳು
ಶಿಕ್ಷಕರ ದಿನಾಚರಣೆ ಶುಭಾಶಯಗಳು

ನಿಮ್ಮ ಜೀವನದಲ್ಲಿ ಕೆಲ ಶಿಕ್ಷಕರು ನಿಮ್ಮ ಇಷ್ಟದ ಟೀಚರ್ ಅಥವಾ ಲೆಕ್ಚರರ್ ಆಗಿರುತ್ತಾರೆ. ಅವರಿಗೆ ನೀವು ಒಂದು ಪತ್ರ ಬರೆಯುವ ಮೂಲಕ ನಿಮ್ಮ ಕೃತಜ್ಞತೆಯನ್ನು ತಿಳಿಸಿ, ಅವರಿಗೆ ಇಷ್ಟವಾಗುವ ರೀತಿಯಲ್ಲಿ ಅವರು ನಿಮಗೇನು ನೀಡುತ್ತಿದ್ದಾರೆ ಮತ್ತು ನೀವು ಅವರಿಂದ ಏನು ಪಡೆದುಕೊಂಡಿದ್ದೀರಿ ಎಂಬುದನ್ನು ಈ ರೀತಿ ತಿಳಿಸಿ. "ಗುರುವಿನ ಗುಲಾಮನಾಗುವ ತನಕ‌ ದೊರೆಯದಣ್ಣ ಮುಕುತಿ" ಎಂಬ ಮಾತು ಬಹು ಹಿಂದಿನಿಂದಲೂ ಪ್ರಚಲಿತದಲ್ಲಿದೆ.

ಈ ರೀತಿ ಪ್ರಣಾಮ ತಿಳಿಸಿ

ನಿಮ್ಮ ಮಾರ್ಗದರ್ಶನ ಮತ್ತು ಕ್ರಪೆಯಿಂದ ನಮ್ಮ ಜೀವನವನ್ನು ಬದಲಿಸಿಕೊಳ್ಳಲು ಅವಕಾಶವಾಯಿತು. ನೀವು ನಮಗೆ ಕೇವಲ ಶೈಕ್ಷಣಿಕ ವಿಷಯಗಳನ್ನು ಕಲಿಸುವುದಿಲ್ಲ, ನೀವು ನಮಗೆ ಜೀವನದ ಅರ್ಥವನ್ನು, ಶ್ರದ್ಧೆ ಮತ್ತು ನಿಷ್ಠೆಯ ಮಹತ್ವವನ್ನು ಮತ್ತು ಸಾಧನೆಯ ನಿಜವಾದ ಪಾಠಗಳನ್ನು ಕಲಿಸುತ್ತೀರಿ. ನೀವು ನೀಡಿದ ಮಾರ್ಗದರ್ಶನ ನಮ್ಮ ಜೀವನದ ಉದ್ದಗಲಕ್ಕೂ ಇರುತ್ತದೆ. ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಸದಾ ಮನಸಿಗೆ ಅರಿವಿಲ್ಲದಂತೆ ನೀವು ಹೇಳಿಕೊಟ್ಟ ಪಾಠವೂ ನಮ್ಮನ್ನು ಬಡಿದೆಚ್ಚರಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತದೆ. ನಿಮಗೆ ಅನಂತ ಧನ್ಯವಾದಗಳು. ನೀವು ಕಲಿಸಿದ ಪಾಠವನ್ನು ಎಲ್ಲರಿಗೂ ತಲುಪಿಸಲು ನಾವು ಮುಂದಿನ ಸಮಾಜದಲ್ಲಿ ನೀವು ನಡೆಯಲು ಕಲಿಸಿಕೊಟ್ಟಂತೆ ಹೆಜ್ಜೆ ಇಡುತ್ತಾ ಸಾಗುತ್ತೇವೆ. ನೀವು ನನ್ನ ಶಿಕ್ಷಕರೊಂದೇ ಆಗಿರಲಿಲ್ಲ, ನನ್ನ ಜೀವನದ ಮಾರ್ಗದರ್ಶಕ ಎಂದು ಸಹ ನನಗೆ ಭಾಸವಾಗಿದೆ.

ಅವರ ಕೈದೋಟದ ಹೂಗಳು ನಾವು

ಗುರುವಾದವನು ಮಕ್ಕಳನ್ನು ಅಥವಾ ವಿದ್ಯಾರ್ಥಿಗಳನ್ನು ಯಾವ ರೀತಿ ನೋಡಿಕೊಳ್ಳುತ್ತಾನೆ ಎಂದರೆ ರೈತನೊಬ್ಬ ತನ್ನ ಜಮೀನಿನಲ್ಲಿರುವ ಸಸಿಗಳನ್ನು ಹೇಗೆ ಆರೈಕೆ ಮಾಡುತ್ತಾನೋ ಆರೀತಿಯಲ್ಲಿ. ಪ್ರತಿನಿತ್ಯ ನೀರೆರೆದು ಅದರ ಪಾಲನೆ ಪೋಷಣೆ ಮಾಡಿದ ರೀತಿಯಲ್ಲಿ ಶಿಕ್ಷಕನಾದವನು ತನ್ನ ವಿದ್ಯಾರ್ಥಿಗಳಿಗೆ ವಿದ್ಯೆ, ಬುದ್ಧಿ ನೀಡಿ ಅವರನ್ನು ಸಲಹುತ್ತಾನೆ. ನಾವೆಲ್ಲ ಶಿಕ್ಷಕರ ಕೈದೋಟದ ಒಂದೊಂದು ಹೂಗಳಿದ್ದಂತೆ.

ಶಿಲೆಯೊಂದು ಶಿಲ್ಪಿಯ ಕೈಯ್ಯಲ್ಲಿ ಸಿಕ್ಕಿದ ನಂತರ ಮಾತ್ರ ಮೂರ್ತಿಯಾಗುತ್ತದೆ. ಅದೇ ರೀತಿ ನಾವೂ ಸಹ ನಿಮ್ಮಿಂದಾಗಿ ಬಾಳಿನಲ್ಲಿ ಈ ರೀತಿ ರೂಪ ತಾಳಿದ್ದೇವೆ. ಹಿಂದೆ ಗುರುವಿರಲಿ ಮುಂದೆ ಗುರಿಯಿರಲಿ ಎಂಬ ಒಂದು ಮಾತಿದೆ ಅದೇ ರೀತಿ ಶಿಕ್ಷಕರು ಯಾವಾಗಲೂ ನಮಗೆ ಗುರಿ ತೋರಿಸುತ್ತಾರೆ. ನಾವು ಆ ಗುರಿಯ ಪಥದಲ್ಲಿ ನಡೆಯಬೇಕಷ್ಟೆ. ಆಟ, ಪಾಠ, ಸಂಗೀತ -ನೃತ್ಯ ಎಲ್ಲವನ್ನು ಕೂಡ ಶಿಕ್ಷಕರೇ ಕಲಿಸುತ್ತಾರೆ. ಮನೆಯಲ್ಲಿ ನಾವು ತಂದೆ ತಾಯಿಯರನ್ನು ಯಾವ ರೀತಿ ಪ್ರೀತಿಸುತ್ತೇವೋ ಅದೇ ರೀತಿ ಶಾಲೆಯಲ್ಲಿ ಮಾರ್ಗದರ್ಶಕರಾದ ಶಿಕ್ಷಕರನ್ನು ಪ್ರೀತಿಸುತ್ತೇವೆ.

ನಮ್ಮ ಜೀವನದಲ್ಲಿ ನಾವು ದೊಡ್ಡ ನಗುವನ್ನು ಸಂತೋಷದ ಮತ್ತು ಸಾಧನೆಯ ಕ್ಷಣವನ್ನು ಕಾಣಬೇಕೆಂದರೆ ಅದಕ್ಕೆ ಕಾರಣಿಕರ್ತರು ಶಿಕ್ಷಕರೆ ಆಗಿರುತ್ತಾರೆ. ಪ್ರತಿಯೊಬ್ಬ ಶಿಕ್ಷಕರು ಸಹ ತಮ್ಮ ಶಿಷ್ಯರನ್ನು ಅಥವಾ ವಿದ್ಯಾರ್ಥಿಗಳನ್ನು ಜೀವನದಲ್ಲಿ ಮೇಲಕ್ಕೆತ್ತಲು ಸಾಧನೆ ಮಾಡಲು ಸ್ಪೂರ್ತಿ ತುಂಬುತ್ತಾರೆ.

ಅದೇ ರೀತಿ ನಾವೆಲ್ಲರೂ ಸಹ ಗುರುಗಳನ್ನ ಏಕವಚನದಲ್ಲಿ ಕರೆಯದೆ ಗೌರವ ಪೂರ್ವಕವಾಗಿ ಕಾಣಬೇಕು. ವಿದ್ಯಾರ್ಥಿಗಳು ಸಮಾಜ ಮತ್ತು ದೇಶದಲ್ಲಿ ಉತ್ತಮ ಪ್ರಜೆಯಾಗಿ ಅಭಿವೃದ್ದಿಹೊಂದಲು ಇದೇ ಶಿಕ್ಷಕರು ಕಾರಣ. ಹೀಗೆ ಕಾರಣವಾದ ಎಲ್ಲ ಗುರುವೃಂದಕ್ಕೂ ತುಂಬು ಹೃದಯದಿಂದ ಅನಂತಾನಂತ ಧನ್ಯವಾಗಳು.