Teachers Day 2024; ನೀವೇ ಸರಳ ಆಕರ್ಷಕ ಶುಭಾಶಯ ಪತ್ರ ಸಿದ್ಧಪಡಿಸಿ ಶಿಕ್ಷಕರಿಗೆ ಕೊಟ್ಟು ಅವರ ಖುಷಿ ಸಂಭ್ರಮ ಹೆಚ್ಚಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Teachers Day 2024; ನೀವೇ ಸರಳ ಆಕರ್ಷಕ ಶುಭಾಶಯ ಪತ್ರ ಸಿದ್ಧಪಡಿಸಿ ಶಿಕ್ಷಕರಿಗೆ ಕೊಟ್ಟು ಅವರ ಖುಷಿ ಸಂಭ್ರಮ ಹೆಚ್ಚಿಸಿ

Teachers Day 2024; ನೀವೇ ಸರಳ ಆಕರ್ಷಕ ಶುಭಾಶಯ ಪತ್ರ ಸಿದ್ಧಪಡಿಸಿ ಶಿಕ್ಷಕರಿಗೆ ಕೊಟ್ಟು ಅವರ ಖುಷಿ ಸಂಭ್ರಮ ಹೆಚ್ಚಿಸಿ

Teachers' Day 2024; ಶಿಕ್ಷಕರ ದಿನಾಚರಣೆ ಬಂದರೆ ವಿದ್ಯಾರ್ಥಿಗಳಿಗೆ ಸಂಭ್ರಮ. ಶಿಕ್ಷಕರಿಗೂ ಸಡಗರ. ಇಂತಹ ಸನ್ನಿವೇಶವನ್ನು ಇನ್ನಷ್ಟು ಆಪ್ತ, ಭಾವನಾತ್ಮವಾಗಿಸುವುದಕ್ಕೆ ನೀವೇ ಸರಳ ಆಕರ್ಷಕ ಶುಭಾಶಯ ಪತ್ರ ಸಿದ್ಧಪಡಿಸಿ ಶಿಕ್ಷಕರಿಗೆ ಕೊಟ್ಟು ಅವರ ಖುಷಿ ಸಂಭ್ರಮ ಹೆಚ್ಚಿಸಿ. ಇಲ್ಲಿವೆ ಕೆಲವು ಸಿಂಪಲ್ ಟ್ರಿಕ್ಸ್ ಮತ್ತು ಟಿಪ್ಸ್‌.

Teachers Day 2024; ನೀವೇ ಸರಳ ಆಕರ್ಷಕ ಶುಭಾಶಯ ಪತ್ರ ಸಿದ್ಧಪಡಿಸಿ ಶಿಕ್ಷಕರಿಗೆ ಕೊಟ್ಟು ಅವರ ಖುಷಿ ಸಂಭ್ರಮ ಹೆಚ್ಚಿಸಿ, ಇಲ್ಲಿವೆ ಕೆಲವು ಉದಾಹರಣೆ. (ಸಾಂಕೇತಿಕ ಚಿತ್ರ)
Teachers Day 2024; ನೀವೇ ಸರಳ ಆಕರ್ಷಕ ಶುಭಾಶಯ ಪತ್ರ ಸಿದ್ಧಪಡಿಸಿ ಶಿಕ್ಷಕರಿಗೆ ಕೊಟ್ಟು ಅವರ ಖುಷಿ ಸಂಭ್ರಮ ಹೆಚ್ಚಿಸಿ, ಇಲ್ಲಿವೆ ಕೆಲವು ಉದಾಹರಣೆ. (ಸಾಂಕೇತಿಕ ಚಿತ್ರ) (Instagram)

ಶಿಕ್ಷಕರ ದಿನಾಚರಣೆ ಬಂದೇ ಬಿಡ್ತು ನೋಡಿ. ಪ್ರತಿ ವರ್ಷದಂತೆ ಭಾರತದಲ್ಲಿ ಶಿಕ್ಷಕರ ದಿನಾಚರಣೆ ಸಂಭ್ರಮ ಇದೇ ಗುರುವಾರ (ಸೆಪ್ಟೆಂಬರ್ 5). ನಮ್ಮ ಬದುಕು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಅವರ ಈ ಪಾತ್ರವನ್ನು ನೆನಪಿಸುವುದಕ್ಕೆ, ಅವರನ್ನು ಸದಾ ಗೌರವದಿಂದಲೇ ಕಾಣುತ್ತಿದ್ದರೂ, ಸಾಂಕೇತಿಕವಾಗಿ ಗೌರವಿಸುವುದಕ್ಕೆ ಈ ದಿನ ಒಂದು ನಿಮಿತ್ತ. ಅವರ ಅವಿರತ ಶ್ರಮ, ಅಚಲ ಬದ್ಧತೆ ಸದಾ ಪ್ರಶಂಸೆಗಷ್ಟೇ ಅಲ್ಲ ಗೌರವಕ್ಕೂ ಪಾತ್ರವಾದುದು. 

ಈ ಶಿಕ್ಷಕರ ದಿನದಂದು ನಿಮ್ಮ ಪ್ರೀತಿಯ ಶಿಕ್ಷಕರಿಗೆ ನೀವೇ ಕೈಯಾರೆ ಮಾಡಿದ ಶುಭಾಶಯ ಪತ್ರವನ್ನು ಕೊಟ್ಟು ಅಚ್ಚರಿಗೊಳಿಸಿ. ಅವರ ಸಂಭ್ರಮ ಹೆಚ್ಚುವಂತೆ ಮಾಡಿ. ವಿದ್ಯಾರ್ಥಿಯೇ ಸ್ವತಃ ಮಾಡಿದ್ದು ಎನ್ನುವಾಗ ಅಲ್ಲೊಂದು ಭಾವನಾತ್ಮಕ ಸ್ಪರ್ಶ ಇರುತ್ತದೆ. ಅದಕ್ಕೆ ಶಿಕ್ಷಕರು ಸ್ಪಂದಿಸುತ್ತಾರೆ. ಅದು ಅವರ ಭಾವನೆಗಳನ್ನು ಇನ್ನಷ್ಟು ಮುದಗೊಳಿಸುವುದಲ್ಲದೆ, ಆ ಶುಭಾಶಯ ಪತ್ರದಲ್ಲಿರುವ ನಿಮ್ಮ ಅನುಭವ ಅವರಿಗೆ ಒಂದಿಷ್ಟು ಸಂತಸ ಕೊಟ್ಟೀತು. 

ನೀವೇ ಮಾಡಬಹುದಾದ ಕೆಲವು ಆಕರ್ಷಕ ಸಿಂಪಲ್ ಗ್ರೀಟಿಂಗ್ ಕಾರ್ಡ್ ಐಡಿಯಾಗಳು ಇಲ್ಲಿವೆ.  

ಶಿಕ್ಷಕರ ದಿನಾಚರಣೆ 2024; ಗ್ರೀಟಿಂಗ್ಸ್ ಕಾರ್ಡ್ ತಯಾರಿಸಲು ಸಿಂಪಲ್ ಐಡಿಯಾಗಳು 

 

ಗ್ರೀಟಿಂಗ್ ಕಾರ್ಡ್ ಮಾಡುವಾಗ ಗಮನಿಸಬೇಕಾದ ಕೆಲವು ವಿಷಯಗಳಿವು

1) ಗ್ರೀಟಿಂಗ್‌ ಕಾರ್ಡ್‌ನಲ್ಲಿರುವ ಸಂದೇಶ ನಿಮ್ಮದೇ ವಾಕ್ಯಗಳಲ್ಲಿ ಇರಲಿ. ಅದು ನಿಮ್ಮ ನೆನಪು, ಆ ಶಿಕ್ಷಕರ ಬಗ್ಗೆ ಇರುವ ಅಭಿಮಾನ ಇದ್ದರೆ ಹೃದ್ಯವಾಗಿರಲಿದೆ.

2) ಉತ್ತಮ ಗುಣಮಟ್ಟದ ಕಾಗದ, ಅದಕ್ಕೆ ಬೇಕಾದ ಅಲಂಕಾರ ಮಾಡಿ, ಗ್ರೀಟಿಂಗ್ ಕಾರ್ಡ್ ಅಥವಾ ಶುಭಾಶಯ ಪತ್ರ ಆಕರ್ಷಕವಾಗಿ ಕಾಣುವಂತೆ ಮಾಡಿ.

3) ಎಷ್ಟು ಸಾಧ್ಯವೋ ಅಷ್ಟು ಸಿಂಪಲ್ ಆಗಿರಲಿ. ಗ್ರೀಟಿಂಗ್ ಕಾರ್ಡ್‌ ಅಚ್ಚುಕಟ್ಟಾಗಿ, ನೋಡಲು ಆಕರ್ಷಕವಾಗಿರಲಿ.

4) ಗ್ರೀಟಿಂಗ್ ಕಾರ್ಡ್ ಮಾಡುವಾಗ ಬಳಸುವ ಕಲರ್‌ಗಳ ಬಗ್ಗೆ ಗಮನಕೊಡಿ. ಸಿಂಪಲ್ ಆಗಿ ಹೇಳಬೇಕು ಎಂದರೆ ಆಯಾ ಶಿಕ್ಷಕರಿಗೆ ಇಷ್ಟವಾಗುವ ಬಣ್ಣವನ್ನೇ ಆಯ್ಕೆ ಮಾಡಿಕೊಳ್ಳಿ

5) ಕ್ರಿಯೇಟಿವ್ ಆಗಿರುವ ಗ್ರೀಟಿಂಗ್ ಕಾರ್ಡ್ ಇರಲಿ. ಅದಕ್ಕೆ ಸ್ಟಿಕ್ಕರ್‌ಗಳನ್ನು ಅಂಟಿಸಿ, ಅಲಂಕಾರಿಕವಾಗಿ ಏನು ಮಾಡಬಹುದೋ ಅದನ್ನು ಮಾಡಿ. ಮೇಲೆ ಕೆಲವು ಇನ್‌ಸ್ಟಾಗ್ರಾಂ ಪೋಸ್ಟ್‌ಗಳ ಉದಾಹರಣೆ ನೀಡಲಾಗಿದೆ.

6) ಶುಭಾಶಯ ಪತ್ರದ ಚೌಕಟ್ಟಿನ ಕಡೆಗೂ ಗಮನಕೊಡಿ. ವಿನ್ಯಾಸವು ಆಕರ್ಷಕವಾಗಿದ್ದು, ನೋಟಕ್ಕೂ ಅದರ ಪಠ್ಯಕ್ಕೂ ಹೊಂದಿಕೆಯಾಗುವಂತೆ ಇರಲಿ.

7) ಗ್ರೀಟಿಂಗ್‌ಗೆ ಒಂದು ಅಚ್ಚುಕಟ್ಟಾದ ಫಿನಿಶಿಂಗ್ ಕೊಡಿ. ಅದರ ಮೂಲೆಗಳು ಸರಿಯಾಗಿರುವಂತೆ ಗಮನಿಸಿ. ಅಂಟು ಹಾಕಿ ಕೂರಿಸಿದಾಗ ಅಲ್ಲೆಲ್ಲೂ ಅಸ್ತವ್ಯಸ್ತವಾಗದಂತೆ ನೋಡಿ. ಒಂದು ರೀತಿಯಲ್ಲಿ ಪ್ರೊಫೆಷನಲ್ ಆಗಿರಲಿ.

ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನ

ಭಾರತದಾದ್ಯಂತ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತದ ಎರಡನೇ ರಾಷ್ಟ್ರಪತಿ ಹಾಗೂ ಮೊದಲ ಉಪ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಹುಟ್ಟಿದ ದಿನವೂ ಹೌದು. ಶಿಕ್ಷಣ ತಜ್ಞರಾಗಿದ್ದ ಅವರ ಕೊಡುಗೆಗಳನ್ನು ಸ್ಮರಿಸುವ ಸಲುವಾಗಿ ಶಿಕ್ಷಕರ ದಿನ ಆಚರಣೆಗೆ ಬಂತು. ರಾಧಾಕೃಷ್ಣನ್ ಅವರ ಅದ್ಭುತ ಬೋಧಕ ಗುಣಗಳು, ವರ್ಚಸ್ಸಿ ಕಾರಣಕ್ಕೆ ವಿದ್ಯಾರ್ಥಿಗಳು ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು.

ಡಾ. ರಾಧಾಕೃಷ್ಣನ್ ಅವರು 1962 ರಿಂದ 1967 ರವರೆಗೆ ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಅವರ ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಸೆಪ್ಟೆಂಬರ್ 5 ರಂದು ಅವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸಲು ಅವಕಾಶ ನೀಡುವಂತೆ ಕೇಳಿಕೊಂಡರು. ಆದರೆ ಅವರು ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ ಎಂಬ ಉಲ್ಲೇಖವಿದೆ.

Whats_app_banner