ವಾಟ್ಸ್​ಆ್ಯಪ್ ಕರೆಯನ್ನು ರೆಕಾರ್ಡ್ ಮಾಡುವುದು ಹೇಗೆ: ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್
ಕನ್ನಡ ಸುದ್ದಿ  /  ಜೀವನಶೈಲಿ  /  ವಾಟ್ಸ್​ಆ್ಯಪ್ ಕರೆಯನ್ನು ರೆಕಾರ್ಡ್ ಮಾಡುವುದು ಹೇಗೆ: ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್

ವಾಟ್ಸ್​ಆ್ಯಪ್ ಕರೆಯನ್ನು ರೆಕಾರ್ಡ್ ಮಾಡುವುದು ಹೇಗೆ: ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್

ಸ್ಮಾರ್ಟ್​​ಫೋನ್ ಬಳಕೆದಾರರು ಸಾಮಾನ್ಯ ಕರೆಗಳಂತೆಯೇ ವಾಟ್ಸ್​ಆ್ಯಪ್ ಕರೆಗಳನ್ನು ರೆಕಾರ್ಡ್ ಮಾಡಲು ಒಂದು ಮಾರ್ಗವನ್ನು ಹುಡುಕುತ್ತಿದ್ದಾರೆ. ಆದರೆ,ಅದು ಹೇಗೆ ಎಂಬುದು ತಿಳಿದಿಲ್ಲ. ನೀವು ವಾಟ್ಸ್​ಆ್ಯಪ್ ನಲ್ಲಿ ಸುಲಭವಾಗಿ ಕರೆಗಳನ್ನು ರೆಕಾರ್ಡ್ ಮಾಡಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. (ವರದಿ: ವಿನಯ್ ಭಟ್)

ವಾಟ್ಸ್ಆ್ಯಪ್ ಕರೆಯನ್ನು ರೆಕಾರ್ಡ್ ಮಾಡುವುದು ಹೇಗೆ: ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್
ವಾಟ್ಸ್ಆ್ಯಪ್ ಕರೆಯನ್ನು ರೆಕಾರ್ಡ್ ಮಾಡುವುದು ಹೇಗೆ: ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್ (Pixabay )

2009ರಲ್ಲಿ ಪ್ರಾರಂಭವಾದ ವಾಟ್ಸ್​ಆ್ಯಪ್ ಕಾಲಾನಂತರದಲ್ಲಿ ಅನೇಕ ಸುಧಾರಿತ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇಂದು ಸುಮಾರು ಶೇ. 99 ಮೊಬೈಲ್ ಬಳಕೆದಾರರು ಈ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಅನ್ನು ಬಳಸುತ್ತಾರೆ. ಕೆಲಸ, ಚಾಟ್‌ಗಳು ಅಥವಾ ಕೆಲವು ಯೋಜನೆಗಳಿಗಾಗಿ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ವಾಟ್ಸ್​ಆ್ಯಪ್ ಅತ್ಯಂತ ಅಗತ್ಯವಾದ ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್ ಆಗಿದೆ. ಒಬ್ಬರ ದೈನಂದಿನ ಕೆಲಸವನ್ನು ಸುಲಭಗೊಳಿಸಲು ಈ ಸಾಮಾಜಿಕ ಜಾಲತಾಣವು ತುಂಬಾ ಉಪಯುಕ್ತವಾಗಿದೆ. ಆದರೆ, ಇದರಲ್ಲಿ ಕರೆಗಳನ್ನು ರೆಕಾರ್ಡ್ ಮಾಡಬಹುದು ಎಂದು ಅನೇಕರಿಗೆ ತಿಳಿದಿಲ್ಲ.

ವಾಟ್ಸ್​ಆ್ಯಪ್ ಕರೆಗಳನ್ನು ರೆಕಾರ್ಡ್ ಮಾಡುವುದು ಹೇಗೆ?

ಸ್ಮಾರ್ಟ್​​ಫೋನ್ ಬಳಕೆದಾರರು ಸಾಮಾನ್ಯ ಕರೆಗಳಂತೆಯೇ ವಾಟ್ಸ್​ಆ್ಯಪ್ ಕರೆಗಳನ್ನು ರೆಕಾರ್ಡ್ ಮಾಡಲು ಒಂದು ಮಾರ್ಗವನ್ನು ಹುಡುಕುತ್ತಿದ್ದಾರೆ. ಆದರೆ, ಅದು ಹೇಗೆ ಎಂಬುದು ತಿಳಿದಿಲ್ಲ. ನೀವು ವಾಟ್ಸ್​ಆ್ಯಪ್‍ನಲ್ಲಿ ಸುಲಭವಾಗಿ ಕರೆಗಳನ್ನು ರೆಕಾರ್ಡ್ ಮಾಡಬಹುದು. ಅದು ಹೇಗೆ ಎಂಬುದನ್ನು ನೋಡೋಣ.

ಮೊದಲನೆಯದಾಗಿ, ವಾಟ್ಸ್​ಆ್ಯಪ್‍ನಲ್ಲಿ ಕರೆಗಳನ್ನು ರೆಕಾರ್ಡ್ ಮಾಡಲು ಯಾವುದೇ ಅಧಿಕೃತ ವೈಶಿಷ್ಟ್ಯವಿಲ್ಲ ಎಂಬುದು ತಿಳಿದುಕೊಳ್ಳಿ. ಅಂದರೆ, ವಾಟ್ಸ್​ಆ್ಯಪ್ ಯಾವುದೇ ಕರೆ ರೆಕಾರ್ಡಿಂಗ್ ಆಯ್ಕೆಯನ್ನು ನೀಡಿಲ್ಲ, ಆದರೆ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಕರೆಗಳನ್ನು ರೆಕಾರ್ಡ್ ಮಾಡಬಹುದು.

ಇದಕ್ಕಾಗಿ ಒಟ್ಟು 3 ಅಪ್ಲಿಕೇಶನ್‌ಗಳಿವೆ. ಆ ಆ್ಯಪ್‌ಗಳೆಂದರೆ ಕ್ಯೂಬ್ ಎಸಿಆರ್, ಸೇಲೆಸ್ಟ್ರೈಲ್ ಮತ್ತು ಎಸಿಆರ್ ಕಾಲ್ ರೆಕಾರ್ಡರ್. ಎಸಿಆರ್ ಕಾಲ್ ರೆಕಾರ್ಡರ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಏಕೆಂದರೆ ಇದು ತುಂಬಾ ಸರಳವಾದ ಅಪ್ಲಿಕೇಶನ್ ಆಗಿದೆ. ಎರಡನೇ ಸಾಲಿಟ್ರೈಲ್ ಪ್ರೀಮಿಯಂ ವೈಶಿಷ್ಟ್ಯದೊಂದಿಗೆ ಈ ಸೇವೆಯನ್ನು ನೀಡುತ್ತದೆ. ಅಂತೆಯೇ, ನೀವು ಕ್ಯೂಬ್ ಎಸಿಆರ್ ಮೂಲಕ ಸುಲಭವಾಗಿ ವಾಟ್ಸ್​ಆ್ಯಪ್ ಕರೆಗಳನ್ನು ರೆಕಾರ್ಡ್ ಮಾಡಬಹುದು.

ವಾಟ್ಸ್​ಆ್ಯಪ್ ಕರೆಗಳನ್ನು ರೆಕಾರ್ಡ್ ಮಾಡುವುದು ಹೇಗೆ?

- ಗೂಗಲ್ ಪ್ಲೇ ಸ್ಟೋರ್​ನಿಂದ Cube ACR, Sales trail ಅಥವಾ AC. ACR ಕಾಲ್ ರೆಕಾರ್ಡರ್‌ನಂತಹ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ.

- ಅದನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್ ಸ್ಟಾಲ್ ಮಾಡಿದ ನಂತರ, ಅಪ್ಲಿಕೇಶನ್‌ಗೆ ಅಗತ್ಯ ಅನುಮತಿಗಳನ್ನು ನೀಡಿ.

- ಕೆಲವು ಅಪ್ಲಿಕೇಶನ್‌ಗಳಲ್ಲಿ, ನೀವು ಕರೆ ರೆಕಾರ್ಡಿಂಗ್ ಅನ್ನು ಹಸ್ತಚಾಲಿತವಾಗಿ ಸಕ್ರಿಯಗೊಳಿಸಬೇಕಾಗಬಹುದು.

- ವಾಟ್ಸ್​ಆ್ಯಪ್ ಕರೆ ಪ್ರಾರಂಭವಾದ ತಕ್ಷಣ ಅಪ್ಲಿಕೇಶನ್‌ಗಳು ಸ್ವಯಂಚಾಲಿತವಾಗಿ ರೆಕಾರ್ಡಿಂಗ್ ಪ್ರಾರಂಭಿಸುತ್ತವೆ.

- ಕರೆ ಮುಗಿದ ನಂತರ, ನೀವು ಆ ಕಾಲ್ ರೆಕಾರ್ಡ್ ಆ್ಯಪ್ ತೆಗೆದು ರೆಕಾರ್ಡಿಂಗ್ ಅನ್ನು ಆಲಿಸಬಹುದು.

- ಇವುಗಳ ಜೊತೆಗೆ Otter.Ai app ಕೂಡ ವಾಯ್ಸ್ ರೆಕಾರ್ಡ್​ಗೆ ಪರಿಣಾಮಕಾರಿಯಾಗಿದ್ದು, ರೆಕಾರ್ಡ್ ಬಟನ್ ಕ್ಲಿಕ್ ಮಾಡುವ ಮೂಲಕ ವಾಟ್ಸ್ಆ್ಯಪ್ ಕರೆಗಳನ್ನು ದಾಖಲಿಸಿಕೊಳ್ಳಬಹುದು. ಈ ಆ್ಯಪ್​ನ ವಿಶೇಷತೆಯೆಂದರೇ ವಾಯ್ಸ್ ಕರೆಗಳು Text ಮಾದರಿಯಲ್ಲಿ ರೂಪಾಂತರಗೊಳ್ಳುತ್ತದೆ. ಇದರ ಮೂಲಕ ಪ್ರತಿ ತಿಂಗಳು ಉಚಿತವಾಗಿ 600 ನಿಮಿಷ ಕರೆಗಳನ್ನು ರೆಕಾರ್ಡ್ ಮಾಡಬಹುದು.

ವಾಟ್ಸ್ಆ್ಯಪ್​ನಲ್ಲಿ ವಾಯ್ಸ್ ಕಾಲ್‌ನಂತೆಯೇ ವಿಡಿಯೋ ಕಾಲ್ ಕೂಡ ರೆಕಾರ್ಡ್ ಮಾಡಬಹುದು. ಇದಕ್ಕೆ ನೀವು ಥರ್ಡ್ ಪಾರ್ಟಿ ಆ್ಯಪ್ ಮೊರೆಹೋಗಬೇಕು. ಡಿಯು ರೆಕಾರ್ಡರ್‌ ಆ್ಯಪ್ ಸುಲಭವಾದ ಮತ್ತು ಉತ್ತಮ ಸ್ಕ್ರೀನ್‌ ರೆಕಾರ್ಡರ್ ಆಪ್‌ ಆಗಿದೆ. ಈ ಆ್ಯಪ್‌ ಹೆಚ್ಚು ಬಳಕೆದಾರ ಸ್ನೇಹಿಯಾಗಿದ್ದು, ಸ್ಕ್ರೀನ್‌ ಮೇಲಿನ ಪ್ಲೋಟಿಂಗ್‌ ಐಕಾನ್‌ ಮೂಲಕ ಸ್ಕ್ರೀನ್‌ ರೆಕಾರ್ಡ್ ಮಾಡಬಹುದಾಗಿದೆ.

Whats_app_banner