ಕನ್ನಡ ಸುದ್ದಿ  /  Lifestyle  /  Technology News Voice Message In Text Whatsapp To Introduce Transcription Feature For Android Rmy

ಧ್ವನಿ ಸಂದೇಶ ಟೆಕ್ಸ್ಟ್ ಮೆಸೇಜ್‌ಗೆ ಬದಲಾಗುತ್ತೆ; ಆಂಡ್ರಾಯ್ಡ್ ಫೋನ್‌ಗಳಿಗೆ ಟ್ರಾನ್ಸ್‌ಕ್ರಿಪ್ಷನ್ ವೈಶಿಷ್ಟ್ಯ ಪರಿಚಯಿಸಲಿರುವ ವಾಟ್ಸಾಪ್‌

ಆಂಡ್ರಾಯ್ಡ್ ಬಳಕೆದಾರರಿಗೆ ವಾಯ್ಸ್ ಟ್ರಾನ್ಸ್‌ಕ್ರಿಪ್ಷನ್ ವೈಶಿಷ್ಟ್ಯವನ್ನು ಪರಿಚಯಿಸಲು ವಾಟ್ಸಾಪ್ ನಿರ್ಧರಿಸಿದ್ದು, ಇದಕ್ಕೆ ಸಿದ್ಧತೆಗಳನ್ನು ಆರಂಭಿಸಿದೆ. ಏನಿದು ವಾಯ್ಸ್ ಟ್ರಾನ್ಸ್‌ಕ್ರಿಪ್ಷನ್ ಅನ್ನೋದರ ಮಾಹಿತಿ ಇಲ್ಲಿದೆ.

ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಪರಿಚಿಸಲು ಮುಂದಾಗಿದೆ. ವಾಯ್ಸ್ ಮೆಸೇಜ್ ಅನ್ನು ಟೆಕ್ಸ್ಟ್ ಮೆಸೇಜ್‌ಗೆ ಪರಿವರ್ತಿಸುವ ವೈಶಿಷ್ಯವನ್ನು ತರಲಿದೆ. (Bloomberg)
ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಪರಿಚಿಸಲು ಮುಂದಾಗಿದೆ. ವಾಯ್ಸ್ ಮೆಸೇಜ್ ಅನ್ನು ಟೆಕ್ಸ್ಟ್ ಮೆಸೇಜ್‌ಗೆ ಪರಿವರ್ತಿಸುವ ವೈಶಿಷ್ಯವನ್ನು ತರಲಿದೆ. (Bloomberg)

ಬೆಂಗಳೂರು: ಆಂಡ್ರಾಯ್ಡ್ ಫೋನ್ (Android Phone) ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲು ಜಗತ್ತಿನ ದೈತ್ಯ ಟೆಕ್ ಸಂಸ್ಥೆ ಮೇಟಾ ಅಂಗ ಸಂಸ್ಥೆ ವಾಟ್ಸಾಪ್ (WhasApp) ಮುಂದಾಗಿದೆ. ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಮತ್ತಷ್ಟು ಸುಲಭವಾಗಿಸುತ್ತದೆ. ಏನಾಪ್ಪ ಈ ಹೊಸ ವೈಶಿಷ್ಟ್ಯ ಎಂಬ ಕುತೂಹಲ ನಿಮ್ಮಲ್ಲೂ ಇರಬಹುದು. ಸಾಮಾನ್ಯವಾಗಿ ಟೆಕ್ಸ್ಟ್ ಸಂದೇಶಗಳು (Text Message) ನಿಧಾನ ಎಂಬ ಕಾರಣಕ್ಕೆ ವೇಗದ ಸಂದೇಶಗಳಿಗಾಗಿ ವಾಯ್ಸ್ ಮೆಸೇಜ್ (Voice Message) ಮಾಡಲಾಗುತ್ತದೆ. ಇದೀಗ ವಾಟ್ಸಾಪ್ ತನ್ನ ಬಳಕೆದಾರರಿಗೆ ಧ್ವನಿ ಸಂದೇಶಗಳನ್ನೇ ಟೆಕ್ಸ್ಟ್ ಸಂದೇಶಗಳನ್ನಾಗಿ ಬದಲಾಯಿಸುವ ವಾಯ್ಸ್ ಟ್ರಾನ್ಸ್‌ಕ್ರಿಪ್ಷನ್‌ (Voice Transcription) ಅನ್ನು ಪರಿಚಯಿಸಲು ಮುಂದಾಗಿದೆ. ಇದು ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ಅನುಭವವನ್ನು ನೀಡುವ ಜೊತೆಗೆ ಸಂವಹನ ಮತ್ತಷ್ಟು ಸುಲಭವಾಗಿ ಹಾಗೂ ಅನುಕೂಲಕರವಾಗಲಿದೆ ಅನ್ನೋದು ವಾಟ್ಸಾಪ್ ಸಂಸ್ಥೆಯ ನಿರೀಕ್ಷೆಯಾಗಿದೆ.

2023 ರಲ್ಲಿ ಐಫೋನ್‌ಗಳಿಗೆ ಈ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ಇದೀಗ ಆಂಡ್ರಾಯ್ಡ್‌ಗಳಿಗೆ ಈ ಫೀಚರ್‌ನ್ನು ತರಲು ವಾಟ್ಸಪ್ ಮುಂದಾಗಿದೆ. ಸಾಮಾಜಿಕ ಮಾಧ್ಯಮದ ಅತ್ಯಂತ ಜನಪ್ರಿಯ ತಾಣ ಹಾಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಬಹಳ ದಿನಗಳಿಂದಲೂ ಅಚ್ಚುಮೆಚ್ಚಿನ ವೈಶಿಷ್ಟ್ಯವಾಗಿದೆ. ಬಳಕೆದಾರರು ಟೈಪ್ ಮಾಡಿ ಮೆಸೇಜ್ ಕಳಿಸುವ ಬದಲು ತ್ವರಿತವಾಗಿ ರವಾನಿಸಲು ಧ್ವನಿ ಸಂದೇಶಗಳನ್ನೇ ಹೆಚ್ಚು ಬಳಸುತ್ತಾರೆ. ಗದ್ದಲದ ವಾತಾವಾರಣ ಅಥವಾ ಶ್ರವಣ ದೋಷ ಹೊಂದಿರುವವರು ಸೇರಿದಂತೆ ವಿವಿಧ ಕಾರಣಗಳಿಂದ ಧ್ವನಿ ಸಂದೇಶಗಳನ್ನು ಕೇಳಿಸಿಕೊಳ್ಳಲಾಗದ ಸಂದರ್ಭಗಳಿವೆ.

ವಾಟ್ಸಾಪ್‌ನಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ವಾಯ್ಸ್ ಟ್ರಾನ್ಸ್‌ಕ್ರಿಪ್ಷನ್

ಧ್ವನಿ ಸಂದೇಶಗಳನ್ನು ಪಠ್ಯ ಸಂದೇಶಗಳನ್ನಾಗಿ ಮಾರ್ಪಾಡು ಮಾಡುವ ಸೌಲಭ್ಯವನ್ನು ಒದಗಿಸುವ ಮೂಲಕ ಈ ಸಮಸ್ಯೆಗಳಿಗೆ ಪರಿಹಾರವಾಗಿದೆ. ಬಳಕೆದಾರರು ವಾಯ್ಸ್ ಮೆಸೇಜ್ ಕೇಳಲು ಆಗದಿದ್ದರೆ ಅದರ ಟೆಕ್ಸ್ಟ್ ಮೆಸೇಜ್ ಸ್ವೀಕರಿಸಬಹುದು ಇಲ್ಲವೇ ಅರ್ಥ ಮಾಡಿಕೊಳ್ಳಬಹುದು.

ಆಂಡ್ರಾಯ್ಡ್ ಫೋನ್‌ಗಳಲ್ಲಿ ಇರುವ ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್‌ ಅನ್ನು ಟೆಕ್ಸ್ಟ್ ಮೆಸೇಜ್ ಆಗಿ ಬದಲಾಯಿಸಲು TheSpAndroid ಎಂಬುದನ್ನು ಅಭಿವೃದ್ಧಿಪಡಿಸಿದೆ. ಇದರ ಲೇಟೆಸ್ಟ್ ಬೇಟಾ ಕೋಡ್ ಅನ್ನು ರಿಲೀಸ್ ಮಾಡಿದ್ದು, 2.24.7.7 ಇದರ ವರ್ಷನ್ ಆಗಿದೆ. ವಾಟ್ಸ್ ಟ್ರಾನ್ಸ್‌ಕ್ರಿಪ್ಷನ್‌ಗೆ ಈ ಕೋಡ್ ಸಪೋರ್ಟ್ ಮಾಡಲಿದೆ. ಜೊತೆಗೆ ಬಳಕೆದಾರರು ಹೆಚ್ಚುವರಿಯಾಗಿ 150 ಜಿಬಿ ಡೇಟಾವನ್ನು ಬಳಸಿ ಈ ವೈಶಿಷ್ಟ್ಯವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸುತ್ತದೆ. ಆಂಡ್ರಾಯ್ಡ್ ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಫೀಚರ್ ಬಳಕೆಗೆ ಲಭ್ಯ ಇರಲಿದೆ.

ಈ ಹೊಸ ವೈಶಿಷ್ಟ್ಯವನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬ ನಿರ್ದಿಷ್ಟ ದಿನಾಂಕ ಸ್ಪಷ್ಟವಾಗಿಲ್ಲ. ಅತಿ ಶೀಘ್ರದಲ್ಲೇ ಬರೋದು ಪಕ್ಕಾ ಆಗಿದೆ. ಈ ವೈಶಿಷ್ಟ್ಯದಿಂದ ವಾಟ್ಸಾಪ್ ಬಳಕೆದಾರರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ವಿಭಿನ್ನ ಸನ್ನಿವೇಶಗಳು ಮತ್ತು ಸಂದರ್ಭಗಳಲ್ಲಿ ಬಳಕೆದಾರರಿಗೆ ಹೆಚ್ಚು ಪರಿಣಾಮ ಕಾರಿಯಾಗಿ ಸಂವಹನ ನಡೆಸಲು ಅನುಕೂಲ ಮಾಡಿಕೊಡಲಿದೆ.

ವಾಟ್ಸಾಪ್ ಬಳಕೆದಾರರ ಅನುಗುಣ ಹಾಗೂ ಬೇಡಿಕೆಗಳಿಗೆ ತಕ್ಕಂತ ಹೊಸ ಹೊಸ ಅಪ್ಡೇಟ್‌ಗಳನ್ನು ಮಾಡುತ್ತಲೇ ಇರುತ್ತದೆ. ಅದರ ಮುಂದುವರಿದ ಭಾಗವೇ ಈ ವಾಯ್ಸ್ ಮೆಸೇಜ್ ಟ್ರಾನ್ಸ್‌ಕ್ರಿಪ್ಷನ್. ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಈ ಸಾಮಾಜಿಕ ಜಾಲತಾಣದ ಸಂಸ್ಥೆ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದೆ. ಹೊಸ ವೈಶಿಷ್ಟ್ಯ ಎಷ್ಟರ ಮಟ್ಟಿಗೆ ಬಳಕೆದಾರರನ್ನು ಸೆಳೆಯಲಿದೆ ಅನ್ನೋದನ್ನು ಬಳಿಸಿದ ನಂತರವೇ ಗೊತ್ತಾಗಲಿದೆ.