Best Camera phone: ಅತ್ಯುತ್ತಮ್ ಕ್ಯಾಮೆರಾ ಫೋನ್ ಬೇಕೆ, ನಿಮ್ಮ ಬಜೆಟ್ 30 ಸಾವಿರ ರೂಗಿಂತ ಕಡಿಮೆಯೇ? ಈ ಲಿಸ್ಟ್ ಪರಿಶೀಲಿಸಿ
Best camera phone under 30000: ಈ ನವೆಂಬರ್ ತಿಂಗಳಲ್ಲಿ 30 ಸಾವಿರ ರೂಪಾಯಿ ಬಜೆಟ್‌ನೊಳಗೆ ಅತ್ಯುತ್ತಮ ಕ್ಯಾಮೆರಾ ಫೋನ್ ಖರೀದಿಸಲು ಬಯಸುವವರಿಗೆ ಇಲ್ಲೊಂದಿಷ್ಟು ಆಯ್ಕೆಗಳು ಇವೆ. ವಿವೊ ಟಿ3 ಆಲ್ಟ್ರಾ, ರಿಯಲ್‌ಮಿ 13 ಪ್ರೊ, ಮೊಟೊರೊಲಾ ಎಡ್ಜ್ 50 ಪ್ರೊ, ಒನ್‌ಪ್ಲಸ್ ನೋರ್ಡ್ 4 ಮುಂತಾದ ಫೋನ್‌ಗಳು ಉತ್ತಮವಾಗಿವೆ.
Best camera phone under 30000: ನಿಮ್ಮ ಬಜೆಟ್ 30 ಸಾವಿರ ರೂಪಾಯಿಗಿಂತ ಕಡಿಮೆ ಇರಬಹುದು. ಆದರೆ, ಒಳ್ಳೆಯ ಕ್ಯಾಮೆರಾ ಸ್ಮಾರ್ಟ್‌ಫೋನ್ ಖರೀದಿಸಬೇಕೆಂದು ನೀವು ಬಯಸುವಿರಿ. ಈ ಬಜೆಟನಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್‌ಗಳ ಇವೆ. ಆದರೆ, ಎಲ್ಲವೂ ಅತ್ಯುತ್ತಮ ಕ್ಯಾಮೆರಾ ಹೊಂದಿವೆ ಎಂದು ಹೇಳಲಾಗದು. ನಿಮ್ಮ ಈ ಗೊಂದಲ ಪರಿಹರಿಸುವ ಸಲುವಾಗಿ ವಿವಿಧ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳ ಪರಿಚಯವನ್ನು ಇಲ್ಲಿ ನೀಡಿದ್ದೇವೆ. ವಿವೊ ಟಿ3 ಆಲ್ಟ್ರಾ, ರಿಯಲ್‌ಮಿ 13 ಪ್ರೊ, ಮೊಟೊರೊಲಾ ಎಡ್ಜ್ 50 ಪ್ರೊ, ಒನ್‌ಪ್ಲಸ್ ನೋರ್ಡ್ 4 ಮುಂತಾದ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳ ವಿವರ ಇಲ್ಲಿ ನೀಡಲಾಗಿದೆ.
ನವೆಂಬರ್ ತಿಂಗಳಲ್ಲಿ ಖರೀದಿಸಬಹುದಾದ 30 ಸಾವಿರ ರೂಪಾಯಿಯೊಳಗಿನ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳು
1) ವಿವೊ ಟಿ3 ಆಲ್ಟ್ರಾ
ಇದು 5G 6.78-ಇಂಚಿನ 3D ಕರ್ವ್ಡ್ ಅಮೊಲೆಡ್ ಡಿಸ್‌ಪ್ಲೇ ಹೊಂದಿದೆ. ಇದು 1.5K ರೆಸಲ್ಯೂಶನ್ (2800 x 1260) ಹೊಂದಿದೆ. ಇದರ ಪರದೆಯು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. 1.07 ಬಿಲಿಯನ್ ಬಣ್ಣಗಳನ್ನು ರೆಂಡರಿಂಗ್ ಮಾಡುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಆಂಡರಾಯ್ಡ್ 14 ಆಧರಿತ ಫನ್‌ಟಚ್ ಆಪರೇಟಿಂಗ್ ಸಿಸ್ಟಮ್ 14 ಇದೆ. ವಿವೊ ಟಿ3 ಆಲ್ಟ್ರಾವು ಅಲ್ಟ್ರಾ ಮೀಡಿಯಾ ಟೆಕ್ ಡೈಮೆನ್ಸಿಟಿ 9200+ ಚಿಪ್‌ಸೆಟ್ ಹೊಂದಿದೆ. ಇದು 12GB ಯ RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊದಿದೆ. ಇದು 80W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡುವಂತಹ 5500mAh ಬ್ಯಾಟರಿ ಪ್ಯಾಕ್ ಹೊಂದಿದೆ. ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಇದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು 8 ಮೆಗಾ ಫಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಜೊತೆಗೆ 50 ಮೆಗಾ ಫಿಕ್ಸೆಲ್ ಸೋನಿ IMX921 ಪ್ರೈಮರಿ ಕ್ಯಾಮೆರಾ ಇದೆ. ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50 ಮೆಗ ಫಿಕ್ಸೆಲ್‌ನ ಮುಂಭಾಗದ ಕ್ಯಾಮೆರಾ ಹೊಂದಿದೆ. ಕಡಿಮೆ ಬೆಳಕಿನ ಉತ್ತಮ ಫೋಟೋಗ್ರಫಿಗಾಗಿ ‘ಔರಾ ರಿಂಗ್ ಲೈಟ್’ ಹೊಂದಿದೆ.
2) ರಿಯಲ್‌ಮಿ 13 ಪ್ರೊ
ರಿಯಲ್‌ಮಿ 13 ಪ್ರೊ 6.7-ಇಂಚಿನ ಅಮೊಲೆಡ್ ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 2000 nits ನ ಗರಿಷ್ಠ ಬ್ರೈಟ್‌ನೆಸ್ ನೀಡುತ್ತದೆ. ಸ್ನ್ಯಾಪ್‌ಡ್ರಾಗನ್ 7s Gen 2 5G ಚಿಪ್ ಹೊದಿದೆ. 9-ಲೇಯರ್ 3D VC ಕೂಲಿಂಗ್ ಸಿಸ್ಟಮ್ ಹೊಂದಿದೆ. ಡ್ಯುಯಲ್-ಕ್ಯಾಮೆರಾ ವ್ಯವಸ್ಥೆ ಹೊಂದಿದೆ. ಇದು 50MP ಸೋನಿ LYT-600 ಮುಖ್ಯ ಸೆನ್ಸಾರ್ ಮತ್ತು 8 ಮೆಗಾ ಫಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಕ್ಯಾಮೆರಾ ಹೊಂದಿದೆ. ಎಐ ಪ್ಯೂರ್ ಬೊಕೆ, ಎಐ ನ್ಯಾಚುರಲ್ ಸ್ಕಿನ್ ಟೋನ್, ಎಐ ಅಲ್ಟ್ರಾ ಕ್ಲಾರಿಟಿ ಮತ್ತು ಎಐ ಗ್ರೂಪ್ ಫೋಟೋ ಮುಂತಾದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಫೀಚರ್ಸ್‌ಗಳನ್ನು ಹೊಂದಿದೆ.
3) ಮೊಟೊರೊಲಾ ಎಡ್ಜ್ 50 ಪ್ರೊ
ಮೊಟೊರೊಲಾ ಎಡ್ಜ್ 50 ಪ್ರೊ 5ಜಿಯಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಚಿಪ್‌ಸೆಟ್ ಇದೆ. ಇದು 8 ಜಿಬಿ ರಾಮ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 6.7-ಇಂಚಿನ FHD+ P- ಒಲೆಡ್ ಡಿಸ್‌ಪ್ಲೇ ಜೊತೆಗೆ 144 Hz ರಿಫ್ರೆಶ್ ರೇಟ್, 2,000 nits ವರೆಗೆ ಗರಿಷ್ಠ ಬ್ರೈಟ್‌ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಸೇಫ್ಟಿ ಹೊಂದಿದೆ. ಹಿಂಭಾಗದಲ್ಲಿ 50 ಮೆಗಾ ಫಿಕ್ಸೆಲ್ + 13 ಮೆಗಾ ಫಿಕ್ಸೆಲ್ + 10 ಮೆಗಾ ಫಿಕ್ಸೆಲ್ ಟ್ರಿಪಲ್-ಕ್ಯಾಮೆರಾ ಸೆಟಪ್ ಹೊಂದಿದೆ. ಮುಂಭಾಗದಲ್ಲಿ 50 ಮೆಗಾ ಫಿಕ್ಸೆಲ್ ಕ್ಯಾಮೆರಾ ಇರುವುದು ಸೂಪರ್ ಎನ್ನಬಹುದು. ಸೆಲ್ಪಿಗಾಗಿ ಇದು ಬೆಸ್ಟ್ ಕ್ಯಾಮೆರಾ ಎಂದರೂ ತಪ್ಪಾಗದು. 4500 mAh ಬ್ಯಾಟರಿ ಹೊಂದಿದೆ.
4) ಒನ್‌ಪ್ಲಸ್ ನೋರ್ಡ್ 4
ಒನ್‌ಪ್ಲಸ್ ನೋರ್ಡ್ 4 ಕೂಡ 30 ಸಾವಿರ ರೂಪಾಯಿಯೊಳಗೆ ದೊರಕುವ ಇನ್ನೊಂದು ಅತ್ಯುತ್ತಮ ಕ್ಯಾಮೆರಾ ಫೋನ್. 6.74-ಇಂಚಿನ ಅಮೊಲೆಡ್ ಡಿಸ್‌ಪ್ಲೇ ಹೊಂದಿದೆ. ಇದು ಅಮೊಲೆಡ್ ಡಿಸ್‌ಪ್ಲೇ 2772 × 1240 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 2,150 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ದೊರಕುತ್ತದೆ. ಇದರ ಕ್ಯಾಮೆರಾ ಉತ್ತಮವಾಗಿದೆ. ಹಿಂಭಾಗದಲ್ಲಿ 50MP ಸೋನಿ ಲೈಯಾ ಕ್ಯಾಮೆರಾ ಇದೆ. 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಕೂಡ ಜತೆಗಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 16 ಮೆಗಾ ಫಿಕ್ಸೆಲ್ ಕ್ಯಾಮೆರಾ ಹೊಂದಿದೆ. 5,500mAh ಬ್ಯಾಟರಿ ಹೊಂದಿದೆ.