Smartphone Under 25000: ರಿಯಲ್‌ಮಿ 13 ಪ್ಲಸ್‌ 5ಜಿ ಮತ್ತು ವಿವೋ ಟಿ3 ಪ್ರೊ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಹೋಲಿಕೆ-technology news realme 13 5g vs vivo t3 pro 5g smartphone comparison which smartphone to buy under 25000 pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Smartphone Under 25000: ರಿಯಲ್‌ಮಿ 13 ಪ್ಲಸ್‌ 5ಜಿ ಮತ್ತು ವಿವೋ ಟಿ3 ಪ್ರೊ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಹೋಲಿಕೆ

Smartphone Under 25000: ರಿಯಲ್‌ಮಿ 13 ಪ್ಲಸ್‌ 5ಜಿ ಮತ್ತು ವಿವೋ ಟಿ3 ಪ್ರೊ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಹೋಲಿಕೆ

Realme 13+ 5G vs Vivo T3 Pro 5G: 25 ಸಾವಿರ ರೂಪಾಯಿಗಿಂತ ಕಡಿಮೆ ದರದ ಸ್ಮಾರ್ಟ್‌ಫೋನ್‌ ಖರೀದಿಸಲು ಯೋಜಿಸುತ್ತಿದ್ದೀರಾ? ರಿಯಲ್‌ಮಿ 13 ಪ್ಲಸ್‌ 5ಜಿ ಮತ್ತು ವಿವೋ ಟಿ3 ಪ್ರೊನಲ್ಲಿ ಯಾವುದು ಉತ್ತಮವಾಗಿದೆ ಎಂದು ನೋಡೋಣ.

ರಿಯಲ್‌ಮಿ 13 ಪ್ಲಸ್‌ 5ಜಿ ಮತ್ತು ವಿವೋ ಟಿ3 ಪ್ರೊ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ?
ರಿಯಲ್‌ಮಿ 13 ಪ್ಲಸ್‌ 5ಜಿ ಮತ್ತು ವಿವೋ ಟಿ3 ಪ್ರೊ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ?

Realme 13+ 5G vs Vivo T3 Pro 5G: ರಿಯಲ್‌ಮಿಯು ಇತ್ತಿಚೆಗೆ 13ನೇ ಸರಣಿಯ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಇದು ವಿವೊ, ಐಕ್ಯೂ00, ಒನ್‌ಪ್ಲಸ್‌ ಮತ್ತು ಇತರೆ ಪ್ರಮುಖ ಸ್ಮಾರ್ಟ್‌ಫೋನ್‌ಗಳಿಗೆ ನೇರ ಸ್ಪರ್ಧೆ ಒಡ್ಡುವಂತೆ ಇದೆ. ನೂತನ ರಿಯಲ್‌ಮಿ 13 ಎರಡು ಆಯ್ಕೆಗ೫ಳಲ್ಲಿ ದೊರಕುತ್ತದೆ. ರಿಯಲ್‌ಮಿ 13 5ಜಿ ಮತ್ತು ರಿಯಲ್‌ಮಿ 13+ 5ಜಿ ಆವೃತ್ತಿಗಳಲ್ಲಿ ಲಭ್ಯವಿದೆ. ಇದರಲ್ಲಿ ರಿಯಲ್‌ಮಿ 13+ 5ಜಿ ಜತೆಗೆ ವಿವೋ ಟಿ3 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಹೋಲಿಕೆ ಮಾಡಲಾಗಿದೆ. ಇವೆರಡು ಸ್ಮಾರ್ಟ್‌ಫೋನ್‌ಗಳ ದರ 25 ಸಾವಿರ ರೂಪಾಯಿಗಿಂತ ಕಡಿಮೆ ಇದೆ. ನೀವು ಈ ಬಜೆಟ್‌ನೊಳಗೆ ಸ್ಮಾರ್ಟ್‌ಫೋನ್‌ ಖರೀದಿಸಲು ಉದ್ದೇಶಿಸಿದರೆ ಇವೆರಡರಲ್ಲಿ ಯಾವುದರಲ್ಲಿ ಹೆಚ್ಚು ಫೀಚರ್‌ಗಳಿವೆ ಎಂದು ತಿಳಿದುಕೊಳ್ಳಬಹುದು.

ರಿಯಲ್‌ಮಿ 13 ಪ್ಲಸ್‌ 5ಜಿ ವರ್ಸಸ್‌ ವಿವೋ ಟಿ3 ಪ್ರೊ

ವಿನ್ಯಾಸ ಮತ್ತು ಡಿಸ್‌ಪ್ಲೇ

ರಿಯಲ್‌ಮಿ 13 + 5ಜಿಯು ಡ್ಯೂಯೆಲ್‌ ಟೋನ್‌ನ ರಿಯಲ್‌ ಪ್ಯಾನೆಲ್‌ ವಿನ್ಯಾಸ ಹೊಂದಿದೆ. ಇದು ಸರ್ಕುಲರ್‌ ಕ್ಯಾಮೆರಾ ಮಾದರಿಯಾಗಿದೆ. ಇದು ಅಲ್ಟ್ರಾ ಸ್ಲಿಮ್‌ ವಿನ್ಯಾಸ ಎಂದು ಕಂಪನಿ ತಿಳಿಸಿದೆ. 7.6 ಮಿಮಿ ತೆಳ್ಳಗಿದೆ. ವಿವೋ ಟಿ3 ಪ್ರೊ 5ಜಿಯು ವೆಗನ್‌ ಲೆದರ್‌ ಬ್ಯಾಕ್‌ ಪ್ಯಾನೆಲ್‌ ಹೊಂದಿದೆ. ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರೀಮಿಯಂ ಫೋನ್‌ನಂತೆ ಇದು ಕಾಣಿಸುತ್ತದೆ. ರಿಯಲ್‌ಮಿಯು IP65 ಧೂಳು ಮತ್ತು ಜಲ ನಿರೋಧಕ ರೇಟಿಂಗ್‌ ಹೊಂದಿದೆ. ವಿವೋ ಟಿ3 ಪ್ರೊ IP64 ರೇಟಿಂಗ್‌ ಹೊಂದಿದೆ.

ಡಿಸ್‌ಪ್ಲೇ ವಿಷಯದಲ್ಲಿ ರಿಯಲ್‌ಮಿ 13 ಪ್ಲಸ್‌ 5ಜಿ ಹೇಗಿದೆ ನೋಡೋಣ. ಇದು 6.67 ಇಂಚಿನ ಒಲೆಡ್‌ ಇಸ್ಪೋರ್ಟ್ಸ್‌ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್‌ ದರ ಮತ್ತು 2000nits ಪೀಕ್‌ ಬ್ರೈಟ್‌ನೆಸ್‌ ಹೊಂದಿದೆ. 1200Hz ಸ್ಯಾಂಪ್ಲಿಂಗ್‌ ದರ ಹೊಂದಿದೆ. ವಿವೋ ಟಿ3 ಪ್ರೊ 5ಜಿಯು ಸ್ಪೋರ್ಟ್ಸ್‌ 6.77 ಇಂಚಿನ ಎಫ್‌ಎಚ್‌ಡಿ ಪ್ಲಸ್‌ ಅಮೊಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್‌ ರೇಟ್‌ ಮತ್ತು 4500 nits ಪೀಕ್‌ ಬ್ರೈಟ್‌ನೆಸ್‌ ಹೊಂದಿದೆ.

ಕ್ಯಾಮೆರಾ ಹೇಗಿದೆ ಗುರು?

ಬಹುತೇಕರು ಸ್ಮಾರ್ಟ್‌ಫೋನ್‌ ಖರೀದಿಸುವಾಗ ಕ್ಯಾಮೆರಾ ಉತ್ತಮವಾಗಿರಲು ಬಯಸುತ್ತಾರೆ. ರಿಯಲ್‌ಮಿ 13 ಪ್ಲಸ್‌ 5ಜಿನಲ್ಲಿ ಡ್ಯೂಯೆಲ್‌ ಕ್ಯಾಮೆರಾ ವ್ಯವಸ್ಥೆ ಇದೆ. ಇದು 50 ಮೆಗಾಫಿಕ್ಸೆಲ್‌ನ ಸೋನಿ ಲೈಟ್‌ 600 ಮುಖ್ಯ ಕ್ಯಾಮೆರಾವಾಗಿದೆ. ಇದು ಒಐಎಸ್‌ ಬೆಂಬಲಿತವಾಗಿದೆ. ಸೆಲ್ಫಿ ತೆಗೆಯುವವರಿಗಾಗಿ 2 ಮೆಗಾ ಫಿಕ್ಸೆಲ್‌ನ ಸೆಕೆಂಡರಿ ಕ್ಯಾಮೆರಾವಿದೆ. ವಿವೋ ಟಿ3 ಪ್ರೊನಲ್ಲಿ 50 ಮೆಗಾ ಫಿಕ್ಸೆಲ್‌ನ ಸೋನಿ ಐಎಂಎಕ್ಸ್‌882 ಮುಖ್ಯ ಕ್ಯಾಮೆರಾ ಮತ್ತು 8 ಮೆಗಾ ಫಿಕ್ಸೆಲ್‌ ಆಲ್ಟ್ರಾ ವೈಡ್‌ ಕ್ಯಾಮೆರಾವಿದೆ.

ಪರ್ಫಾಮೆನ್ಸ್‌ ಮತ್ತು ಬ್ಯಾಟರಿ ಹೋಲಿಕೆ

ಪರ್ಫಾಮೆನ್ಸ್‌ ವಿಷಯದಲ್ಲಿ ಇವೆರಡು ಸ್ಮಾರ್ಟ್‌ಫೋನ್‌ಗಳು ಹೇಗಿವೆ ನೋಡೋಣ. ರಿಯಲ್‌ಮಿ 13 ಪ್ಲಸ್‌ 5ಜಿನಲ್ಲಿ ಡೈಮೆನ್ಸಿಟಿ 7300 ಎನರ್ಜಿ 5ಜಿ ಚಿಪ್‌ಸೆಟ್‌ ಇದೆ. ಜತೆಗೆ ಆರ್ಮ್‌ ಮಲಿ G615 ಜಿಪಿಯು ಇದೆ. ವಿವೊದಲ್ಲಿ ಸ್ನಾಪ್‌ಡ್ರಾಗನ್‌ 7 ಜನರೇಷನ್‌ 3 ಚಿಪ್‌ಸೆಟ್‌ ಇದೆ. ಇದು 8ಜಿಬಿ LPDDR4X ರಾಮ್‌ ಹೊಂದಿದೆ. ರಿಯಲ್‌ಮಿಯು 12 ಜಿಬಿ ರಾಮ್‌ ಮತ್ತು ಯುಎಫ್‌ಸಿ 3.1 ಸ್ಟೋರೇಜ್‌ ಹೊಂದಿದೆ. ಇದರಿಂದಾಗಿ ಪರ್ಫಾಮೆನ್ಸ್‌ ಅನನ್ಯವಾಗಿರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್‌ ವ್ಯವಸ್ಥೆ ಹೇಗಿದೆ? ರಿಯಲ್‌ಮಿಯು 5 ಸಾವಿರ ಎಂಎಎಚ್‌ ಮತ್ತು 80ಡಬ್ಲ್ಯು ಚಾರ್ಜಿಂಗ್‌ ಹೊಂದಿದೆ. ವಿವೋದಲ್ಲಿ 5500 ಎಂಎಚ್‌ ಬ್ಯಾಟರಿ ಮತ್ತು 80ಡಬ್ಲ್ಯು ಚಾರ್ಜಿಂಗ್‌ ಸ್ಪೀಡ್‌ ವ್ಯವಸ್ಥೆ ಇದೆ.

ದರವೆಷ್ಟು?

ರಿಯಲ್‌ಮಿ 13 + 5ಜಿ 8ಜಿಬಿ ರಾಮ್‌ ಮತ್ತು128 ಸ್ಟೋರೇಜ್‌ ವರ್ಷನ್‌ನ ದರ 22999 ರೂಪಾಯಿ ಇದೆ. ಇದು 8ಜಿ ರಾಮ್‌ ಮತ್ತು 128ಜಿಬಿ ಸ್ಟೋರೇಜ್‌ನ ವಿವೋ ಟಿ3 ಪ್ರೊನ ದರ 24999 ರೂ ಇದೆ.