TRAI New Rule: ಟ್ರಾಯ್​ನಿಂದ ಹೊಸ ರೂಲ್ಸ್; ಹೀಗೆ ಮಾಡಿದ್ರೆ ಸಿಮ್ ಕಾರ್ಡ್ ಬಂದ್ ಆಗೋದು ಗ್ಯಾರೆಂಟಿ-technology news trais new rule one violation could lead to sim card blocking prs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Trai New Rule: ಟ್ರಾಯ್​ನಿಂದ ಹೊಸ ರೂಲ್ಸ್; ಹೀಗೆ ಮಾಡಿದ್ರೆ ಸಿಮ್ ಕಾರ್ಡ್ ಬಂದ್ ಆಗೋದು ಗ್ಯಾರೆಂಟಿ

TRAI New Rule: ಟ್ರಾಯ್​ನಿಂದ ಹೊಸ ರೂಲ್ಸ್; ಹೀಗೆ ಮಾಡಿದ್ರೆ ಸಿಮ್ ಕಾರ್ಡ್ ಬಂದ್ ಆಗೋದು ಗ್ಯಾರೆಂಟಿ

TRAI New Rule: ನಕಲಿ ಕರೆಗಳು ಮತ್ತು ಮೆಸೇಜ್​ಗಳ ಸಂಖ್ಯೆ ದುಪ್ಪಟ್ಟು ಆಗುತ್ತಿರುವ ಕಾರಣ ಅವುಗಳ ತಡೆಗೆ ಟ್ರಾಯ್ ಹೊಸ ನಿಯಮ ಜಾರಿಗೆ ತಂದಿದೆ.

 ಸಿಮ್ ಕಾರ್ಡ್
ಸಿಮ್ ಕಾರ್ಡ್

TRAI New Rule: ಟೆಲಿಕಾಂ ನಿಯಂತ್ರಕ ಟ್ರಾಯ್ (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ) ಸಿಮ್​ ಕಾರ್ಡ್​ಗೆ ಸಂಬಂಧಿಸಿ ಹೊಸ ನಿಯಮ ಜಾರಿಗೆ ತಂದಿದೆ. ನಕಲಿ ಕಾಲ್ ಮತ್ತು ಮೆಸೇಜ್​ಗಳ ತಡೆಗೆ ಮತ್ತು ನಕಲಿ ಹಾಗೂ ಅನಧಿಕೃತ ಸಿಮ್​ ಕಾರ್ಡ್​ಗಳ ಬಳಕೆ ತಡೆಗಟ್ಟುವುದು ಮತ್ತು ಸಿಮ್​ ಕಾರ್ಡ್​ಗಳಿಗೆ ಭದ್ರತೆ ಒದಗಿಸುವುದಕ್ಕೆ ಸಂಬಂಧಿಸಿ ಯೋಜನೆ ರೂಪಿಸಿದೆ.

113 ಪುಟಗಳ ಪತ್ರ ಬಿಡುಗಡೆ ಮಾಡಿರುವ ಟ್ರಾಯ್​, ಕಾಲ್ಸ್ ಮತ್ತು ಮೆಸೇಜ್​​ಗಳ ಹೊಸ ನಿಯಮದ ಜೊತೆಗೆ ಕಳೆದ ಎರಡು ವರ್ಷಗಳಿಂದ ನಿರ್ಬಂಧಿಸಲಾದ ಸಿಮ್ ಕಾರ್ಡ್‌ಗಳ ಡೇಟಾವನ್ನೂ ಬಿಡುಗಡೆ ಮಾಡಿದೆ. ಸಿಮ್ ಕಾರ್ಡ್​ ಪಡೆಯಲು ಸರಿಯಾದ ಮಾಹಿತಿ ಮತ್ತು ವಿಳಾಸ ನೀಡಬೇಕು. ತಪ್ಪು ಮಾಹಿತಿ ಒದಗಿಸಿದರೆ ಸಿಮ್ ಕಾರ್ಡ್ ನಿರ್ಬಂಧಿಸಲಾಗುತ್ತದೆ ಅಥವಾ ದಂಡವನ್ನೂ ತೆರಬೇಕಾಗುತ್ತದೆ.

ಟ್ರಾಯ್ ಹೊಸ ನಿಯಮದ ಪ್ರಕಾರ, ಒಬ್ಬ ಗ್ರಾಹಕರು ತಮ್ಮ ಹೆಸರಿನಲ್ಲಿ ಎಷ್ಟು ಸಿಮ್​​ಗಳನ್ನು ಹೊಂದಬಹುದು ಎಂಬುದನ್ನು ತಿಳಿಸಿದೆ. ದೂರ ಸಂಪರ್ಕ ಕಾಯಿದೆ-2023 ಪ್ರಕಾರ, ಪ್ರಸ್ತುತ ಒಟ್ಟಾರೆ 9 ಸಿಮ್​ಗಳ ಖರೀದಿಗೆ ಅವಕಾಶ ಇದೆ. ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅವುಗಳ ಮಿತಿಯನ್ನು 6ಕ್ಕೆ ಇಳಿಸಲಾಗಿದೆ.

50ಕ್ಕೂ ಅಧಿಕ ಕರೆ, ಮೆಸೇಜ್ ಮಾಡಿದ್ರೆ ಪರಿಶೀಲನೆ

ನೀವು ಪ್ರತಿದಿನ 50ಕ್ಕೂ ಅಧಿಕ ಕಾಲ್ಸ್​ ಅಥವಾ ಮೆಸೇಜ್ ಮಾಡಿದರೆ ಆ ಸಿಮ್​ ಕಾರ್ಡ್​ ಅನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದು ಹೊಸ ನಿಯಮಗಳಲ್ಲಿ ತಿಳಿಸಲಾಗಿದೆ. ತನಿಖೆಯ ವೇಳೆ ನಿಯಮಗಳ ದುರ್ಬಳಕೆ ಕಂಡು ಬಂದರೆ ಸಿಮ್ ಕಾರ್ಡ್ ಬ್ಲಾಕ್ ಮಾಡಲಾಗುವುದು. ಟೆಲಿಕಾಂ ನಿಯಂತ್ರಕವು ನೋಂದಾಯಿಸದ ಟೆಲಿಮಾರ್ಕೆಟರ್‌ಗಳಿಗೂ ಬಳಕೆಯ ಮಿತಿಗಳನ್ನು ವಿಧಿಸಲಾಗಿದೆ. ಇದರ ಪ್ರಕಾರ, ಯಾವುದೇ ಮೊಬೈಲ್ ಸಂಖ್ಯೆಯಿಂದ (ನೋಂದಾಯಿತ ಟೆಲಿಮಾರ್ಕೆಟರ್) ಒಂದು ದಿನದಲ್ಲಿ ಗರಿಷ್ಠ 20 ಕಾಲ್ಸ್ ಮತ್ತು 20 ಮೆಸೇಜ್ ಮಾಡಬಹುದು.

ಮೊದಲ ಬಾರಿಗೆ ನಿಮಯ ಉಲ್ಲಂಘಿಸಿದರೆ ಎಚ್ಚರಿಕೆ ನೀಡಲಾಗುತ್ತದೆ. 2ನೇ ಬಾರಿ ನಿಯಮ ಉಲ್ಲಂಘಿಸಿದರೆ ಬಳಕೆಯ ಮಿತಿ 6 ತಿಂಗಳವರೆಗೆ ವಿಧಿಸಲಾಗುತ್ತದೆ. ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ನಿಯಮ ಉಲ್ಲಂಘಿಸಿದರೆ, ಸಿಮ್ ಕಾರ್ಡನ್ನು 2 ವರ್ಷಗಳ ಕಾಲ ನಿರ್ಬಂಧ ಮಾಡಲಾಗುತ್ತದೆ. ಅಲ್ಲದೆ, ಬಳಕೆದಾರರನ್ನು ಕಪ್ಪುಪಟ್ಟಿಗೂ ಸೇರಿಸಲಾಗುತ್ತದೆ.

ಎಷ್ಟು ಸಿಮ್‌ಗಳನ್ನು ನಿರ್ಬಂಧಿಸಲಾಗಿದೆ?

2022 ಮತ್ತು 2023ರ ಆರ್ಥಿಕ ವರ್ಷಗಳಲ್ಲಿ 59,000 ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಟ್ರಾಯ್ ಮಾಹಿತಿ ನೀಡಿದೆ. 2022 ರಲ್ಲಿ ಒಟ್ಟು 32,032 ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಲಾಗಿದೆ. 2023 ರಲ್ಲಿ ಒಟ್ಟು 27,043 ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಲಾಗಿದೆ. ನಕಲಿ ಕಾಲ್ಸ್​ ಮತ್ತು ಮೆಸೇಜ್​ಗಳ ಮೂಲಕ ಅನೇಕರು ವಂಚನೆ ಮತ್ತು ಮೋಸಕ್ಕೆ ಬಲಿಯಾಗುತ್ತಿದ್ದಾರೆ. ಇದು ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಸಮಸ್ಯೆಗಳಿಗೆ ಕಡಿಮೆ ಮಾಡುವ ಉದ್ದೇಶದಿಂದಲೇ ಈ ನಿಮಯ ಜಾರಗೆ ತರಲಾಗಿದೆ.