Galentines Day: ಏನಿದು ಗ್ಯಾಲೆಂಟೈನ್ಸ್ ಡೇ, ಈ ದಿನವನ್ನು ಯಾವಾಗ, ಯಾಕೆ ಆಚರಿಸುತ್ತಾರೆ, ಇದು ಸಿಂಗಲ್ಸ್ ಡೇನಾ? ಇಲ್ಲಿದೆ ಉತ್ತರ
ವ್ಯಾಲೆಂಟೈನ್ಸ್ ಡೇ ಎಲ್ಲರಿಗೂ ಗೊತ್ತು, ಆದ್ರೆ ಏನಿದು ಗ್ಯಾಲೆಂಟೈನ್ಸ್ ಡೇ ಎಂದು ನೀವು ತಲೆಕೆಡಿಸಿಕೊಳ್ಳಬಹುದು. ಗ್ಯಾಲೆಂಟೈನ್ಸ್ ಡೇ ಯಾವಾಗ, ಇದನ್ನು ಹೇಗೆ ಆಚರಿಸೋದು, ಇದು ಕೇವಲ ಸಿಂಗಲ್ ಆಗಿರೋರಿಗೆ ಮಾತ್ರನಾ, ಹುಡುಗೀರು ಮಾತ್ರ ಗ್ಯಾಲೆಂಟೈನ್ಸ್ ಡೇ ಆಚರಿಸೋದಾ ಎಂಬ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
Happy Galentine's Day: ನಾಳೆ ಫೆ. 14, ಇಡೀ ಜಗತ್ತು ಪ್ರೇಮಿಗಳ ದಿನಕ್ಕಾಗಿ ಎದುರು ನೋಡುತ್ತಿದೆ. ಹಲವರು ತಮ್ಮ ಮನದ ಭಾವನೆಯನ್ನು ಪ್ರೇಮಿ ಎದುರು ವ್ಯಕ್ತಪಡಿಸಲು ಈ ವಿಶೇಷ ದಿನಕ್ಕಾಗಿ ಕಾಯುತ್ತಿರುತ್ತಾರೆ. ಈ ನಡುವೆ ವ್ಯಾಲೆಂಟೈನ್ಸ್ ಡೇ ಜೊತೆಗೆ ಗ್ಯಾಲೆಂಟೈನ್ಸ್ ಡೇ ಕೂಡ ಖ್ಯಾತಿ ಪಡೆಯುತ್ತಿದೆ. ಏನಿದು ಗ್ಯಾಲೆಂಟೈನ್ಸ್ ಡೇ ಎಂಬುದು ಹಲವರಿಗೆ ತಿಳಿದಿಲ್ಲ.
ಗಂಡಾಗಲಿ, ಹೆಣ್ಣಾಗಲಿ ಪ್ರತಿಯೊಬ್ಬರ ಬಾಳಿನಲ್ಲಿ ಆತ್ಮೀಯ ಗೆಳತಿಯೊಬ್ಬಳು ಇರುತ್ತಾಳೆ. ಆಕೆ ನಮ್ಮನ್ನ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುತ್ತಾಳೆ. ನಮ್ಮ ಮೂಡ್ ಸ್ವಿಂಗ್, ನಮ್ಮ ಬದುಕಿನ ಏರಿಳಿತಗಳು, ನಮ್ಮ ಕೆಟ್ಟ ದಿನಗಳು, ನಮಗೆ ಏನು ಬೇಕು-ಏನು ಬೇಡ, ನಮ್ಮ ಒಳ್ಳೆಯ ದಿನಗಳಲ್ಲಿ ಹೇಗೆ ಜೊತೆಯಾಗಿ ಇರಬೇಕು ಎಂಬುದೆಲ್ಲಾ ಆಕೆಗೆ ತಿಳಿದಿರುತ್ತದೆ. ಆಕೆಯನ್ನೇ ಬೆಸ್ಟ್ ಫ್ರೆಂಡ್ ಅಥವಾ ಜೀವದ ಗೆಳತಿ ಎಂದು ಕರೆಯುತ್ತೇವೆ.
ಇಡೀ ಜಗತ್ತು ಪ್ರೇಮಲೋಕದಲ್ಲಿ ಮುಳುಗಿರುವ ಈ ಹೊತ್ತಿನಲ್ಲಿ ನಾವು ನಮಗಾಗಿ ಪ್ರಾಣ ಕೊಡುವ ಸ್ನೇಹಿತೆಗಾಗಿಯೂ ಒಂದು ದಿನವನ್ನು ಮೀಸಲಿಡಬೇಕು. ಅವರೊಂದಿಗೆ ಪ್ರೀತಿ ಹಂಚಿಕೊಳ್ಳುತ್ತಾ, ಅವರಿಗಾಗಿ ಸಮಯ ನೀಡಬೇಕು. ಅದಕ್ಕಾಗಿಯೇ ಗ್ಯಾಲೆಂಟೈನ್ಸ್ ಡೇಯನ್ನು ಆಚರಿಸಲಾಗುತ್ತದೆ. ನಮ್ಮ ಜೀವನದಲ್ಲಿ ಇರುವ ಅತ್ಯಂತ ಮಹತ್ವದ ಹುಡುಗಿ ಅಥವಾ ಮಹಿಳೆಗಾಗಿ ಈ ದಿನವನ್ನು ಮೀಸಲಿರಿಸಬಹುದು.
ಆದರೆ ನಿಮ್ಮ ಮನಸ್ಸಿಗೆ ಹತ್ತಿರವಾದ ಆತ್ಮೀಯ ಗೆಳತಿಯೊಂದಿಗೆ ಗ್ಯಾಲೆಂಟೈನ್ಸ್ ಡೇ ಅನ್ನು ಹೇಗೆ ಆಚರಿಸಬಹುದು ನೋಡಿ. ಜೊತೆಗೆ ಗ್ಯಾಲೆಂಟೈನ್ಸ್ ಡೇಯನ್ನು ಯಾವಾಗ ಆಚರಿಸಲಾಗುತ್ತೆ, ಏನಿದರ ವಿಶೇಷ ಎಂಬುದೆಲ್ಲವೂ ಇಲ್ಲಿದೆ.
ಗ್ಯಾಲೆಂಟೈನ್ಸ್ ಡೇ ಯಾವಾಗ?
ಗ್ಯಾಲೆಂಟೈನ್ಸ್ ಡೇಯನ್ನು ವ್ಯಾಲೆಂಟೈನ್ಸ್ ಡೇಗೂ ಹಿಂದಿನ ದಿನ ಅಂದರೆ ಫೆ. 13 ರಂದು ಆಚರಿಸಲಾಗುತ್ತದೆ. ವ್ಯಾಲೆಂಟೈನ್ಸ್ ವೀಕ್‌ನ 7ನೇ ದಿನವಾದ ಕಿಸ್ ಡೇ ಯಂದೇ ಗ್ಯಾಲೆಂಟೈನ್ಸ್ ಡೇ ಕೂಡ ಆಚರಿಸಲಾಗುತ್ತದೆ.
ಗ್ಯಾಲೆಂಟೈನ್ಸ್ ಡೇಯನ್ನು ಹೇಗೆ ಆಚರಿಸಬಹುದು
ನಿಮ್ಮ ಬದುಕಿನಲ್ಲಿ ಬೆಸ್ಟ್ ಎನ್ನಿಸಿದ ಗೆಳತಿಯ ಜೊತೆಗೆ ನೀವು ಗ್ಯಾಲೆಂಟೈನ್ಸ್ ಡೇ ಆಚರಿಸಬಹುದು. ಆಕೆಗೆ ಇಷ್ಟವಾಗುವಂತೆ ನಡೆದುಕೊಳ್ಳುವ ಮೂಲಕ ಆಕೆಯನ್ನು ಖುಷಿ ಪಡಿಸಬಹುದು. ನಿಮ್ಮ ಆ ನೆಚ್ಚಿನ ಸ್ನೇಹಿತಯ ಜೊತೆಗೆ ಡಿನ್ನರ್, ಸಿನಿಮಾ, ಔಟಿಂಗ್, ಲಾಂಗ್ ರೈಡ್ ಹೋಗುವುದನ್ನು ಮಾಡಬಹುದು. ಈ ದಿನ ನಿಮ್ಮ ಗೆಳತಿಗೆ ಉಡುಗೊರೆಯನ್ನು ನೀಡಬಹುದು.
ಜೊತೆಯಾಗಿ ಪಾರ್ಟಿ ಮಾಡುವುದು, ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ನೋಡುವುದು, ಪಿಜ್ಝಾ ಪಾರ್ಟಿ ಇಂತಹವುಗಳ ಮೂಲಕ ಮನಸ್ಸಿಗೆ ಹತ್ತಿರವಾದ ಗೆಳತಿಯ ಜೊತೆ ಸಮಯ ಕಳೆಯಬಹುದು.
ಗ್ಯಾಲೆಂಟೈನ್ಸ್ ಡೇ ಕೇವಲ ಹುಡುಗಿಯರು ಮತ್ತು ಸಿಂಗಲ್ಸ್‌ಗೆ ಮಾತ್ರನಾ?
ಗ್ಯಾಲೆಂಟೈನ್ಸ್ ಡೇ ಎನ್ನುವುದು ಕೇವಲ ಹುಡುಗಿಯರು ಮತ್ತು ಸಿಂಗಲ್ಸ್‌ಗೆ ಮಾತ್ರವಲ್ಲ, ಹುಡುಗರು ಕೂಡ ನಮ್ಮ ಆತ್ಮೀಯ ಗೆಳತಿಯೊಂದಿಗೆ ಈ ದಿನವನ್ನು ಆಚರಿಸಬಹುದು. ಯಾರೂ ಬೇಕಾದರೂ ಈ ಗ್ಯಾಲೆಂಟೈನ್ಸ್ ಡೇಯನ್ನು ಆಚರಿಸಬಹುದು. ಅಷ್ಟೇ ಅಲ್ಲ ಸಿಂಗಲ್‌ಗಳು, ಮಿಂಗಲ್ ಆಗಿರೋರು, ಪ್ರೇಮ ನಿವೇದನೆ ಮಾಡಬೇಕು ಅಂದ್‌ಕೊಂಡ್ ಇರೋರು, ಕಣ್ಣಲ್ಲೇ ಪ್ರೀತಿ ತೋರೋರು ಹೀಗೆ ಯಾರು ಬೇಕಾದ್ರೂ ಈ ದಿನವನ್ನು ಆಚರಿಸಬಹುದು. ಒಂದು ಅದ್ಭುತ ಸಂಬಂಧವನ್ನು ಸೆಲೆಬ್ರೇಟ್ ಮಾಡಲು ಗ್ಯಾಲೆಂಟೈನ್ಸ್ ಡೇ ಒಂದು ಉತ್ತಮ ದಿನ. ಇದು ಸುಂದರ ಸ್ನೇಹ ಸಂಬಂಧವನ್ನು ಆಚರಿಸುವ ದಿನವಾಗಿದ್ದರೂ ಕೂಡ ನಿಮ್ಮ ಕ್ರಶ್‌ನೊಂದಿಗೂ ಕೂಡ ಈ ದಿನವನ್ನು ಆಚರಿಸಬಹುದು. ಈ ದಿನವನ್ನು ಲಿಂಗ್ ಭೇದವಿಲ್ಲದೇ ಎಲ್ಲರೂ ಆಚರಿಸಬಹುದು.
ವಿಭಾಗ