Personality Test: ಇಲಿ, ಮನುಷ್ಯನ ಮುಖ ಚಿತ್ರದಲ್ಲಿ ಕಣ್ಣು ಮೊದಲು ಗ್ರಹಿಸಿದ್ದೇನು, ನಿಮ್ಮೊಳಗಿನ ಭಯದ ಬಗ್ಗೆ ತಿಳಿಸುತ್ತೆ ಈ ಚಿತ್ರ
ಮನುಷ್ಯರಿಗಿರುವ ಪ್ರಮುಖ ಭಾವನೆಗಳಲ್ಲಿ ಭಯವೂ ಒಂದು. ಪ್ರತಿ ಮನುಷ್ಯನಿಗೂ ಭಯ ಎನ್ನುವುದು ಇದ್ದೇ ಇರುತ್ತದೆ. ಕೆಲವು ನಮಗೆ ಅರಿವಿಗೆ ಬಂದರೆ, ಕೆಲವು ಖಂಡಿತ ನಮಗೆ ಅರಿವಾಗುವುದಿಲ್ಲ. ಹಾಗಾದರೆ ನಿಮಗಿರುವ ಅಂದರೆ ನಿಮ್ಮ ಅಂತರಾಳದಲ್ಲಿ ಹುದುಗಿರುವ ಭಯ ಯಾವುದು ಎಂದು ತಿಳಿಯಲು ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ.
ಆಪ್ಟಿಕಲ್ ಇಲ್ಯೂಷನ್ ಎನ್ನುವುದು ಕೇವಲ ಒಂದು ಚಿತ್ರವಲ್ಲ. ಇದು ಒಂಥರ ನಮ್ಮನ್ನ ನಾವು ತಿಳಿದುಕೊಳ್ಳಲು ಇರುವ ಒಂದು ಅದ್ಭುತ ಕಲೆ. ಈ ಚಿತ್ರಗಳು ನಮ್ಮ ಪರ್ಸನಾಲಿಟಿ ಟೆಸ್ಟ್ ಮಾಡುತ್ತವೆ. ನಮ್ಮ ಬಗ್ಗೆ ನಮಗೆ ತಿಳಿದಿರದ ಹಲವು ವಿಚಾರಗಳನ್ನು ಇದು ತಿಳಿಯುವಂತೆ ಮಾಡುತ್ತದೆ. ನಮ್ಮ ಮನದ ಮಾತನ್ನು ಈ ಚಿತ್ರ ವ್ಯಕ್ತಪಡಿಸುತ್ತದೆ. ಜೊತೆಗೆ ಇದರ ಮೂಲಕ ನಮ್ಮ ಯಾವ ಭಾಗದ ಮೆದುಳು ಹೆಚ್ಚು ಚುರುಕಾಗಿದೆ ಎಂಬುದನ್ನು ನಾವು ಕಂಡುಕೊಳ್ಳಬಹುದು.
ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದ ಮೂಲಕ ನಮಗೆ ತಿಳಿದಿರದ ನಮ್ಮಲ್ಲಿ ಇರುವ ಭಯದ ಬಗ್ಗೆ ನಾವು ತಿಳಿದುಕೊಳ್ಳಬಹುದು. ಚಿತ್ರದಲ್ಲಿ ಎರಡು ಅಂಶಗಳಿವೆ. ಒಂದು ಮನುಷ್ಯನ ಮುಖ, ಇನ್ನೊಂದು ಇಲಿ. ಇದರಲ್ಲಿ ನಿಮ್ಮ ಕಣ್ಣು ಮೊದಲು ಗ್ರಹಿಸಿದ್ದೇನು ಹೇಳಿ. ಇದರ ಮೂಲಕ ನೀವು ನಿಮಗಿರುವ ಭಯದ ಬಗ್ಗೆ ತಿಳಿದುಕೊಳ್ಳಬಹುದು.
ಇಲಿ
ಚಿತ್ರದಲ್ಲಿ ನಿಮ್ಮ ಕಣ್ಣು ಮೊದಲು ಇಲಿಯನ್ನು ಗ್ರಹಿಸಿದರೆ ನೀವು ಅವಮಾನ ಮತ್ತು ಅಪಹಾಸ್ಯಕ್ಕೆ ಹೆಚ್ಚು ಹೆದರುತ್ತೀರಿ. ಬೇರೆಯವರು ಅಪಹಾಸ್ಯ ಮಾಡುತ್ತಾರೆ ಎಂಬ ಭಯ ನಿಮ್ಮನ್ನು ಸದಾ ಕಾಡಬಹುದು. ನೀವು ಯಾವಾಗಲೂ ಸ್ವತಂತ್ರರಾಗಿ ಮತ್ತು ಸ್ವಾವಲಂಬಿಗಳಾಗಿರಲು ಪ್ರಯತ್ನಿಸುತ್ತೀರಿ. ಯಾರನ್ನಾದರೂ ಸಹಾಯಕ್ಕಾಗಿ ಕೇಳಬೇಕು ಮತ್ತು ಅವರ ಮೇಲೆ ಅವಲಂಬಿತರಾಗಿರುವುದು ನಿಮಗೆ ತುಂಬಾ ಕಷ್ಟಕರವಾಗುತ್ತದೆ. ಪರಿಣಾಮವಾಗಿ, ನಿಮ್ಮ ಜೀವನದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸುವ ಅಗತ್ಯವನ್ನು ನೀವು ಆಗಾಗ್ಗೆ ಅನುಭವಿಸುತ್ತೀರಿ ಮತ್ತು ಬೇರೆಯವರ ಪ್ರಭಾವಕ್ಕೆ ಒಳಗಾಗುವುದು ಅಪರೂಪ.ಯಾವುದೇ ಕೆಲಸವಿರಲಿ ಅದರ ಜವಾಬ್ದಾರಿ ತೆಗೆದುಕೊಂಡು ಅದನ್ನು ಮುಂದುವರಿಸುತ್ತೀರಿ.
ಮುಖ
ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮೊದಲು ಮನುಷ್ಯನ ಮುಖ ಕಂಡರೆ ಒಂಟಿಯಾಗಿರುವುದು ನಿಮ್ಮ ದೊಡ್ಡ ಸಾಧನೆಯಾಗಿದೆ, ಏಕೆಂದರೆ ನಿಮ್ಮಿಂದ ಒಂಟಿಯಾಗಿ ಇರಲು ಸಾಧ್ಯವೇ ಇಲ್ಲ. ಪ್ರೀತಿಪಾತ್ರರಿಂದ ಸುತ್ತುವರೆದಿರುವುದು ನಿಮ್ಮ ಗುಣ. ಅವರಿಲ್ಲದೆ, ನಿಮ್ಮ ಕಾಲುಗಳ ಕೆಳಗೆ ನೆಲ ಕುಸಿಯುತ್ತದೆ ಎಂದು ನೀವು ಭಾವಿಸುತ್ತೀರಿ. ಇತರರಿಲ್ಲದೆ ನೀವು ಉತ್ತಮವಾಗಿ ನಿರ್ವಹಿಸಬಹುದಾದರೂ, ನಿಮಗೆ ಅಗತ್ಯವಿರುವಾಗ ಅವಲಂಬಿಸಲು ಯಾರಾದರೂ ನಿಮ್ಮ ಜೊತೆ ಇರಲೇಬೇಕು ಎಂಬ ಭಾವನೆ ನಿಮ್ಮ ಮನದಲ್ಲಿ ಮೂಡುತ್ತದೆ.
ಈ ಆಪ್ಟಿಕಲ್ ಇಲ್ಯೂಷನ್‌ಗಳು ವ್ಯಕ್ತಿತ್ವ ಪರೀಕ್ಷೆ ಮಾಡುವ ಬಗ್ಗೆ ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎಂದರೂ ಇದು ನಿಖರ ಎಂಬುದು ಸುಳ್ಳಲ್ಲ. ಮನೋವಿಜ್ಞಾನದಲ್ಲೂ ಇಂತಹ ವಿಧಾನಗಳನ್ನು ಬಳಸಿ ವ್ಯಕ್ತಿತ್ವ ಪರೀಕ್ಷೆ ಮಾಡಲಾಗುತ್ತದೆ. ಇತ್ತೀಚೆಗೆ ಟ್ರೆಂಡ್ ಆಗಿರುವ ಆಪ್ಟಿಕಲ್ ಇಲ್ಯೂಷನ್ ವ್ಯಕ್ತಿತ್ವ ಪರೀಕ್ಷೆಯು ನಿಮ್ಮ ಬಗ್ಗೆ ನಿಮಗೆ ಆಶ್ಚರ್ಯ ಮೂಡುವಂತೆ ಮಾಡುವುದು ಮಾತ್ರ ಸುಳ್ಳಲ್ಲ.