ಕನ್ನಡ ಸುದ್ದಿ  /  ಜೀವನಶೈಲಿ  /  ನನ್‌ ಫ್ರೆಂಡ್‌ ಯಾರು ಗೊತ್ತಾ? ಆನೆ ಜೊತೆಗಿನ ಪುಟ್ಟ ಬಾಲಕಿಯ ಫ್ರೆಂಡ್‌ಶಿಪ್‌ ಕಂಡು ತಲೆದೂಗಿದ ನೆಟ್ಟಿಗರು; ವಿಡಿಯೊ ವೈರಲ್‌

ನನ್‌ ಫ್ರೆಂಡ್‌ ಯಾರು ಗೊತ್ತಾ? ಆನೆ ಜೊತೆಗಿನ ಪುಟ್ಟ ಬಾಲಕಿಯ ಫ್ರೆಂಡ್‌ಶಿಪ್‌ ಕಂಡು ತಲೆದೂಗಿದ ನೆಟ್ಟಿಗರು; ವಿಡಿಯೊ ವೈರಲ್‌

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವ ವಿಡಿಯೊಗಳನ್ನು ನೋಡಿದಾಗ ಮನಸ್ಸಿಗೆ ಖುಷಿ ಸಿಗುತ್ತದೆ. ಮತ್ತೆ ಮತ್ತೆ ನೋಡಬೇಕು ಎನ್ನಿಸುತ್ತದೆ. ಆದರೆ ಇಲ್ಲೊಂದು ಪುಟ್ಟ ಬಾಲಕಿ ಹಾಗೂ ಆನೆಯ ನಡುವಿನ ವಿಡಿಯೊ ಇದೆ. ಈ ವಿಡಿಯೊವನ್ನು ನೋಡಿದ್ರೆ ಖುಷಿ ಹಾಗೂ ದುಃಖ ಎರಡೂ ಆಗುತ್ತೆ. ಇದಕ್ಕೆ ಕಾರಣವೇನು? ಮುಂದೆ ಓದಿ

ಆನೆ ಜೊತೆಗಿನ ಪುಟ್ಟ ಬಾಲಕಿಯ ಫ್ರೆಂಡ್‌ಶಿಪ್‌ ಕಂಡು ತಲೆದೂಗಿದ ನೆಟ್ಟಿಗರು; ವಿಡಿಯೊ ವೈರಲ್‌
ಆನೆ ಜೊತೆಗಿನ ಪುಟ್ಟ ಬಾಲಕಿಯ ಫ್ರೆಂಡ್‌ಶಿಪ್‌ ಕಂಡು ತಲೆದೂಗಿದ ನೆಟ್ಟಿಗರು; ವಿಡಿಯೊ ವೈರಲ್‌

ಜಗತ್ತಿನಲ್ಲಿ ಪರಿಶುದ್ಧ ಪ್ರೀತಿ ಅಂದ್ರೆ ಮೂಕ ಪ್ರಾಣಿಗಳು ತೋರಿಸುವ ಪ್ರೀತಿ ಎಂದು ಒಮ್ಮೊಮೆ ಎನ್ನಿಸುತ್ತದೆ. ಯಾವುದೇ ಸಾರ್ಥ ಇಲ್ಲದೇ ತಮ್ಮನ್ನು ಪ್ರೀತಿಸುವವರನ್ನು ನಿಷ್ಕಲಶ್ಮವಾಗಿ ಪ್ರೀತಿಸುತ್ತವೆ ಪ್ರಾಣಿಗಳು. ಪ್ರಾಣಿಗಳ ಜೊತೆ ನೀವು ಫ್ರೆಂಡ್‌ಶಿಪ್‌ ಮಾಡಿದ್ರೆ ನಿಮಗೆ ಜಗತ್ತಿನ ಬೆಸ್ಟ್‌ ಫ್ರೆಂಡ್‌ ಸಿಗೋದು ಖಂಡಿತ. ಈಗ್ಯಾಕಪ್ಪ ಪ್ರೀತಿ, ಸ್ನೇಹದ ಬಗ್ಗೆ ಇಷ್ಟೊಂದು ಮಾತು ಅಂತೀರಾ? ಖಂಡಿತ ಕಾರಣ ಇದೆ. ಅದಕ್ಕೆ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿರುವ ಈ ವಿಡಿಯೊ.

ಟ್ರೆಂಡಿಂಗ್​ ಸುದ್ದಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುತ್ತಿರುವ ಈ ವಿಡಿಯೊ ನೋಡಿದ್ರೆ ನಿಮಗೆ ಹೀಗೂ ಫ್ರೆಂಡ್‌ಶಿಪ್‌ ಇರುತ್ತಾ, ಈ ಬಡಾ ದೋಸ್ತ್‌ಗೆ ಚೋಟಾ ದೋಸ್ತ್‌ ಜೋಡಿಯಾಗಿದ್ದು ಹೇಗೆ ಅಂತೆಲ್ಲಾ ಪ್ರಶ್ನೆ ಮೂಡಬಹುದು. ವಿಡಿಯೊದಲ್ಲಿ ಇರುವ ಇಬ್ಬರು ವ್ಯಕ್ತಿಗಳ ಬಾಂಧವ್ಯ ನೋಡಿದಾಗ ನಿಮಗೆ ಅಚ್ಚರಿ ಆದ್ರೂ ಆಶ್ಚರ್ಯವಿಲ್ಲ. ಹಾಗಾದ್ರೆ ಯಾರು ಆ ಫ್ರೆಂಡ್‌, ವಿಡಿಯೊದಲ್ಲಿ ಏನಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ವಿಡಿಯೊದಲ್ಲಿ ಏನಿದೆ?

ವಿಡಿಯೊ ಪ್ಲೇ ಆದಾಗ ಆನೆಯೊಂದಿಗೆ ಪುಟ್ಟ ಬಾಲಕಿಯೊಬ್ಬಳು ನಡೆದುಕೊಂಡು ಬರುವುದು ಕಾಣಿಸುತ್ತದೆ. ಆನೆಯೊಂದಿಗೆ ಬಾಲಕಿನಾ ಅಂತ ಆಶ್ಚರ್ಯ ಪಡಬೇಡಿ. ಆ ಬಾಲಕಿ ಹಾಗೂ ಆನೆ ಬೆಸ್ಟ್‌ ಫ್ರೆಂಡ್ಸ್‌. ಅಷ್ಟು ದೊಡ್ಡ ಆನೆ ಆದ್ರೂ ಚಿಕ್ಕ ಬಾಲಕಿ ಕೊಂಚವು ಹೆದರುವುದಿಲ್ಲ. ಆನೆಯೊಂದಿಗೆ ಆಕೆಯ ಒಡನಾಟ ನೋಡಿ ನೆಟ್ಟಿಗರು ವಾವ್‌ ಅನ್ನುತ್ತಿದ್ದಾರೆ. ಆಕೆ ಆನೆಯೊಂದಿಗೆ ಆಟವಾಡೋದು ನೋಡಿ ಇದೇ ಅಲ್ವಾ ಫ್ರೆಂಡ್‌ಶಿಪ್‌ ಅಂದ್ರೆ ಅನ್ನಿಸದೇ ಇರೋದಿಲ್ಲ.

ಕೇರಳದ ತಿರುವನಂತಪುರ ಮೂಲದ ಭಾಮ ಎನ್ನುವುದು ಆ ಹುಡುಗಿಯ ಹೆಸರು. ಆಕೆಗಿನ್ನು ಕೇವಲ 2 ವರ್ಷ. ಆಕೆ ಆನೆಗೆ ಸ್ನಾನ ಮಾಡಲು, ಊಟ ತಿನ್ನಿಸಲು ಎಲ್ಲದ್ದಕ್ಕೂ ನೆರವಾಗುತ್ತಾಳೆ. ಆನೆ ಜೊತೆಗೆ ವಾಕ್‌ ಹೋಗೋದು ಅಂದ್ರೆ ಆಕೆಗೆ ಸಖತ್‌ ಇಷ್ಟ. ಅಂದ ಹಾಗೆ ಭಾಮಾಳ ಈ ಬೆಸ್ಟ್‌ ಫ್ರೆಂಡ್‌ ಹೆಸರು ಉಮಾ ಕುಟ್ಟಿ. ಈ ಉಮಾ ಕುಟ್ಟಿ (ಆನೆ) ಹಾಗೂ ಭಾಮಾಳ ಫ್ರೆಂಡ್‌ಶಿಫ್‌ ಬಗ್ಗೆ ಅವರ ತಾಯಿ ಕೂಡ ಅಚ್ಚರಿ ವ್ಯಕ್ತಪಡಿಸುತ್ತಾರೆ. ಅಂದ್‌ ಹಾಗೇ ಈ ಭಾಮಾ ಪುಟ್ಟಿಗೆ ಆಟವಾಡೋಕೆ ರಿಯಲ್‌ ಆನೆ ಜೊತೆ ಗೊಂಬೆ ಆನೆ ಕೂಡ ಬೇಕು ಅನ್ನೋದು ಸುಳ್ಳಲ್ಲ.

ಏಪ್ರಿಲ್‌ 1 ರಂದು ಕಲ್ಚರ್‌ ಕಲೆಕ್ಟಿವಾ ಎಂಬ ಫೇಸ್‌ಬುಕ್‌ ಪುಟದಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿತ್ತು. ಈಗಾಗಲೇ 9 ಲಕ್ಷಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. 62 ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದರೆ, 600 ರಷ್ಟು ಮಂದಿ ಕಾಮೆಂಟ್‌ ಮಾಡಿದ್ದಾರೆ.

ಕಾಮೆಂಟ್‌ನಲ್ಲಿ ನೆಟ್ಟಿಗರ ಆಕ್ರೋಶ

ಭಾಮ ಹಾಗೂ ಉಮಾ ಕುಟ್ಟಿ ಫ್ರೆಂಡ್‌ಶಿಪ್‌ ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್‌ ಮಾಡಿದ್ದಾರೆ. ಆದರೆ ಇನ್ನೂ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಆನೆಯ ಕಾಲಿಗೆ ಚೈನ್‌ ಕಟ್ಟಿರುವುದು. ಆನೆಯ ಕಾಲಿಗೆ ಚೈನ್‌ ಕಟ್ಟಲಾಗಿದ್ದು ಅದಕ್ಕೆ ಹಿಂಸೆ ನೀಡಲಾಗುತ್ತಿದೆ. ಮಗುವಿನ ವಿಡಿಯೊಗಾಗಿ ಆನೆಗೆ ಹಿಂಸೆ ಕೊಡುತ್ತಿರುವುದು ತಪ್ಪು ಎಂದು ಕೆಲವರು ಈ ವಿಡಿಯೊಗೆ ಬೈದು ಕಾಮೆಂಟ್‌ ಮಾಡಿದ್ದಾರೆ.

ಆನೆಯನ್ನು ಕಟ್ಟಿ ಹಾಕಿ ಮಗುವಿನೊಂದಿಗೆ ಸ್ನೇಹ ಬೆಳೆಸಿದೆ ಎಂಬುದು ಅಸಂಬದ್ಧ ಎಂದು ಇನ್ನೂ ಕೆಲವರು ಕಾಮೆಂಟ್‌ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ಆನೆಯ ಕಾಲಿಗೆ ಚೈನ್‌ ಹಾಕಿ ಕಟ್ಟಿದ್ದು ತಪ್ಪು ನಿಜ, ಆದರೆ ಪುಟ್ಟ ಬಾಲಕಿಗೆ ಇದರ ಅರಿವಿಲ್ಲ ಅನ್ನೋದು ಅಷ್ಟೇ ಸತ್ಯ. 

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ