Viral Video: ಬೆಂಗಳೂರಿನ ರಸ್ತೆಯಲ್ಲಿ ಟೆಸ್ಲಾ ಕಾರು ನೋಡಿ ಆಶ್ಚರ್ಯಚಕಿತರಾದ ಜನರು; ಯಾಕಿಷ್ಟು ಕುತೂಹಲ?
Tesla Car in Bengaluru: ಬೆಂಗಳೂರಿನ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಟ್ರಾಫಿಕ್ ಸಿಗ್ನಲ್ ಹಾಗೂ ಕೋರಮಂಗಲದ ಬಳಿ ಕೆಂಪು ಬಣ್ಣದ ಟೆಸ್ಲಾ ಕಾರು ಕಾಣಿಸಿಕೊಂಡಿದೆ. ಇದರ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಟೆಸ್ಲಾ ಕಾರು ಓಡಿಸಬೇಕು ಅನ್ನೋದು ಎಷ್ಟೋ ಜನರ ಕನಸಾಗಿರಬಹುದು. ಈ ಕಾರನ್ನು ಕಂಡರೇನೆ ಖುಷಿಯಿಂದ ನೋಡುವವರಿದ್ದಾರೆ. ಬೆಂಗಳೂರಿನ ರಸ್ತೆಯಲ್ಲಿ ಈ ಕಾರನ್ನು ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ. ಏನಕ್ಕಪ್ಪಾ ಇಷ್ಟೆಲ್ಲಾ ಕುತೂಹಲ ಅಂತೀರಾ? ಈ ಸುದ್ದಿ ಓದಿ.
ಕೆಲ ದಿನಗಳ ಹಿಂದೆ ಬೆಂಗಳೂರಿನ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಟ್ರಾಫಿಕ್ ಸಿಗ್ನಲ್ ಹಾಗೂ ಕೋರಮಂಗಲದ ಬಳಿ ಕೆಂಪು ಬಣ್ಣದ ಟೆಸ್ಲಾ ಕಾರು ಕಾಣಿಸಿಕೊಂಡಿದೆ. ಇದರ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಅಷ್ಟೇ ಅಲ್ಲ ಚರ್ಚೆಗೆ ಕಾರಣವಾಗಿದೆ.
ಇದರ ನಂಬರ್ ಪ್ಲೇಟ್ ನೋಡಿ ಇದು ದುಬೈ ನೋಂದಾಯಿತ ಕಾರು ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಇದು ಟೆಸ್ಟ್ ಡ್ರೈವ್ ಅಲ್ಲ, ದುಬೈನಿಂದ ಯಾರೊ ಭಾರತಕ್ಕೆ ಅಧಿಕೃತ ಭೇಟಿಯಲ್ಲಿದ್ದಾರೆ, ಇದನ್ನು ಸೀಮಿತ ಅವಧಿಗೆ ಅನುಮತಿಸಲಾಗಿದೆ ಎಂದೆನಿಸುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ರಸ್ತೆಯಲ್ಲಿ ಈ ಕಾರನ್ನು ನೋಡಿ ಜನರು ಆಶ್ಚರ್ಯಚಕಿತರಾಗಲು, ಇಷ್ಟೊಂದು ಕುತೂಹಲ ಮೂಡಿಸಲು ಕಾರಣ ಇಷ್ಟೇ. ಭಾರತದಲ್ಲಿ ಎಂದೂ ಯಾರೂ ಕಂಡಿರದ ಈ ಕಾರು ಇದೀಗ ಬೆಂಗಳೂರಿನ ರಸ್ತೆಯಲ್ಲಿ ಕಾಣಿಸಿದೆ. ಇದು ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯ ಕಾರಾಗಿದ್ದು, ಅಮೆರಿಕದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಇದು ರಸ್ತೆ ಗುಣಮಟ್ಟ ಚೆನ್ನಾಗಿರುವ ಕೆಲವು ದೇಶಗಳಲ್ಲಿ ಮಾತ್ರ ಬಿಡುಗಡೆಯಾಗಿದೆ.
ಭಾರತದಲ್ಲಿ ಇನ್ನೂ ಟ್ರಯಲ್ ಟೆಸ್ಟ್ ನಡೆಯುತ್ತಿದೆ. ಭಾರತದ ರಸ್ತೆಗಳಿಗೆ ಈ ಕಾರು ಒಗ್ಗಿಕೊಳ್ಳುತ್ತದೆಯೇ, ಇಲ್ಲಿನ ರಸ್ತೆ ಪರಿಸ್ಥಿತಿಗೆ ತಕ್ಕಂತೆ ಕಾರಿನಲ್ಲಿ ಏನಾದರೂ ಬದಲಾವಣೆ ಮಾಡಬೇಕೇ ಎಂದು ಪರೀಕ್ಷಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗುಜರಾತ್ನಲ್ಲಿ ಭಾರತದ ಟೆಸ್ಲಾ ಘಟಕ ಸ್ಥಾಪನೆಯಾಗಲಿದೆ ಎಂದು ವರದಿಯಾಗಿದೆ. ಆದರೆ ಇದನ್ನು ಗುಜರಾತ್ ಸರ್ಕಾರವಾಗಲಿ, ಟೆಸ್ಲಾ ಕಂಪನಿಯಾಗಿ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಟೆಸ್ಲಾ ಕಾರು ಭಾರತದಲ್ಲಿ ಬಿಡಿಗಡೆಯಾಗಲು, ಅದನ್ನು ಓಡಿಸಲು ಭಾರತದ ಅನೇಕರು ಕಾಯುತ್ತಿದ್ದು, ಇದೀಗ ಬೆಂಗಳೂರಿನಲ್ಲಿ ಟೆಸ್ಲಾ ಕಾರು ನೋಡಿ ನಿಬ್ಬೆರಗಾಗಿದ್ದಾರೆ.