Wellness; ಮುಖಕ್ಕೆ ಬೆಳ್ಳುಳ್ಳಿ ಉಜ್ಜಿದ್ರೆ ಚರ್ಮ ಹೊಳೆಯುತ್ತೆ ಅನ್ನೋ ಟ್ರೆಂಡ್ ಶುರುವಾಗಿದೆ, ನಿಜವೇ ಇದು, ತಜ್ಞರು ಹೇಳೋದಿಷ್ಟು
Garlic Face Trend; ಮುಖಕ್ಕೆ ಬೆಳ್ಳುಳ್ಳಿ ಉಜ್ಜುವ ಟ್ರೆಂಡ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಟ್ರೆಂಡ್ ಪ್ರಕಾರ, ಮುಖಕ್ಕೆ ಬೆಳ್ಳುಳ್ಳಿ ಉಜ್ಜಿದ್ರೆ ಚರ್ಮ ಹೊಳೆಯುತ್ತಾ, ಪರಿಣತರು ಹೇಳುವುದೇನು ಎಂಬುದರ ವಿವರ ಇಲ್ಲಿದೆ.
ಸೋಷಿಯಲ್ ಮೀಡಿಯಾದಲ್ಲಿ ವಿಚಿತ್ರ ಸೌಂದರ್ಯ ಟ್ರೆಂಡ್ ವೈರಲ್ ಆಗಿದ್ದು, ಬಹಳಷ್ಟು ಚರ್ಚೆಗೆ ಒಳಗಾಗಿದೆ. ಮೊಡವೆಗಳನ್ನು ಹೋಗಲಾಡಿಸಲು ಬೆಳ್ಳುಳ್ಳಿಯನ್ನು ಮುಖದ ಮೇಲೆ ಉಜ್ಜುಬೇಕು. ಇದರಿಂದ ಚರ್ಮಕ್ಕೆ ಹೊಳಪು ಬರುತ್ತದೆ ಎಂಬ ಪ್ರತಿಪಾದನೆ ನಡೆಯುತ್ತಿದೆ. ಸೌಂದರ್ಯಕ್ಕೆ ಸಂಬಂಧಿಸಿದ ವಿಚಾರ ಪ್ರತಿಪಾದಿಸುವ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಈ ರೀತಿ ಪ್ರತಿಪಾದಿಸುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸುತ್ತಿರುವವರು ಕೂಡ ಬೆಳ್ಳುಳ್ಳಿ ಅದ್ಭುತ ಚಮತ್ಕಾರವನ್ನು ಮಾಡುತ್ತಿದೆ ಎಂದು ಹೇಳುತ್ತಿರುವುದು ಕುತೂಹಲ ಮೂಡಿಸಿದೆ.
ಈ ಕಲ್ಪನೆಯು ಅಸಾಂಪ್ರದಾಯಿಕವೆಂದು ತೋರುತ್ತದೆಯಾದರೂ, ಅನೇಕ ಬಳಕೆದಾರರು ಇದು ಅದ್ಭುತಗಳನ್ನು ಮಾಡುತ್ತದೆ ಎಂದು ಹೇಳಿಕೊಳ್ಳುತ್ತಿರುವುದು ಅನೇಕರು ಈ ಪ್ರಯತ್ನಕ್ಕೆ ಮುಂದಾಗಲು ಪ್ರೇರೇಪಿಸಿದೆ. ಆದರೆ ಈ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ಹೇಳಿಕೆಗಳಲ್ಲಿ ಎಷ್ಟು ಸತ್ಯವಿದೆ? ಈ ಬಗ್ಗೆ ಪರಿಣತರು ಹೇಳುವುದೇನು?
ಮುಖಕ್ಕೆ ಬೆಳ್ಳುಳ್ಳಿ ಉಜ್ಜಿದ್ರೆ ಚರ್ಮ ಹೊಳೆಯುತ್ತಾ- ಪರಿಣತರು ಹೇಳುವುದೇನು
"ಚರ್ಮದ ಪ್ರಯೋಜನಗಳಿಗಾಗಿ ಮುಖದ ಮೇಲೆ ಬೆಳ್ಳುಳ್ಳಿಯ ಬಳಕೆಯನ್ನು ಬೆಂಬಲಿಸಲು ಸೀಮಿತ ವೈಜ್ಞಾನಿಕ ಪುರಾವೆಗಳಿವೆ" ಎಂದು ಡಾ. ಅಗ್ನಿ ಕುಮಾರ್ ಬೋಸ್ ಗಮನಸೆಳೆದಿದ್ದಾರೆ. ಕೆಲವು ಅಧ್ಯಯನಗಳು ಅಲೋಪೆಸಿಯಾ ಅರೇಟಾ ಮತ್ತು ಕಾರ್ನ್‌ಗಳಂತಹ ಪರಿಸ್ಥಿತಿಗಳಿಗೆ ಸಂಭಾವ್ಯ ಪ್ರಯೋಜನಗಳನ್ನು ಸೂಚಿಸುತ್ತವೆ. ಆದರೆ, "ಮೊಡವೆ ಅಥವಾ ಇತರ ಚರ್ಮದ ಪರಿಸ್ಥಿತಿಗಳಿಗೆ ಪರಿಹಾರ ಎಂಬುದಕ್ಕೆ ಪುರಾವೆಗಳು ಸಾಕಷ್ಟಿಲ್ಲ" ಎಂದು ಹೇಳಿದ್ದಾರೆ.
ಬೆಳ್ಳುಳ್ಳಿ ಮುಖಕ್ಕೆ ಉಜ್ಜುವ ಟ್ರೆಂಡ್ ಪ್ರಲೋಭನಕಾರಿಯಾಗಿ ಕಾಣಬಹುದು. ಆದರೆ ಚರ್ಮದ ಆರೋಗ್ಯಕ್ಕೆ ಆದ್ಯತೆ ಕೊಡುವುದು ಅಗತ್ಯ. ನಿಮ್ಮ ಮುಖದ ಮೇಲೆ ಬೆಳ್ಳುಳ್ಳಿಯನ್ನು ಉಜ್ಜುವುದರಿಂದ ಕಿರಿಕಿರಿ ಉಂಟಾಗಬಹುದು. ಮೊಡವೆಗಳಿಗೆ ಸಂಬಂಧಿಸಿ ಬೆಳ್ಳುಳ್ಳಿ ನೇರ ಪರಿಣಾಮಕಾರಿ ಪರಿಹಾರವಲ್ಲ. ಬೆಳ್ಳುಳ್ಳಿಯನ್ನು ನೇರವಾಗಿ ಚರ್ಮಕ್ಕೆ ಅನ್ವಯಿಸುವುದರಿಂದ "ಕಿರಿಕಿರಿ, ಸುಟ್ಟಗಾಯಗಳು, ಅಲರ್ಜಿ" ಉಂಟಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಡಾ. ಏಷ್ಯನ್ ಆಸ್ಪತ್ರೆಯ ಡರ್ಮಟಾಲಜಿ ವಿಭಾಗದ ಸಹಾಯಕ ನಿರ್ದೇಶಕ ಅಮಿತ್ ಬಂಗಿಯಾ ಕೂಡ ಈ ಪ್ರವೃತ್ತಿಯ ಹಾನಿಕಾರಕ ಪರಿಣಾಮಗಳನ್ನು ಗಮನಿಸಿದ್ದಾರೆ. ಮುಖದ ಮೇಲೆ ಬೆಳ್ಳುಳ್ಳಿಯನ್ನು ಬಳಸುವುದರಿಂದ "ಕೆಂಪು, ಚರ್ಮದ ಕಿರಿಕಿರಿ, ಸುಟ್ಟಗಾಯಗಳು ಮತ್ತು ಹೈಪರ್ಪಿಗ್ಮೆಂಟೇಶನ್" ಪ್ರಕರಣಗಳನ್ನು ಅವರು ವೈಯಕ್ತಿಕವಾಗಿ ನೋಡಿರುವುದಾಗಿ ಹೇಳಿದ್ಧಾರೆ.
ಮುಖದ ಕಾಂತಿ ಹೆಚ್ಚಿಸಲು ಈಗಾಗಲೇ ಸಾಬೀತಾದ ಉಪಕ್ರಮ ಅನುಸರಿಸಿ
ಹಾಗಾದರೆ ಮುಖದ ಕಾಂತಿ ಹೆಚ್ಚಿಸುವುದಕ್ಕೆ ಬೆಳ್ಳುಳ್ಳಿಯ ಬದಲು ಏನು ಬಳಸಬೇಕು?
ಪ್ರತಿಯೊಬ್ಬರ ಚರ್ಮವು ವಿಶಿಷ್ಟವಾಗಿರುವುದರಿಂದ ವೈಯಕ್ತಿಕ ಸಲಹೆಗಾಗಿ ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಸಾಮಾನ್ಯವಾಗಿ, ಮೊಡವೆ-ಸ್ನೇಹಿ ಉತ್ಪನ್ನಗಳು ಮತ್ತು ಸರಳ ರೀತಿಯಲ್ಲಿ ಚರ್ಮದ ಆರೋಗ್ಯ ಕಾಪಾಡಬೇಕು ಎಂದು ಸಲಹೆ ನೀಡಲಾಗುತ್ತದೆ.
ಸುರಕ್ಷಿತ ಮತ್ತು ಪರಿಣಾಮಕಾರಿ ಮೊಡವೆ ಚಿಕಿತ್ಸೆಗಳಿಗೆ ವೃತ್ತಿಪರ ಸಲಹೆಯನ್ನು ಪಡೆಯಬೇಕು. ವೈಜ್ಞಾನಿಕ ಸಾಬೀತಾಗಿರದ ಚಿಕಿತ್ಸೆಯನ್ನು ಪ್ರಯತ್ನಿಸಬಾರದು ಎಂದು ಡಾ. ಬಂಗಿಯಾ ಹೇಳುತ್ತಾರೆ.
ಬೆಳ್ಳುಳ್ಳಿಯಂತಹ ಅಪಾಯಕಾರಿ ನಿಮ್ಮಷ್ಟಕ್ಕೆ ನೀವೇ ಮಾಡಬಹುದಾದ ಪರಿಹಾರ ಉಪಕ್ರಮಗಳನ್ನು ತಪ್ಪಿಸಬೇಕು. ಅದರ ಪ್ರಾಮುಖ್ಯತೆಯನ್ನು ಒತ್ತಿಹೇಳಿರುವುದಲ್ಲದೆ, ವಿಶೇಷವಾಗಿ ಸುರಕ್ಷಿತ, ಸಾಬೀತಾದ ಪರ್ಯಾಯಗಳು ಲಭ್ಯವಿದ್ದಾಗ ಅದನ್ನೇ ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಡಾ. ಬೋಸ್ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಸರಿಯಾದ ಸಾಂದ್ರತೆಗಳಲ್ಲಿ ಚರ್ಮದ ಆರೈಕೆ ಪದಾರ್ಥಗಳನ್ನು ಬಳಸುವ ಅಗತ್ಯವನ್ನು ಎತ್ತಿ ತೋರಿಸಿದರು. ಉದಾಹರಣೆಗೆ, ಟ್ರೆಟಿನೊಯಿನ್-ಜನಪ್ರಿಯ ಸಾಮಯಿಕ ಔಷಧ-ಸಾಮಾನ್ಯವಾಗಿ 0.025 ಪ್ರತಿಶತದಷ್ಟು ದುರ್ಬಲಗೊಳಿಸಲಾಗುತ್ತದೆ ಅಂತಹ ಉತ್ಪನ್ನಗಳ ದುರ್ಬಲಗೊಳಿಸದೆ ಬಳಸುವುದು ವ್ಯತಿರಿಕ್ತ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
ದೀರ್ಘಾವಧಿಯ ಅಧ್ಯಯನದ ಕೊರತೆಯಿಂದಾಗಿ, "ಮೊಡವೆ ಅಥವಾ ಹೈಪರ್ ಪಿಂಗ್ಮೇಂಟೇಶನ್ ಮುಂತಾದ ನಿರ್ದಿಷ್ಟ ಚರ್ಮದ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಬೆಳ್ಳುಳ್ಳಿ ಬಳಕೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ" ಎಂದು ಡಾ. ಬೋಸ್ ಹೇಳುತ್ತಾರೆ. ಅಲ್ಲದೆ ಬೆಳ್ಳುಳ್ಳಿಯನ್ನು ಇತರ ತ್ವಚೆ ಉತ್ಪನ್ನಗಳೊಂದಿಗೆ ಸಂಯೋಜಿಸಿ ಬಳಸುವುದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ.
ವಿಭಾಗ