ಮಹಿಳೆಯರಿಗಿಂತ ಪುರುಷರು ಕಡಿಮೆ ಜೀವಿತಾವಧಿ ಹೊಂದಿರುವುದೇಕೆ; ಸಂಶೋಧನೆ ನಡೆಸಿದ ವಿಜ್ಞಾನಿಗಳು ಹೇಳೋದೇನು?
ಕನ್ನಡ ಸುದ್ದಿ  /  ಜೀವನಶೈಲಿ  /  ಮಹಿಳೆಯರಿಗಿಂತ ಪುರುಷರು ಕಡಿಮೆ ಜೀವಿತಾವಧಿ ಹೊಂದಿರುವುದೇಕೆ; ಸಂಶೋಧನೆ ನಡೆಸಿದ ವಿಜ್ಞಾನಿಗಳು ಹೇಳೋದೇನು?

ಮಹಿಳೆಯರಿಗಿಂತ ಪುರುಷರು ಕಡಿಮೆ ಜೀವಿತಾವಧಿ ಹೊಂದಿರುವುದೇಕೆ; ಸಂಶೋಧನೆ ನಡೆಸಿದ ವಿಜ್ಞಾನಿಗಳು ಹೇಳೋದೇನು?

ಯೂರೋಪ್‌ನಲ್ಲಿ ಹೃದಯ ರಕ್ತನಾಳದ ಕಾಯಿಲೆಗಳು ಮತ್ತು ನಿಯೋಪ್ಲಾಸಂನಂತ ಕ್ಯಾನ್ಸರ್‌ ಗಡ್ಡೆಯಂಥ ಸಮಸ್ಯೆ ಪುರುಷರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು ಇದೂ ಕೂಡಾ ಪುರುಷರ ಜೀವಿತಾವಧಿ ಕುಸಿಯಲು ಕಾರಣ ಎಂದು ಅಧ್ಯಯನದಿಂದ ಸಾಬೀತಾಗಿದೆ.

ಜೀವಿತಾವಧಿ ವ್ಯತ್ಯಾಸದ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನಿಗಳು
ಜೀವಿತಾವಧಿ ವ್ಯತ್ಯಾಸದ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನಿಗಳು (PC: Unsplash)

ಪ್ರಪಂಚದಲ್ಲಿ ಪ್ರತಿಯೊಂದು ಜೀವಿಗೂ ಇಂತಿಷ್ಟೇ ಜೀವಿತಾವಧಿ ಇರುತ್ತದೆ. ಹಾಗೇ ಮನುಷ್ಯನ ಜೀವಿತಾವಧಿ 100 ವರ್ಷಗಳು. ಆದರೆ ಅದರಲ್ಲಿ ಮಹಿಳೆಯರು, ಪುರುಷರಿಗಿಂತ ಹೆಚ್ಚು ಕಾಲ ಜೀವಿಸುತ್ತಾರೆ. ದೇಶದಿಂದ ದೇಶಕ್ಕೂ ಇದು ವಿಭಿನ್ನವಾಗಿದೆ. 2022ರಲ್ಲಿ ಜರ್ಮನಿಯಲ್ಲಿ ಸಾವನ್ನಪ್ಪಿದವರಲ್ಲಿ 78 ವರ್ಷದ ಒಳಗಿರುವ ಪುರುಷರು ಹಾಗೂ 82 ವರ್ಷ ಒಳಗಿನ ಮಹಿಳೆಯರಿದ್ದಾರೆ.

ಜೀವಿತಾವಧಿ ವ್ಯತ್ಯಾಸದ ಬಗ್ಗೆ ವಿಜ್ಞಾನಿಗಳು ನಡೆಸಿದ ಸಂಶೋಧನೆ

ಅಮೆರಿಕದಲ್ಲಿ 2021ರಲ್ಲಿ 79 ವರ್ಷದವರೆಗಿನ ಮಹಿಳೆಯರು ಸಾವನ್ನಪ್ಪಿದರೆ ಆ ವರ್ಷ ಸಾವನ್ನಪ್ಪಿದ ಪುರುಷರ ವಯಸ್ಸು 73 ಹಾಗೂ ಆಸುಪಾಸಿನಲ್ಲಿತ್ತು. ಆತ್ಮಹತ್ಯೆ, ಮಾದಕದ್ರವ್ಯ ಸೇವನೆ, ಮಧ್ಯಪಾನ, ಧೂಮಪಾನ, ಹಿಂಸಾತ್ಮಕ ಅಪರಾಧಗಳಿಂದ ಪುರುಷರ ಜೀವಿತಾವಧಿ ಕಡಿಮೆ ಆಗಲು ಕಾರಣ ಎನ್ನಲಾದರೂ ಹೊಸ ಸಂಶೋಧನೆಯ ಪ್ರಕಾರ ಕೋವಿಡ್‌ನಂಥ ಸಾಂಕ್ರಾಮಿಕ ರೋಗವು ಪುರುಷರು ಹಾಗೂ ಮಹಿಳೆಯರ ಜೀವಿತಾವಧಿ ವ್ಯತ್ಯಾಸಗೊಳ್ಳಲು ಕಾರಣ ಎಂದು ತಿಳಿದುಬಂದಿದೆ. JAMA ಜರ್ನಲ್ ಆಫ್ ಮೆಡಿಸಿನ್‌ ಅಧ್ಯಯನವು ಹೇಳುವ ಪ್ರಕಾರ, ಕೋವಿಡ್ ನಂತರ ಪುರುಷರ ಮರಣ ಪ್ರಮಾಣ ಹೆಚ್ಚಾಗಿದೆ.

ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್‌ನ ವೈದ್ಯ ಮತ್ತು ಹಿರಿಯ ಅಧ್ಯಾಪಕ ಸಂಪಾದಕರಾದ ರಾಬರ್ಟ್ ಹೆಚ್‌, ಶ್ಮರ್ಲಿಂಗ್ ಪ್ರಕಾರ ಪುರುಷರು ದಿನನಿತ್ಯದ ಆರೋಗ್ಯ ತಪಾಸಣೆಗಳ ಬಗ್ಗೆ ಹೆಚ್ಚಿನ ಗಮನ ನೀಡುವುದಿಲ್ಲ. ಅಲ್ಲದೆ ಅಗ್ನಿಶಾಮಕ, ಮಿಲಿಟರಿ, ಯುದ್ಧದಂತಹ ಅಪಾಯಕಾರಿ ಕೆಲಸಗಳಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಷ್ಟೋ ಪ್ರಕರಣಗಳಲ್ಲಿ ಮಹಿಳೆಯರಿಗಿಂತ ಪುರುಷರೇ ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚು ಎಂಬ ಸತ್ಯಾಂಶವನ್ನು ಬಹಿರಂಗಗೊಳಿಸಿದ್ದಾರೆ. ಇವಿಷ್ಟೇ ಅಲ್ಲ, ವೈದ್ಯಕೀಯ ತಜ್ಞರು ಹೇಳುವ ಪ್ರಕಾರ ಯುಎಸ್‌ನಲ್ಲಿ ಮಹಿಳೆಯರಿಗಿಂತ ಪುರುಷರು ಹೃದಯದ ಕಾಯಿಲೆಗೆ ಹೆಚ್ಚು ತುತ್ತಾಗುತ್ತಿದ್ದಾರೆ.

ಹೃದಯ ರಕ್ತನಾಳ, ಕ್ಯಾನ್ಸರ್‌ ಗಡ್ಡೆಯಂಥ ಸಮಸ್ಯೆ

ಇನ್ನು ಯೂರೋಪ್‌ನಲ್ಲಿ ಹೃದಯ ರಕ್ತನಾಳದ ಕಾಯಿಲೆಗಳು ಮತ್ತು ನಿಯೋಪ್ಲಾಸಂನಂತ ಕ್ಯಾನ್ಸರ್‌ ಗಡ್ಡೆಯಂಥ ಸಮಸ್ಯೆ ಪುರುಷರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು ಇದೂ ಕೂಡಾ ಪುರುಷರ ಜೀವಿತಾವಧಿ ಕುಸಿಯಲು ಕಾರಣ ಎಂದು ಅಧ್ಯಯನದಿಂದ ಸಾಬೀತಾಗಿದೆ. ಜರ್ಮನಿಯ ಫೆಡರಲ್ ಇನ್‌ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ರಿಸರ್ಚ್‌ನ ಲೇಖಕರ ತಂಡವು ಆಸ್ಟ್ರಿಯಾ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಸ್ಲೋವಾಕಿಯಾ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಹಾಗೂ ಇನ್ನಿತರ ದೇಶಗಳಲ್ಲಿ ನಡೆಸಿದ ಅಧ್ಯಯನದಿಂದ ಈ ಅಂಶ ಬೆಳಕಿಗೆ ಬಂದಿದೆ. ಜೊತೆಗೆ ಫ್ರಾನ್ಸ್‌ನಲ್ಲಿ ಪುರುಷರು ಕ್ಯಾನ್ಸರ್‌ ಸಮಸ್ಯೆಯಿಂದ ಸಾವನ್ನಪ್ಪಿದರೆ ಜೆಕ್‌ ರಿಪಬ್ಲಿಕ್‌ನಲ್ಲಿ ಶ್ವಾಸಕೋಶದ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ.

ಪುರುಷ, ಮಹಿಳೆಯರ ನಡುವಿನ ಜೀವಿತಾವಧಿಯ ಅಂತರ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿ ಕೂಡಾ ಇದೆ ಎಂದು ಮತ್ತೊಂದು ಸಂಶೋಧನೆ ಹೇಳುತ್ತದೆ. 2020 ಮಾರ್ಚ್‌ನಲ್ಲಿ ಅಂತಾರಾಷ್ಟ್ರೀಯ ಸಂಶೋಧಕರ ತಂಡವು ನಡೆಸಿದ ಅಧ್ಯಯನದಿಂದ ಕಾಡಿನಲ್ಲಿ ಹೆಣ್ಣು ಸಸ್ತನಿಗಳು ಗಂಡು ಸಸ್ತನಿಗಳಿಗಿಂತ ಹೆಚ್ಚು ಕಾಲ ಬದುಕುತ್ತವೆ ಎಂದು ಸಾಬೀತಾಗಿದೆ. ಈ ಅಧ್ಯಯನವನ್ನು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟಿಸಲಾಗಿದೆ. ವಿಜ್ಞಾನಿಗಳ ಸಂಶೋಧನೆಯಲ್ಲಿ ಹೆಣ್ಣು ಸಸ್ತನಿಗಳ ಜೀವಿತಾವಧಿಯು ಗಂಡು ಸಸ್ತನಿಗಳಿಗಿಂತ ಸರಾಸರಿ 18.6% ಹೆಚ್ಚಾಗಿದೆ. ಮನುಷ್ಯರ ವಿಚಾರಕ್ಕೆ ಬರುವುದಾದರೆ ಆ ಸಂಖ್ಯೆ 7.8% ರಷ್ಟಿದೆ.

Whats_app_banner