ಮುಟ್ಟಿನ ಕಪ್ vs ಸ್ಯಾನಿಟರಿ ಪ್ಯಾಡ್; ಮುಟ್ಟಿನ ದಿನಗಳಲ್ಲಿ ಯಾವುದನ್ನು ಧರಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ? ಇಲ್ಲಿದೆ ಉತ್ತರ-women health menstrual cup or pads which is healthier to wear in the time of periods health problem menstrual hygine rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮುಟ್ಟಿನ ಕಪ್ Vs ಸ್ಯಾನಿಟರಿ ಪ್ಯಾಡ್; ಮುಟ್ಟಿನ ದಿನಗಳಲ್ಲಿ ಯಾವುದನ್ನು ಧರಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ? ಇಲ್ಲಿದೆ ಉತ್ತರ

ಮುಟ್ಟಿನ ಕಪ್ vs ಸ್ಯಾನಿಟರಿ ಪ್ಯಾಡ್; ಮುಟ್ಟಿನ ದಿನಗಳಲ್ಲಿ ಯಾವುದನ್ನು ಧರಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ? ಇಲ್ಲಿದೆ ಉತ್ತರ

Menstrual cup vs Pads: ಮುಟ್ಟಿನ ದಿನಗಳು ಎಂದರೆ ಹೆಣ್ಣುಮಕ್ಕಳ ಪಾಲಿಗೆ ಒಂದು ರೀತಿ ಸಂಕಷ್ಟದ ದಿನಗಳು. ಹಿಂದೆ ಮುಟ್ಟಿನ ಸಮಯದಲ್ಲಿ ಬಟ್ಟೆ ಬಳಸುತ್ತಿದ್ದರು. ನಂತರ ಪ್ಯಾಡ್‌, ಈಗ ಮುಟ್ಟಿನ ಕಪ್ ಬಳಕೆಯೂ ಚಾಲ್ತಿಯಲ್ಲಿದೆ. ಹಾಗಾದರೆ ಆರೋಗ್ಯದ ದೃಷ್ಟಿಯಿಂದ ಪ್ಯಾಡ್‌ ಅಥವಾ ಮೆನ್ಸ್ಟ್ರುವಲ್ ಕಪ್ ಯಾವುದರ ಬಳಕೆ ಉತ್ತಮ ಎಂಬುದಕ್ಕೆ ತಜ್ಞರ ಉತ್ತರ ಹೀಗಿದೆ.

ಮೆನ್ಸ್ಟ್ರುವಲ್‌ ಕಪ್ vs ಸ್ಯಾನಿಟರಿ ಪ್ಯಾಡ್
ಮೆನ್ಸ್ಟ್ರುವಲ್‌ ಕಪ್ vs ಸ್ಯಾನಿಟರಿ ಪ್ಯಾಡ್ (PC: Canva)

Menstrual cup vs Pads: ಮುಟ್ಟಿನ ದಿನಗಳಲ್ಲಿ ಕೆಲವರು ಪ್ಯಾಡ್ ಬಳಸಿದರೆ ಇನ್ನೂ ಕೆಲವರು ಮುಟ್ಟಿನ ಕಪ್ ಬಳಸುತ್ತಾರೆ. ಆದರೆ ಈ ಎರಡರಲ್ಲಿ ಆರೋಗ್ಯದ ದೃಷ್ಟಿಯಿಂದ ಯಾವುದನ್ನು ಬಳಸಿದರೆ ಉತ್ತಮ ಎಂಬ ಪ್ರಶ್ನೆಗೆ ಹಲವರಿಗೆ ಉತ್ತರ ತಿಳಿದಿಲ್ಲ. ಆದರೆ ತಮ್ಮ ತಮ್ಮ ಅನುಕೂಲಕ್ಕೆ ಯಾವುದು ಬೆಸ್ಟ್ ಅನ್ನಿಸುತ್ತದೋ ಅದನ್ನು ಬಳಸಲಾಗುತ್ತದೆ.

ಋತುಚಕ್ರದ ಕಪ್‌ ಅಥವಾ ಮೆನ್ಸ್ಟ್ರುವಲ್ ಕಪ್‌ಗಳನ್ನು ಒಮ್ಮೆ ಖರೀದಿಸಿದರೆ, ಮತ್ತೆ ಮತ್ತೆ ಬಳಸಬಹುದು. ಸ್ಯಾನಿಟರಿ ಪ್ಯಾಡ್‌ಗಳು ಬಳಸಿ ಬಿಸಾಡಬಹುದಾದವು. ಸ್ಯಾನಿಟರಿ ಪ್ಯಾಡ್‌ಗಳಿದ್ದಾಗಲೂ, ಇದರ ಬಳಕೆಯ ಪ್ರಮಾಣ ಹೆಚ್ಚಿದ್ದಾಗಲೂ ಮುಟ್ಟಿನ ಕಪ್‌ಗಳನ್ನು ಏಕೆ ಕಂಡುಹಿಡಿಯಲಾಯಿತು ಎಂದು ಹಲವರು ಆಶ್ಚರ್ಯ ಪಡುತ್ತಾರೆ. ಆದರೆ ಸ್ಯಾನಿಟರಿ ಪ್ಯಾಡ್‌ಗಳು ಹುಡುಗಿಯರಿಗೆ ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಪ್ಯಾಡ್ ಬದಲು ಮೆನ್ಸ್ಟ್ರುವಲ್ ಕಪ್ ಬಳಸುವುದು ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ ತಜ್ಞರು.

ಅನೇಕ ಅಧ್ಯಯನಗಳು ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯು ಶಿಲೀಂಧ್ರಗಳ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತವೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ಹಿಂದೊಮ್ಮೆ ಸ್ಯಾನಿಟರಿ ಪ್ಯಾಡ್‌ಗಳು ಫಲವತ್ತತೆಯ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಆದರೆ ಕೆಲವು ಅಧ್ಯಯನಗಳು ಸ್ಯಾನಿಟರಿ ಪ್ಯಾಡ್‌ ಬಳಕೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಎಂದು ಹೇಳುತ್ತವೆ. ಆದರೆ, ತುಂಬಾ ಅಪಾಯಕಾರಿಯಾದ ಸ್ಯಾನಿಟರಿ ಪ್ಯಾಡ್‌ಗಳಿಗಿಂತ ಮೆನ್ಸ್ಟ್ರುವಲ್ ಕಪ್ ಬಳಸುವುದು ಉತ್ತಮ ಎನ್ನುವುದು ಸ್ತ್ರೀರೋಗ ತಜ್ಞರ ಅಭಿಪ್ರಾಯ.

ಸ್ಯಾನಿಟರಿ ಪ್ಯಾಡ್‌ಗಳು ಅಪಾಯ ಏಕೆ?

ಸ್ಯಾನಿಟರಿ ಪ್ಯಾಡ್‌ಗಳನ್ನು ಒಂದೇ ಬಾರಿಗೆ ಬೃಹತ್ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಅವುಗಳು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲು ಥಾಲೇಟ್ಸ್ ಎಂಬ ಸಾವಯವ ಸಂಯುಕ್ತಗಳನ್ನು ಬಳಸುತ್ತವೆ. ಥಾಲೇಟ್‌ಗಳು ರಾಸಾಯನಿಕಗಳ ಒಂದು ವರ್ಗ. ಸ್ಯಾನಿಟರಿ ಪ್ಯಾಡ್‌ಗಳ ದೀರ್ಘಕಾಲದ ಬಳಕೆಯಿಂದ ಈ ಥಾಲೇಟ್‌ಗಳು ಕೆಲವು ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅಧ್ಯಯನಗಳು ತೋರಿಸಿವೆ. ಆದರೆ ಕೆಲವು ಅಧ್ಯಯನಗಳು ಹಾಗಲ್ಲ ಎಂದು ವಾದಿಸುತ್ತವೆ. ಆದಾಗ್ಯೂ, ಸ್ಯಾನಿಟರಿ ಪ್ಯಾಡ್‌ಗಳಿಗಿಂತ ಮೆನ್ಸ್ಟ್ರುವಲ್ ಕಪ್‌ಗಳನ್ನು ಬಳಸುವುದು ಉತ್ತಮ ಎಂದು ವೈದ್ಯರ ಒಮ್ಮತದ ಅಭಿಪ್ರಾಯ.

ಮೊದಲು ಬಟ್ಟೆಯನ್ನು ಸ್ಯಾನಿಟರಿ ಪ್ಯಾಡ್‌ ರೂಪದಲ್ಲಿ ಬಳಸಲಾಗುತ್ತಿತ್ತು. ಈಗ ಅನುಕೂಲಕ್ಕಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ರೆಡಿಮೇಡ್ ಆಗಿ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಆದರೆ ಇವುಗಳಲ್ಲಿ ಕೆಲವು ರಾಸಾಯನಿಕಗಳನ್ನು ಬೆರೆಸುವುದರಿಂದ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎನ್ನುವುದು ತಳ್ಳಿ ಹಾಕುವ ವಿಷಯವಲ್ಲ. ಹಾಗಾಗಿಯೇ ಮೆನ್ಸ್ಟ್ರುವಲ್ ಕಪ್ ಬಳಸುವುದರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹೇಳಲಾಗುತ್ತದೆ. ಇವುಗಳಿಂದ ಯಾವುದೇ ರಾಸಾಯನಿಕಗಳು ದೇಹವನ್ನು ಸೇರುವುದಿಲ್ಲ ಮತ್ತು ಕಾಲಕಾಲಕ್ಕೆ ಅವುಗಳನ್ನು ತೆಗೆದು ಸ್ವಚ್ಛ ಮಾಡಿ ಬಳಸಬಹುದು ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ. ನೀವು ಎರಡು ಅಥವಾ ಮೂರು ಮುಟ್ಟಿನ ಕಪ್‌ಗಳನ್ನು ಖರೀದಿಸಿದರೆ, ಅವುಗಳನ್ನು ಕೆಲವು ತಿಂಗಳುಗಳವರೆಗೆ ಬಳಸಬಹುದು.

ಮೆನ್ಸ್ಟ್ರುವಲ್ ಕಪ್ ಬಳಸದೇ ಇರಲು ಕಾರಣ 

ಮೆನ್ಸ್ಟ್ರುವಲ್‌ ಕಪ್‌, ಸ್ಯಾನಿಟರಿ ಪ್ಯಾಡ್‌ಗಳು ಮಾತ್ರವಲ್ಲದೆ ಟ್ಯಾಂಪೂನ್‌ಗಳು ಮತ್ತು ಪ್ಯಾಂಟಿ ಲೈನರ್‌ಗಳು ಸಹ ಲಭ್ಯವಿದೆ. ಭಾರೀ ರಕ್ತಸ್ರಾವಕ್ಕೆ ಟ್ಯಾಂಪೂನ್‌ಗಳನ್ನು ಬಳಸಲು ಸಹ ಸಲಹೆ ನೀಡಲಾಗುತ್ತದೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಸ್ಯಾನಿಟರಿ ಪ್ಯಾಡ್ ಬಳಸುವವರ ಸಂಖ್ಯೆಯೇ ಹೆಚ್ಚು. ಇವುಗಳನ್ನು ಬಳಸಲು ತುಂಬಾ ಸುಲಭ. ಟ್ಯಾಂಪೂನ್‌ಗಳು ಮತ್ತು ಮುಟ್ಟಿನ ಕಪ್‌ಗಳನ್ನು ಯೋನಿಯೊಳಗೆ ಸೇರಿಸಬೇಕು. ಕೆಲವರು ಇವುಗಳನ್ನು ಅಹಿತಕರವಾಗಿ ಕಾಣುತ್ತಾರೆ ಹಾಗೂ ಕೆಲವರಿಗೆ ಮುಟ್ಟಿನ ಕಪ್ ಬಳಸುವ ಬಗ್ಗೆ ಭಯವಿದೆ. ಹಾಗಾಗಿಯೇ ಪ್ಯಾಡ್ ಬಳಸುವವರ ಸಂಖ್ಯೆ ಹೆಚ್ಚು.

ಪ್ಯಾಡ್ ಬಳಸುವವರು ಪ್ರತಿ ನಾಲ್ಕರಿಂದ ಐದು ಗಂಟೆಗಳಿಗೊಮ್ಮೆ ಪ್ಯಾಡ್ ಬದಲಿಸುತ್ತಿರಬೇಕು ಹಾಗೂ ಯೋನಿಯ ಜಾಗವನ್ನು ಸ್ವಚ್ಛ ಮಾಡಿಕೊಳ್ಳಬೇಕು. ದೀರ್ಘಕಾಲದ ಒಂದೇ ಪ್ಯಾಡ್ ಬಳಸುವುದು ಇನ್ನಿಲ್ಲದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದರಿಂದ ಯೋನಿ ಸೋಂಕು ಮಾತ್ರವಲ್ಲ, ಗರ್ಭಕೋಶಕ್ಕೆ ಸಂಬಂಧಿಸಿದ ತೊಂದರೆಗಳು ಕೂಡ ಉಂಟಾಗಬಹುದು.

mysore-dasara_Entry_Point