ಮಕ್ಕಳಾಗುತ್ತಿಲ್ಲ ಎಂಬ ಚಿಂತೆ ಬಿಡಿ, ಈ ವ್ಯಾಯಾಮಗಳನ್ನು ನಿರಂತರವಾಗಿ ಅಭ್ಯಾಸ ಮಾಡಿ; ಫಲವಂತಿಕೆ ಹೆಚ್ಚಲು ಹೀಗಿರಲಿ ನಿಮ್ಮ ಜೀವನಶೈಲಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳಾಗುತ್ತಿಲ್ಲ ಎಂಬ ಚಿಂತೆ ಬಿಡಿ, ಈ ವ್ಯಾಯಾಮಗಳನ್ನು ನಿರಂತರವಾಗಿ ಅಭ್ಯಾಸ ಮಾಡಿ; ಫಲವಂತಿಕೆ ಹೆಚ್ಚಲು ಹೀಗಿರಲಿ ನಿಮ್ಮ ಜೀವನಶೈಲಿ

ಮಕ್ಕಳಾಗುತ್ತಿಲ್ಲ ಎಂಬ ಚಿಂತೆ ಬಿಡಿ, ಈ ವ್ಯಾಯಾಮಗಳನ್ನು ನಿರಂತರವಾಗಿ ಅಭ್ಯಾಸ ಮಾಡಿ; ಫಲವಂತಿಕೆ ಹೆಚ್ಚಲು ಹೀಗಿರಲಿ ನಿಮ್ಮ ಜೀವನಶೈಲಿ

ಇತ್ತೀಚಿನ ದಿನಗಳಲ್ಲಿ ಮಕ್ಕಳಾಗುವ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಜೀವನಶೈಲಿ, ಆಹಾರಕ್ರಮ ಹೀಗೆ ಹಲವು ವಿಚಾರಗಳು ಫಲವಂತಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ನೀವು ಮಕ್ಕಳನ್ನು ಪಡೆಯುವ ಯೋಚನೆಯಲ್ಲಿದ್ದರೆ ಈ ವ್ಯಾಯಾಮಗಳನ್ನು ಪ್ರತಿನಿತ್ಯ ಮಾಡಿ. ಇದರಿಂದ ಫಲವಂತಿಕೆಯ ಮಟ್ಟ ವೃದ್ಧಿಯಾಗುತ್ತದೆ.

ಫಲವಂತಿಕೆ ಸಮಸ್ಯೆ ನಿವಾರಿಸುವ ಯೋಗಾಸನಗಳು
ಫಲವಂತಿಕೆ ಸಮಸ್ಯೆ ನಿವಾರಿಸುವ ಯೋಗಾಸನಗಳು

ಇತ್ತೀಚಿನ ದಿನಗಳಲ್ಲಿ ಪುರುಷರು ಹಾಗೂ ಮಹಿಳೆಯರು ಫಲವಂತಿಕೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜೀವನಶೈಲಿ, ಆಹಾರಕ್ರಮ, ಅತಿಯಾದ ಒತ್ತಡ ಸೇರಿದಂತೆ ಹಲವು ಅಂಶಗಳು ಫಲವಂತಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳ ಬೇಕು ಎಂದು ಯೋಚಿಸುವವರು ಮಕ್ಕಳಾಗುತ್ತಿಲ್ಲ ಎಂದು ಚಿಂತೆ ಮಾಡುವ ಮೊದಲು ಈ ವ್ಯಾಯಾಮಗಳನ್ನು ಅಭ್ಯಾಸ ಮಾಡಬೇಕು.

ಗರ್ಭಿಣಿಯಾಗಲು ಯೋಚಿಸುತ್ತಿರುವವರು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಅವರಲ್ಲಿ ಫಲವಂತಿಕೆ ಸುಧಾರಿಸುತ್ತದೆ. ಇದರಿಂದ ಯಾವುದೇ ತೊಂದರೆಗಳಿಲ್ಲದೆ ಗರ್ಭಧರಿಸಲು ಮತ್ತು ಮಗುವಿಗೆ ಜನ್ಮ ನೀಡಲು ಸಾಧ್ಯವಾಗುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ ಮಹಿಳೆಯರು ದೈಹಿಕವಾಗಿ ಕ್ರಿಯಾಶೀಲರಾಗಿರುವುದು ಅತ್ಯಗತ್ಯ. ಫಲವಂತಿಕೆ ಸುಧಾರಿಸಲು ಯಾವ ರೀತಿಯ ವ್ಯಾಯಾಮಗಳನ್ನು ಮಾಡಬೇಕು, ಜೀವನಶೈಲಿ ಹೇಗಿರಬೇಕು ಎಂಬ ಮಾಹಿತಿ ಇಲ್ಲಿದೆ.

ಫಲವಂತಿಕೆ ಹೆಚ್ಚಿಸುವ ಜೀವನಶೈಲಿ

ನೀವು ಗರ್ಭಿಣಿಯಾಗಲು ಬಯಸಿದರೆ ಸರಿಯಾದ ಜೀವನಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯ. ಜಡಜೀವನಶೈಲಿ, ಧೂಮಪಾನ, ಮದ್ಯಪಾನ ಮತ್ತು ದೈಹಿಕ ಚಟುವಟಿಕೆಯ ಕೊರತೆ ಇವೆಲ್ಲವೂ ಫಲವಂತಿಕೆಯ ಪ್ರಮಾಣ ಕಡಿಮೆಯಾಗಲು ಕಾರಣವಾಗುತ್ತದೆ. ಆದ್ದರಿಂದ ಮಕ್ಕಳನ್ನು ಹೊಂದಲು ಬಯಸುವವರು ಈ ಅಭ್ಯಾಸಗಳನ್ನು ತಪ್ಪಿಸಿ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬೇಕು. ಇದರಲ್ಲಿ ದೈಹಿಕ ವ್ಯಾಯಾಮಗಳು ಬಹಳ ಮುಖ್ಯ.

ವ್ಯಾಯಾಮಗಳು

ನಾವು ದೈಹಿಕ ವ್ಯಾಯಾಮ ಮಾಡುವಾಗ, ನಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ. ಉಸಿರಾಟದ ಲಯವು ಹೆಚ್ಚುತ್ತದೆ. ಇದರಿಂದ ದೇಹ ಬಿಸಿಯಾಗುತ್ತದೆ. ಇವೆಲ್ಲವೂ ಗರ್ಭಧಾರಣೆಗೆ ಅನುಕೂಲಕರವಾದ ಭೌತಿಕ ವಾತಾವರಣವನ್ನು ಸೃಷ್ಟಿಸುತ್ತವೆ. ಅದಕ್ಕಾಗಿ ಮಿತವಾದ ದೈಹಿಕ ಚಟುವಟಿಕೆಗಳನ್ನು ಆರಿಸಿಕೊಳ್ಳಬೇಕು. ನಡಿಗೆ, ವೇಗದ ನಡಿಗೆ, ಸೈಕ್ಲಿಂಗ್, ನೃತ್ಯ, ಡಬಲ್ ಟೆನ್ನಿಸ್, ಹೈಕಿಂಗ್ ಇತ್ಯಾದಿಗಳು ಉಪಯುಕ್ತವಾಗಿವೆ. ಇವುಗಳನ್ನು ನಿಯಮಿತವಾಗಿ ಮಾಡುವುದರಿಂದ ದೇಹವು ಕಠಿಣ ವ್ಯಾಯಾಮಗಳನ್ನು ಮಾಡಲು ಸಿದ್ಧವಾಗುತ್ತದೆ.

ಅಧಿಕ ತೂಕ

ಮೊದಲು ಲಘು ವ್ಯಾಯಾಮಗಳನ್ನು ಅಭ್ಯಾಸ ಮಾಡಿದ ನಂತರ, ನೀವು ಕಷ್ಟಕರವಾದ ವ್ಯಾಯಾಮಗಳನ್ನು ಮಾಡಲು ಪ್ರಾರಂಭಿಸಬಹುದು. ಓಡುವುದು, ಈಜುವುದು, ಮೆಟ್ಟಿಲು ಹತ್ತುವುದು, ಸ್ಕಿಪ್ಪಿಂಗ್, ಆಟಗಳನ್ನು ಆಡಬಹುದು. ಹೀಗೆ ಮಾಡುವುದರಿಂದ ದೇಹದಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿರುವ ಕೊಬ್ಬು ಕರಗುತ್ತದೆ. ದೈಹಿಕವಾಗಿ ಸದೃಢರಾಗುತ್ತೀರಿ. ಮಗುವಿಗೆ ಜನ್ಮ ನೀಡಲು ಸಾಕಷ್ಟು ಶಕ್ತಿಯನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಅಧಿಕ ತೂಕವನ್ನು ತಪ್ಪಿಸುವುದು ಸಹ ಮುಖ್ಯವಾಗಿದೆ. ಅಧಿಕ ತೂಕ ಹೊಂದಿರುವವರು ಭಾರ ಎತ್ತುವುದು ಮತ್ತು ಹುಲಾ ಹೂಪಿಂಗ್‌ನಂತಹ ಕಠಿಣ ವ್ಯಾಯಾಮಗಳನ್ನು ಆರಿಸಿಕೊಳ್ಳಬೇಕು.

ಅಲ್ಲದೆ, ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳಿಗೆ ಆದ್ಯತೆ ನೀಡಬೇಕು. ಯೋಗ ಮತ್ತು ಪುಷ್‌ಅಪ್‌ಗಳಂತಹ ಅಭ್ಯಾಸಗಳನ್ನು ಮಾಡಿ. ಸಾಧ್ಯವಾದಷ್ಟು ನಡೆದಾಡಿ. ದೈಹಿಕ ಚಟುವಟಿಕೆಗೆ ಒತ್ತು ನೀಡಿ. ಬಟ್ಟೆ ಒಗೆಯುವುದು, ಮನೆ ಒರೆಸುವುದು ಇಂತಹ ಚಟುವಟಿಕೆಗಳು ಫಲವಂತಿಕೆ ಹೆಚ್ಚಲು ಸಹಕಾರಿಯಾಗಿವೆ. 

Whats_app_banner