Reproductive Health: ಮಹಿಳೆಯರು-ಪುರುಷರಲ್ಲಿ ಫಲವಂತಿಕೆಯ ಪ್ರಮಾಣ ಹೆಚ್ಚಿಸುವ 5 ಅಗತ್ಯ ಪೋಷಕಾಂಶಗಳಿವು-health news reproductive health 5 key nutrients to enhance fertility potential in men and women food for fertility rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Reproductive Health: ಮಹಿಳೆಯರು-ಪುರುಷರಲ್ಲಿ ಫಲವಂತಿಕೆಯ ಪ್ರಮಾಣ ಹೆಚ್ಚಿಸುವ 5 ಅಗತ್ಯ ಪೋಷಕಾಂಶಗಳಿವು

Reproductive Health: ಮಹಿಳೆಯರು-ಪುರುಷರಲ್ಲಿ ಫಲವಂತಿಕೆಯ ಪ್ರಮಾಣ ಹೆಚ್ಚಿಸುವ 5 ಅಗತ್ಯ ಪೋಷಕಾಂಶಗಳಿವು

ಇತ್ತೀಚಿನ ದಿನಗಳಲ್ಲಿ ಮಕ್ಕಳಾಗದೇ ಇರುವ ಸಮಸ್ಯೆ ಹಲವರನ್ನು ಕಾಡುತ್ತಿದೆ. ಇದಕ್ಕೆ ಕಾರಣಗಳು ಹಲವು. ಆದರೆ ಫಲವಂತಿಕೆಯ ವಿಚಾರಕ್ಕೆ ಬಂದಾಗ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುವುದು ಬಹಳ ಮುಖ್ಯವಾಗುತ್ತದೆ. ಫರ್ಟಿಲಿಟಿ ಪ್ರಮಾಣ ಹೆಚ್ಚಲು ಈ 5 ಅಗತ್ಯ ಪೋಷಕಾಂಶಗಳು ನಮಗೆ ನಮ್ಮ ದೇಹಕ್ಕೆ ಬಹಳ ಅವಶ್ಯ.

ಮಹಿಳೆಯರು-ಪುರುಷರಲ್ಲಿ ಫಲವಂತಿಕೆಯ ಪ್ರಮಾಣ ಹೆಚ್ಚಿಸುವ 5 ಅಗತ್ಯ ಪೋಷಕಾಂಶಗಳಿವು
ಮಹಿಳೆಯರು-ಪುರುಷರಲ್ಲಿ ಫಲವಂತಿಕೆಯ ಪ್ರಮಾಣ ಹೆಚ್ಚಿಸುವ 5 ಅಗತ್ಯ ಪೋಷಕಾಂಶಗಳಿವು

ಫಲವಂತಿಕೆಯ ಸಮಸ್ಯೆ ಇಂದು ಬಹಳಷ್ಟು ಮಂದಿಯನ್ನು ಕಾಡುತ್ತಿದೆ. ಫಲವಂತಿಕೆಯ ಕೊರತೆ ಕಾರಣ ಮಕ್ಕಳಾಗದೇ ಇರುವುದು, ಮಕ್ಕಳಾಗಲು ತಡವಾಗುವುದು ಇಂತಹ ಸಮಸ್ಯೆಗಳು ಎದುರಾಗುತ್ತಿವೆ. ಆದರೆ ಫಲವಂತಿಕೆ ಉತ್ತಮವಾಗಲು ನಾವು ಸೇವಿಸುವ ಆಹಾರವೂ ಮುಖ್ಯವಾಗುತ್ತದೆ. ಪೌಷ್ಟಿಕ ಆಹಾರ ಸೇವನೆಯು ಗರ್ಭಧಾರಣೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಸುಳ್ಳಲ್ಲ. ಪೌಷ್ಟಿಕ ಆಹಾರ ಸೇವನೆಯು ಫಲವಂತಿಕೆಗೆ ಅಡಿಪಾಯ. ಇದು ಗರ್ಭಧಾರಣೆ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ನೀವು ಗರ್ಭಧಾರಣೆಯ ಸಮಸ್ಯೆ ಎದುರಿಸುತ್ತಿದ್ದರೆ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸೇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಫಲವಂತಿಕೆ ಪ್ರಮಾಣ ಹೆಚ್ಚಲು ನೆರವಾಗುವ 5 ಅಗತ್ಯ ಪೋಷಕಾಂಶಗಳಿವು.

ಫಲವಂತಿಕೆಗೆ ಅಗತ್ಯ ಪೋಷಕಾಂಶಗಳು

ಗರ್ಭ ಧರಿಸುವ ವಿಷಯಕ್ಕೆ ಬಂದಾಗ, ಸಂತಾನೋತ್ಪತ್ತಿ ಕಾರ್ಯವನ್ನು ಬೆಂಬಲಿಸುವಲ್ಲಿ ಕೆಲವು ಪೋಷಕಾಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತಹ ಅಂಶಗಳು ಹೀಗಿವೆ.

ಫೋಲಿಕ್‌ ಆಸಿಡ್‌: ಭ್ರೂಣದ ಬೆಳವಣಿಗೆ ಮತ್ತು ಜನ್ಮದೋಷಗಳ ಅಪಾಯ ಕಡಿಮೆ ಮಾಡಲು ಇದು ಬಹಳ ಅವಶ್ಯ.

ಒಮೆಗಾ 3 ಕೊಬ್ಬಿನಾಮ್ಲ: ಹಾರ್ಮೋನ್‌ ಸಮತೋಲನವನ್ನು ಬೆಂಬಲಿಸುತ್ತದೆ ಮತ್ತು ಒಟ್ಟಾರೆ ಸಂತಾನೋತ್ಪತ್ತಿ ಆರೋಗ್ಯವನ್ನು ಉತ್ತೇಜಿಸುತ್ತದೆ.

ಕಬ್ಬಿಣಾಂಶ: ಆರೋಗ್ಯಕರ ರಕ್ತದ ಮಟ್ಟ ಹಾಗೂ ಫಲವಂತಿಕೆ ಕಾಪಾಡಿಕೊಳ್ಳಲು ಬಹಳ ಮುಖ್ಯವಾಗಿದೆ.

ವಿಟಮಿನ್‌ ಡಿ: ವಿಟಮಿನ್‌ ಡಿ ಫಲವಂತಿಕೆಗೆ ಬಹಳ ಮುಖ್ಯ. ಇದು ಅಂಡಾಣುವಿನ ಪಕ್ವತೆ ಮತ್ತು ಭ್ರೂಣದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಸತು: ಪುರುಷರಲ್ಲಿ ವೀರ್ಯ ಉತ್ಪಾದನೆಗೆ ಇದು ಅತ್ಯವಶ್ಯಕ.

ಮುಂಬೈನ ನೋವಾ ಐವಿಎಫ್‌ ಫರ್ಟಿಲಿಟಿಯ ಎಂಡಿ ಹಾಗೂ ಕ್ಲಿನಿಕಲ್‌ ಡೈರೆಕ್ಟರ್‌ ಆಗಿರುವ ಡಾ. ಸುಲ್ಭಾ ಅರೋರಾ ಅವರ ಪ್ರಕಾರ ʼಪೌಷ್ಟಿಕಾಂಶ ಭರಿತ ಆಹಾರ ಸೇವನೆಯು ಫಲವಂತಿಕೆಯನ್ನು ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕರ ಗರ್ಭಧಾರಣೆಯ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ. ಸೊಪ್ಪು-ತರಕಾರಿ, ಬೀಜಗಳು, ಕೊಬ್ಬಿನಾಂಶ ಇರುವ ಮೀನು, ಲೀನ್‌ ಪ್ರೊಟೀನ್‌ನಂತಹ ಆಹಾರ ಪದಾರ್ಥಗಳು ಮಾನವ ದೇಹಕ್ಕೆ ಬಹಳ ಅಗತ್ಯ ಎನ್ನಿಸುತ್ತದೆʼ ಎಂದು ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸಕ್ಕರೆ ಅಂಶ-ಸಂಸ್ಕರಿತ ಆಹಾರಗಳಿಂದ ಆರೋಗ್ಯದ ಮೇಲಾಗುವ ಪರಿಣಾಮ

ಅತಿಯಾದ ಸಕ್ಕರೆ ಹಾಗೂ ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆಯು ಫಲವಂತಿಕೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇವು ನಾಲಿಗೆಗೆ ರುಚಿಕರ ಎನ್ನಿಸಬಹುದು. ಆದರೆ ದೀರ್ಘಾವಧಿಯಲ್ಲಿ ನಮ್ಮ ದೇಹವನ್ನು ಹಾನಿಗೊಳಿಸುತ್ತವೆ. ಅತಿಯಾದ ಸಕ್ಕರೆಯ ಸೇವನೆಯು ಸ್ಥೂಲಕಾಯ, ಮಧುಮೇಹ, ಹೃದ್ರೋಗ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಸಂಸ್ಕರಿಸಿದ ಆಹಾರಗಳು ಕೃತಕ ಪದಾರ್ಥಗಳು ಮತ್ತು ಸಂರಕ್ಷಕಗಳಿಂದ ತುಂಬಿರುತ್ತವೆ, ಅದು ನಮ್ಮ ಚಯಾಪಚಯ ಮತ್ತು ಕರುಳಿನ ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತದೆ. ಅವುಗಳು ಅನಾರೋಗ್ಯಕರ ಕೊಬ್ಬುಗಳು ಮತ್ತು ಸೋಡಿಯಂನಿಂದ ಕೂಡಿರುತ್ತವೆ. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇವು ದೇಹದಲ್ಲಿ ಉರಿಯೂತ ಉಂಟು ಮಾಡುವುದು ಮಾತ್ರ, ಹಾರ್ಮೋನ್ ಮಟ್ಟದ ವಿಚಾರದಲ್ಲಿ ತೊಂದರೆ ಉಂಟು ಮಾಡುತ್ತದೆ. ಸಂತಾನೋತ್ಪತ್ತಿ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ವಸ್ತುಗಳ ಸೇವನೆಯನ್ನು ಸೀಮಿತಗೊಳಿಸುವ ಮೂಲಕ ಮತ್ತು ಸಂಪೂರ್ಣ, ಪೌಷ್ಟಿಕಾಂಶ-ಭರಿತ ಆಹಾರಗಳ ಮೇಲೆ ಕೇಂದ್ರೀಕರಿಸುವ ಮೂಲಕ ಫಲವಂತಿಕೆಯನ್ನು ಹೆಚ್ಚಿಸಿಕೊಳ್ಳಬಹುದು.

ಹೈಡ್ರೇಷನ್‌

ದೇಹ ಹೈಡ್ರೇಟ್‌ ಆಗಿರುವುದು ನಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಬಹಳ ಮುಖ್ಯ. ಇದರೊಂದಿಗೆ ಫಲವಂತಿಕೆಗೂ ಬಹಳ ಮುಖ್ಯ. ಸಾಮಾನ್ಯವಾಗಿ ನೀರು ಕುಡಿಯುವ ವಿಚಾರವನ್ನು ಹಲವರು ಅಲ್ಲಗೆಳೆಯುತ್ತಾರೆ. ಆದರೆ ದೇಹ ಹೈಡ್ರೇಟ್‌ ಆಗಿರುವುದರಿಂದ ಸಂತಾನೋತ್ಪತ್ತಿ ಆರೋಗ್ಯ ಸೇರಿದಂತೆ ಎಲ್ಲಾ ರೀತಿಯ ದೈಹಿಕ ಕಾರ್ಯಗಳು ಉತ್ತಮವಾಗಲು ಸಹಕಾರಿಯಾಗಿವೆ. ಇದು ಹಾರ್ಮೋನ್ ಸಮತೋಲನ ಮತ್ತು ಗರ್ಭಕಂಠದ ಲೋಳೆಯ ಉತ್ಪಾದನೆ ಸೇರಿದಂತೆ ದೇಹದ ನೈಸರ್ಗಿಕ ಕಾರ್ಯಗಳನ್ನು ಬೆಂಬಲಿಸುತ್ತದೆ. ನಿರ್ಜಲೀಕರಣವು ಗರ್ಭಕಂಠದ ಲೋಳೆಯ ಉತ್ಪಾದನೆಯಲ್ಲಿ ಇಳಿಕೆಗೆ ಕಾರಣವಾಗಬಹುದು, ವೀರ್ಯವು ಅಂಡಾಣವನ್ನು ತಲುಪಲು ಮತ್ತು ಯಶಸ್ವಿಯಾಗಿ ಅಳವಡಿಸಲು ಕಷ್ಟವಾಗುತ್ತದೆ. ಹೈಡ್ರೇಟ್‌ ಆಗಿರುವುದರಿಂದ ಹಾರ್ಮೋನ್‌ ಮಟ್ಟ ನಿಯಂತ್ರಿಸಲು ಕೂಡ ಸಹಾಯ ಮಾಡುತ್ತದೆ. ಇದು ಅಂಡಾಣುವಿನ ಗುಣಮಟ್ಟ ಸುಧಾರಿಸಲು ಕಾರಣವಾಗುತ್ತದೆ. ಗರ್ಭಾಶಯದ ಒಳಪದರ ದಪ್ಪವನ್ನು ಹೆಚ್ಚಿಸುತ್ತದೆ - ಎಲ್ಲಾ ಅಂಶಗಳು ಫಲವತ್ತತೆಗೆ ಪ್ರಮುಖವಾಗಿವೆ. ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಕುಡಿಯಲು ಶಿಫಾರಸು ಮಾಡಲಾಗಿದೆ, ಆದರೆ ಚಟುವಟಿಕೆಯ ಮಟ್ಟ ಮತ್ತು ಹವಾಮಾನದಂತಹ ಅಂಶಗಳನ್ನು ಅವಲಂಬಿಸಿ ವೈಯಕ್ತಿಕ ಅಗತ್ಯತೆಗಳು ಬದಲಾಗಬಹುದು.

ಫಲವಂತಿಕೆಗೆ ಹೊಂದುವ ಆಹಾರಕ್ರಮ

ಫಲವಂತಿಕೆಗೆ ಸಹಾಯ ಮಾಡುವ ಪೋಷಕಾಂಶ ಸಮೃದ್ಧ ಆಹಾರ ಸೇವನೆಗೆ ಹೆಚ್ಚು ಒತ್ತು ನೀಡಬೇಕು. ನಮ್ಮ ಆಹಾರವು ಫಲವಂತಿಕೆಯ ಪ್ರಮಾಣ ಏರಿಕೆಯಾಗುವುದರಲ್ಲಿ ಪ್ರಮುಖ ಪಾತ್ರ ವಹಿಸುವ ಕಾರಣ ಇದು ಬಹಳ ಮುಖ್ಯ ಎನ್ನಿಸುತ್ತದೆ. ವಿವಿಧ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಲೀನ್‌ ಪ್ರೊಟೀನ್‌, ಆರೋಗ್ಯಕರ ಕೊಬ್ಬಿನಾಂಶ ಮುಂತಾದುವನ್ನು ಆಹಾರದೊಂದಿಗೆ ಸೇರಿಸುವುದರಿಂದ ದೇಹದಲ್ಲಿ ಹಾರ್ಮೋನ್‌ ಸಮತೋಲಿತವಾಗಿರುತ್ತದೆ. ಇದು ಸೂಕ್ತ ಫಲವತ್ತತೆಗೆ ಅಗತ್ಯವಾದ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ. ಕ್ವಿನೋವಾ ಮತ್ತು ಸಿಹಿ ಆಲೂಗಡ್ಡೆಗಳಂತಹ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಸೇರಿಸುವ ಮೂಲಕ ದಿನವಿಡೀ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಗಮನ ಹರಿಸಬೇಕು. ಹೆಚ್ಚುವರಿಯಾಗಿ, ಹಾರ್ಮೋನ್ ಉತ್ಪಾದನೆಯನ್ನು ಬೆಂಬಲಿಸಲು ಆವಕಾಡೊ ಮತ್ತು ಆಲಿವ್ ಎಣ್ಣೆಯಂತಹ ಮೂಲಗಳಿಂದ ಆರೋಗ್ಯಕರ ಕೊಬ್ಬಿನ ಉತ್ಪಾದನೆಗೆ ಆದ್ಯತೆ ನೀಡಿ. ಈ ಎಲ್ಲದರ ಜೊತೆಗೆ ಆರೋಗ್ಯ ತಜ್ಞರ ಭೇಟಿ ಕೂಡ ಬಹಳ ಮುಖ್ಯ ಎನ್ನಿಸುತ್ತದೆ.