Kia Seltos: 2023 ಕಿಯಾ ಸೆಲ್ಟೋಸ್‌ ಫೇಸ್‌ಲಿಫ್ಟ್‌ ಆಗಮನ, ನೂತನ ಎಸ್‌ಯುವಿ ಕಾರಿನಲ್ಲಿ ಹೊಸತೇನಿದೆ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kia Seltos: 2023 ಕಿಯಾ ಸೆಲ್ಟೋಸ್‌ ಫೇಸ್‌ಲಿಫ್ಟ್‌ ಆಗಮನ, ನೂತನ ಎಸ್‌ಯುವಿ ಕಾರಿನಲ್ಲಿ ಹೊಸತೇನಿದೆ?

Kia Seltos: 2023 ಕಿಯಾ ಸೆಲ್ಟೋಸ್‌ ಫೇಸ್‌ಲಿಫ್ಟ್‌ ಆಗಮನ, ನೂತನ ಎಸ್‌ಯುವಿ ಕಾರಿನಲ್ಲಿ ಹೊಸತೇನಿದೆ?

  • ಭಾರತದ ಕಾರು ಪ್ರಿಯರಲ್ಲಿ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಕ್ರೇಜ್‌ ಉಂಟು ಮಾಡಿದ ವಾಹನಗಳಲ್ಲಿ ಕಿಯಾ ಎಸ್‌ಯುವಿಯು ಪ್ರಮುಖವಾಗಿದೆ. ಭಾರತದ ರಸ್ತೆಗಳಲ್ಲಿ ಈಗ ಸಾಕಷ್ಟು ಕಿಯಾ ಕಾರುಗಳಿವೆ. ಇದೀಗ ಕಿಯಾ ಕಂಪನಿಯು ಸೆಲ್ಟೋಸ್‌ನ ಫೇಸ್‌ಲಿಫ್ಟ್‌ ಎಸ್‌ಯುವಿಯನ್ನು ಪರಿಚಯಿಸಿದೆ. ಅಂದಹಾಗೆ ನೂತನ ಫೇಸ್‌ಲಿಫ್ಟ್‌ ಲಾಂಚ್‌ ಆಗಿರುವುದು ಕೊರಿಯಾದಲ್ಲಿ. ಕೊರಿಯಾದಲ್ಲಿ ಲಾಂಚ್‌ ಆದ ನೂತನ ಎಸ್‌ಯುವಿಯು ಶೀಘ್ರದಲ್ಲೇ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. Kia Seltos facelift SUVಗೆ ದಕ್ಷಿಣ ಕೊರಿಯಾದಲ್ಲಿ 20.6m ಕೆಆರ್‌ಎಂ ದರವಿದೆ. ಇದನ್ನು ಭಾರತದ ದರಕ್ಕೆ ಪರಿವರ್ತಿಸಿದರೆ ಸುಮಾರು 12.50 ಲಕ್ಷ ರೂ. ಆಗುತ್ತದೆ. ನೂತನ ಕಿಯಾ ಸೆಲ್ಟೋಸ್‌ ಫೇಸ್‌ಲಿಫ್ಟ್‌ನಲ್ಲಿ ಯಾವೆಲ್ಲ ಹೊಸ ಬದಲಾವಣೆಗಳಿವೆ ಎನ್ನುವ ಚಿತ್ರ ಮಾಹಿತಿ ಇಲ್ಲಿದೆ.

ಕಿಯಾ ಕಂಪನಿಯು ಸೆಲೋಸ್‌ ಎಂಬ ಸಣ್ಣ ಎಸ್‌ಯುವಿಯ ಫೇಸ್‌ಲಿಫ್ಟ್‌ ಆವೃತ್ತಿಯನ್ನು ದಕ್ಷಿಣ ಕೊರಿಯಾದಲ್ಲಿ ಲಾಂಚ್‌ ಮಾಡಿದೆ. ನೂತನ ತಲೆಮಾರಿನ ಈ ಎಸ್‌ಯುವಿಯ ವಿನ್ಯಾಸದಲ್ಲಿ ಸಾಕಷ್ಟು ಅಪ್‌ಗ್ರೇಡ್‌ ಆಗಿದ್ದು, ಕಾರಿನೊಳಗೂ ಸಾಕಷ್ಟು ತಾಂತ್ರಿಕ ಬದಲಾವಣೆಗಳನ್ನು ನೋಡಬಹುದು. ಭಾರತದಲ್ಲಿರುವ ಸೆಲ್ಟೋಸ್‌ಗೆ ಹೋಲಿಸಿದರೆ ನೂತನ ಸೆಲ್ಟೋಸ್‌ನಲ್ಲಿ ಸಾಕಷ್ಟು ಹೊಸ ಫೀಚರ್‌ಗಳಿವೆ.
icon

(1 / 6)

ನೂತನ ಕಿಯಾ ಸೆಲ್ಟೋಸ್‌ನಲ್ಲಿ ಗುರುತಿಸಬಹುದಾದ ಒಂದು ಪ್ರಮುಖ ಬದಲಾವಣೆಯೆಂದರೆ ಅದರ ವಿನ್ಯಾಸ ಮತ್ತು ಗಾತ್ರ. ಭಾರತದಲ್ಲಿ ಮಾರಾಟವಾಗುವ ಸೆಲ್ಟೋಸ್‌ಗೆ ಹೋಲಿಸಿದರೆ ನೂತನ ಕಿಯಾ ಸೆಲ್ಟೋಸ್‌ ಉದ್ದ ಹೆಚ್ಚಾಗಿದೆ. ಆದರೆ, ಭಾರತದಲ್ಲಿರುವ ಸೆಲ್ಟೋಸ್‌ಗಿಂತ ನೂತನ ಕಿಯಾದ ಸೀಟುಗಳು ೨೦ಎಂಎಂನಷ್ಟು ಕಡಿಮೆಯಾಗಿದೆ. ನೂತನ ಸೆಲ್ಟೋಸ್‌ ಗ್ರಿಲ್‌ಗಳು ಮತ್ತು ಬಂಪರ್‌ಗಳಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿದೆ.
icon

(2 / 6)

ನೂತನ ಸೆಲ್ಟೋಸ್‌ನ ಇಂಟೀರಿಯರ್‌ನಲ್ಲೂ ಸಾಕಷ್ಟು ಹೊಸತನಗಳನ್ನು ಗುರುತಿಸಬಹುದು. ನೂತನ ತಲೆಮಾರಿನ ಬಹುತೇಕ ಎಲ್ಲಾ ಕಾರುಗಳಲ್ಲಿ ಕಾಣಬಹುದಾದ ಅವಳಿ ಪರದೆಗಳು (ಟ್ವಿನ್‌ ಸ್ಕ್ರೀನ್‌) ನೂತನ ಸೆಲ್ಟೋಸ್‌ನಲ್ಲಿವೆ. ಡಿಜಿಟಲ್‌ ಡ್ರೈವರ್‌ ಡಿಸ್‌ಪ್ಲೇ ಮತ್ತು ಟಚ್‌ಸ್ಕ್ರೀನ್‌ ಇನ್ಫೋಟೈನ್‌ಮೆಂಟ್‌ ಸ್ಕ್ರೀನ್‌ ಆಕರ್ಷಕವಾಗಿದೆ. ಆದರೆ, ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌ ಕಿಂಡಿಗಳನ್ನು ಮಾರ್ಪಾಡು ಮಾಡಲಾಗಿದೆ. ಎನ್‌ವಿಎಚ್‌ ಲೆವೆಲ್‌ ಉತ್ತಮಪಡಿಸುವ ಸಲುವಾಗಿ ಎರಡು ಪದರದ ಸೌಂಡ್‌ಪ್ರೂಫ್‌ ಗ್ಲಾಸ್‌ ಅಳವಡಿಸಲಾಗಿದೆ.
icon

(3 / 6)

ಭಾರತದಲ್ಲಿರುವ ಸೆಲ್ಟೋಸ್‌ಗೆ ಹೋಲಿಸಿದರೆ ಕೊರಿಯಾದಲ್ಲಿ ಲಾಂಚ್‌ ಮಾಡಲಾದ ನೂತನ ಸೆಲ್ಟೋಸ್‌ನಲ್ಲಿ ಗುರುತಿಸಬಹುದಾದ ಇನ್ನೊಂದು ಪ್ರಮುಖ ಬದಲಾವಣೆಯೆಂದರೆ "ಗಿಯರ್‌ ಲಿವರ್‌ ಬದಲಿಗೆ ಗಿಯರ್‌ ನಾಬ್‌ ಅಳವಡಿಸಿರುವುದುʼ. ದುಬಾರಿ ಕಾರುಗಳಲ್ಲಿ ಸಾಮಾನ್ಯವಾಗಿ ನೋಡಬಹುದಾದ ಇಂತಹ ಫೀಚರ್‌ ಇನ್ನುಮುಂದೆ ಭವಿಷ್ಯದ ಸೆಲ್ಟೋಸ್‌ ಕಾರುಗಳಲ್ಲಿ ಇರಲಿದೆ. ಯುಎಸ್‌ಬಿ ಪೋರ್ಟ್‌ಗಳು, ವೈರ್‌ಲೆಸ್‌ ಚಾರ್ಜಿಂಗ್‌ ಪೋರ್ಟ್‌ ಇತ್ಯಾದಿಗಳು ಈ ಹಿಂದಿನ ಸೆಲ್ಟೋಸ್‌ನಲ್ಲಿರುವಂತೆ ಮುಂದುವರೆದಿದೆ.
icon

(4 / 6)

ಕಿಯಾದ ರಿಯರ್‌ ವ್ಯೂ ಕ್ಯಾಮೆರಾವು ಅತ್ಯಂತ ಉಪಯುಕ್ತ. ಕಾರಿನಲ್ಲಿ ಕುಳಿತಾಗ ಕಾಣಿಸದ ಕುರುಡು ಪ್ರದೇಶ ಅಥವ ಬ್ಲೈಡ್‌ ಸ್ಪಾಟ್‌ಗಳನ್ನು ಪರಿಶೀಲಿಸಲು ಈ ಫೀಚರ್‌ ನೆರವಾಗುತ್ತದೆ. ಹೈಯರ್‌ ಎಂಡ್‌ ಕಿಯಾ ಮತ್ತು ಹ್ಯುಂಡೈ ಕಾರುಗಳಲ್ಲಿರುವ anti-collision system ನೂತನ ಸೆಲ್ಟೋಸ್‌ನಲ್ಲಿದೆ.
icon

(5 / 6)

ಕಿಯಾ ಸೆಲ್ಟೋಸ್‌ ಫೇಸ್‌ಲಿಫ್ಟ್‌ ಎಸ್‌ಯುವಿಯ ಟಾಪ್‌ ಎಂಡ್‌ ಆವೃತ್ತಿಯಲ್ಲಿ ಆಕರ್ಷಕ ೧೮ ಇಂಚಿನ ಅಲಾಯ್‌ ವೀಲ್‌ಗಳಿವೆ. ಈ ಕಾರಿನಲ್ಲಿ ಇಂಟಲಿಜೆಂಟ್‌ ರಿಮೋಟ್‌ ಪಾರ್ಕಿಂಗ್‌ ಸಪೋರ್ಟ್‌, ಕೊಲಿಷನ್‌ ತಪ್ಪಿಸುವ ಅಸಿಸ್ಟೆಂಟ್‌ ಸೇರಿದಂತೆ ಹಲವು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಫೀಚರ್‌ಗಳಿವೆ. ಭಾರತಕ್ಕೆ ಬಂದಾಗ ಒಮ್ಮೆ ಟೆಸ್ಟ್‌ ಡ್ರೈವ್‌ಮಾಡಿ ನೋಡಿ ಉತ್ತಮವೆನಿಸಿದರೆ ಖರೀದಿಸಬಹುದು.
icon

(6 / 6)

ಇತರ ಗ್ಯಾಲರಿಗಳು